ಅಂಗಿ ಡ್ಯಾನ್ಸ್!
Team Udayavani, May 5, 2017, 3:17 PM IST
ನಗುವಿನಲ್ಲಿ , ನಾಚಿಕೆಯಲ್ಲಿ ಅವಳು ಹುಡುಗಿಯೇ. ಆದರೆ, ಡ್ರೆಸ್ ವಿಚಾರದಲ್ಲಿ ಆಕೆ ಕಾಂಪ್ರಮೈಸ್ ಆಗೋದಿಲ್ಲ. ಔಟಿಂಗ್ ಹೊರಟಳು ಅಂದ್ರೆ ಟೀ ಶರ್ಟು, ಪ್ಯಾಂಟು ಅವಳ ಬ್ಯೂಟಿಯನ್ನು ಅಟ್ಟಕ್ಕೇರಿಸುತ್ತವೆ. ನಾಲ್ಕು ಮಂದಿ ಹುಡುಗರ ಮುಂದೆ ನಿಂತಳು ಅಂದ್ರೆ ಈಕೆಯೂ ಹುಡುಗನೇ ಅಂತನ್ನಿಸುವಷ್ಟು ಅವಳ ಡ್ರೆಸ್ಸು ಪುರುಷರೂಪಿ ಆಗಿರುತ್ತೆ. ಇನ್ನು ಕೆಲವೊಮ್ಮೆ ಅರ್ಧ ಪುರುಷ, ಅರ್ಧ ಸ್ತ್ರೀ ವೇಷ ಅವಳದ್ದಾಗಿರುತ್ತೆ!
ಹೌದು, ಈಗಿನ ಹುಡುಗಿಯರ ವಾರ್ಡ್ ರೋಬ್‌ಗ ಕೈ ಹಾಕಿದ್ರೆ ಅಲ್ಲಿ ಸಿಗೋದು ಹುಡುಗರ ಬಟ್ಟೆಗಳೇ! ಈಗ ಹುಡ್ಗಿàರು ಎಲÅನ್ನೂ ಕನ್‌ಫ್ಯೂಶನ್‌ಗೆ ತಳ್ಳುತ್ತಲೇ ಇದ್ದಾರೆ. ಹುಡುಗರಂತೆ ಇರಲು ಬಯಸುವ ಲಲನೆಯರಿಗೆ ಫ್ಯಾಶನ್ ಡಿಸೈನರ್‌ಗಳು ಗಿಫ್ಟ್ ಆಗಿ ನೀಡಿರೋದು ಆ್ಯಂಡ್ರೋಜಿನಸ್ (ಉಭಯರೂಪಿ) ವಿನ್ಯಾಸಗಳು! ಪುರುಷರ ವೇಷಭೂಷಣಕ್ಕೆ ಹೋಲುವ ಫ್ಯಾಶನ್ ಟ್ರೆಂಡ್ ಇದು.
ಅದು ಬ್ಲೌಸ್ ಅಲ್ಲ , ಅಂಗಿ!
ಟೀಶರ್ಟ್‌ನಿಂದ ಶುರುವಾದ ಆ್ಯಂಡ್ರೋಜಿನಸ್ ಟ್ರೆಂಡ್ ಈಗ ಭಾರತೀಯ ಪರಂಪರೆಯ ಸೀರೆಯ ತನಕವೂ ತಲುಪಿದೆ. ಉಡುವುದು ಮಾಮೂಲಿ ಸೀರೆಯನ್ನೇ. ಆದ್ರೆ, ಬ್ಲೌಸ್ ಮೇಲೆ ಒಂದು ಅನುಮಾನ ಹುಟ್ಟುತ್ತೆ. ಬ್ರೆಟಾನ್ ಸ್ಟ್ರಿಪ್ಡ್ ಬ್ಲೌಸ್‌ಗಳು ಆ್ಯಂಡ್ರೋಜಿನಸ್ ಫ್ಯಾಶನ್‌ಗೆ ವಿಶಿಷ್ಟ ಖದರ್ರನ್ನೇ ನೀಡಿವೆ. ಈ ಉದ್ದ ತೋಳಿನ ಬ್ಲೌಸ್‌ಗಳು ಹೆಚ್ಚಾಕಮ್ಮಿ ಪುರುಷರ ಅಂಗಿಯನ್ನು ನೆನಪಿಸುತ್ತವೆ. ಸೀರೆಯನ್ನೂ ಕಚ್ಚೆಯ ರೀತಿ ಉಡುವ ಟ್ರೆಂಡೂ ಜೋರಾಗಿದೆ.
ಇವೆಲ್ಲ ಮ್ಯಾಚ್ ಆಗ್ತವೆ!
