ಕಣ್ತೆರೆದಾಗಲೂ, ಮುಚ್ಚಿದಾಗಲೂ ನಿನ್ನದೇ ಕನವರಿಕೆ


Team Udayavani, May 2, 2017, 12:50 PM IST

kanavarike.jpg

ಸುಖದಲ್ಲಿ ಸಖೀಯಾಗಿ, ದುಃಖದಲ್ಲಿ ಕಣ್ಣೊರೆಸುವ ಕೈಗಳಾದೆ ನೀನು. ಹುಣ್ಣಿಮೆಯ ಹಾಲೆºಳದಿಂಗಳಿನಂಥ ನಿನ್ನ ಪ್ರೀತಿಯಲ್ಲಿ ಮಿಂದೆದ್ದ ನಾನೇ ಧನ್ಯ. ಒಂದು ವೇಳೆ ನೀ ನನಗೆ ಸಿಗದಿದ್ದರೆ ಖಂಡಿತಾ ನನ್ನ ಬದುಕು ಬರಡಾಗುತ್ತಿತ್ತು. 

ಹುಡುಗಿ,
ನೀನು ಇವತ್ಯಾಕೋ ಜಾಸ್ತೀನೆ ನೆನಪಾಗ್ತಾ ಇದೀಯ. ಫೇಸ್‌ಬುಕ್ಕು, ವಾಟ್ಸಾಪ್‌ಗ್ಳ ಹಾಯ್‌- ಬಾಯ್‌, ಚಿನ್ನು,
ಮುದ್ದು ಬೊಗಳೆಗಳ ಸಹವಾಸ ಬೇಡ ಅಂದ ನನ್ನರಸಿಗೆ ನನ್ನ ಮನವನ್ನು ಒಂದು ಪತ್ರದಲ್ಲಿ ತೆರೆದಿಡುವಾಸೆ. ಎದುರಿಗೆ
ಹೇಳಲು ಅದೇಕೋ ಸಂಕೋಚ, ಮುಜುಗರ. ಮಾತು ಮತ್ತು ಪದಗಳಿಗೆ ನಿಲುಕದ ನಿನ್ನ ಬಗೆಗಿನ ನನ್ನಂತರಂಗದ
ತುಡಿತವನ್ನು ಈ ಬಿಳಿ ಹಾಳೆಯ ಮೇಲೆ ಕೆಲವು ಶುಷ್ಕ ಪದಗಳಿಂದ ಮೂಡಿಸಲು ಖಂಡಿತಾ ಸಾಧ್ಯವಿಲ್ಲ. ಆದರೂ,
ಒಂದೆರಡು ನುಡಿಗಳನ್ನು ನುಡಿದೇ ತೀರುವ ಹುಚ್ಚು ಬಯಕೆ. ದಯವಿಟ್ಟು, ಸ್ವಲ್ಪ ಸಮಯ ಮೀಸಲಿಟ್ಟು ಅರ್ಪಿಸಿಕೋ ನನ್ನ ಭಾವತರಂಗವನ್ನು.

ಕಮಲದ ದಳದಂಥ ಕಣ್ಣು, ದಾಳಿಂಬೆಯಂತೆ ಪೋಣಿಸಿಟ್ಟ ಹಲ್ಲು, ತೀಡಿಟ್ಟ ಮೂಗು, ನೀಳ ಕೇಶರಾಶಿ, ನಿನ್ನ ವೈಯಾರದ ನಡೆ, ಬಂಗಾರದಂಥ ಮೈಬಣ್ಣ, ಒಟ್ಟಿನಲ್ಲಿ ಭೂಲೋಕಕ್ಕೆ ಇಳಿದ ಅಪ್ಸರೆಯಂತೆ ನೀನು ಎಂದೆಲ್ಲಾ ಅವೇ ಸವಕಲು ಪದಗಳಿಂದ ನಿನ್ನನ್ನು ಬಣ್ಣಿಸಿ, ಮರುಳು ಮಾಡಿ ಒಲಿಸಿಕೊಳ್ಳಲು ನಾನು ಹವಣಿಸಲಿಲ್ಲ. ಮೇಲಿನ ಯಾವ ಬಣ್ಣನೆ‌ಗೂ ನೀನು ಕಡಿಮೆಯಿಲ್ಲ ಅನ್ನುವುದೂ ಅಷ್ಟೇ ಸತ್ಯ. ಆದರೆ ನಿನ್ನಂಥ ಸೌಂದರ್ಯದ ಖನಿ, ನನ್ನಲ್ಲಿ ಅದಾವ
ಆಕರ್ಷಣೆ ಕಂಡೆ?

ರೂಪದಲ್ಲಿ, ಗುಣದಲ್ಲಿ, ಪ್ರಪಂಚದಲ್ಲಿರುವ ಎಲ್ಲ ಒಳ್ಳೆಯದರಲ್ಲಿಯೂ, ಎಲ್ಲರಿಗಿಂತಲೂ ಒಂದು ಕೈ ಮೇಲೆ ಎಂಬಂತಿರುವ ನೀನು ನನ್ನಂಥ ಉಂಡಾಡಿ ಗುಂಡನನ್ನು ಪ್ರೀತಿಸಿದ್ದು, ನನ್ನ ಅದೆಷ್ಟೋ ಜನ್ಮದ ಪುಣ್ಯದ ಫ‌ಲವೇ ಸರಿ!  ನಿನ್ನ ಪ್ರೀತಿಗೆ ಅದರ ರೀತಿಗೆ  ಹೇಳು ಏನಿದೆ ಹೋಲಿಕೆ?

