1.60 ಲಕ್ಷ ನಕಲಿ ಅಂಕಪಟ್ಟಿ ಮಾರಿದವರು ಅಂದರ್‌!


Team Udayavani, May 6, 2017, 10:23 AM IST

marks-card.jpg

ಬೆಂಗಳೂರು: ದೇಶದ ಶಿಕ್ಷಣ ವ್ಯವಸ್ಥೆಯೇ ಬೆಚ್ಚಿಬೀಳುವ  ನಕಲಿ ಅಂಕಪಟ್ಟಿ ದಂಧೆಯನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪತ್ತೆ ಹಚ್ಚಿದ್ದು, ಪ್ರತಿಷ್ಠಿತ 38 ವಿಶ್ವ ವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಸಿದಟಛಿಪಡಿಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಜಾಲ ಸೆರೆ ಸಿಕ್ಕಿದೆ.

ಪ್ರಕರಣದ ಪ್ರಮುಖ ಆರೋಪಿ ದೆಹಲಿ ಮೂಲದ ಸಂದೇಶ್‌ ಅಗರ್‌ವಾಲ್‌, ಡಬಲ್‌ ಎಯ್‌r ಕನ್ಸ್‌ಲ್‌ಟೆನ್ಸಿ ಹೆಸರಿನಲ್ಲಿ ನಕಲಿ ಸಂಸ್ಥೆ ನಡೆಸುತ್ತಿದ್ದು, ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ, ಸ್ನಾತಕೋತ್ತರ ಪದವಿಯ ನಕಲಿ ಅಂಕಪಟ್ಟಿಗಳು, ಸಿಬಿಎಸ್‌ಸಿ ನಕಲಿ ಅಂಕಪಟ್ಟಿ, ಕೆಲ ರಾಜ್ಯಗಳ ಪ್ರೌಢಶಿಕ್ಷಣ ಮಂಡಳಿಗಳು ಮತ್ತು ಅಂಕಪಟ್ಟಿ ಹಾಗೂ ಪ್ರಾವಿಷನಲ್‌ ಪ್ರಮಾಣ ಪತ್ರಗಳನ್ನು
ಸಿದಟಛಿಪಡಿಸಿ ವಿವಿಧ ರಾಜ್ಯಗಳ 180 ಏಜೆಂಟರ ಮೂಲಕ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಈ ಜಾಲ ಜಾಲವನ್ನು ಕಳೆದ 5 ವರ್ಷಗಳಿಂದ ನಡೆಸುತ್ತಿದ್ದು, ಎರಡು ವರ್ಷಗಳಲ್ಲಿ 1.60 ಲಕ್ಷ ನಕಲಿ ಅಂಕಪಟ್ಟಿ, ಪ್ರಮಾಣ ಪತ್ರಗಳನ್ನು ಮಾರಾಟ ಮಾಡಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ.

