ಸುರಕ್ಷಾ ಸ್ನೇಹಿ ಪಯಣಕೆ ಬಂದಿವೆ ಕಿಕ್‌ಸ್ಟಾರ್ಟ್‌ ಕ್ಯಾಬ್‌ಗಳು 


Team Udayavani, May 6, 2017, 3:56 PM IST

65588.jpg

ಇದು ದೈಹಿಕ ದುರ್ಬಲರಿಗೆ ಕಿಕ್‌ ಕೊಡುವ ನ್ಯೂಸು. ದೈಹಿಕವಾಗಿ ಎಲ್ಲ ಚೆನ್ನಾಗಿದ್ದವರಿಗೆ ಹೊರಗೆ ಸುತ್ತೋದು ಕಷ್ಟದ ಮಾತೇನಲ್ಲ. ಬೈಕು, ಕಾರು, ಮೆಟ್ರೋ, ಬಸ್ಸನ್ನೇರಿ ಇಷ್ಟಬಂದ ಕಡೆಗೆ ರೌಂಡ್‌ ಹಾಕಿ ಬರಬಹುದು. ಆದರೆ, ತೀರಾ ವಯಸ್ಸಾಗಿ ನಡೆಯಲಾಗದವರಿಗೆ, ಅಂಗಾಂಗ ಊನ ಇದ್ದವರಿಗೆ, ಆಪರೇಶನ್‌ ಆದವರಿಗೆ ಈ ರೀತಿ ಓಡಾಡಲಾಗದು. ಇಂಥವರ ಪಾಲಿಗೆ ಪುಷ್ಪಕ ವಿಮಾನವಾಗಿ ಬಂದಿದೆ ಕಿಕ್‌ಸ್ಟಾರ್ಟ್‌ ಕ್ಯಾಬ್‌!

ಸಿಲಿಕಾನ್‌ ಸಿಟಿಯಲ್ಲಿ ಇದೇ ಮೊದಲ ಬಾರಿಗೆ ದೈಹಿಕ ದುರ್ಬಲರಿಗಾಗಿ ಇಂಥ ಕ್ಯಾಬ್‌ಗಳು ರೋಡಿಗಿಳಿದಿವೆ. ಆಯಾಸವಿಲ್ಲದೆ ದೈಹಿಕ ದುರ್ಬಲರು ಇದರಲ್ಲಿ ಪಯಣಿಸಬಹುದು. ಒಂದೂ ಹೆಜ್ಜೆ ಇಡಲಾಗದವರು, ನಾಲ್ಕು ಗೋಡೆ ನಡುವೆ ನಮ್ಮ ಬದುಕು ಎಂದು ಈಗಾಗಲೇ ಡಿಸೈಡ್‌ ಮಾಡಿದವರು ಹೊರ ಜಗತ್ತನ್ನೊಮ್ಮೆ ನೋಡಿಬರಬಹುದು. 

ಏನಿದ್‌ ಕಿಕ್‌ಸ್ಟಾರ್ಟ್‌?
ಇದು ಕೂಡ ಓಲಾ, ಊಬರ್‌ ಕಾರಿನ ಸೇವೆಯಂತೆಯೇ ಇರುವ ಟ್ಯಾಕ್ಸಿ. ಆದರೆ, ಇದು ಎಲ್ಲರಿಗೂ ಲಭ್ಯ ಇರುವುದಿಲ್ಲ. ವಯಸ್ಸಾಗಿ ಹೆಜ್ಜೆ ಊರಲೂ ಕಷ್ಟಪಡುವವರಿಗೆ, ಶಸ್ತ್ರಚಿಕಿತ್ಸೆಗೆ ಒಳಪಟ್ಟು ನೋವುಣ್ಣುತ್ತಿರುವವರಿಗೆ, ತೀರಾ ದೈಹಿಕ ದುರ್ಬಲರಿಗೆ ಕಿಕ್‌ಸ್ಟಾರ್ಟ್‌, ಟ್ಯಾಕ್ಸಿ ಸೇವೆ ಒದಗಿಸುತ್ತೆ.

