ಸದ್ಯಕ್ಕೆ ಲವ್ ಯು ಕಣೋ…
Team Udayavani, May 2, 2017, 12:39 PM IST
ನಿನ್ನ ಮೇಲೆ ನನಗೆ ಬೆಟ್ಟದಷ್ಟು ಪ್ರೀತಿ ಇದೆ. ಆದರೆ ನೀನು ಹೇಳಿದ ತಕ್ಷಣ ಓಡೋಡಿ ಬರುವ ಸಿನಿಮಾ ಹೀರೋಯಿನ್
ಥರಾ ನಾನಲ್ಲ. ಪಕ್ಕಾ ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡ್ತೀನಿ. ಈಗಾಗಲೇ ನಿನಗೆ ಹೇಳಿದ ಹಾಗೆ ನಮ್ಮ ಪಿ.ಜಿ. ಮುಗೀಬೇಕು. ನನಗೂ ನಿನಗೂ ಕೆಲಸ ಸಿಗಬೇಕು. ಆಮೇಲೆ ನೀನು ನಮ್ಮನೆಗೆ ಬಂದು ನಮ್ಮಪ್ಪನ ಹತ್ರ ಮಾತಾಡ್ಬೇಕು…
ಮೈ ಸ್ವೀಟ್ ಹಾರ್ಟ್…
ಸಾರಿ ಕಣೋ, ಎಕ್ಸಾಂ ಪ್ರಿಪರೇಷನ್‌ನಲ್ಲಿದೀನಿ. ಮೀಟ್ ಮಾಡಕಾಗಿಲ್ಲ. ಸದ್ಯಕ್ಕೆ ಆಗೋದೂ ಇಲ್ಲ. ಆ್ಯನುವಲ್ ಡೇ ದಿನ
ಕಾಲೇಜ್‌ಗೆ ಬರಿ¤àನಿ. ಕಲ್ಚರಲ್ ಫಂಕ್ಷನ್ ಮುಗಿದ ಮೇಲೆ ಕಾμಡೇನಲ್ಲಿ ಸಿಗ್ತಿàನಿ. ಬೇಜಾರಾಗ್ಬೇಡ ಡಿಯರ್. ಕಳೆದ ಮೂರು ವರ್ಷದಿಂದ ನಮ್ಮಿಬ್ಬರ ಲವ್ ಬಗ್ಗೆ ಯಾರಿಗೂ ಅನುಮಾನ ಬಂದಿಲ್ಲ. ನಮ್ಮ ಪ್ರಿನ್ಸಿ ಕರಡಿಗೂ, ಒಂಚೂರೂ ಡೌಟ್ ಬರªಂಗೆ ಮ್ಯಾನೇಜ್ ಮಾಡಿದ್ದೀನಿ. ಈಗ ಎಕ್ಸಾಂ ಟೈಂ. ನನ್ನ ಫಸ್ಟ್ ಪ್ರಿಫರೆನ್ಸ್ ಎಕ್ಸಾಂಗೆ. ಬೆಸ್ಟ್ ರಿಸಲ್ಟ್ ಬಂದ್ರೆ ತಾನೇ ಫ್ಯೂಚರ್ ಬ್ರೈಟ್ ಆಗಿರೋದು? ಆದರೆ ನೀನೇನೋ ಕೋತಿ! ಎಕ್ಸಾಂ ಸಿರಿಯಸ್‌ನೆಸ್ ಇಲೆª, ಆ ಡಬ್ಟಾ ಗ್ಯಾಂಗ್ ಕಟ್ಕೊಂಡ್ ನಮ್ಮನೆ ಮುಂದೇನೇ ಗಿರಕಿ ಹೊಡಿತಿದ್ದೀಯಾ. ಓದೋದು ಬಿಟ್ಟು, ಡ್ರಾಮಾ, ಡ್ಯಾನ್ಸು ಅಂತೆಲ್ಲ ಟೈಂ ವೇಸ್ಟ್ ಮಾಡ್ತಿದ್ದೀಯಾ?
