ಹಸಿವಿನ ರಾಜಕಾರಣಕ್ಕಿಂತ ಹಸುವಿನ ರಾಜಕೀಯಕ್ಕೆ ಆದ್ಯತೆ
Team Udayavani, May 2, 2017, 12:20 PM IST
ಬೆಂಗಳೂರು: ದೇಶದ ಕೋಟ್ಯಂತರ ಜನ ಉಪವಾಸ ಇರುವಾಗ ಹಸಿವಿನ ರಾಜಕಾರ ಣಕ್ಕಿಂತ, ಹಸುವಿನ ರಾಜಕಾರಣಕ್ಕೆ ಹೆಚ್ಚಿನ ಆದ್ಯತೆ ದೊರೆಯುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕ ಸಂಘಗಳ ವತಿಯಿಂದ ನಗರದ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಮಿಕರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇಂದಿಗೂ 20 ಕೋಟಿಯಷ್ಟು ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆದರೆ, ಹಸಿವಿನ ರಾಜಕಾರಣಕ್ಕೆ ಬದಲಾಗಿ, ಹಸುವಿನ ರಾಜಕಾರಣಕ್ಕೆ ಹೆಚ್ಚು ಮಹತ್ವ ದೊರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂತ್ರ ಘೋಷಣೆ ಮಾಡುವವರು ಮತ್ತು ತಂತ್ರ ಮಾಡುವವರು ದೇಶ ಆಳುತ್ತಿದ್ದು, ಧರ್ಮವನ್ನು ದುರುಪ ಯೋಗ ಮಾಡಿಕೊಳ್ಳುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಜನರನ್ನು ಶೋಷಣೆ ಮಾಡಲಾಗುತ್ತಿದೆ. ಆದ್ಯತೆಗಳು ಪಲ್ಲಟವಾಗುತ್ತಿರುವು ದರಿಂದ ದೇಶದಲ್ಲಿ ಅಸಹಿಷ್ಣತೆ, ಅಸಮಾನತೆ, ಸೈದ್ಧಾಂತಿಕ ಶಿಥಿಲತೆ ಹೆಚ್ಚಾಗುತ್ತಿವೆ. ಜತೆಗೆ, ದೇಶದಲ್ಲಿಂದು ದೇಶ ಭಕ್ತರ ಬದಲಿಗೆ ದ್ವೇಷ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕರು, ದಲಿತರು ಮತ್ತು ರೈತ ಸಂಘಟನೆಗಳು ಒಂದಾಗಬೇಕಿದ್ದು, ಒಂದೇ ವೇದಿಕೆಯಲ್ಲಿ ಈ ಮೂವರು ಕಾಣಿಸಿಕೊಂಡರೆ ಪಾರ್ಲಿಮೆಂಟ್ ಹಾಗೂ ವಿಧಾನಸೌಧಗಳು ನಡುಗಲಿವೆ. ಅಂತಹದೊಂದು ಐಕ್ಯ ಹೋರಾಟದ ಅಗತ್ಯವಿದೆ. ಕಾರ್ಮಿಕರು, ದಲಿತರು ಹಾಗೂ ರೈತ ಸಂಘಟನೆಗಳಲ್ಲಿ ವಿಘಟನೆ ಉಂಟಾಗಿದ್ದು, ಹಲವಾರು ಸಂಘಟನೆಗಳಿವೆ.
ಆದರೆ, ಅವರು ತಮ್ಮ ಅಸ್ಥಿತ್ವ ಉಳಿಸಿಕೊಂಡು ಸಮಾನವಾದ ಅಂಶಗಳ ಬಗ್ಗೆ ಸಮಾನ ಹೋರಾಟಕ್ಕಾಗಿ ಒಕ್ಕೂಟ ವೇದಿಕೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಅವಶ್ಯಕವಾಗಿದ್ದು, ಮೇ ದಿನಾಚರಣೆ ದಿನವಾದರೂ ಎಲ್ಲ ಸಂಘಟನೆಗಳು ಒಂದಾಗಿ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದು ಕರೆ ನೀಡಿದರು. ಕೇಂದ್ರ ಸರ್ಕಾರದ ಕೆಂಪು ದೀಪಎಂಬ ನಿರ್ಧಾರದಿಂದ ಕ್ರಾಂತಿಯಾಯಿ ತೇನೋ ಎಂಬಂತೆ ಪ್ರಚಾರ ನೀಡಲಾ ಯಿತು.
