ಪಡುಬಿದ್ರಿ: ಹೆದ್ದಾರಿಗೆ ಜಾಗ ಬಿಟ್ಟುಕೊಡಲು ಇಂದೇ ಕೊನೆ ದಿನ
Team Udayavani, May 6, 2017, 1:29 PM IST
ಉಡುಪಿ: ಪಡುಬಿದ್ರಿ ಪೇಟೆ ಭಾಗದ ಜಮೀನು (ನಡ್ಸಲು ಗ್ರಾಮ) ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆಂದು ಕೇಂದ್ರ ಸರಕಾರಕ್ಕೆ ಭೂ ಸ್ವಾಧೀನಗೊಂಡು ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದರೂ ಜಮೀನು ಬಿಟ್ಟು ಕೊಡದ ಹಕ್ಕುದಾರರಿಗೆಲ್ಲ ತಿಳಿವಳಿಕೆ ನೋಟಿಸ್ ನೀಡಲಾಗಿದೆ. ಮೇ 6ರ ಒಳಗೆ ಜಾಗ ಬಿಟ್ಟು ಕೊಡಬೇಕು. ಶನಿವಾರದ ದಿನಾಂಕ ವಿಸ್ತರಿಸಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಒಂದು ತಿಂಗಳು ಸಮಯಾವಕಾಶ ನೀಡಿ ಎಂದು ಪಡುಬಿದ್ರಿ ಪೇಟೆ ಭಾಗದ ಜಮೀನು ಹಕ್ಕುದಾರ ವ್ಯಾಪಾರಸ್ಥರು ಕೋರಿಕೊಂಡಿದ್ದರು. ಆದರೆ ಜನರೆಲ್ಲ ಬೇಗ ಕಾಮಗಾರಿ ಮುಗಿಸಿ ಎಂದು ಹೇಳುತ್ತಿದ್ದಾರೆ. ಜಾಗದ ಹಕ್ಕುದಾರರಿಗೆ ಈಗಾ ಗಲೇ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಇನ್ನು ಕಾಲಾವಕಾಶ ನೀಡಲು ಆಗುವುದಿಲ್ಲ. ಜಾಗದ ದಾಖಲೆ ತಂದುಕೊಟ್ಟವರಿಗೆ ಪರಿಹಾರ ಧನ ವಿತರಿಸಲಾಗಿದೆ. ದಾಖಲೆ ಸಲ್ಲಿಸದವರ ಪರಿಹಾರ ಧನವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲಾಗಿದೆ. ಜಾಗ ವಶಕ್ಕೆ ಪಡೆಯುವ ಕುರಿತಾಗಿ ಪೊಲೀಸ್ ಬಲದ ಸಹಾಯ ಪಡೆದು ದಂಡಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ದಂಡಾಧಿಕಾರಿಗಳಿಂದ ಕ್ರಮ ಜಾಗ ಬಿಟ್ಟು ಕೊಡಲು ಮೇ 6ರ ಸಂಜೆಯವರೆಗೆ ಸಮಯ ನೀಡಲಾಗಿದೆ. ತಿಳಿವಳಿಕೆ ನೋಟಿಸಿಗೆ ಬೆಲೆ ಕೊಡದಿದ್ದರೆ ಕಾನೂನು ಪ್ರಕಾರ ಏನು ಮಾಡಬೇಕೋ, ಅದನ್ನು ನಾವು ಮಾಡಲಿದ್ದೇವೆ ಎಂದು ಉಡುಪಿ ತಾಲೂಕು ದಂಡಾಧಿಕಾರಿ, ತಹಶೀಲ್ದಾರ್ ಮಹೇಶ್ಚಂದ್ರ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.