ಪಕ್ಕದ್ಮನೆಯ ಅಂಕಲ್‌ಗಿಂತ ಅಪ್ಪನ ಅನುಕರಣೆ ಮಾಡೋದು ಬೆಸ್ಟು
Team Udayavani, May 3, 2017, 11:42 AM IST
ಈ ಮೂರು ಚಿತ್ರಗಳಲ್ಲಿ ಜೆ.ಡಿ ಏನು ಹೇಳಲು ಹೊರಟಿದ್ದಾರೆಂಬ ಕುತೂಹಲ ಸಹಜವಾಗಿಯೇ ಇದೆ. ಆದರೆ ಜೆ.ಡಿ. ಮಾತ್ರ ಸಿನಿಮಾದ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟುಕೊಡಲು ಸಿದ್ಧರಿಲ್ಲ. “ನಿಮ್ಮಲ್ಲಿರುವ ಕುತೂಹಲ ಸಿನಿಮಾ ಬಿಡುಗಡೆಯಾಗುವ ವರೆಗೆ ಹಾಗೆ ಮುಂದುವರೆಯಲಿ’ ಎಂಬ ಉತ್ತರ ಅವರಿಂದ ಬರುತ್ತದೆ.
ವಾರದ ಹಿಂದಷ್ಟೇ ಪೂಜಾ ಗಾಂಧಿ ತಮ್ಮ ನಿರ್ಮಾಣದ ಮೂರು ಚಿತ್ರಗಳಿಗೆ ಏಕಕಾಲದಲ್ಲಿ ಮುಹೂರ್ತ ಮಾಡುವುದಾಗಿ ಹೇಳಿದ್ದರು. ಈ ಮೂರು ಚಿತ್ರಗಳನ್ನು ಜೆ.ಡಿ.ಚಕ್ರವರ್ತಿ ನಿರ್ದೇಶನ ಮಾಡುತ್ತಿದ್ದು, ಚಿತ್ರದ ವಿವರವನ್ನು ಅವರೇ ನೀಡುತ್ತಾರೆಂದು ಹೇಳಿದ್ದರು. ಅದರಂತೆ ಪೂಜಾ ನಿರ್ಮಾಣದ ಮೂರು ಚಿತ್ರಗಳು ಮಂಗಳವಾರ ಹೋಟೆಲ್ ಅಶೋಕದಲ್ಲಿ ಅದ್ಧೂರಿಯಾಗಿ ಲಾಂಚ್ ಆಗಿವೆ. ಜೆ.ಡಿ. ಚಕ್ರವರ್ತಿ ತಮ್ಮದೇ ಶೈಲಿಯಲ್ಲಿ ಈ ಮೂರು ಸಿನಿಮಾಗಳನ್ನು ಲಾಂಚ್ ಮಾಡಿದ್ದಾರೆ.
“ಉತಾಹಿ’, “ಭೂ’ ಹಾಗೂ “ಬ್ಲ್ಯಾಕ್ ವರ್ಸಸ್ ವೈಟ್’ ಆ ಮೂರು ಚಿತ್ರಗಳು. ಹಾಗಾದರೆ ಈ ಮೂರು ಚಿತ್ರಗಳಲ್ಲಿ ಜೆ.ಡಿ ಏನು ಹೇಳಲು ಹೊರಟಿದ್ದಾರೆಂಬ ಕುತೂಹಲ ಸಹಜವಾಗಿಯೇ ಇದೆ. ಆದರೆ ಜೆ.ಡಿ. ಮಾತ್ರ ಸಿನಿಮಾದ ಬಗ್ಗೆ ಹೆಚ್ಚು ಮಾಹಿತಿ ಬಿಟ್ಟುಕೊಡಲು ಸಿದ್ಧರಿಲ್ಲ. “ನಿಮ್ಮಲ್ಲಿರುವ ಕುತೂಹಲ ಸಿನಿಮಾ ಬಿಡುಗಡೆಯಾಗುವ ವರೆಗೆ ಹಾಗೆ ಮುಂದುವರೆಯಲಿ’ ಎಂಬ ಉತ್ತರ ಅವರಿಂದ ಬರುತ್ತದೆ. ಪತ್ರಕರ್ತರು ಮತ್ತಷ್ಟು ಕೇಳಿದಾಗ ಜೆ.ಡಿ. ಮೂರು ಸಿನಿಮಾಗಳ ಒನ್‌ಲೈನ್ ಹೇಳುತ್ತಾ ಹೋದರು.
