ವಾರ್ನರ್‌ಗೆ ಅಭಿನಂದನೆ ಸಲ್ಲಿಸಿದ ಕೊಹ್ಲಿ
Team Udayavani, May 3, 2017, 12:15 PM IST
ಬೆಂಗಳೂರು: ಕೆಕೆಆರ್ ತಂಡದೆದುರು ಅಮೋಘ ಶತಕ ಸಿಡಿಸಿದ ಡೇವಿಡ್ ವಾರ್ನರ್ ಅವರಿಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಕೊಹ್ಲಿ ಅವರ ನಡೆಗೆ ವಾರ್ನರ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಇಂತಹ ಪ್ರೋತ್ಸಾಹದ ನುಡಿಗಳನ್ನು ಪಡೆಯುವುದು ಯಾವಾಗಲೂ ಗ್ರೇಟ್. ನಾವೆಲ್ಲ ಅಂತಾರಾಷ್ಟ್ರೀಯ ಕ್ರಿಕೆಟಿಗರು ಮತ್ತು ಈ ಕೂಟಕ್ಕಾಗಿ ನಾವಿಲ್ಲಿ ಸೇರಿದ್ದೇವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಡಿಗಳಿವೆ ಮತ್ತು ಅದನ್ನು ದಾಟಲು ನಾವು ಬಯಸುವುದಿಲ್ಲ. ಆದರೆ ಐಪಿಎಲ್‌ನಲ್ಲಿ ನಾವು ಜತೆಯಾಗಿ ಬಂದಾಗ ಮತ್ತು ಆಡಲು ಅಂಗಣಕ್ಕೆ ಇಳಿದಾಗ ಇದೊಂದು ಸ್ಪರ್ಧೆಯೆಂದು ಭಾವಿಸುತ್ತೇವೆ ಮತ್ತು ಅದಕ್ಕಾಗಿ ನಾವು ಎಲ್ಲರನ್ನೂ ಗೌರವಿಸುತ್ತೇವೆ ಎಂದು ವಾರ್ನರ್ ತಿಳಿಸಿದರು.
ಯಾರಾದರೂ ಉತ್ತಮ ನಿರ್ವಹಣೆ ನೀಡಿದರೆ ಅಭಿನಂದನಾ ಸಂದೇಶ ಕಳುಹಿಸಲು ಕಷ್ಟವೇನೂ ಆಗದು. ನಾವು ಪರಸ್ಪರ ಪ್ರೋತ್ಸಾಹದ ಸಂದೇಶ ನೀಡುತ್ತಿರಬೇಕು. ಯಾಕೆಂದರೆ ಐಪಿಎಲ್ ಎಂಬುದು ಪ್ರೇಕ್ಷಕರನ್ನು ಮತ್ತು ಅಭಿಮಾನಿಗಳನ್ನು ರಂಜಿಸಲು ಇರುವಂತಹ ಕೂಟವಾಗಿದೆ ಮತ್ತು ನಮ್ಮ ಶ್ರೇಷ್ಠ ಆಟವನ್ನು ವೀಕ್ಷಿಸಲು ನಾವು ನೆರ ವಾಗುವುದು ಎಂದು ವಾರ್ನರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್ ಗೆ ಬಿಸಿಸಿಐ ವಿಶೇಷ ಸಂದೇಶ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Novak Djokovic; ಆಹಾರದಲ್ಲಿ ವಿಷ: ಜೊಕೋ ಆಘಾತಕಾರಿ ಹೇಳಿಕೆ
Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ
Vijay Hazare Trophy ಕ್ವಾರ್ಟರ್ ಫೈನಲ್ : ಕರ್ನಾಟಕಕ್ಕೆ ಬರೋಡ ಸವಾಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.