ಮೇ 26ರಿಂದ ಪಟಾಕಿ ಸದ್ದು
Team Udayavani, May 1, 2017, 12:06 PM IST
ಗಣೇಶ್ ಅಭಿನಯದ “ಪಟಾಕಿ’ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಅದು ಮೇ 26. ಮೇ 26 ರಂದು ರಾಜ್ಯಾದ್ಯಂತ “ಪಟಾಕಿ’ ಸಿಡಿಯಲಿದೆ. ನಿರ್ಮಾಪಕ ಎಸ್.ವಿ.ಬಾಬು ಅವರು ಈ ಬಾರಿ ನಿರ್ಮಾಣದ ಜೊತೆಗೆ ವಿತರಣೆಗೂ ಇಳಿದಿದ್ದಾರೆ.
ಹೌದು, “ಪಟಾಕಿ’ ಸಿನಿಮಾವನ್ನು ನಿರ್ಮಿಸಿರುವ ಎಸ್.ವಿ. ಬಾಬು ಅವರೇ ಈಗ ಸಿನಿಮಾದ ವಿತರಣೆಯನ್ನು ಮಾಡುತ್ತಿದ್ದಾರೆ. ಈ ಮೂಲಕ ವಿತರಣಾ ಕ್ಷೇತ್ರಕ್ಕೂ ಬಾಬು ಕೈ ಹಾಕಿದ್ದಾರೆ. ಕೆ.ಜಿ.ರಸ್ತೆಯಲ್ಲಿ ಎಸ್.ವಿ. ಲಂಸ್‌ನ ಡಿಸ್ಟ್ರಿಬ್ಯೂಶನ್ ಕಚೇರಿಯನ್ನು ಕೂಡಾ ಬಾಬು ಅವರು ಭಾನುವಾರ ಆರಂಭಿಸಿದ್ದು, ಮೊದಲ ಸಿನಿಮಾವಾಗಿ ತಮ್ಮದೇ ನಿರ್ಮಾಣದ “ಪಟಾಕಿ’ಯನ್ನು ವಿತರಣೆ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಸಿನಿಮಾಗಳನ್ನು ವಿತರಣೆ ಮಾಡುವ ಆಲೋಚನೆ ಕೂಡಾ ಬಾಬು ಅವರಿಗಿದೆ.
ಬಾಬು ಅವರು ಈಗಾಗಲೇ “ಪಟಾಕಿ’ ಸಿನಿಮಾ ನೋಡಿ ಖುಷಿಯಾಗಿದ್ದಾರೆ. ಈ ಸಿನಿಮಾ ದೊಡ್ಡ ಯಶಸ್ಸು ತಂದುಕೊಡುತ್ತದೆ ಎಂಬ ವಿಶ್ವಾಸ ಕೂಡಾ ಅವರಿಗಿದೆ. ಇತ್ತೀಚೆಗೆ ಸಿನಿಮಾ ನೋಡಿದ ಎಸ್.ವಿ.ಬಾಬು ಅವರು ಗಣೇಶ್ ಅಭಿನಯ ನೋಡಿ ಥ್ರಿಲ್
ಆಗಿದ್ದಾರೆ. ಎಷ್ಟರ ಮಟ್ಟಿಗೆ ಥ್ರಿಲ್ ಆಗಿದ್ದಾರೆಂದರೆ ಮಧ್ಯರಾತ್ರಿ ಗಣೇಶ್‌ಗೆ ಫೋನ್ ಮಾಡಿದ್ದಾರೆ. ನಿದ್ದೆಯಲ್ಲಿದ್ದ ಗಣೇಶ್ ಮೊದಲ ಸಲ ಫೋನ್ ರಿಸೀವ್ ಮಾಡದೇ ಇದ್ದಾಗಲೂ ಬಿಡದೇ ಪದೇ ಪದೇ ಫೋನ್ ಮಾಡಿ ಎಬ್ಬಿಸಿ ಗಣೇಶ್ ಅವರಲ್ಲಿ ಸಿನಿಮಾದ ಖುಷಿಯನ್ನು ಎಸ್.ವಿ.ಬಾಬು ಅವರು ಹಂಚಿಕೊಂಡಿದ್ದಾರೆ.
ಗಣೇಶ್ ಅವರು ಈ ಸಿನಿಮಾದಲ್ಲಿ ತುಂಬಾ ಅದ್ಭುತವಾಗಿ ನಟಿಸಿದ್ದಾರೆ. ಅವರ ನಟನೆ ನೋಡಿ ನಾನು ದಾ ಆದೆ. ಆ ಖುಷಿಯನ್ನು ಹಂಚಿಕೊಳ್ಳಲು ಮಧ್ಯರಾತ್ರಿ ಫೋನ್ ಮಾಡಿ ಅವರನ್ನು ಎಬ್ಬಿಸಿದೆ. ಖಂಡಿತಾ ಈ ಸಿನಿಮಾ ದೊಡ್ಡ ಹಿಟ್ ಆಗುತ್ತದೆ ಎಂಬ ವಿಶ್ವಾಸವಿದೆ’ ಎಂದು ಹೇಳಿಕೊಂಡರು ಎಸ್.ವಿ.ಬಾಬು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.