ಎಂದಿಗೂ ಬತ್ತದ ನಿನ್ನ ಅಕ್ಷಯ ಪ್ರೀತಿಯ ಮುಂದೆ ನಾನು ಮಂಡಿಯೂರಿಬಿಟ್ಟೆ ಕಣೇ. ರೋಮಿಯೋ- ಜೂಲಿಯಟ್‌,
ಲೈಲಾ- ಮಜು°, ಸಲೀಂ- ಅನಾರ್ಕಲಿ ಹೀಗೆ ಅನೇಕ ವåಹಾನ್‌ ಪ್ರೇಮಿಗಳ ಬಗ್ಗೆ ಕೇಳಿದ್ದರೂ, ಇಂದಿನ ಟೈಂಪಾಸ್‌ ಪ್ರೀತಿಯನ್ನು, ಪಾಕೆಟ್‌ ಖಾಲಿಯಾಗುವವರೆಗಿನ ಕಿಲಾಡಿ ಪ್ರೀತಿಯನ್ನು ನೋಡಿ, ಕೇಳಿ- ಪ್ರೀತಿ ಎಂದರೆ ಅಸಹ್ಯ ಎಂದುಕೊಂಡಿದ್ದೆ, ನೀ ಎಲ್ಲಿಂದ ದೇವತೆಯಂತೆ ನನ್ನ ಬಾಳಿನಲ್ಲಿ ಬಂದೆಯೋ ಗೊತ್ತಿಲ್ಲ.

ಪ್ರೀತಿಯ ಅಮೃತವನ್ನು ಮನಸಾರೆ ಉಣಬಡಿಸಿ, ಸೊಗದ ಸುಧೆಯಲ್ಲಿ ತೇಲಾಡುವಂತೆ ಮಾಡಿದೆ. ಸುಖದಲ್ಲಿ ಸಖೀಯಾಗಿ, ದುಃಖದಲ್ಲಿ ಕಣ್ಣೊರೆಸುವ ಕೈಗಳಾದೆ ನೀನು. ಹುಣ್ಣಿಮೆಯ ಹಾಲೆºಳದಿಂಗಳಿನಂಥ ನಿನ್ನ ಪ್ರೀತಿಯಲ್ಲಿ ಮಿಂದೆದ್ದ ನಾನೇ ಧನ್ಯ. ಒಂದು ವೇಳೆ ನೀ ನನಗೆ ಸಿಗದಿದ್ದರೆ ಖಂಡಿತಾ ನನ್ನ ಬದುಕು ಬರಡಾಗುತ್ತಿತ್ತು.

“ಏನೋ ಇದು… ಇಷ್ಟು ಹೊಗಳ್ತಾ ಇದೀಯ? ಎದುರಿಗೆ ಹೇಳಿದ್ರೆ ಬೈತೀನಿ ಅನ್ಕೊಂಡು ಲೆಟರ್‌ ಬರೀತಿದೀಯ?’ ಅಂತ
ಖಂಡಿತಾ ಬಯೆºàಡ.

ನಂಗೊತ್ತು, ಹೊಗಳಿದ್ರೆ ಯಾವತ್ತೂ ನಿಂಗೆ ಇಷ್ಟ ಆಗಲ್ಲ ಅಂತ. ಹೊಗಳಿದ್ರೆ ಮರ ಹತ್ತಿ ಕೂತ್ಕೊಳ್ಳೋ ಹುಡ್ಗಿàರ
ಮಧ್ಯೆ ಹೊಗಳಿಕೇನೆ ಇಷ್ಟಪಡದೆ, ನೇರವಾಗಿ ಮಾತಾಡೋ ನಿನ್ನ ಚಿನ್ನದಂಥ ಗುಣವೇ ನನ್ನನ್ನು ನಿನ್ನೆಡೆಗೆ ಸೂಜಿಗಲ್ಲಿನಂತೆ ಸೆಳೆದಿದ್ದಲ್ಲವಾ? ಮತ್ತೆ ಶುರು ಮಾಡಿದ್ಯಲ್ಲೋ ನಿನ್ನ ಹೊಗಳ್ಳೋ ಪುರಾಣಾನಾ ಅನ್ನಬೇಡ. ನಿಂಗೂ ಗೊತ್ತು. ನಾನು ಯಾರನ್ನೂ ಸುಮ್‌ಸುಮ್ನೆ ಹೊಗಳಲ್ಲ ಅಂತ.

ಒಳ್ಳೆ ಫಿಲಾಸಫ‌ರ್‌ ಥರ ಬರಿªದ್ದೀಯ ಅಂತ ಮತ್ತೆ ಕಿಚಾಯಿಸಬೇಡ. ಸರಿ, ಈಗ ಇಷ್ಟು ಸಾಕು. ಇನ್ನೂ ಜಾಸ್ತಿ
ಕಾಯೋಕೆ ನನ್ನಿಂದ ಆಗಲ್ಲ. ಬೇಗ ಬಂದುಬಿಡು. ಕಣ್ಣು ರೆಪ್ಪೆತೆರೆದಾಗಲೂ, ಮುಚ್ಚಿದಾಗಲೂ ನಿನ್ನದೇ ಕನವರಿಕೆ,
ನಿನಗಾಗಿ ಹಂಬಲಿಕೆ. ಈ ವಿರಹವ ಸಹಿಸಲಾರೆನು, ಬೇಗ ಬಂದು ನನ್ನ ಸೇರು.

ನಿನ್ನದೇ ಕನವರಿಕೆಯಲ್ಲಿ…

– ರಾಘವೇಂದ್ರ ಹೊರಬೈಲು, ಚಿಂತಾಮಣಿ

ಟಾಪ್ ನ್ಯೂಸ್

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

10-sc-1

Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್‌

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

10-up-yodhas

Pro Kabaddi: ದ್ವಿತೀಯ ಸ್ಥಾನಕ್ಕೆ ಯೋಧಾಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.