ಜೀನ್ಸ್‌ಗೆ ದೊಡ್ಡ ಸೈಜಿನ ಟೀಶರ್ಟು, ಪ್ಯಾಂಟ್ ಮತ್ತು ಜಂಪ್‌ಸೂಟ್, ಬ್ಲೇಝರ್ ಮತ್ತು ಜಾಕೆಟ್‌ಗಳು ಯುವತಿಯರಿಗೆ ಸ್ಪೆಷಲ್ ಇಮೇಜ್ ಅನ್ನೇ ನೀಡುತ್ತವೆ. ಅದರಲ್ಲೂ ಜೀನ್ಸು -ಟೀಶರ್ಟಿನೊಂದಿಗೆ ಕ್ಲಾಸಿಕ್ ಜಾಕೆಟ್ ಧರಿಸಿದ್ರೆ ಆಕರ್ಷಣೆ ಹೆಚ್ಚು. ಹಾಗಾಗಿ ನೀವು ಬಾಯ್‌ಫ್ರೆಂಡ್ ಬ್ಲೇಝರ್ಸ್, ಅಥ್ಲೆಟಿಕ್ ಜಾಕೆಟ್, ಪುಲ್‌ಓವರ್ಸ್ ಮೇಲೊಂದು ಕಣ್ಣಿಟ್ಟಿರಿ. ಇವುಗಳೊಂದಿಗೆ ನೀವು ಪಿವಿಸಿ ಪ್ಯಾಂಟ್ ಇಲ್ಲವೇ ಫ್ಲರ್ಟಿ ಸ್ಕರ್ಟ್ ತೊಟ್ಟರೂ ಅದು ಆ್ಯಂಡ್ರೋಜಿನಸ್ ಫ್ಯಾಶನ್ನೇ ಆಗುತ್ತೆ. ಕ್ರಿಸ್ಟ್ ಶರ್ಟಿನ ಮೇಲೆ ಬ್ಲೇಯರ್ಸ್ ಧರಿಸಿದರೆ ಸಖತ್ ಹಾಟ್ ಲುಕ್ ನಿಮ್ಮದಾಗುತ್ತೆ. ಇದರಲ್ಲಿ ಕ್ಲಾಸಿಕ್ ಲುಕ್ ಹೊಂದಲು ಕ್ರಿಸ್ಟ್ ವೈಟ್ ಶರ್ಟಿನ ಮೇಲೆ ಬ್ಲ್ಯಾಕ್ ಸೂಟ್ ಧರಿಸಬೇಕು. ಇನ್ನೂ ಕೆಲವರು ಇದೇ ಶರ್ಟಿನ ಮೇಲೆ ಟೈ ಕಟ್ಟುವವರೂ ಇದ್ದಾರೆ. ಇವೆಲ್ಲಕ್ಕೂ ಸ್ಕಿನ್ನಿ ಜೀನ್ಸ್ ಇದ್ದರೆ ನಿಮ್ಮ ಸೌಂದರ್ಯಕ್ಕೆ ನಿಜಕ್ಕೂ ಬೋನಸ್ ಆಗುತ್ತೆ.
ಪೇಜ್ 3 ಪಾರ್ಟಿಗಳಲ್ಲಿ ಈಗ ಲುಂಗಿಯ ಟ್ರೆಂಡೂ ಜೋರಾಗಿದೆ. ದೀಪಿಕಾ ಪಡುಕೋಣೆ ಲುಂಗಿ ಡ್ಯಾನ್ಸ್ ಮಾಡಿದ ಮೇಲೆ ಭಾರತದಲ್ಲಿ ಲುಂಗಿಯ ಗುಂಗು ಇನ್ನೂ ಹೆಚ್ಚಿದೆ. ಆದರೆ, ಲುಂಗಿಗೆ ಟೀಶರ್ಟ್ ಆಗಲೀ, ಜಾಕೆಟ್ ಆಗಲೀ ಹೊಂದಿಕೆ ಆಗದು. ಇದಕ್ಕೆ ಮ್ಯಾಚ್ ಆಗೋದು ಬಾಯ್‌ಫ್ರೆಂಡ್ ಅಂಗಿಗಳೇ.
ನೀವು ಇಷ್ಟೆಲ್ಲ ಪುರುಷರಂತೆ ಡ್ರೆಸ್ ತೊಟ್ಟು, ಕೆಲವೊಂದು ಯಡವಟ್ಟು ಮಾಡ್ಕೊಳ್ಳೋಕೆ ಹೋಗ್ಬೇಡಿ. ಈ ವೇಳೆ ಜಡೆ ಹಾಕಿದ್ರೆ ಪ್ರಯೋಜನವಿಲ್ಲ. ಫ್ರೀ ಹೇರ್ ಇರಲಿ. ಮೇಕಪ್ ಕೂಡ ಗ್ರಾಂಡ್ ಬೇಡ. ನಾರ್ಮಲ್ ಆಗಿರಲಿ. ಜಿವೆಲ್ಸ್ ಅನ್ನು ದೂರ ಇಟ್ಟರೂ ನಿಮ್ಮ ಲುಕ್ಕಿಗೇನೂ ಧಕ್ಕೆ ಬರೋದಿಲ್ಲ.
ಇದೇ ರೀತಿ ಮಹಿಳೆಯರ ಡ್ರೆಸ್ಸನ್ನೂ ಪುರುಷರೂ ತೊಡುತ್ತಾರೆ. ಅಷ್ಟಕ್ಕೂ ಈ ಆ್ಯಂಡ್ರೋಜಿನಸ್ ಫ್ಯಾಶನ್ ಹೇಗೆ ಬಂತು ಎಂಬ ಪ್ರಶ್ನೆ ನಿಮ್ಗೆ ಹುಟ್ಟಬಹುದು. ಇದು ಭಾರತದ ಕೊಡುಗೆ ಅಂತೆ. ಹಿಂದಿನ ಕಾಲದ ಅರಸರ ಅಂಗರಕ್ಷಕರನ್ನು ನೆನಪಿಸಿಕೊಳ್ಳಿ. ಅವರ ಉಡುಪು ಪುರುಷರಂತೆ ಇರಲೇ ಇಲ್ಲ ! ಇದೂ ಹಾಗೆಯೇ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.