2019ಕ್ಕೆ ಶಾ ಮಾಸ್ಟರ್ ಪ್ಲಾನ್
Team Udayavani, Apr 30, 2017, 11:25 AM IST
ಹೊಸದಿಲ್ಲಿ: ಬಿಜೆಪಿಯ ಚಾಣಕ್ಯ, ಚುನಾವಣಾ ಮಾಸ್ಟರ್ ಮೈಂಡ್ ಅಮಿತ್ ಶಾ, 2019ರ ಸಾರ್ವತ್ರಿಕ ಚುನಾವಣೆ ಗೆಲುವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಆ ಪ್ಲಾನ್‌ನ ಪ್ರಮುಖ ಭಾಗವಾಗಿ 95 ದಿನಗಳ ಅಖೀಲ ಭಾರತ ಪ್ರವಾಸವನ್ನು ಅವರು ಶನಿವಾರದಿಂದ ಆರಂಭಿಸಿದ್ದಾರೆ.
2014ರ ಚುನಾವಣೆ ವೇಳೆ ಇದ್ದ ಮೋದಿ ಅಲೆ ನಡುವೆಯೂ ಬಿಜೆಪಿ ಗೆಲ್ಲಲಾಗದ 120 ಕ್ಷೇತ್ರಗಳಲ್ಲಿ ಮುಂದಿನ ಚುನಾವಣೆ ವೇಳೆಯಾದರೂ ಗೆಲ್ಲಲು ರಣಧಿತಂತ್ರ ರೂಪಿಸುವುದು ಮತ್ತು ಪಶ್ಚಿಮ ಬಂಗಾಲ, ಕೇರಳ, ತೆಲಂಗಾಣ ಹಾಗೂ ಒಡಿಶಾ ರಾಜ್ಯಗಳ ಮೇಲೆ ಗಮನ ಕೇಂದ್ರೀಕರಿಸುವುದು, ಮಹಾಚುನಾವಣೆಗೆ 2 ವರ್ಷ ಮೊದಲೇ ಆರಂಭವಾಗಿರುವ ಈ ಮಾಸ್ಟರ್ ಪ್ಲಾನ್‌ನ ಪ್ರಮುಖ ಗುರಿಯಾಗಿದೆ.
ಎ, ಬಿ ಮತ್ತು ಸಿ ವಿಭಾಗ: ಚುನಾವಣೆ ದೃಷ್ಟಿಯಿಂದ ದೇಶದ 29 ರಾಜ್ಯಗಳನ್ನು ಎ, ಬಿ ಮತ್ತು ಸಿ ಎಂದು ಮೂರು ವಿಭಾಗವಾಗಿ ಅಮಿತ್ ಶಾ ವಿಂಗಡಿಸಿದ್ದಾರೆ. “ಎ’ ವಿಭಾಗದ ರಾಜ್ಯಗಳಲ್ಲಿ ಮೂರು ದಿನಗಳ ಕಾಲ ಉಳಿಯಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ, ಬಿ ವಿಭಾಗದ ರಾಜ್ಯಗಳಲ್ಲಿ ಎರಡು ದಿನ (ಜಮ್ಮು ಮತ್ತು ಕಾಶ್ಮೀರ) ಮತ್ತು ಸಿ ವಿಭಾಗದ ರಾಜ್ಯಗಳಲ್ಲಿ ಒಂದು ದಿನ ತಂಗಲಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ 16 ರಾಜ್ಯಗಳು ಸಿ ವಿಭಾಗದಲ್ಲಿದ್ದು, ಇಲ್ಲಿ ಕಡಿಮೆ ಸಮಯ ಕಳೆಯಲಿರುವ ಶಾ, ಉಳಿದ ರಾಜ್ಯಗಳಲ್ಲಿ ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
MUST WATCH
ಹೊಸ ಸೇರ್ಪಡೆ
Supreme Court: ಖಾಸಗಿ ಸಂಪನ್ಮೂಲ ಸ್ವಾಧೀನ ಸುಪ್ರೀಂ ತೀರ್ಪು ಸಮತೋಲಿತ
US Parliament Election: ಭಾರತ ಮೂಲದ 9 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.