ಬೆಂಗಳೂರಿನ ಅಸ್‌ ಫಾರ್‌ ಎಜುಕೇಷನ್‌ ಸಂಸ್ಥೆಯ ಕುನಾಲ್‌ ಕುಮಾರ್‌ ಮಂಡಲ್‌(32), ಖಾಸಗಿ ಕಾಲೇಜು ಉದ್ಯೋಗಿ ದೀಪಾಂಕರ್‌ ಸೇನ್‌ (28), ಹೆಬ್ಟಾಳದ ಫಾರ್ಚುವ್‌ ಇನ್ಸಿಟಿಟ್ಯೂಟ್‌ ನ ಅರುಣಾ (32), ಉತ್ತರ ಪ್ರದೇಶದ ಸೌರವ್‌ ಕುಮಾರ್‌ ಶರ್ಮಾ (31), ನವದೆಹಲಿಯ ಸಂದೇಶ್‌ ಅಗರ್‌ವಾಲ್‌(34) ನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಕೌಶಲ್‌ ಕುಮಾರ್‌ಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಸಿಸಿಬಿ ಡಿಸಿಪಿ ಆನಂದ್‌ ಕುಮಾರ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿದ್ಯಾರ್ಥಿ ಕೊಟ್ಟ ದಂಧೆಯ ಸುಳಿವು: ನಗರದ ಪಿಯುಸಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದ. ಹೀಗೆ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಸೀಟು ಪಡೆಯಲು ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಿದ್ದ. ಇದೇ ಸಂದರ್ಭದಲ್ಲಿ ಡಿಕೆನ್‌ ಸನ್‌ ರಸ್ತೆಯಲ್ಲಿರುವ ಜಾಯಿನ್‌ಅಸ್‌ ಫಾರ್‌ ಎಜುಕೇಷನ್‌ ಸಂಸ್ಥೆ ಇ-ಮೇಲ್‌ಗ‌ಳ ಮೂಲಕ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಸೀಟು ಕೊಡಿಸುವುದಾಗಿ ಸಂದೇಶ ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಕಚೇರಿಗೆ ಆಗಮಿಸಿದ ವಿದ್ಯಾರ್ಥಿ ನಕಲಿ ಅಂಕಪಟ್ಟಿ ಖರೀದಿಗೆ ಮುಂದಾಗಿದ್ದ. ಈ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಕುನಾಲ್‌ ಕುಮಾರ್‌ ನನ್ನು ಬಂಧಿಸಿದ್ದರು. ಈತ ಖಾಸಗಿ ಕಾಲೇಜಿನ ಉದ್ಯೋಗಿ ದೀಪಾಂಕರ್‌ ಸೇನ್‌ ಎಂಬಾತ ನಕಲಿ ಅಂಕಪಟ್ಟಿ ಸರಬರಾಜು ಮಾಡುತ್ತಿದ್ದಾಗಿ ಹೇಳಿಕೆ ನೀಡಿದ್ದ. ಬಳಿಕ ದೀಪಾಂಕರ್‌ನನ್ನು ವಶಕ್ಕೆ ಪಡೆದಾಗ ಉತ್ತರ ಪ್ರದೇಶದ ಸೌರವ್‌ ಕುಮಾರ್‌ ಬಗ್ಗೆ ಮಾಹಿತಿ ನೀಡಿದ್ದ. ಬಳಿಕ ಸಿಸಿಬಿ ವಿಶೇಷ ತಂಡ ಉತ್ತರಪ್ರದೇಶದ ಗಾಜಿಯಾಬಾದ್‌ಗೆ ತೆರಳಿ ಈತನನ್ನು ಬಂಧಿಸಿತು. ಈತ ವಿಚಾರಣೆ ವೇಳೆ ಸಂದೇಶ್‌ ಅಗರ್‌ವಾಲ್‌ನ ದಂಧೆಯ ಬಗ್ಗೆ ತಿಳಿಸಿದ್ದ. ಕೊನೆಗೆ ದೆಹಲಿಯಲ್ಲಿ ಪ್ರಮುಖ ಆರೋಪಿ ಸಂದೇಶ್‌ ಅಗರ್‌ವಾಲ್‌ನನ್ನು ಬಂಧಿಸಲಾಯಿತು. 

