ಬಾಹುಬಲಿಗೆ ಬಂದಿತ್ತು 6 ಸಾವಿರ ಮದುವೆ ಪ್ರಸ್ತಾವ
Team Udayavani, May 5, 2017, 1:54 PM IST
ಮುಂಬಯಿ/ಹೈದರಾಬಾದ್: ‘ಬಾಹುಬಲಿ’ ಸಿನೆಮಾದಲ್ಲಿನ ಅಭಿನಯದ ಬಳಿಕ ತೆಲುಗು ನಟ ಪ್ರಭಾಸ್ ದಕ್ಷಿಣ ಭಾರತಕ್ಕೆ ಮಾತ್ರ ಅಲ್ಲ. ವಿಶ್ವಕ್ಕೇ ಸೂಪರ್‌ಸ್ಟಾರ್. ಅಂದ ಹಾಗೆ ಈ ಸ್ಟಾರ್ ಸಿನಿಮಾಕ್ಕಾಗಿಯೇ ಮದುವೆಯನ್ನು ಮುಂದೂಡಿಕೊಂಡು ಬಂದಿದ್ದಾರಂತೆ. ಇದೀಗ ಬಾಹುಬಲಿಯ ಮೊದಲ ಮತ್ತು ಎರಡನೇ ಭಾಗ ಕೂಡ ತೆರೆ ಕಂಡಿದೆ. ಇಂಥ ಎಲಿಜಿಬಲ್ ಬ್ಯಾಚಲರ್‌ನನ್ನು ಅಳಿಯನನ್ನಾಗಿ ಪಡೆಯಬೇಕು ಎಂಬ ಹಂಬಲ ಯಾವ ಹುಡುಗಿಯ ಹೆತ್ತವರಿಗೆ ಇರುವುದಿಲ್ಲ ಹೇಳಿ. ಅವರು ದೇಶ – ವಿದೇಶಗಳ ಸಾವಿರಾರು ಹೆಣ್ಣು ಮಕ್ಕಳ, ಕನ್ಯಾಪಿತೃಗಳ ಹೃದಯ ಕದ್ದ ಚೋರ ಪ್ರಭಾಸ್ ಎನ್ನುವುದು ಜನಜನಿತ. ಏನಾದರೂ ಆಗಲಿ ಅವರನ್ನೇ ಮದುವೆಯಾಗಬೇಕೆಂದು ನಿರೀಕ್ಷಿಸಿ ಬರೋಬ್ಬರಿ 6 ಸಾವಿರ ಯುವತಿಯರು, ಅವರ ಕುಟುಂಬ ವರ್ಗದವರು ಮನವಿ ಮಾಡಿಕೊಂಡಿದ್ದಾರಂತೆ. ಅವುಗಳನ್ನೆಲ್ಲ ಕಣ್ಣೆತ್ತಿಯೂ ನೋಡದ 37ರ ಹರೆಯದ ನಟ ಅವುಗಳನ್ನೆಲ್ಲ ಒಂದೇ ಮಾತಿನಲ್ಲಿ ತಿರಸ್ಕರಿಸಿದ್ದಾರಂತೆ. ಸಿನಿಮಾಕ್ಕಾಗಿ ಬೇಕಾದ ಸಿದ್ಧತೆ ನಡೆಸಬೇಕಾಗಿತ್ತು. ಹೀಗಾಗಿಯೇ ಇಂಥ ನಿರ್ಧಾರ ಮಾಡಬೇಕಾಗಿತ್ತು ಎಂದು ಅವರೇ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರಂತೆ. ಇಂಥ ನಿರ್ಧಾರ ಪ್ರಕಟಿಸುವ ಮೂಲಕ ತಾನೊಬ್ಬ ವೃತ್ತಿಪರ ನಟ ಎಂಬ ಅಂಶವನ್ನು ಸಾಬೀತು ಮಾಡಿದ್ದಾರೆಂದು ಪ್ರಶಂಸೆ ವ್ಯಕ್ತವಾಗುತ್ತಿದೆ.
ಸಿನಿಮಾ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಕಾರಣಕ್ಕಾಗಿಯೇ 5 ವರ್ಷಗಳ ಕಾಲ ಮದುವೆ ಪ್ರಸ್ತಾಪವೇ ಬೇಡ ಎಂದಿದ್ದರಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡ ಅವರು ಒಂದು ವೇಳೆ ತಾನು ಮದುವೆಯಾಗಬೇಕೆಂದಿದ್ದರೆ ಎರಡು ತಿಂಗಳ ಕಾಲ ಚಿತ್ರೀಕರಣ ರದ್ದು ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಅದಕ್ಕೆ ಬಳಿಯಲ್ಲಿಯೇ ಇದ್ದ ನಟ ರಾಣಾ ದುಗ್ಗುಬಾಟಿ ಅವರು ಓಹೋ ಹೌದಾ? ಅಂಥ ನಿರ್ಧಾರ ಮಾಡಿದ್ದಿಯಾ ಎಂದು ಕಿಚಾಯಿಸಿದ್ದಾರೆ. ಇನ್ನೊಂದು ಗಮನಾರ್ಹ ಸಂಗತಿ ಏನೆಂದರೆ ಪ್ರಭಾಸ್ ಬಾಹುಬಲಿ 1 ಮತ್ತು 2ನೇ ಆವೃತ್ತಿಯ ಶೂಟಿಂಗಾಗಿ ತಮ್ಮ ವೃತ್ತಿ ಜೀವನದ 600 ದಿನಗಳನ್ನು ವ್ಯಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.