ಡಾ| ಪೈ ಜಿಲ್ಲೆಯಲ್ಲಿ ಬದಲಾವಣೆ ತಂದರು,ರಾಷ್ಟ್ರದಲ್ಲಿ ಪರಿಣಾಮ ಬೀರಿದರು
Team Udayavani, May 1, 2017, 3:00 PM IST
ಉಡುಪಿ: ಡಾ| ಟಿಎಂಎ ಪೈ ಅವರು ತಮ್ಮ ಕನಸು ಮತ್ತು ಯೋಚನಾಶಕ್ತಿಯಿಂದ ಕರಾವಳಿ ನಾಡಿನಲ್ಲಿ ಮಹತ್ತರ ಬದಲಾವಣೆ ತಂದರು ಮತ್ತು ರಾಷ್ಟ್ರಸ್ತರದ ಮೇಲೂ ಪರಿಣಾಮ ಬೀರಿದರು ಎಂದು ಎಕ್ರೋನ್ ಅಕ್ಯುನೋವ ಸ್ಥಾಪಕ ಡಿ.ಎ. ಪ್ರಸನ್ನ ಹೇಳಿದರು.
ಮಣಿಪಾಲ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ರವಿವಾರ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆದ ಸ್ಥಾಪಕರ ದಿನಾಚರಣೆಯಲ್ಲಿ (ಡಾ| ಟಿಎಂಎ ಪೈ ಅವರ 119ನೇ ಜನ್ಮದಿನ) ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೆಎಲ್‌ಇ ಸೊಸೈಟಿ, ಧರ್ಮಸ್ಥಳ, ಮೈಸೂರು ಜೆಎಸ್ಸೆಸ್‌ನಂತಹ ಶೈಕ್ಷಣಿಕ ಸಮುಚ್ಚಯಗಳು ಮಣಿಪಾಲದ ಮಾದರಿಯಲ್ಲಿ ಬೆಳೆದವು ಎಂದರು.
ಭಾರತದ ಅಭಿವೃದ್ಧಿ ಕುರಿತು ಇಂದು ಮಾತನಾಡುತ್ತಿರುವಾಗ ಡಾ| ಪೈ ಅವರು ಬಹಳ ಹಿಂದೆಯೇ ಜಿಲ್ಲಾ ಸ್ತರದಲ್ಲಿ ಉಳಿತಾಯ ಕಲ್ಪನೆ, ಆರೋಗ್ಯ ಜಾಗೃತಿ, ಶಿಕ್ಷಣದ ಮೇಲೆ ಹೂಡಿಕೆ ಮೂಲಕ ವ್ಯಕ್ತಿ ಮತ್ತು ಸಮುದಾಯದ ಅಭಿವೃದ್ಧಿಯಂತಹ ಕಲ್ಪನೆಗಳನ್ನು ಕಂಡರು ಎಂದರು.
ದೂರದೃಷ್ಟಿ
ಸಿಂಡಿಕೇಟ್ ಬ್ಯಾಂಕ್ ಮೂಲಕ ಆರಂಭಿಸಿದ ಪಿಗ್ಮಿ ಯೋಜನೆ ಉಳಿತಾಯ ಪ್ರವೃತ್ತಿ ಬೆಳೆಸುವ ಮಾರ್ಗವಾಗಿತ್ತು. ಎಂಜಿಎಂ ಕಾಲೇಜಿನಂತಹ ಪದವಿ ಕಾಲೇಜುಧಿಗಳು, ಪ್ರಾಥಮಿಕ-ಪ್ರೌಢಶಾಲೆಗಳು,ಪ.ಪೂ. ಕಾಲೇಜು, ಯಕ್ಷಗಾನ ಕೇಂದ್ರ, ಗೋವಿಂದ ಪೈ ಕೇಂದ್ರಗಳ ಮೂಲಕ ಅವರ ದೂರ ದೃಷ್ಟಿ ಬಹುಮುಖದಿಂದ ಕೂಡಿತ್ತು ಎಂಬುದನ್ನು ಕಾಣಬಹುದಾಗಿದೆ ಎಂದರು.
ಡಾ| ಟಿಎಂಎ ಪೈಯವರ ಆದರ್ಶವನ್ನು ಅವರ ಮಕ್ಕಳು ಮುಂದುವರಿಸಿಕೊಂಡು ಹೋಗಿರುವುದರಿಂದಲೇ ಮಣಿಪಾಲ ಇಂದು ಈ ಮಟ್ಟದಲ್ಲಿ ಬೆಳೆದುನಿಂತಿದೆ. ಗುಣಮಟ್ಟದೊಂದಿಗೆ ಎಂದಿಗೂ ರಾಜೀ ಮಾಡಿಕೊಳ್ಳದ ಅವರ ಸ್ವಭಾವ ವಿಶೇಷವಾಗಿ ಡಾ| ರಾಮದಾಸ್ ಪೈಯವರಲ್ಲಿ ಕಂಡುಕೊಂಡಿದ್ದೇನೆ ಎಂದು ಪ್ರಸನ್ನ ಹೇಳಿದರು.
ಮಣಿಪಾಲ ವಿ.ವಿ. ಹಾಸ್ಟೆಲ್ ಸಮಿತಿ ಅಧ್ಯಕ್ಷೆ ವಸಂತಿ ಆರ್. ಪೈ ಅವರು ಪ್ರಸನ್ನರಿಗೆ ಸ್ಮರಣಿಕೆ ನೀಡಿದರು. ಡಾ| ಟಿಎಂಎ ಪೈ ಫೌಂಡೇಶನ್ ಖಜಾಂಚಿ ಟಿ. ಅಶೋಕ್ ಪೈ, ಮಣಿಪಾಲ್ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ ಆಡಳಿತ ನಿರ್ದೇಶಕ ಡಾ| ರಂಜನ್ ಪೈ, ಮಣಿಪಾಲ್ ಮೀಡಿಯ ನೆಟ್‌ವರ್ಕ್ ಲಿ. ಆಡಳಿತ ನಿರ್ದೇಶಕ ಟಿ. ಸತೀಶ್ ಯು. ಪೈ, ಮಣಿಪಾಲ್ ಫೈನಾನ್ಸ್ ಕಾರ್ಪೊರೇಶನ್ ಆಡಳಿತ ನಿರ್ದೇಶಕ ಟಿ. ನಾರಾಯಣ ಪೈ, ಮಣಿಪಾಲ ಅಕಾಡೆಮಿ ಅಧ್ಯಕ್ಷ ಡಾ| ಎಚ್.ಎಸ್. ಬಲ್ಲಾಳ್ ಉಪಸ್ಥಿತರಿದ್ದರು.ವಿ.ವಿ. ಕುಲಪತಿ ಡಾ| ಎಚ್. ವಿನೋದ ಭಟ್ ಸ್ವಾಗತಿಸಿ ಕುಲಸಚಿವ ಡಾ| ನಾರಾಯಣ ಸಭಾಹಿತ್ ವಂದಿಸಿದರು. ಎಂಐಟಿ ಪ್ರಾಧ್ಯಾಪಕಿ ಸುಗಂಧಿನಿ ನಿರ್ವಹಿಸಿದರು. ಉಪ ಕುಲಸಚಿವೆ (ಶೈಕ್ಷಣಿಕ- ಆರೋಗ್ಯ ವಿಜ್ಞಾನ) ಡಾ| ಶ್ಯಾಮಲಾ ಹಂದೆ ಅತಿಥಿಗಳನ್ನು ಪರಿಚಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.