ಮನ್‌ದೀಪ್ ಹ್ಯಾಟ್ರಿಕ್: ಭಾರತಕ್ಕೆ 4-3 ಗೆಲುವು
Team Udayavani, May 4, 2017, 2:55 PM IST
ಇಪೋ (ಮಲೇಶ್ಯ): ಮನ್‌ದೀಪ್ ಸಿಂಗ್ ಬಾರಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಭಾರತ ತಂಡ ಅಜ್ಲಾನ್ ಶಾ ಹಾಕಿ ಟೂರ್ನಿಯಲ್ಲಿ ಜಪಾನ್ ವಿರುದ್ಧ 4-3 ಗೋಲುಗಳಿಂದ ಜಯ ಸಾಧಿಸಿದೆ. ಈ ಮೂಲಕ ಭಾರತ 4 ಪಂದ್ಯಗಳಿಂದ 7 ಅಂಕ ಸಂಪಾದಿಸಿದ್ದು, ಫೈನಲ್ ಪ್ರವೇಶಿಸುವ ಅವಕಾಶ ಹೆಚ್ಚಿಸಿಕೊಂಡಿದೆ.
ಭಾರತ ಲೀಗ್‌ನ ಕೊನೆಯ ಪಂದ್ಯವನ್ನು ಮೇ 5 ರಂದು ಮಲೇಶ್ಯ ವಿರುದ್ಧ ಆಡಲಿದೆ. ಭಾರತ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಬ್ರಿಟನ್ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿತ್ತು. ಅನಂತರ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ 3-0 ಗೋಲುಗಳಿಂದ ಗೆಲುವು ಗಳಿಸಿತ್ತು. ಆದರೆ ಆಸೀಸ್ ವಿರುದ್ಧ ನಡೆದ ಪಂದ್ಯದಲ್ಲಿ 3-1 ಗೋಲುಗಳಿಂದ ಸೋಲು ಅನುಭವಿಸಿತ್ತು.
ಬುಧವಾರ ನಡೆದ ರೌಂಡ್ ರಾಬಿನ್ ಮಾದರಿಯ ಪಂದ್ಯದಲ್ಲಿ ಭಾರತದ ಪರ ರೂಪೀಂದರ್ ಪಾಲ್ ಸಿಂಗ್ (8ನೇ ನಿಮಿಷ) ಒಂದು ಗೋಲು ದಾಖಲಿಸಿದರೆ, ಮನ್‌ದೀಪ್ ಸಿಂಗ್ (45, 51 ಮತ್ತು 58ನೇ ನಿಮಿಷ) ಹ್ಯಾಟ್ರಿಕ್ ಗೋಲು ದಾಖಲಿಸಿದರು. ಜಪಾನ್ ಪರ ಕಜುಮ ಮುರಾಟ (10ನೇ ನಿಮಿಷ), ಹೀತ ಯೋಶಿಹಾರ (43ನೇ ನಿಮಿಷ), ಜೆಂಕಿ ಮಿಟಾನಿ (45ನೇ ನಿಮಿಷ) ತಲಾ ಒಂದು ಗೋಲು ದಾಖಲಿಸಿದರು.
8ನೇ ನಿಮಿಷದಲ್ಲಿ ಭಾರತಕ್ಕೆ ಸಿಕ್ಕ ಪೆನಾಲ್ಟಿ ಯಲ್ಲಿ ರೂಪೀಂದರ್ ಪಾಲ್ ಸಿಂಗ್ ಚೆಂಡನ್ನು ಗೋಲಾಗಿಸಿದರು. ಈ ಮೂಲಕ ಆರಂಭ ದಲ್ಲಿಯೇ ಭಾರತ 1-0 ಗೋಲುಗಳಿಂದ ಮುನ್ನಡೆ ಪಡೆಯಿತು. ಆದರೆ ಮರುಕ್ಷಣದಲ್ಲಿಯೇ ಜಪಾನ್ ಗೋಲು ದಾಖಲಿಸಿ 1-1ರಿಂದ ಸಮಬಲ ಸಾಧಿಸಿತು. ಹೀಗೆ ಮೊದಲ ಅವಧಿಯಲ್ಲಿ ಎರಡೂ ತಂಡಗಳ ನಡುವಿನ ಸ್ಪರ್ಧೆ ಸಮಬಲದಲ್ಲಿ ಅಂತ್ಯ ವಾಯಿತು. ಎರಡನೇ ಅವಧಿಯಲ್ಲಿ ಮನ್‌ದೀಪ್ ಸಿಂಗ್ ನೀಡಿದ ಭರ್ಜರಿ ಪ್ರದರ್ಶನದ ನೆರವಿನಿಂದ ಭಾರತ ಗೆಲುವು ಪಡೆಯಲು ಸಾಧ್ಯವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.