ಅಮೆರಿಕದಲ್ಲಿ ಭಾರತೀಯ ದಂಪತಿ ಹತ್ಯೆ; ಹಂತಕ ಪೊಲೀಸ್ ಗುಂಡಿಗೆ ಬಲಿ
Team Udayavani, May 6, 2017, 11:52 AM IST
ವಾಷಿಂಗ್ಟನ್ : ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿಯನ್ನು ಕೊಲೆಗೈಯಲಾಗಿರುವ ಘಟನೆ ವರದಿಯಾಗಿದೆ.
ಈ ಕೊಲೆ ಕೃತ್ಯವು ದಂಪತಿಯ ಪುತ್ರಿಯ ಮಾಜಿ ಬಾಯ್ ಫ್ರೆಂಡ್ ಎಸಗಿರುವ ಪ್ರತೀಕಾರದ ಕೃತ್ಯವಾಗಿದೆ ಎಂದು ಶಂಕಿಸಲಾಗಿದೆ.
ದಂಪತಿಯನ್ನು ಕೊಲೈಗೆದ ಅವರ ಪುತ್ರಿಯ ಮಾಜಿ ಬಾಯ್ ಫ್ರೆಂಡ್ನನ್ನು ಪೊಲೀಸರು, ಕೊಲೆ ಕೃತ್ಯ ನಡೆದ ಮನೆಯೊಳಗೆ ಏರ್ಪಟ್ಟ ಮುಖಾಮುಖೀಯಲ್ಲಿ, ಗುಂಡಿಕ್ಕಿ ಸಾಯಿಸಿದ್ದಾರೆ.
ಮಿರ್ಜಾ ತಾತ್ಲಿಕ್ ಎಂಬ 24 ರ ಹರೆಯದ ತರುಣನು ತನ್ನ ಮಾಜಿ ಪ್ರೇಯಸಿಯ ತಂದೆಯಾಗಿರುವ, ಸಿಲಿಕಾನ್ ಟೆಕ್ ಎಕ್ಸಿಕ್ಯೂಟಿವ್ ನರೇನ್ ಪ್ರಭು ಮತ್ತು ಅವರ ಪತ್ನಿಯನ್ನು ಅವರ ಸ್ಯಾನ್ ಓಸೇಯಲ್ಲಿನ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಂದಿದ್ದಾನೆ ಎಂದು ಸಿಬಿಎಸ್ ಸ್ಯಾನ್ ಫ್ರಾನ್ಸಿಸ್ಕೋ ವರದಿ ಮಾಡಿದೆ.
ಪ್ರಭು ಅವರ ಪುತ್ರಿ ಅಮೆರಿಕೆಯ ಬೇರೊಂದು ರಾಜ್ಯದಲ್ಲಿ ವಾಸವಾಗಿರುವುದರಿಂದ ಆಕೆ ಕೊಲೆ ನಡೆದ ಸ್ಥಳದಲ್ಲಿ ಇಲ್ಲದೆ ಪಾರಾಗಿದ್ದಾರೆ.
ಶಂಕಿತ ಕೊಲೆ ಆರೋಪಿಯಾಗಿರುವ ಮಾಜಿ ಬಾಯ್ ಫ್ರೆಂಡ್, ನರೇನ್ ಪ್ರಭು ಅವರ ಪುತ್ರಿಯೊಂದಿಗೆ ಈ ಹಿಂದೆ ಡೇಟಿಂಗ್ ನಡೆಸುತ್ತಿದ್ದ. ಆದರೆ ಅವರೊಳಗಿನ ಪ್ರೇಮ ಸಂಬಂಧವು ಕಳೆದ ವರ್ಷವೇ ಮುಗಿದು ಹೋಗಿತ್ತು. ಶಂಕಿತ ಬಾಯ್ ಫ್ರೆಂಡ್ಗೆ ಕೌಟುಂಬಿಕ ಹಿಂಸೆಯ ಇತಿಹಾಸವೇ ಇದ್ದು ಆತನ ವಿರುದ್ಧ ಕ್ರಿಮಿನಲ್ ನಿರ್ಬಂಧದ ಆದೇಶವು ಚಾಲ್ತಿಯಲ್ಲಿತ್ತು’ ಎಂದು ಸ್ಯಾನ್ ಓಸೇ ಪೊಲೀಸ್ ಮುಖ್ಯಸ್ಥರಾಗಿರುವ ಎಡ್ಡೀ ಗಾರ್ಸಿಯಾ ತಿಳಿಸಿದ್ದಾರೆ.
ನರೇನ್ ಪ್ರಭು ಮತ್ತವರ ಪತ್ನಿಯ ಕೊಲೆ ನಡೆದ ಪ್ರಕರಣವನ್ನು ಅವರ 20ರ ಹರೆಯದ ಪುತ್ರ ಪೊಲೀಸರಿಗೆ ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.