ಬಾಲ ಪ್ರತಿಭೆ ಸನ್ನಿಧಿ ಟಿ.ರೈಯಿಂದ “ಸೇಫ್ ಝೋನ್’
Team Udayavani, May 2, 2017, 3:10 PM IST
ಸಮಾಜ ಎಷ್ಟೇ ಮುಂದುವರಿದರೂ ಸ್ತ್ರೀ ಶೋಷಣೆ-ದೌರ್ಜನ್ಯ ಇನ್ನೂ ಎಲ್ಲೆಮೀರುತ್ತಲೇ ಇದೆ. ಪುರುಷ ಪ್ರಧಾನವಾದ ಸಮಾಜದಲ್ಲಿ ಸ್ತ್ರೀಯರಿಗೆ ಮಾನ್ಯತೆ ದೊರಕುತ್ತಿದ್ದರೂ ಅದಕ್ಕಿಂತ ಹೆಚ್ಚಾಗಿ ಅವಳ ಮೇಲೆ ಕಿರುಕುಳ ನಡೆಯುತ್ತಿದ್ದು ಮಾನಸಿಕವಾಗಿ, ದೈಹಿಕವಾಗಿ ಸ್ತ್ರೀಯರು ಸಶಕ್ತರಾಗ ಬೇಕಾದ ಅವಶ್ಯಕತೆಗಿಂತ ಅನಿವಾ ರ್ಯತೆ ಈ ಕಾಲದಲ್ಲಿ ಅವಶ್ಯಕ ಮತ್ತು ಅನಿವಾರ್ಯ. ವಿವಿಧ ಪ್ರತಿಭೆಗಳ ಮೂಲಕ ಮನೆಮಾತಾದ ಬಹುಮುಖ ಪ್ರತಿಭೆ ಸನ್ನಿಧಿ ಟಿ. ರೈ ಇದೀಗ ತನ್ನ ಎಳೆ ವಯಸಿನಲ್ಲಿ ಅನೇಕ ಎಳೆ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುವ ಮೂಲಕ ತಮ್ಮನ್ನು ತಾವು ಅಪಾಯದ ಸ್ಥಿತಿಯಲ್ಲಿ ಹೇಗೆ ರಕ್ಷಿಸಿಕೊಳ್ಳಬಹುದು ಎನ್ನುವುದನ್ನು ಕರಗತ ಮಾಡಿಸಿ ವಿನೂತನ ರೀತಿಯಲ್ಲಿ ಸಹೋದರಿಯರನ್ನು ಪಳಗಿಸುತ್ತಿದ್ದಾಳೆ.
ಸನ್ನಿಧಿಯನ್ನು ಕಂಡರೆ ಅಭಿಮಾನ ಪಡುವುದಕ್ಕಿಂತ ಅಸೂಯೆಪಡುವವರೇ ಹೆಚ್ಚು. ಯಾಕಂದ್ರೆ ತಮ್ಮದೇ ಕೆಲಸ ಕಾರ್ಯ ಒತ್ತಡಗಳಲ್ಲಿ ತಮ್ಮ ಮಕ್ಕಳ ಕಾರ್ಯ ಚಟುವಟಿಕೆಗಳನ್ನು ಗಮನಿಸದ ಹೆತ್ತವರಿರುವ ಈ ಕಾಲದಲ್ಲಿ ಮಗಳಿಗಾಗಿ ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಅವಳ ಸಮಾಜಮುಖೀ ಚಿಂತನೆ ಮತ್ತು ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತ ಸನ್ನಿಧಿಯ ತಂದೆ ತಾರನಾಥ ರೈ, ತಾಯಿ ರಾಜೇಶ್ವರಿ ರೈ ಅವರ ಅವಿರತ ಶ್ರಮ ತಾಳ್ಮೆ ಸನ್ನಿಧಿ ಪಾಲಿಗೆ ವರದಾನ.
ಇತರ ಹೆತ್ತವರಿಗೆ ಈ ದಂಪತಿ ಮಾದರಿ ಕೂಡಾ. ಇಂತಹ ತಂದೆ ತಾಯಿಯನ್ನು ಪಡೆಯಬೇಕಾದರೆ ಪೂರ್ವ ಜನುಮದ ಭಾಗ್ಯವೇ ಸರಿ .ಇಂತಹ ಒಂದು ಮಗು ತಮ್ಮ ಉದರದಲ್ಲೂ ಜನಿಸಬಾರದೇ ಎಂದು ಯೋಚಿಸುವ ತಾಯಂದಿರೂ ಇದ್ದಾರೆ.
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಕಾರ್ತಿಕೇಯ ಚಾರಿಟೇಬಲ್ ಟ್ರಸ್ಟ್ ಪೆರ್ಲ ಇದರ ಆಶ್ರಯದಲ್ಲಿ ಹೆಣ್ಮಕ್ಕಳ ಹಾಗೂ ಮಹಿಳಾ ಸಶಕ್ತೀಕರಣದ ಮಾರ್ಗದರ್ಶನಕ್ಕಾಗಿ “ಸೇಫ್ ಝೋನ್’ ಎಂಬ ವಿನೂತನ ಶೈಲಿಯ ಶಿಬಿರದ ಆಯೋಜಿಸಾಗಿತ್ತು.