“ಉತಾಹಿ’ ಒಂದು ಲವ್‌ಸ್ಟೋರಿ. ಲವ್‌ಸ್ಟೋರಿಯ ಜೊತೆಗೆ ಕ್ರೈಮ್ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗುತ್ತದೆ. ಒಬ್ಬ ಒಳ್ಳೆಯ ಹುಡುಗಿ ತನಗೆ ಗೊತ್ತಿಲ್ಲದೇ ಕ್ರೈಮ್ ಲೋಕಕ್ಕೆ ಹೇಗೆ ಎಂಟ್ರಿಕೊಡುತ್ತಾಳೆ, ಅದರಲ್ಲಿ ಏನೆಲ್ಲಾ ಮಾಡುತ್ತಾಳೆ ಮತ್ತು ಅದರಿಂದ ಹೇಗೆ ಹೊರಬರುತ್ತಾಳೆಂಬ ಅಂಶವನ್ನು ಇಲ್ಲಿ ಹೇಳಲು ಹೊರಟಿದ್ದಾರಂತೆ. “ಉತಾಹಿ’ಯಲ್ಲಿ ಪೂಜಾ ಹಾಗೂ ಜೆ.ಡಿ. ಚಕ್ರವರ್ತಿ ಜೊತೆಗೆ ಒಂದಷ್ಟು ಹೊಸಬರನ್ನು ಕೂಡಾ ಪರಿಚಯಿಸುತ್ತಿದ್ದಾರಂತೆ. ಸದ್ಯಕ್ಕೆ ಜೆ.ಡಿ. ತುಂಬಾ ಎಕ್ಸೆ„ಟ್ ಆಗಿರುವ ಪ್ರಾಜೆಕ್ಟ್ ಅಂದರೆ “ಉತಾಹಿ’ಯಂತೆ. ಈ ಸಿನಿಮಾಕ್ಕಾಗಿ 11 ತಿಂಗಳು ಕೆಲಸ ಮಾಡಿದ್ದಾರಂತೆ.
“ಭೂ’ ಒಂದು ಹಾರರ್ ಸಿನಿಮಾ. ಸಾಮಾನ್ಯವಾಗಿ ಬಾಗಿಲ ಮರೆಯಲ್ಲಿ ನಿಂತು “ಭೂ’ ಎಂದು ಹೆದರಿಸುವುದು ವಾಡಿಕೆ. ಜೆ.ಡಿ. ಮಾಡಿರುವ ಹಾರರ್ ಕಥೆಗೆ “ಭೂ’ ಎಂಬ ಟೈಟಲ್ ಹೊಂದಿಕೆಯಾಗುತ್ತದೆಯಂತೆ. ಇದು ಕೂಡಾ ಗಂಡ-ಹೆಂಡತಿ ನಡುವೆ ನಡೆಯುವ ಕಥೆ. ಸಣ್ಣ ಸಂದೇಹ ಮೂಲಕ ಆರಂಭವಾಗುವ ಕಥೆ ಪ್ರೇಕ್ಷಕರಿಗೆ ಮಜಾ ಕೊಡುತ್ತದೆಯಂತೆ. ಅದು ಬಿಟ್ಟರೆ “ಬ್ಲ್ಯಾಕ್ ವರ್ಸಸ್ ವೈಟ್’ ಒಂದು ಸೋಶಿಯಲ್ ಡ್ರಾಮಾ.
ಮುಖ್ಯವಾಗಿ ಕಾನೂನಾತ್ಮಕ ಅಂಶಗಳೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಜೆ.ಡಿ. ಹೇಳುವಂತೆ “ಬ್ಲ್ಯಾಕ್ ಅಂಡ್ ವೈಟ್’ ನೈಜ ಕಥೆಯಿಂದ ಸ್ಫೂರ್ತಿ ಪಡೆದ ಸಿನಿಮಾ. ಪ್ರತಿ ಸಿನಿಮಾದ ಸಂಗೀತ ಕೂಡಾ ಭಿನ್ನವಾಗಿರುತ್ತದೆ ಎಂದು ಹೇಳುವ ಜೆ.ಡಿ. ಚಕ್ರವರ್ತಿ, ರೆಗ್ಯುಲರ್ ಪ್ಯಾಟರ್ನ್ ಬಿಟ್ಟ ಹಾಡುಗಳನ್ನು ಈ ಸಿನಿಮಾದಲ್ಲಿ ಕೇಳಬಹುದು ಎಂಬುದು ಜೆ.ಡಿ.ಚಕ್ರವರ್ತಿ ಮಾತು. ಮೊದಲು “ಉತಾಹಿ’ ಚಿತ್ರೀಕರಣ ಆರಂಭವಾಗಲಿದ್ದು, ಆ ನಂತರ ಒಂದೊಂದು ಸಿನಿಮಾಗಳ ಚಿತ್ರೀಕರಣ ಶುರುವಾಗಲಿದೆಯಂತೆ.