ಚಿನ್ನ, ನಿನ್ನ ಮೇಲೆ ನನಗೆ ಬೆಟ್ಟದಷ್ಟು ಪ್ರೀತಿ ಇದೆ. ಆದರೆ ನೀನು ಹೇಳಿದ ತಕ್ಷಣ ಓಡೋಡಿ ಬರುವ ಸಿನಿಮಾ
ಹೀರೋಯಿನ್ ಥರಾ ನಾನಲ್ಲ. ಪಕ್ಕಾ ಪ್ರಾÂಕ್ಟಿಕಲ್ ಆಗಿ ಥಿಂಕ್ ಮಾಡ್ತೀನಿ. ಈಗಾಗಲೇ ನಿನಗೆ ಹೇಳಿದ ಹಾಗೆ ನಮ್ಮ ಪಿಜಿ ಮುಗೀಬೇಕು. ನನಗೂ ನಿನಗೂ ಕೆಲಸ ಸಿಗಬೇಕು. ಆಮೇಲೆ ನೀನು ನಮ್ಮನೆಗೆ ಬಂದು ನಮ್ಮಪ್ಪನ ಹತ್ರ ಮಾತಾಡ್ಬೇಕು. ಆಗ ನಾನು ಅಪ್ಪನ್ನ ಕನ್ವಿನ್ಸ್ ಮಾಡ್ತೀನಿ. ಅಲ್ಲಿವರೆಗೂ ಪೊರ್ಕಿ ಥರಾ ಬೀದಿ ಸುತ್ತೋದನ್ನು ಬಿಟ್ಟು ಚೆನ್ನಾಗಿ ಓದು. ಎಕ್ಸಾಂಗೆ ದಿನಗಳು ತುಂಬಾ ಕಡಿಮೆ ಇವೆ. ಗೊತ್ತಾಯ್ತಾ?
ಅಂದ ಹಾಗೆ, ಅರ್ಥ್ಮೆಟಿಕ್ ಸಬೆjಕ್ಟ್‌ನಲ್ಲಿ ಸೆವೆಂಥ್ ಎಕ್ಸಸೆ„ಜ್‌ನ 4ನೇ ಪ್ರಾಬ್ಲಿಂ ಸಾಲ್Ì ಮಾಡೋದು ಗೊತ್ತಾಗ್ತಿಲ್ಲ.
ನಿಂಗೇನಾದ್ರೂ ಗೊತ್ತಿದ್ರೆ ರಿಪ್ಲೈ ಮಾಡು. ಇದನ್ನ ಬಿಟ್ಟು ಲವ್ ಯು, ಕಿಸ್ ಯು, ಮಿಸ್ ಯು ಅನ್ನೋ ದೇವದಾಸ್‌ನ
ಕಿತ್ ಹೋಗಿರೋ ಡೈಲಾಗ್‌ಗಳು ಬೇಡ. ಅರ್ಥ ಆಯ್ತಾ? ಲೋ ಗೂಬೆ, ದುಡ್ಡಿಗೋಸ್ಕರ ನಮ್ಮತ್ತೆ- ಮಾವನ್ನ
ಗೋಳಾಡೋ ಹಾಗೆ ಮಾಡಬೇಡ. ನನಗೋಸ್ಕರ ನೀನ್ಯಾವ ಶೋಕಿ ಮಾಡೋದೂ ಬೇಕಿಲ್ಲ. ಒಂಚೂರು ಮನೆ ಜವಾಬ್ದಾರಿ ಹೊತ್ಕೊಂಡು ಹಿರಿಯರ ಭಾರಾನ ಕಡಿಮೆ ಮಾಡು. ಹುಡುಗೀರನ್ನ ನೋಡಿದ ತಕ್ಷಣ “ಗಂಡಸು’ ಅನ್ನೋ ಅಹಂ ಬಿಡು. ಮನೆಗೆ ಗಂಡು ಮಗ ನಾನು ಅನ್ನೋ ಅಹಂಕಾರ ಪಡೋ ಥರ ಇರು.
ಎಕ್ಸಾಂ ಮುಗಿಯೋ ತನಕ ನಾನು ಬೇರೆ ಯಾವುದರ ಕಡೆನೂ ಕಾನ್ಸಂಟ್ರೇಟ್ ಮಾಡಲ್ಲ. ಆಫ್ಟರ್ ಎಕ್ಸಾಂ ನಿನ್ನ ಮುಖ ನೋಡ್ತೀನಿ. ನಿನ್ನ ಲವ್ವು ರಿಯಲ್ ಆಗಿದ್ರೆ ನನ್ನ ನೆನಪಿಟ್ಕೊಂಡ್ ಇರಿ¤ಯಾ. ಇಲ್ಲಾಂದ್ರೆ ಹಾಳಾಗ್ ಹೋಗು
ಮಗನೇ… ಸದ್ಯಕ್ಕೆ ಲವ್ ಯು ಕಣೋ… ಫಾರ್ ಎವರ್ ಅಂತ ಬರೀಲಾ.. ಬೇಡ್ವಾ..?
ನಿನ್ನ ಧನು
– ಬಸವರಾಜ ಕರುಗಲ್, ಕೊಪ್ಪಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.