ಸ್ವಚ್ಛ ನಗರ: 5ನೇ ಸ್ಥಾನಕ್ಕೆ ಕುಸಿದ ಮೈಸೂರು
Team Udayavani, May 5, 2017, 2:36 AM IST
ಮಂಗಳೂರು-63, ಉಡುಪಿ-143
ಹೊಸದಿಲ್ಲಿ: ಪ್ರಸಕ್ತ ವರ್ಷದ ‘ಸ್ವಚ್ಛ ನಗರ’ಗಳ ಪಟ್ಟಿ ಗುರುವಾರ ಬಿಡುಗಡೆಯಾಗಿದ್ದು, ಸತತ 2 ವರ್ಷ ದೇಶದ ಅತೀ ‘ಸ್ವಚ್ಛ ನಗರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೈಸೂರು ಈ ಬಾರಿ ಮೊದಲ ಸ್ಥಾನವನ್ನು ಬಿಟ್ಟು ಕೊಟ್ಟಿದೆ. ಈ ಮೂಲಕ ಹ್ಯಾಟ್ರಿಕ್ ಗರಿಮೆಯ ಅವಕಾಶವನ್ನು ಮೈಸೂರು ಕಳೆದುಕೊಂಡಿದೆ. ಮೈಸೂರಿನ ಜಾಗವನ್ನು ಆಕ್ರಮಿಸಿಕೊಂಡಿರುವ ಮಧ್ಯ ಪ್ರದೇಶದ ಇಂದೋರ್, ದೇಶದ ಅತೀ ಸ್ವಚ್ಛ ನಗರ ಎಂಬ ಹಿರಿಮೆಗೆ ಪಾತ್ರವಾಗಿದೆ. ಎರಡನೇ ಸ್ಥಾನವನ್ನು ಭೋಪಾಲ್ ಪಡೆದಿದೆ. ಅರಮನೆ ನಗರವು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಗುರುವಾರ ‘ಸ್ವಚ್ಛ ಸರ್ವೇಕ್ಷಣ್-2017’ರ ಪಟ್ಟಿಯನ್ನು ಹೊಸದಿಲ್ಲಿಯಲ್ಲಿ ಘೋಷಿಸಿದರು. ಈ ಬಾರಿ ಒಟ್ಟು 434 ನಗರಗಳಲ್ಲಿ ಸರ್ವೇ ನಡೆಸಲಾಗಿದ್ದು, ಟಾಪ್ 50 ನಗರಗಳಲ್ಲಿ ಕರ್ನಾಟಕದ ಮೈಸೂರು ಮಾತ್ರವೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಅದನ್ನು ಹೊರತು ಪಡಿಸಿದರೆ, ಮಂಗಳೂರು 63, ಉಡುಪಿ 143, ಶಿವಮೊಗ್ಗ 147, ಮಂಡ್ಯ 148ನೇ ರ್ಯಾಂಕ್ ಪಡೆದಿವೆ. ರಾಜಧಾನಿ ಬೆಂಗಳೂರು 210ನೇ ಸ್ಥಾನದಲ್ಲಿದೆ. ಕರ್ನಾಟಕದ ಒಟ್ಟು 25 ನಗರಗಳಲ್ಲಿ ಸ್ವಚ್ಛತಾ ಸರ್ವೇ ನಡೆಸಲಾಗಿತ್ತು.
ದೇಶದ ಅತಿ ಮಲಿನ ನಗರ ಎಂಬ ಕುಖ್ಯಾತಿಯನ್ನು ಉತ್ತರಪ್ರದೇಶದ ಗೊಂಡಾ ನಗರ ಪಡೆದಿದೆ. ಮಲಿನ ನಗರಗಳಲ್ಲಿ ಟಾಪ್ 50 ನಗರಗಳೂ ಉತ್ತರಪ್ರದೇಶದ್ದು ಎಂಬುದು ಮತ್ತೂಂದು ಅಚ್ಚರಿ. ಬಿಹಾರ ಕೂಡ ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿದೆ. ಆದರೆ, ಪ್ರಧಾನಿ ಮೋದಿ ಅವರ ಕ್ಷೇತ್ರವಾದ ಉ. ಪ್ರದೇಶದ ವಾರಾಣಸಿ 32ನೇ ರ್ಯಾಂಕ್ ಗಳಿಸಿದೆ. ಗುಜರಾತ್ನ 12 ನಗರಗಳು ಟಾಪ್ 50 ಸ್ವಚ್ಛ ನಗರಗಳ ಪೈಕಿ ಸ್ಥಾನ ಪಡೆದುಕೊಂಡಿವೆ. ಇನ್ನು ಮಧ್ಯಪ್ರದೇಶದ 11, ಆಂಧ್ರದ 8 ನಗರಗಳು ಟಾಪ್ 50ರಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.