ಅಬುಧಾಬಿ ಆಸ್ಪತ್ರೆಗೆ ಸೇರಿದ ಎಮಾನ್ಗೆ ಬಾಕಿ ಇದೆ 1 ವರ್ಷದ ಚಿಕಿತ್ಸೆ
Team Udayavani, May 5, 2017, 12:38 PM IST
ದುಬೈ : ವಿಶ್ವದ ಅತೀ ಭಾರದ ಮಹಿಳೆ ಎಂದು ನಂಬಲಾಗಿರುವ ಈಜಿಪ್ಟ್ ನ ಎಮಾನ್ ಅಹ್ಮದ್ ಅವರನ್ನು ಅಬುಧಾಬಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಲ್ಲಿ ಆಕೆ ದೀರ್ಘಾವಧಿಯ ಮಾನಸಿಕ ಹಾಗೂ ದೈಹಿಕ ಪುನರ್ವಸತಿ ಶುಶ್ರೂಷೆಗೆ ಒಳಪಡಲಿದ್ದಾರೆ. ಭಾರತದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳ ಮೂಲಕ 323 ಕೆಜಿ ತೂಕವನ್ನು ಕಳೆದುಕೊಂಡಿದ್ದ ಕಾರಣ ಆಕೆಗೆ ದೀರ್ಘಾವಧಿಯ ಪುನರ್ವಸತಿ ಚಿಕಿತ್ಸೆ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.
ಮುಂಬಯಿಯಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಯಶಸ್ವೀ ಶಸ್ತ್ರ ಚಿಕಿತ್ಸೆಯ ಮೂಲಕ 323 ಕೆಜಿ ತೂಕವನ್ನು ಕಳೆದುಕೊಂಡಿದ್ದ 37ರ ಹರೆಯದ ಎಮಾನ್ ಅಹ್ಮದ್ ಚಿಕಿತ್ಸೆಗೆ ಮೊದಲು 500 ಕೆಜಿ ತೂಕವನ್ನು ಹೊಂದಿದ್ದರು.
ಎಮಾನ್ ಅಹ್ಮದ್ ಅವರ ಈಗಿನ ದೇಹ ತೂಕ 176.6 ಕೆಜಿ ಇದೆ. ಅಬುಧಾಬಿಯ ಬುರ್ಜೀಲ್ ವಿಪಿಎಸ್ ಆಸ್ಪತ್ರೆಯಲ್ಲಿ ಎಮಾನ್ ಕನಿಷ್ಠ ಒಂದು ವರ್ಷ ಅವಧಿಯ ಫಿಸಿಯೋಥೆರಪಿ ಚಿಕಿತ್ಸೆಗೆ ಒಳಗಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.