ಬೇಡಿಕೆಗೆ ತಕ್ಕಂತೆ ಉತ್ಪಾದನೆ ಅಗತ್ಯ


Team Udayavani, May 6, 2017, 3:53 PM IST

hub4.jpg

ಹುಬ್ಬಳ್ಳಿ: ಉದ್ಯಮದಲ್ಲಿ ಒಂದು ಚಿಂತನೆಯಿಂದ ಇನ್ನೊಂದು ಚಿಂತನೆಗೆ ಜಿಗಿಯುವ ಬದಲು ಇದ್ದ ಚಿಂತನೆ ಬೆಳವಣಗೆ ಒತ್ತು ನೀಡಬೇಕು. ಉತ್ಪಾದನೆ ಹಾಗೂ ಸೇವಾ ವಲಯ ಉದ್ಯಮದಲ್ಲಿ ಗ್ರಾಹಕರ ಅವಶ್ಯಕತೆ ಆಧಾರದಲ್ಲಿ ಉತ್ಪಾದನೆ ಕೈಗೊಳ್ಳುವುದು  ಒಳಿತು ಎಂದು ಹ್ಯಾಪಿಯೆಸ್ಟ್‌ ಮೈಂಡ್ಸ್‌ ಟೆಕ್ನಾಲಾಜೀಸ್‌ ಸಂಸ್ಥೆ  ಸಹ ಸಂಸ್ಥಾಪಕ ಅಶೋಕ ಸೂಟಾ ಅಭಿಪ್ರಾಯಪಟ್ಟರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ  ಬಯೋಟೆಕ್‌ ಸಭಾಭವನದಲ್ಲಿ ಆಯೋಜಿಸಿದ್ದ ಡಿಜಿಟಲ್‌ ಯುಗದ ಅವಕಾಶಗಳು ಹಾಗೂ ತಂತ್ರಗಾರಿಕೆ ಕುರಿತ ಉಪನ್ಯಾಸ ನೀಡಿ ಮಾತನಾಡಿದ ಅವರು, ನವೋದ್ಯಮ ಬೆಳವಣಿಗೆ ಸವಾಲಾಗಿರುತ್ತದೆ. ಆದರೆ ಹಿಂದಿನ ಹಲವು ಉದ್ಯಮಗಳ  ಗುಣಾತ್ಮಕ ಹಾಗೂ ಋಣಾತ್ಮಕ ಅಂಶಗಳು, ಸಾಧನೆ-ವೈಫ‌ಲ್ಯಗಳನ್ನು ತುಲನೆ ಮಾಡುವ ಮೂಲಕ ಋಣಾತ್ಮಕ ಅಂಶಗಳನ್ನು ಮೆಟ್ಟಿ ನಿಂತರೆ ಯಶಸ್ಸು ದೊರೆಯಲಿದೆ ಎಂದರು. 

ಗೂಗಲ್‌, ಫೇಸ್‌ಬುಕ್‌, ಮೈಕ್ರೋಸಾಫ್ಟ್ ಕಂಪೆನಿಗಳು ಹೊಸದನ್ನೇನು ಮಾಡಲಿಲ್ಲ. ಇಂತಹದ್ದೇ ಹಲವು ಕಂಪೆನಿಗಳ ಪೈಪೋಟಿಯಲ್ಲೇ ಜನ್ಮತಳೆದವು. ಋಣಾತ್ಮಕ ಅಂಶಗಳನ್ನು ಮೆಟ್ಟಿ ನಿಂತಿದ್ದಕ್ಕೆ ಇಂದು ಜಗತ್ತಿನಲ್ಲಿ ನಾಯಕತ್ವ ಸ್ಥಾನದಲ್ಲಿದ್ದಾರೆ. ದೇಶದಲ್ಲಿ ಆಧಾರ ಕಾರ್ಡ್‌ ಯೋಜನೆ ಜಾರಿಯಿಂದಾಗಿ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ದತ್ತಾಂಶಗಳನ್ನು ಸಂಗ್ರಹಿಸಿದಂತಾಗಿದೆ. ನೋಟುಗಳ ಅಪನಗದೀಕರಣದ ಕ್ರಮ ಯಶಸ್ವಿಯಾಗಿದೆ ಎಂದರು.
 
