ಕರಾವಳಿಯಲ್ಲಿ ಕೆಂಪು ದೀಪಕ್ಕೆ ಗುಡ್‌ಬೈ !
Team Udayavani, May 1, 2017, 3:07 PM IST
ಮಂಗಳೂರು/ಉಡುಪಿ: ವಿಐಪಿಗಳ ಕಾರುಗಳ ಮೇಲೆ ಕೆಂಪುದೀಪಗಳ ಅಳವಡಿಕೆಗೆ ನಿಷೇಧ ಮೇ 1ರಿಂದ ದೇಶಾದ್ಯಂತ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಉಸ್ತುವಾರಿ ಸಚಿವರು ಸೇರಿದಂತೆ ಕೆಂಪು ದೀಪ ಅಳವಡಿಸಿ ಕೊಂಡಿರುವರು ಅವುಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದಾರೆ.
ಸಚಿವ ಪ್ರಮೋದ್ ಮಧ್ವರಾಜ್ ಅವರು ಕೇಂದ್ರ ಸರಕಾರ ನಿರ್ಧಾರ ತಳೆದಾಗಲೇ ಕೆಂಪು ದೀಪವನ್ನು ತೆರವುಗೊಳಿಸಿದ್ದರು. ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ ಅವರ ಕಾರಿನಲ್ಲಿದ್ದ ಕೆಂಪುದೀಪವನ್ನು ತೆರವು ಗೊಳಿಸಲಾಗಿದೆ. ಸಚಿವ ಬಿ. ರಮಾನಾಥ ರೈ ಅವರು ತಮ್ಮ ಕಾರಿಗೆ ಅಳವಡಿಸಿರುವ ಕೆಂಪು ದೀಪವನ್ನು ಮೆ 1ರಂದು ತೆರವುಗೊಳಿಸಲು ತೀರ್ಮಾನಿಸಿದ್ದಾರೆ.
“ನಾನು ಕೇಂದ್ರ ಸರಕಾರದ ಆದೇಶದಂತೆ ನನ್ನ ಕಾರಿನಲ್ಲಿ ಅಳವಡಿಸಲಾಗಿದ್ದ ಕೆಂಪುದೀಪವನ್ನು ಸೋಮವಾರ ತೆರವುಗೊಳಿಸು ತ್ತೇನೆ’ ಎಂದು ತಿಳಿಸಿದ್ದಾರೆ.
ರಾಜ್ಯ ಸರಕಾರ ಒಪ್ಪಬೇಕು: ಖಾದರ್
ಸಚಿವ ಯು.ಟಿ. ಖಾದರ್ ಕಾರಿನ ಕೆಂಪು ದೀಪ ತೆರವುಗೊಳಿಸಿಲ್ಲ. ಈ ಬಗ್ಗೆ ಉದಯವಾಣಿ ಅವರನ್ನು ಸಂಪರ್ಕಿಸಿದಾಗ “ಕಾರು ಸರಕಾರದ್ದು.ನಾವು ಅದರಲ್ಲಿ ಕುಳಿತು ಪ್ರಯಾಣಿಸುವರು. ಕಾರಿನಲ್ಲಿ ಏನೆಲ್ಲಾ ಇರಬೇಕು ಎಂಬುದನ್ನು ಆಡಳಿತ ಮತ್ತು ಸಿಬಂದಿ ಸುಧಾರಣಾ ಇಲಾಖೆ ತೀರ್ಮಾನಿಸುತ್ತದೆ. ಕೆಂಪು ದೀಪ ತೆರವುಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ರಾಜ್ಯ ಸರಕಾರಗಳು ಮೊದಲು ಒಪ್ಪಬೇಕು. ಆ ಮೇಲೆ ಕೆಂಪು ದೀಪ ತೆರವುಗೊಳಿಸುವ ಬಗ್ಗೆ ಡಿಪಿಆರ್‌ನಿಂದ ಆದೇಶ ಹೊರಬರಬೇಕಾಗುತ್ತದೆ. ಹೀಗಾಗಿ ಸಚಿವರ ಕಾರಿನಲ್ಲಿ ಅಳವಡಿಸಿರುವ ಕೆಂಪುದೀಪ ತೆರವು ಗೊಳಿಸುವಲ್ಲಿ ನಮ್ಮದೇನೂ ಪಾತ್ರ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಸದೀಯ ಕಾರ್ಯದರ್ಶಿ ಶಕುಂತಾಳ ಶೆಟ್ಟಿ ಅವರು ತನ್ನ ಕಾರಿನಲ್ಲಿ ಅಳವಡಿಸಲಾಗಿದ್ದ ಕೆಂಪು ದೀಪವನ್ನು ಕೇಂದ್ರ ಸರಕಾರದ ಆದೇಶ ಬಂದ ತತ್‌ಕ್ಷಣವೇ ಸ್ವಯಂ ತೆರವುಗೊಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.