ರಂಗಚಿನ್ನಾರಿ ಕರ್ನಾಟಕ ರಾಜ್ಯಕ್ಕೇ ಮಾದರಿ : ಸುಂದರ ರಾಜ್
Team Udayavani, May 2, 2017, 3:03 PM IST
ಕಾಸರಗೋಡು: ನಿರಂತರ ಹಾಗೂ ಸಕ್ರಿಯ ಸಾಮಾಜಿಕ, ಸಾಂಸ್ಕೃತಿಕ ಹಾಗು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಕಾಸರಗೋಡಿನ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ “ರಂಗ ಚಿನ್ನಾರಿ ಕಾಸರಗೋಡು’ ಸಂಸ್ಥೆ ಕರ್ನಾಟಕ ರಾಜ್ಯಕ್ಕೇ ಮಾದರಿಯಾಗಿದೆ ಎಂದು ಖ್ಯಾತ ಚಲನಚಿತ್ರ ನಟ ಸುಂದರ ರಾಜ್ ಹೇಳಿದರು.
ಸಾಮಾಜಿಕ – ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ದಶಮಾನೋತ್ಸವ ಸಂಭ್ರಮದ ಸಮಾರೋಪ ಭಾಷಣ ಮಾಡುತ್ತಾ ಒಂದೇ ವರ್ಷದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಾಸರಗೋಡಿನಲ್ಲಿ ಸಾಂಸ್ಕೃತಿಕ ಚಳವಳಿಯನ್ನೇ ನಡೆಸಿದೆ. ಇದು ಕರ್ನಾಟಕ ರಾಜ್ಯಕ್ಕೂ ಮಾದರಿಯಾಗಬೇಕು. ಕರ್ನಾಟಕದಲ್ಲಿ ಕನ್ನಡ ಕಂಪು ಕಳೆದುಕೊಳ್ಳುತ್ತಿದ್ದರೂ, ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಕಂಪು ಇನ್ನೂ ಬೀರುತ್ತಿರುವುದು ಇಲ್ಲಿನ ಕನ್ನಡಿಗರಿಗೆ ಇರುವ ಕನ್ನಡ ಮೇಲಿನ ಪ್ರೀತಿ, ಮಮತೆ ಕಾರಣವಾಗಿದೆ. ಕಾಸರಗೋಡಿನ ಕನ್ನಡಿಗರ ಕನ್ನಡ ಪ್ರೀತಿ ಕರ್ನಾಟಕದ ಜನತೆಗೂ ಮಾದರಿಯಾಗಿದೆ.
ಕಾಸರಗೋಡು ಮುನ್ಸಿಪಲ್ ಕಾನ್ಫರೆನ್ಸ್ ಹಾಲ್ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದ ಖ್ಯಾತ ಚಿತ್ರ ಕಲಾವಿದ ಪಿ.ಎಸ್. ಪುಣಿಂಚತ್ತಾಯ, ನಿವೃತ್ತ ಅಧ್ಯಾಪಕ, ಕನ್ನಡ ಹೋರಾಟಗಾರ ಪುರುಷೋ ತ್ತಮ ಮಾಸ್ತರ್, ನಿವೃತ್ತ ಮುಖ್ಯೋಪಾ ಧ್ಯಾಯಿನಿ, ಸಮಾಜ ಸೇವಕಿ ಶಾರದ ಟೀಚರ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಡಾ| ನಾ. ದಾಮೋ ದರ ಶೆಟ್ಟಿ, ಖ್ಯಾತ ಕವಯತ್ರಿ, ಉದ್ಘೋ ಷಕಿ ಶಕುಂತಳಾ ಆರ್. ಕಿಣಿ ಅವರನ್ನು ರಂಗಚಿನ್ನಾರಿ ಪ್ರಶಸ್ತಿ ನೀಡಿ ಗೌರವಿಸ ಲಾಯಿತು. ರಾಮಚಂದ್ರ ಬೈಕಂಪಾಡಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಚಿತ್ರ ನಟ ಸುಂದರ ರಾಜ್ ಅವರನ್ನು ಕಾಸರಗೋಡಿನ ಕನ್ನಡಿಗರ ಪರವಾಗಿ ಸಮ್ಮಾನಿಸಿ ಗೌರವಿಸಲಾಯಿತು.