ಈತನ ವಿಚಾರಣೆ ವೇಳೆ ರಾಜ್ಯದ ಏಜೆಂಟ್‌ ಆಗಿದ್ದ ಹೆಬ್ಟಾಳದಲ್ಲಿ ಪಾರ್ಚೂನ್‌ ಇನ್ಸಿಟಿಟ್ಯೂಟ್‌ ನಡೆಸುತ್ತಿರುವ
ಅರುಣಾ ಅವರನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದರು. ಆರೋಪಿ ಸಂದೇಶ್‌ ಅಗರ್‌ವಾಲ್‌ ಕರ್ನಾಟಕ, ಉತ್ತರ ಪ್ರದೇಶ,ಬಿಹಾರ ಮಾತ್ರವಲ್ಲದೇ, ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಎಲ್ಲ ವಿವಿಗಳ ನಕಲಿ ಅಂಕಪಟ್ಟಿ ಸಿದಟಛಿಪಡಿಸುತ್ತಿದ್ದ. ಈತನ ಕಚೇರಿ ಮೇಲೆ ದಾಳಿ ನಡೆಸಿದಾಗ ದೇಶದ 38 ವಿವಿಗಳ 732 ನಕಲಿ ಅಂಕಪಟ್ಟಿಗಳು ಪತ್ತೆಯಾಗಿವೆ. ಹಾಗೆಯೇ 832 ಖಾಲಿ ಅಂಕಪಟ್ಟಿ ಮತ್ತು ಇತರೆ ಪ್ರಮಾಣ ಪತ್ರ ಸಿಕ್ಕಿವೆ.ಜತೆಗೆ ಕೆಲ ವಿವಿ ಅಧಿಕಾರಿಗಳ ರಬ್ಬನ್‌ಸ್ಟಾಂಪ್‌, ಹೋಲೋಗ್ರಾಂ ಹಾಗೂ ಕಂಪ್ಯೂಟರ್‌, ಪ್ರಿಂಟರ್‌ಗಳು, ಮುದ್ರಿಸಲು ಬಳಸುವ ಖಾಲಿ ಪ್ರತಿಗಳು ಪತ್ತೆಯಾಗಿವೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಕರ್ನಾಟಕ ಸ್ಟೇಟ್‌ ಕೌನ್ಸಿಲ್‌ ಆಫ್ ಇಂಟರ್‌ ಮೀಡಿ ಯೆಟ್‌ ಮತ್ತು ಹೈಯರ್‌ ಎಜುಕೇಷನ್‌, ಅಲಹಬಾದ್‌ ಕೃಷಿ ವಿಶ್ವವಿದ್ಯಾಲಯ, ಅಲಹಬಾದ್‌ ವಿಶ್ವ ವಿದ್ಯಾಲಯ, ಜಮ್ಮು ಮತ್ತು ಕಾಶ್ಮೀರ ಸ್ಟೇಟ್‌ ಬೋರ್ಡ್‌ ಆಫ್ ಸ್ಕೂಲ್‌ ಎಜುಕೇಷನ್‌, ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಆಫ್ ರೂರಲ್‌ ಓಪನ್‌ ಸ್ಕೂಲಿಂಗ್‌, ದಿ ತಮಿಳುನಾಡು ಡಾ ಎಂಜಿಆರ್‌ ಮೆಡಿಕಲ್‌ ಯೂನಿವರ್ಸಿಟಿ, ಸಂಬಾಲ್‌ಪುರ ಯೂನಿವರ್ಸಿಟಿ, ಆಂಧ್ರಪ್ರದೇಶದ ಬೋರ್ಡ್‌ ಆಫ್ ಸೆಕೆಂಡರಿ ಎಜುಕೇಷನ್‌, ಡೈರೆಕ್ಟರೇಟ್‌ ಆಫ್ ಗೌವರ್ನಮೆಂಟ್‌ ಎಕ್ಸಾಮಿನೇಷನ್‌, ತಿರುವಳ್ಳುವರ್‌ ಯೂನಿವರ್ಸಿಟಿ, ಮೋನಾಡ್‌ ಯೂನಿವರ್ಸಿಟಿ, ಡಾ ಭೀಮ್‌ರಾವ್‌ ಅಂಬೇಡ್ಕರ್‌ ವಿವಿ, ದಯಾನಂದ ಆಂಗ್ಲೋ ವೇದಿಕ್‌ ವಿವಿ, ಛತ್ತಿಸ್‌ಘಡ್‌ನ‌ ಡಾ ಸಿ.ವಿ.ರಾಮನ್‌ ವಿವಿ, ಗುಜರಾತ್‌ ಸ್ಟೇಟ್‌ ಎಕ್ಸಾಮಿನೇಷನ್‌ ಬೋರ್ಡ್‌, ಶ್ರೀಧರ್‌ ವಿವಿ, ಮೀರತ್‌ ಎಲ್‌ಎಲ್‌ಬಿ ಚೌಧರಿ ಚರಣ್‌ಸಿಂಗ್‌ ವಿವಿ, ಗೌತಮ್‌ ಬುದಟಛಿ ಟೆಕ್ನಿಕಲ್‌ ವಿವಿ, ಶೋಬಿತ್‌ ವಿವಿ, ಬುಂದೇಲ್‌ಖಂಡ್‌ ವಿವಿ, ಹಿಮಾಚಲ್‌ ಪ್ರದೇಶದ ಮಾನವ್‌ ಭಾರತಿ ವಿವಿ, ರಾಜಸ್ಥಾನ ಓಪಿಜೆಎಸ್‌ ವಿವಿ, ಸಿಂಘಾಲಿಯಾ ವಿವಿ, ಈಳಂ ವಿವಿ, ಸಿಕ್ಕಿಂ ಯೂನಿವರ್ಸಿಟಿ, ಗ್ರಾμಕೇರ್‌ ವಿವಿ, ನಾರ್ತ್‌ ಒಡಿಶಾ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರ್‌ ಮತ್ತು ಟೆಕ್ನಾಲಜಿ, ಜೋಧ್‌ಪುರ್‌ ನ್ಯಾಷನಲ್‌ ಯೂನಿವರ್ಸಿಟಿ, ವೀರ್‌ಬಹದ್ದೂರ್‌ ಸಿಂಗ್‌ ಪೂರ್ವಾಂಚಲ್‌ ಯೂನಿವರ್ಸಿಟಿ, ಭಾರತ್‌ ವಿವಿ ಸೇರಿ 38 ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಸಿದಟಛಿತೆ ಮಾಡುತ್ತಿದ್ದರು.

