ದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಿ


Team Udayavani, May 5, 2017, 4:09 PM IST

gul5.jpg

ಕಾಳಗಿ: ಮನುಷ್ಯ ತನ್ನಲ್ಲಿರುವುದನ್ನು ಇತರರಿಗೆ ದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಖಾಪುರದ ಶಿವಾಚಾರ್ಯರತ್ನ ಸಿದ್ದರಾಮ ಶಿವಾಚಾರ್ಯರು ಹೇಳಿದರು. ಅರಜಂಬಗಾ ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಧರ್ಮಸಭೆಯಲ್ಲಿ ಸ್ವಾಮೀಜಿ ಮಾತನಾಡಿದರು. 

ತನ್ನ ಸಂಪತ್ತನ್ನು ತಾನು ಅನುಭವಿಸಿದರೆ ಯೋಗ್ಯ ವಾಗುವುದಿಲ್ಲ. ಆ ಸಂಪತ್ತಿನ್ನ ಸ್ವಲ್ಪ ಭಾಗವಾದರೂ ಇತರರಿಗೆ ದಾನ ಮಾಡಬೇಕು. ಬದುಕಿನಲ್ಲಿ ಎಷ್ಟು ಸಂಪಾದಿಸಿದ್ದಿಯಾ ಎಂಬುದು ಮುಖ್ಯವಲ್ಲ. ಎಷ್ಟು ದಾನ ಮಾಡಿದಿಯಾ ಎಂಬುದು ಮುಖ್ಯ. ದಾನ ಮಾಡುವುದರಿಂದ ಜೀವನ ಸುಃಖ ಸಂತೋಷದಿಂದ ಕೂಡಿರುತ್ತದೆ ಎಂದು ಹೇಳಿದರು. 

ಟೆಂಗಳಿ- ಮಂಗಲಗಿಯ ಡಾ| ಶಾಂತಸೋಮನಾಥ ಶಿವಾಚಾ ರ್ಯರು ಮಾತನಾಡಿ, ದೇವರ ಹೆಸರಿನಲ್ಲಿ ಮಾಡುವ ಉಪವಾಸ ಭಕ್ತಿಯಿಂದ ಕೂಡಿರಬೇಕು. ಅಂದಾಗ ಮಾತ್ರ ಮನಸ್ಸು ಹಿಡಿತದಲ್ಲಿಡಲು ಸಾಧ್ಯ. ಜನರು ತೋರಿಕೆಗೆ ತಿಂಗಳಿಗೆ ಮೂರ್‍ನಾಲ್ಕು ಉಪವಾಸ ಮಾಡುವುದಕ್ಕಿಂತ ವರ್ಷಕ್ಕೆ ಒಂದು ಬಾರಿ ನಮ್ಮ ಮನಸ್ಸು, ದೇಹ, ಭಾವ, ಚಿತ್ತ ಎಲ್ಲವನ್ನು ದೇವರತ್ತ ಕೇಂದ್ರಿಕರಿಸಿ ಉಪವಾಸ ಮಾಡಿದರೆ ಮನಸ್ಸು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

ಮಳಖೇಡದ ಹಜರತ್‌ ಸೈಯ್ಯದ್‌ ಶಹಾ ಮುಸ್ತಾಫ್‌ ಖಾದೀರ್‌ ಸಜ್ಜಾದ್‌ ನಾಸೀನ್‌ ಮಾತನಾಡಿ, ತನಗಿಂತಲೂ ಮಿಗಿಲಾದ ಶಕ್ತಿ ಇರುವುದನ್ನು ನಂಬಿ ಅದಕ್ಕೆ ತಲೆಬಾಗಿ ನಡೆಯುವುದೇ ಧರ್ಮ. ಆಯಾ ಧರ್ಮಗಳ ಆಚಾರ- ವಿಚಾರಗಳು ಬೇರೆ ಬೇರೆಯಾಗಿದ್ದರೂ ತತ್ವಾದರ್ಶಗಳು ಮಾತ್ರ ಒಂದೆಯಾಗಿರುತ್ತವೆ ಎಂದು ಹೇಳಿದರು.

ಶ್ರೀನಿವಾಸ ಸರಡಗಿಯ ಅಪ್ಪಾರಾವ ದೇವಿ ಮುತ್ಯಾ, ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಈರಣ್ಣ ಕೇಶ್ವಾರ, ಕಾರ್ಯದರ್ಶಿ ಮಲ್ಲಿಕಾರ್ಜುನ ನಂದೂರ, ಮುಖಂಡರಾದ ಫಕ್ಕಿರಯ್ಯ ಸ್ಥಾವರಮಠ, ಬಸವರಾಜ ತುಪ್ಪದ, ವೀರಭದ್ರಯ್ಯ ಸಾಲಿಮಠ, ಸಂಗಣ್ಣ ದೊಡ್ಡಮನಿ, ಸಂಗನಗೌಡ ಬಿರೆದಾರ, ಭೀಮಾಶಂಕರ ಪೊಲೀಸ್‌ಪಾಟೀಲ, ವಿಲಾಸಬಾಬು ಬಿರೆದಾರ, ನಾಗರಾಜ ಮಹಾಗಾಂವ, ವಿಶ್ವನಾಥ ಬಾಳದೆ, 

ಚಂದ್ರಶೇಖರಯ್ಯ ಸೋಲಾಪುರ, ಬಸವರಾಜ ಬಸ್ತೆ, ಶಿವಾನಂದ ದೊಡ್ಡಮನಿ, ಶ್ರೀಮಂತ ಮಲಕೂಡ, ಗುಂಡಪ್ಪ ಬಿರೆದಾರ, ಮಲ್ಲಿಕಾರ್ಜುನ ಆಲಗೂಡ, ಗುರುಲಿಂಗಪ್ಪ ದಂಡೋತಿ, ಮಲ್ಲಿನಾಥ ಹಲಕರ್ಟಿ, ಚಂದ್ರಶೇಖರ ಭಂಕಲಗಿ, ಗುರುಲಿಂಗಪ್ಪ ತಳವಾರ, ಬಸವರಾಜ ಭಂಕಲಗಿ, ನಾಗಣ್ಣ ಕಡ್ಲಿ, ಕುಮಾರಸ್ವಾಮಿ, ಸಿದ್ದಯ್ಯಸ್ವಾಮಿ, ಬಸವರಾಜ ಬೂದನಮಠ, ಶಿವಶರಣಪ್ಪ ಹೂಗಾರ, ಎಎಸ್‌ಐ ವೆಂಟೇಶ್ವರ ಕುಲಕರ್ಣಿ ಇದ್ದರು. 

ಟಾಪ್ ನ್ಯೂಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: 6 acres of sugarcane crop caught fire after being struck by an electric wire

Kalaburagi: ವಿದ್ಯುತ್​ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

1(4

Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.