ಪರಸ್ಪರ ಗೌರವ ಕಲಿಸಿದ್ದು ಬಸವಣ್ಣ


Team Udayavani, May 2, 2017, 3:42 PM IST

gul1.jpg

ಕಲಬುರಗಿ: ದೇಶದಲ್ಲಿ ಪರಸ್ಪರರನ್ನು ಗೌರವಿಸುವ ಸಂಸ್ಕೃತಿ 12ನೇ ಶತಮಾನದಲ್ಲಿ ಬಸವಣ್ಣ ಹೇಳಿದ್ದನ್ನೇ ಇವತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗುಣಗಾನ ಮಾಡಿ ತಮ್ಮತನ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ದೊಡ್ಡ ಉಪೇಕ್ಷೆ ಏನಿಲ್ಲ ಎಂದು ಗುವಿವಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ, ಪ್ರಸಾರಂಗದ ನಿರ್ದೇಶಕ ಹಾಗೂ ದಲಿತ ಚಿಂತಕ ಪ್ರೊ| ಎಚ್‌.ಟಿ. ಪೋತೆ ಹೇಳಿದರು. 

ನಗರದ ಚೆಂಬರ್‌ ಆಫ್‌ ಕಾಮರ್ಸ್‌ ಸಭಾಂಗಣದಲ್ಲಿ ಬೀದರ ಜಿಲ್ಲೆ ಕೌಠಾ ಬಸವ ಆಶ್ರಮದ ಸಿದ್ದರಾಮ ಶರಣರು ಬೆಲ್ದಾಳ ಅವರಿಗೆ ಕಲಬುರಗಿ ಬಸವ ಪ್ರಕಾಶನ ಸಂಸ್ಥಾಪಕಿ ಲಿಂ| ಬಸಮ್ಮ ಬಸವರಾಜ ಕೋನೇಕ ಅವರ ನಾಲ್ಕನೇ ಪುಣ್ಯ ಸ್ಮರಣೋತ್ಸವ ಹಾಗೂ ಅವರ ಸ್ಮರಣಾರ್ಥ ನೀಡುವ ಬಸವ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. 

ಪ್ರತಿ ವ್ಯಕ್ತಿಯೂ ಗಣ್ಯ ಎನ್ನುವ ಸಂಸ್ಕೃತಿ ನವ ಭಾರತದ ಪರಿಕಲ್ಪನೆ ಎಂದು ಮೋದಿ ಅವರು ಹೇಳಿದ್ದಾರೆ. ಆದರೆ, 12ನೇ ಶತಮಾನದಲ್ಲಿಯೇ ನಮ್ಮ ಬಸವಣ್ಣ ಪ್ರತಿಯೊಬ್ಬರು ಗೌರವಾರ್ಹರು, ಪರಸ್ಪರರು ಗೌರವಿಸಬೇಕು. ಅದರಲ್ಲಿ ವೃತ್ತಿಗೌರವೂ ಸೇರಿದಂತೆ ಎಲ್ಲರೂ ಸಮಾನರು ಎನ್ನುವ ಪರಿಕಲ್ಪನೆಯಲ್ಲ. ವಾಸ್ತವ ಆಚರಣೆಗಳನ್ನು ಜಾರಿಗೆ ತಂದಿದ್ದರು.

ಅದನ್ನು ಎಲ್ಲ ಶರಣರು ಒಪ್ಪಿ ನಡೆದಿದ್ದರು. ಆದ್ದರಿಂದ ಇವತ್ತು ನವಭಾರತ ಪರಿಕಲ್ಪನೆ ಎನ್ನುವುದು ಈ ಮೊದಲೇ ನಮ್ಮಲ್ಲಿ ಆಚರಣೆಯಲ್ಲಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಬಸವಣ್ಣ ನಮಗೆ ವಚನ ಸಾಹಿತ್ಯ ಕೊಡಲಿಲ್ಲ.. ಬದಲಿಗೆ ಪ್ರಜಾಸಾಹಿತ್ಯ ಕೊಟ್ಟರು. ಅದೂ ಚಳವಳಿ ಸಾಹಿತ್ಯವೂ ಹೌದು.

ರಾಜಸತ್ತೆ-ಪುರೋಹಿತ ಸತ್ತೆಗಳ ವಿರುದ್ಧ ಎದ್ದ ಚಳವಳಿ ಸಾಹಿತ್ಯ ಈ ವಚನ ಸಾಹಿತ್ಯ. ಅಂತಹ ದೊಡ್ಡ ಸಂಸ್ಕೃತಿಯನ್ನೇ ಬಸವಣ್ಣ ನಮಗೆ ನೀಡಿದ್ದನ್ನು ನಾವು ಹಗುರವಾಗಿ ತೆಗೆದುಕೊಂಡಿದ್ದೇವಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಈ ವೇಳೆ ಸಿದ್ದರಾಮ ಶರಣರು ಬೆಲ್ದಾಳ ಅವರಿಗೆ ಬಸವ ಸಿರಿ ಪ್ರಶಸ್ತಿ ಹಾಗೂ 11 ಸಾವಿರ ರೂ.ಗಳ ಗೌರವ ಅರ್ಪಣೆ ಮಾಡಿ ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ| ವಸಂತ ಕುಷ್ಟಗಿ ಮಾತನಾಡಿದರು.

ಎಚ್‌ಕೆಸಿಸಿಐ ಅಧ್ಯಕ್ಷ ಸೋಮಶೇಖರ ಟೆಂಗಳಿ, ಸಿದ್ದಲಿಂಗೇಶ್ವರ ಬುಕ್‌ ಡಿಫೋ ಮತ್ತು ಪ್ರಕಾಶನದ ಬಸವರಾಜ ಕೊನೇಕ, ಸಿದ್ದಲಿಂಗ ಕೊನೆಕ, ಶರಣಬಸವ ಕೊನೆಕ ಹಾಗೂ ಗಣ್ಯರು, ಸಾಹಿತಿಗಳು, ಬರಹಗಾರರು ಕೊನೆಕ್‌ ಕುಟುಂಬ ಸದಸ್ಯರು ಇದ್ದರು.ಪ್ರೊ| ಶೀಶೈಲ ನಾಗರಾಳ ಸ್ವಾಗತಿಸಿದರು. ಪ್ರೊ| ಶಿವರಾಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಗವಿಸಿದ್ದಪ್ಪ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಟಾಪ್ ನ್ಯೂಸ್

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

IPL 2024: Pant has the ambition to become India’s cricket captain: Parth Jindal

IPL 2025: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್

8-I-phone

Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್‌ ಭರಾಟೆ ಬಲು ಜೋರು

Jammu Kashmir: Big plan fails; Army destroys terrorist hideout

Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: 6 acres of sugarcane crop caught fire after being struck by an electric wire

Kalaburagi: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

shindhe

Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು

13-

Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ

12-bng

Bengaluru: ಬೈಕ್‌ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು

11-fir

Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್‌ ದಾಖಲು

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.