ಸಾಮಾಜಿಕ ಜಾಲತಾಣಗಳ ಬಳಕೆ
ಸಾಮಾನ್ಯ ವಿವಿ ಮತ್ತು ಪದವಿಗೆ 50 ಸಾವಿರ ಮತ್ತು ಎಂಬಿಬಿಎಸ್‌, ಎಂಟೆಕ್‌ ಪ್ರಮಾಣ ಪತ್ರಕ್ಕೆ 1 ಲಕ್ಷ ರೂ. ನಿಗದಿ ಮಾಡಲಾಗಿತ್ತು. ಸೀಟು ಕೊಡಿಸುವ ಸಮನ್ವಯ ಅಧಿಕಾರಿಗಳ ಹೆಸರಿನಲ್ಲಿ ಕಚೇರಿ, ವೆಬ್‌ಸೈಟ್‌ ಮತ್ತು ಫೇಸ್‌ಬುಕ್‌, ಟ್ವಿಟರ್‌ ಖಾತೆ ತೆರೆದು ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದರು. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಸಲಹೆ ಪಡೆಯಲು ಬಂದಾಗ ನಕಲಿ ಅಂಕಪಟ್ಟಿ,
ಪ್ರಮಾಣ ಪತ್ರ ಕೊಡುವುದಾಗಿ ಹೇಳಿ ಆರೋಪಿಗಳು ಹಣ ವಸೂಲಿ ಮಾಡುತ್ತಿದ್ದರು.

ರಾಜ್ಯದ 400 ವಿದ್ಯಾರ್ಥಿಗಳು
ರಾಜ್ಯದ 400ಕ್ಕೂ ಅಧಿಕ ವಿದ್ಯಾರ್ಥಿಗಳು ನಕಲಿ ಅಂಕಪಟ್ಟಿ ಪಡೆದು ವಿವಿಗಳಲ್ಲಿ ದಾಖಲಾಗಿರುವ ಪ್ರಾಥಮಿಕ ಮಾಹಿತಿ ಇದೆ. ಕಾನೂನು ಬಾಹಿರವಾಗಿ ಸೌಲಭ್ಯ ಪಡೆದ ಆರೋಪದ ಮೇಲೆ ಈ ವಿದ್ಯಾರ್ಥಿಗಳ ಮೇಲೂ ಕೂಡ ಕ್ರಮ ಜರುಗಿಸಲಾಗುವುದು. ಅಲ್ಲದೇ ನಕಲಿ ದಾಖಲೆಗಳನ್ನು ನಂಬಿ ವಿದ್ಯಾರ್ಥಿಗಳಿಗೆ ಸೀಟು ಕೊಟ್ಟ ವಿವಿಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಡಿಸಿಪಿ ಆನಂದ್‌ ಕುಮಾರ್‌ ತಿಳಿಸಿದ್ದಾರೆ.

ದೇಶಾವ್ಯಾಪಿ ಹರಡಿರುವ ಈ ದಂಧೆಯ ಬಗ್ಗೆ ಬೇರೆ ರಾಜ್ಯಗಳ ಪೊಲೀಸರು ಮಾಹಿತಿ ಕೇಳಿದರೆ ಪ್ರಕರಣದ ಎಲ್ಲ ವಿಚಾರ ವನ್ನು ವಿನಿಮಯ ಮಾಡಿಕೊಂಡು ಇದರ ಮೂಲ ಜಾಡನ್ನು ಹಿಡಿಯಲು ನೆರವು ನೀಡುತ್ತೇವೆ.
ಎಚ್‌.ಡಿ.ಆನಂದ್‌
ಕುಮಾರ್‌-ಡಿಸಿಪಿ-2, ಸಿಸಿಬಿ

ಟಾಪ್ ನ್ಯೂಸ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

6

Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್‌ ನಿಲ್ದಾಣವೇ ಇಲ್ಲ !

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

5

Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!

4

Sullia: ಉಪಟಳ ಮಾಡುವ ಕೋತಿಗಳಿಗೆ ಶಾಕ್‌ ಟ್ರೀಟ್‌ಮೆಂಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.