ಕೆಲವೊಂದು ಉದ್ಯಮಗಳು ಉತ್ತಮ ಹಾಗೂ ವಿಭಿನ್ನ ರೀತಿಯಲ್ಲಿಆರಂಭವಾದರೂ ಬೆಳವಣಿಗೆ ನಿರ್ವಹಣೆ  ಸಾಧ್ಯವಾಗದೆ ಫ‌ಲವಾಗುತ್ತವೆ. ಇದಕ್ಕೆ ಕ್ಯಾ| ಗೋಪಿನಾಥನ್‌ ಅವರ ಡೆಕ್ಕನ್‌ ವಿಮಾನಯಾನ ಉದ್ಯಮ ಸಾಕ್ಷಿಯಾಗಿದೆ. ಉದ್ಯಮದಲ್ಲಿ ರಿಸ್ಕ್ ಅವಶ್ಯ ಎನ್ನುತ್ತಾರೆ. ಆದಷ್ಟು ರಿಸ್ಕ್ನ್ನು ಕನಿಷ್ಠಗೊಳಿಸುವ ಯತ್ನ ಮಾಡಿ. ನಮ್ಮದೇ ಸಂಸ್ಕೃತಿಯನ್ನು ವೃದ್ಧಿಸುವುದರ ಜತೆಗೆ ಮೌಲ್ಯ, ಗುಣಮಟ್ಟದೊಂದಿಗೆ ಉತ್ಪನ್ನಗಳು ಜನತೆಯ ಬ್ರಾಂಡ್‌ ಆಗಿಸಬೇಕು ಎಂದು ಅಭಿಪ್ರಾಯಪಟ್ಟರು.

ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಯಾಂತ್ರೀಕರಣ ಹಲವುಉದ್ಯೋಗಗಳಿಗೆ ಕುತ್ತು ತರುತ್ತಿವೆ. ಹತ್ತಾರು  ಜನರು ಮಾಡಬಹುದಾದ ಕಾರ್ಯಗಳನ್ನು ಒಂದು ರೋಬೋಟ್‌ ಮಾಡುತ್ತಿದೆ. ಆದರೆ ಉತ್ಪಾದನೆ, ಕಟ್ಟಡ ನಿರ್ಮಾಣ ಇನ್ನಿತರ ಕಾರ್ಯಗಳಲ್ಲಿ ಮಾನವ ಶಕ್ತಿ ಬಳಕೆಯೇ ಪ್ರಮುಖವಾಗಿದೆ. 

ಐಟಿ ಉದ್ಯಮ ಸುಮಾರು 150 ಬಿಲಿಯನ್‌ ಡಾಲರ್‌ ವಹಿವಾಟು ನಡೆಸುತ್ತಿದ್ದು, ಅಮೆರಿಕದಲ್ಲಿ ಟ್ರಂಪ್‌ ಅಧಿಕಾರಕ್ಕೆ ಬಂದ ನಂತರ ಉಂಟಾಗಿರುವ ವೀಸಾ ವಿವಾದ ಐಟಿ ಕ್ಷೇತ್ರದ ದೊಡ್ಡ ಸಮಸ್ಯೆ ಏನಲ್ಲ. ದೇಸಿಯವಾಗಿಯೇ ಐಟಿ ಉದ್ಯಮವನ್ನು ಇನ್ನಷ್ಟು ವೃದ್ಧಿಗೊಳಿಸಲು ಎಲ್ಲ ರೀತಿಯ ಅವಕಾಶಗಳಿವೆ.

ತಾವು ಮೂರು ದಶಕಗಳಿಗೂ ಹೆಚ್ಚು ಕಾಲ ಸಿಇಒ ಸೇರಿದಂತೆ ವಿವಿಧ ಹುದ್ದೆ ನಿರ್ವಹಿಸಿ 58ನೇ ವಯಸ್ಸಿನಲ್ಲಿಉದ್ಯಮ ಆರಂಭಿಸಿದ್ದು, ಉದ್ಯಮ ಆರಂಭಕ್ಕೆ ವಯೋಮಿತಿ ಅಡ್ಡಿಯಲ್ಲ ಎಂದರು. ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಕ ಶೆಟ್ಟರ, ಕುಲಸಚಿವ ಪ್ರೊ| ಬಿ.ಎಲ್‌. ದೇಸಾಯಿ, ಬಿವಿಬಿ ಕಾಲೇಜು ಪ್ರಾಂಶುಪಾಲ ಪ್ರೊ| ತೇವಡಿ, ಸಿಐಟಿಇ ಮುಖ್ಯಸ್ಥ ನಿತಿನ್‌ ಕುಲಕರ್ಣಿ, ಎಂಬಿಎ ವಿಭಾಗದ ಮುಖಸ್ಥ ಡಾ| ಎಸ್‌.ವಿ. ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.  

ಟಾಪ್ ನ್ಯೂಸ್

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.