ಪ್ರಾಸ್ತಾವಿಕ ಮಾತುಗಳನ್ನಾಡಿದ ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕ ಕಾಸರಗೋಡು ಅವರು ರಂಗಚಿನ್ನಾರಿ ಸಂಸ್ಥೆಯ ಹುಟ್ಟು, ಅದರ ಬೆಳವಣಿಗೆ, ಕಳೆದ ಹತ್ತು ವರ್ಷಗಳ ಸಾಧನೆಯ ಬಗ್ಗೆ ವಿವರಿಸಿ ಸ್ವಾಗತಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇದರ ಪುಟಾಣಿ ವಿದ್ಯಾರ್ಥಿಗಳಿಂದ “ಸುದರ್ಶನ ವಿಜಯ’ ಯಕ್ಷಗಾನ, “ತೆಲಿಕೆ ಬಾಯಿ ನಿಲಿಕೆ’ ಎಂಬ ಹಾಸ್ಯಮಯ ಕಾರ್ಯಕ್ರಮ, ಖ್ಯಾತ ಗಾಯಕಿ ಮಹಾಲಕ್ಷ್ಮೀ ಶೆಣೈ ಕಾರ್ಕಳ ಅವರಿಂದ ದಾಸ ಸಂಕೀರ್ತನೆ ನಡೆಯಿತು.
ಶಾಬ್ಟಾಸ್ ಚಿನ್ನಾ: ಸುಂದರರಾಜ್
ಇಲ್ಲಿನ ಕನ್ನಡ ಚಟುವಟಿಕೆಯನ್ನು ವೀಕ್ಷಿಸಿದಾಗ ಕಾಸರಗೋಡಿನಲ್ಲಿ ಯಾಕೆ ಹುಟ್ಟಿಲ್ಲ ಎನಿಸುತ್ತಿದೆ ಎಂದ ಅವರು ಕಾಸರಗೋಡಿಗೆ ಕಾಲಿಟ್ಟಾಗ ರೋಮಾಂಚನ ಗೊಂಡೆ. ಹೃದಯ ತುಂಬಿ ಬಂತು. ಕನ್ನಡವನ್ನು ಉಳಿಸಲು ಇಲ್ಲಿ ನಡೆಸುತ್ತಿರುವ ಹೋರಾಟ ಕನ್ನಡದ ಮೇಲಿನ ಪ್ರೀತಿಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದ ಅವರು ರಂಗಚಿನ್ನಾರಿ ಮೂಲಕ ಕಾಸರಗೋಡಿನಲ್ಲಿ ಹಲವಾರು ಯುವ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಕರ್ನಾಟಕದ ಖ್ಯಾತ ಕಲಾವಿದರನ್ನು ಕರೆಸಿ ಅವರಿಂದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಾಸರಗೋಡಿನ ಕನ್ನಡಿಗರಿಗೆ ಕರ್ನಾಟಕದ ಖ್ಯಾತನಾಮರನ್ನು ಪರಿಚಯಿಸಿದ್ದಾರೆ. ಇದರ ಹಿಂದಿನ ಸಾರಥ್ಯ ವಹಿಸಿರುವ ಕಾಸರಗೋಡು ಚಿನ್ನಾ ಅವರು ಕಾಸರಗೋಡಿನ ರಜನೀಕಾಂತ್ ಎಂದರೂ ರಾಜಕುಮಾರ್ ಎಂದರೂ ತಪ್ಪಾಗಲಾರದು ಎಂದ ಅವರು ಕಾಸರಗೋಡು ಚಿನ್ನಾ ಅವರನ್ನು ಶ್ಲಾಘಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.