“ನನ್ನದೇ ಆದ ಒಂದು ತಂಡವಿದೆ. ನಾನು ಕಥೆಗಿಂತ ಹೆಚ್ಚಾಗಿ ಪೂರ್ವತಯಾರಿ ಹಾಗೂ ನಿರೂಪಣೆಯಲ್ಲಿ ನಂಬಿಕೆ ಇಟ್ಟವನು. ಯಾವುದೇ ಕಥೆಯನ್ನಾದರೂ ನಾವು ಹೇಗೆ ನಿರೂಪಿಸುತ್ತೇವೆ ಎಂಬುದರ ಮೇಲೆ ಸಿನಿಮಾ ನಿಂತಿರುತ್ತದೆ’ ಎಂಬುದು ಜೆ.ಡಿ. ಮಾತು. ಜೆ.ಡಿ.ಚಕ್ರವರ್ತಿಗೆ ಈಗ ಭಯ ಶುರುವಾಗಿದೆಯಂತೆ. ಆ ಭಯಕ್ಕೆ ಕಾರಣ ಪೂಜಾ ಗಾಂಧಿ. “ಪೂಜಾ ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಂಡರೆ ಸಾಕು. ಅವರ ಆ ನಂಬಿಕೆಯೇ ನನ್ನ ಭಯಕ್ಕೆ ಕಾರಣ’ ಎನ್ನುತ್ತಾರೆ.
ಇನ್ನು, ಜೆ.ಡಿ. ಚಕ್ರವರ್ತಿ, ರಾಮ್‌ಗೊಪಾಲ್ ವರ್ಮಾ ಗರಡಿಯಿಂದ ಬಂದವರು. ಹಾಗಾಗಿ, ಅವರ ಸಿನಿಮಾಗಳ, ಅವರ ಶೈಲಿಯ ಪ್ರೇರಣೆ, ಅನುಕರಣೆ ಇರುತ್ತಾ ಎಂದರೆ, “ಗೊತ್ತಿಲ್ಲ, ಇದ್ದರೂ ಇರಬಹುದು. ನನಗೆ ಆ ಬಗ್ಗೆ ಖುಷಿ ಇದೆ. ಪಕ್ಕದ್ಮನೆಯ ಅಂಕಲ್‌ನ ಅನುಕರಣೆ ಮಾಡೋದಕ್ಕಿಂತ ನಮ್ಮ ತಂದೆಯನ್ನು ಅನುಕರಿಸೋದು ಒಳ್ಳೆಯದಲ್ವಾ’ ಎನ್ನುವ ಮೂಲಕ ರಾಮ್‌ಗೊàಪಾಲ್ ವರ್ಮಾ ಬಗೆಗಿನ ತಮ್ಮ ಗೌರವನ್ನು ಸೂಚಿಸುತ್ತಾರೆ ಜೆ.ಡಿ.
ಭರವಸೆಯ ಮೇಲೆ ನಿರ್ಮಾಣ: ಏಕಕಾಲಕ್ಕೆ ಹತ್ತು ಸಿನಿಮಾಗಳನ್ನು ಹೇಗೆ ನಿರ್ಮಿಸುತ್ತೀರಿ ಎಂಬ ಪ್ರಶ್ನೆ ಪೂಜಾಗೆ ಹೋದಲ್ಲೆಲ್ಲಾ ಎದುರಾಗುತ್ತಿದೆ. ಅದರಲ್ಲೂ ಆರಂಭದಲ್ಲೇ ಮೂರು ಸಿನಿಮಾಗಳನ್ನು ಜೆ.ಡಿ. ಜೊತೆ ಮಾಡುತ್ತಿದ್ದಾರೆ. ಇವೆಲ್ಲ ಹೇಗೆ ಸಾಧ್ಯ ಎಂದರೆ ನಂಬಿಕೆ ಎಂಬ ಉತ್ತರ ಪೂಜಾಗಾಂಧಿಯಿಂದ ಬರುತ್ತದೆ. “ಎರಡು ವರ್ಷಗಳ ಹಿಂದಷ್ಟೇ ನಮಗೆ ಪರಿಚಯವಾಯಿತು. ಜೆ.ಡಿಯವರ ಸಿನಿಮಾ ಪ್ರೀತಿ ನನಗೆ ಇಷ್ಟವಾಯಿತು. ಅವರಿಂದ ಸಾಕಷ್ಟು ಕಲಿತೆ. ಸಿನಿಮಾ, ಕಥೆ, ಮೇಕಿಂಗ್ ಅನ್ನು ನೋಡುವ ದೃಷ್ಟಿಕೋನವನ್ನು ಕೂಡಾ ಕಲಿತೆ. ಎಲ್ಲವೂ ಭರವಸೆಯ ಮೇಲೆ ನಡೆಯುತ್ತಿದೆ’ ಎನ್ನುವುದು ಪೂಜಾ ಗಾಂಧಿ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.