![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, May 6, 2017, 9:31 AM IST
ಮಸ್ಕತ್: ಮಸ್ಕತ್‌ನ ಅಲ್ ಫಲಾಜ್ ಹೋಟೆಲ್‌ನ ಗ್ರಾಂಡ್ ಹಾಲ್‌ನಲ್ಲಿ ಒಮಾನ್ ಬಿಲ್ಲವಾಸ್ ಸಂಘಟನೆಯ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ಎಸ್. ಕೆ. ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಒಮಾನ್ ಬಿಲ್ಲವಾಸ್ ಸಂಘಟನೆಯು ಶ್ರೀ ಗುರು ಚಾರಿಟೆಬಲ್ ಟ್ರಸ್ಟ್ ಸಂಸ್ಥೆಯ ಸಹಯೋಗದಲ್ಲಿ ಪ್ರತೀ ವರ್ಷವೂ ನೂರಾರು ಬಡ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಕಾರಣಿಕ ಪುರುಷರಾದ ಕೋಟಿ ಚೆನ್ನಯರು, ಮಾತೆ ದೇಯಿ ಬೈದ್ಯೆತಿ ಹಾಗೂ ಗುರು ಸಾಯನ ಬೈದ್ಯರ ವಂಶಸ್ಥರು ಸಾವಿರಾರು ವರ್ಷಗಳಿಂದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್‌ನಲ್ಲಿ ಆರಾಧಿಸಿಕೊಂಡು ಬಂದಂತಹ ಆದಿ ಧರ್ಮದೈವ ಧೂಮಾವತಿಯ ದೇವಸ್ಥಾನದ ಜೀರ್ಣೋದ್ಧಾರದ ಸಂಪೂರ್ಣ ವೆಚ್ಚವನ್ನು ಒಮಾನ್ ಬಿಲ್ಲವಾಸ್ ಸಂಸ್ಥೆ ಆರಂಭದ ಹಂತದಲ್ಲಿಯೇ ವಹಿಸಿಕೊಂಡಿದೆ. ಈ ಸಂದರ್ಭ ಡಾ| ರಾಜಶೇಖರ್ ಕೋಟ್ಯಾನ್ ಅವರನ್ನು ಸಮ್ಮಾನಿಸಲಾಯಿತು. ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಪುನರುತ್ಥಾನದ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ಕೊಲ್ಲಿ ರಾಷ್ಟ್ರಗಳ ಬಿಲ್ಲವ ಮುಖಂಡರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಟ, ನಿರ್ದೇಶಕ ಡಾ| ರಾಜಶೇಖರ್ ಕೋಟ್ಯಾನ್, ಮುಂಬಯಿ, ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ್ ಕೋಟ್ಯಾನ್, ಉದ್ಯಮಿ ಹರೀಶ್ ಸಾಲ್ಯಾನ್ ಮುಂಬಯಿ, ಒಮಾನ್ ಬಿಲ್ಲವಾಸ್ ಸಂಘಟನೆಯ ಗೌರವ ಅಧ್ಯಕ್ಷ ಅಶೋಕ್ ಸುವರ್ಣ, ಉಮೇಶ್ ಬಂಟ್ವಾಳ್, ಒಮಾನ್ ಬಿಲ್ಲವಾಸ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯ ಸುಜಿತ್ ಅಂಚನ್ ಭಾಗವಹಿಸಿದ್ದರು. ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ ಅವರ ಸಂದೇಶವನ್ನು ಸಭೆಯಲ್ಲಿ ವಾಚಿಸಲಾಯಿತು.
ಒಮಾನ್ ಬಿಲ್ಲವಾಸ್ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ, ನೃತ್ಯ, ನಾಟಕ ನಡೆಯಿತು. ಉಪಾಧ್ಯಕ್ಷ ಡಾ| ಸಿ.ಕೆ. ಅಂಚನ್ ಸ್ವಾಗತಿಸಿ, ಸುಚೇತನಾ ಅಂಚನ್ ಹಾಗೂ ಉಮೇಶ್ ಜಪ್ಪು ಕಾರ್ಯಕ್ರಮ ನಿರೂಪಿಸಿದರು.
You seem to have an Ad Blocker on.
To continue reading, please turn it off or whitelist Udayavani.