ಆದರೆ, ಕೆಂಪು ದೀಪ ಇಲ್ಲದೆ ಹೋಗುವ ಅನೇಕ ವಿವಿಐಪಿಗಳಿಗೆ ಸಂಚಾರ ಮುಕ್ತ ಗೊಳಿಸುವುದಕ್ಕೆ ಯಾವುದೇ ಧಕ್ಕೆ ಆಗಿಲ್ಲ. ಇದರಿಂದ ಸಾರ್ವಜನಿಕರು ಹತ್ತಾರು ನಿಮಿಷಗಳು ರಸ್ತೆಯಲ್ಲಿ ನಿಲ್ಲಬೇಕಾಗುತ್ತದೆ. ಕೆಂಪು ದೀಪ ತೆಗೆದ ಕೂಡಲೇ ದೊಡ್ಡ ಬದಲಾವಣೆ ಎಂಬಂತೆ ವಿಜೃಂಭಿಸುವ ಭ್ರಮೆ ಮೂಡಿಸಲಾಗುತ್ತಿದ್ದು, ಇದೊಂದು ಕೇವಲ ಸಾಂಕೇತಿಕ ಕ್ರಮವಷ್ಟೇ. ಸಾಂಕೇ ತಗಳನ್ನು ಸಂಭ್ರಮಿಸುವುದರಿಂದ ಯಾವುದೇ ಪ್ರಯೋಜನವಿಲ್ಲ.
ಆದರೂ ಇಂತಹುಗಳಿಂದ ಭ್ರಮೆ ಬಿತ್ತುವ ಕೆಲಸ ವಾಗುತ್ತಿದೆ ಎಂದು ಟೀಕಿಸಿದರು. ಸಮಿತಿಯ ಸಂಚಾಲಕ ಗಂಗಣ್ಣ ಮಾತನಾಡಿ, ಲೋಕಸಭೆಯ ಚುನಾವಣೆ ಸಂದರ್ಭದಲ್ಲಿ ಕಾರ್ಪೋರೇಟ್‌ನವರು ಪ್ರಚಾರಕ್ಕಾಗಿ ಸುಮಾರು 45 ಸಾವಿರ ಕೋಟಿಯಷ್ಟು ಹಣ ನೀಡಿದ್ದರು. ಇದಕ್ಕೆ ಪ್ರತಿಫಲವಾಗಿ ಕೇಂದ್ರ ಸರ್ಕಾರ ಕಾರ್ಪೋ ರೇಟ್ ಕಂಪೆನಿಯವರಿಗೆ ಶೇ.5 ರಷ್ಟು ತೆರಿಗೆ ವಿನಾಯಿತಿ ನೀಡುವ ಮೂಲಕ 40 – 50 ಸಾವಿರ ಕೋಟಿ ರೂಪಾಯಿ ಲಾಭ ಮಾಡಿಕೊಟ್ಟಿದೆ.
ಇದರೊಂದಿಗೆ ದೇಶದಲ್ಲಿನ ಕಾರ್ಮಿಕರ ಕಾನೂನುಗಳನ್ನು ಸಡಿಲಿಕೆ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಲೇಖಕಿ ಬಿ.ಟಿ. ಲಲಿತಾ ನಾಯಕ್, ಸಮಿತಿ ಅಧ್ಯಕ್ಷ ಡಿ.ಎಸ್. ಅನಂತರಾಮ್, ಸಂಚಾಲಕ ಕೆ.ಎ.ಗಂಗಣ್ಣ ಸೇರಿದಂತೆ ಪ್ರಮುಖರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್ ಸಿಸಿಬಿಗೆ ವರ್ಗಾವಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi ಅಧಿವೇಶನದಲ್ಲಿ ಸರಕಾರದ ವಿರುದ್ಧ ಬಿಜೆಪಿ ಚಾರ್ಜ್‌ಶೀಟ್
Constitution Day: ಜನಾಶೀರ್ವಾದ ಇರುವ ತನಕ ನಾನು ಜಗ್ಗುವುದಿಲ್ಲ: ಸಿಎಂ ಸಿದ್ದರಾಮಯ್ಯ
Karnataka Govt.,: ಸಂಪುಟ ಸರ್ಜರಿ ಸನ್ನಿಹಿತ: ಡಿಸಿಎಂ ಡಿಕೆಶಿ ಸುಳಿವು!
ರಾಹುಲ್ ಬ್ರಿಟನ್ ಪೌರತ್ವದ ಬಗ್ಗೆ ಪರಿಶೀಲಿಸುತ್ತಿದ್ದೇವೆ: ಹೈಕೋರ್ಟ್‌ಗೆ ಸರ್ಕಾರ!
Hard Disk: ಬಿಟ್ಕಾಯಿನ್ ಇದ್ದ ಹಾಡ್‌ಡಿಸ್ಕ್ ಎಸೆದ ಪ್ರೇಯಸಿ, ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.