ಗ್ರಾಮೀಣ ಪ್ರದೇಶದ ಹೆಣ್ಮಕ್ಕಳ ಹಾಗೂ ಮಹಿಳೆಯರ ಸ್ವಯಂರಕ್ಷಣೆ ಅತ್ಯವಶ್ಯವೆನಿಸುವ ಸರಳ ಸೂತ್ರಗಳನ್ನು, ಕಾನೂನು ಪರ ಹೋರಾಟದ ದಿಟ್ಟ ಹೆಜ್ಜೆಗಳನ್ನು, ಆರೋಗ್ಯಕರ ಬದುಕಿಗೆ ಸಲಹೆ ಸೂಚನೆಗಳನ್ನು ಅಲ್ಲದೆ ಪ್ರತಿಯೊಬ್ಬರಲ್ಲಿ ಅಡಗಿರುವ ಪ್ರತಿಭಾ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಏಕದಿನ ಶಿಬಿರ. ಈ ಶಿಬಿರದ ರೂವಾರಿ ಸನ್ನಿಧಿ ಟಿ. ರೈ ಸಾಕಷ್ಟು ಮಕ್ಕಳು-ಮಹಿಳೆಯರು ಭಾಗವಹಿಸಿದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಖ್ಯಾತ ಕರಾಟೆ ಪಟು, ಶಿಕ್ಷಕ ಮೊಹಮ್ಮದ್ ಅಶ್ರಫ್, ರಂಗಕರ್ಮಿ ಉದಯ ಸಾರಂಗ್, ಮಂಗಳೂರು ಸಂಘನಿಕೇತನದ ಯೋಗ ಶಿಕ್ಷಕಿ ಇಂದಿರಾ ಅಪ್ಪಯ್ಯ ಯಾದವ್, ಬದಿಯಡ್ಕ ಗ್ರಾಮ ಪಂಚಾಯತಿನ ಪ್ಯಾರಲಿಂಗ್ ವಾಲೆಂಟಿಯರ್ ಕೃಷ್ಣವೇಣಿ, ಕಾಸರಕೋಡು ಚೈಲ್ಡ್ ಲೈನ್ ಕೋರ್ಡಿನೇಟರ್ ಉದಯ ಕುಮಾರ್ ಎಂ, ಡಾ| ಮಾಲತಿ ಪ್ರಕಾಶ್ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
“ಕರಾಟೆ ಎಂದರೆ ಕೇವಲ ಹೊಡೆದಾಡಿಕೊಳ್ಳುವುದೆನ್ನುವ ಭಾವನೆ ಹಲವರಲ್ಲಿದೆ. ಕರಾಟೆ ಎಂದರೆ ಹೆಚ್ಚಿನವರಿಗೂ ಅಲರ್ಜಿ, ತಮಾಷೆಯ ವಿಚಾರ, ಹಾಕೆ ಹೀಗೆ..? ಹೆಣ್ಮಕ್ಕಳಿಗೆ ಕರಾಟೆ ಕಲಿಸುವುದರಿಂದ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಅವರ ಆತ್ಮವಿಶ್ವಾಸ, ಇಮ್ಮಡಿಗೊಳ್ಳುತ್ತದೆ. ಈಗಿನ ಕಾಲದ ಬೆಳವಣಿಗೆಯಲ್ಲಿ ಮಹಿಳೆಯರಿಗೆ, ಹೆಣ್ಮಕ್ಕಳಿಗೆ ಧೈರ್ಯವಾಗಿ ಓಡಾಡುವ ಪರಿಸ್ಥಿತಿ ಕಡಿಮೆ. ಹೆತ್ತವರು ಯಾವತ್ತೂ ಭಯದಲ್ಲೇ ಬದುಕುವ ಸ್ಥಿತಿಯಲ್ಲಿರುವಾಗ ಸ್ವಯಂರಕ್ಷಿಸುವ ಕಾರ್ಯಕ್ಕಾಗಿ ಕರಾಟೆ ಕಲಿಯುವುದು ಅನಿವಾರ್ಯ-ಆವಶ್ಯಕ. ಈ ಶಿಬಿರ ನನ್ನ ಸಾಮಾಜಿಕ ಕಾರ್ಯಗಳಿಗೆ ಪ್ರೇರಣೆ, ಜನರ ಪ್ರೀತಿ ಸಹಕಾರ ಹೀಗೇ ಇದ್ದರೆ ಇನ್ನಷ್ಟು ಕಾರ್ಯಗಳನ್ನು ಮಾಡುವ ಮನಸಿದೆ.
ಸನ್ನಿಧಿ ಟಿ. ರೈ
ಗ್ರಾಮೀಣ ಪ್ರದೇಶದಲ್ಲಿ ಕರಾಟೆ ಕಲಿಸುವ ಎಳೆ ವಯಸಿನ ಸನ್ನಿಧಿಯ ಮನೋಧೈರ್ಯ ಮೆಚ್ಚುವಂತದ್ದು. ಸಾಮಾಜಿಕವಾಗಿ ಬೆರೆಯುವ ಮನಸಿಗೆ ಒಂದು ಸಲಾಂ. ಸನ್ನಿದಿಯಿಂದ ಇನ್ನಷ್ಟು ಸಮಾಜಿಕ ಕಾರ್ಯಗಳು ನಡೆಯಲಿ. ಅವಳು ಉಳಿದವರಿಗೆ ಸ್ಪೂರ್ತಿಯಾಗಲಿ. ಈ ಬಹುಮುಖ ಪ್ರತಿಭೆಯ ಯೋಜನೆಗಳೆಲ್ಲ ಫಲಕಾಣಲಿ ಎಂದು ಶುಭಹಾರೈಸೋಣ.
ಮಣಿರಾಜ್ ವಾಂತಿಚ್ಚಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.