ವಿಶೇಷತೆ ಏನು?
ಬೇರೆ ಟ್ಯಾಕ್ಸಿಗಳಿಗೆ ಹೋಲಿಸಿದರೆ ಕಿಕ್‌ಸ್ಟಾರ್ಟ್‌ನ ಸ್ಪೆಷಾಲಿಟಿಗಳು ಹಲವು. ಡ್ರೈವರ್‌ ಪಕ್ಕದ, ಹಿಂಬದಿಯ ಸೀಟುಗಳು ಇಲ್ಲಿ ಮಾಮೂಲಿಯಂತೆ ಇರುವುದಿಲ್ಲ. ಇವು ಅಡ್ಜಸ್ಟಬಲ್‌ ಸೀಟುಗಳು! ನೀವಿದನ್ನು ಹೇಗೆ ಬೇಕಾದರೂ ಫೋಲ್ಡ್‌ ಮಾಡಬಹುದು. ದೈಹಿಕ ನ್ಯೂನತೆ ಇರುವ ವ್ಯಕ್ತಿಗೆ ಕಾರೊಳಗೆ ಬಂದು ಕೂರಲಾಗದಿದ್ದರೆ, ಸೀಟನ್ನೇ ಹೊರಗೆಳೆದು, ಅವರನ್ನು ಕೂರಿಸಿಕೊಂಡು, ಪುನಃ ಯಥಾಸ್ಥಿತಿಗೆ ಅಡ್ಜಸ್ಟ್‌ ಮಾಡಬಹುದು. ಹಂಪ್‌ ಬಂದಾಗ, ಡ್ರೈವರ್‌ ಬ್ರೇಕ್‌ ಒತ್ತಿದಾಗ ಪಯಣಿಗನ ಬಾಯಿಂದ “ಅಯ್ಯೋ’ ಎಂಬ ಕೇಳುವುದೇ ಇಲ್ಲ. ಅಷ್ಟು ಕಂಫ‌ರ್ಟ್‌ ಫೀಲ್‌ ಕೊಡುತ್ತೆ. ಪ್ಯಾರಲಿಸಿಸ್‌ನಿಂದ ಬಳಲುತ್ತಿರುವವ ಆರ್‌.ಟಿ. ನಗರದ 72 ವರ್ಷದ ಶಿವಕುಮಾರ್‌ ಹೇಳುವಂತೆ, “ಮಾಮೂಲಿ ಕಾರಿನಲ್ಲಿ ಆಸ್ಪತ್ರೆಗೆ ಹೋಗುವಾಗ ಬಹಳ ಸಂಕಟವಾಗುತ್ತಿತ್ತು. ಆಸ್ಪತ್ರೆಗೆ ಹೋಗುವ ಹಿಂದಿನ ರಾತ್ರಿ, ಮರುದಿನದ ಪ್ರಯಾಸದ ಪ್ರಯಾಣವನ್ನು ನೆನೆದು ನಿದ್ದೆಯೇ ಬರುತ್ತಿರಲಿಲ್ಲ. ಆದರೆ, ಕಿಕ್‌ಸ್ಟಾರ್ಟ್‌ನಲ್ಲಿ ಕುಳಿತ ಮೇಲೆ, ಅದರಿಂದ ಕೆಳಗೆ ಇಳಿಯಲು ಮನಸ್ಸಾಗಲೇ ಇಲ್ಲ’ ಎನ್ನುತ್ತಾರವರು.

ಅಂದಹಾಗೆ, ವ್ಹೀಲ್‌ಚೇರ್‌ ಅನ್ನು ಕ್ಯಾಬ್‌ನಲ್ಲಿಯೇ ಕೊಂಡೊಯ್ಯುವ ವ್ಯವಸ್ಥೆಯೂ ಇಲ್ಲಿದೆ. ಮಣಿಪಾಲ್‌ ಹಾಸ್ಪಿಟಲ್‌, ಎಂಎಫ್ಸಿಸ್‌ ಎಫ್ 1, ಐಐಟಿ ಬಿ, ಡಿಇಒಸಿ ಸೇರಿದಂತೆ ಹೆಸರಾಂತ ಕಂಪನಿಗಳು ಈ ಸೇವೆಗೆ ಸಾಥ್‌ ನೀಡಿವೆ. 

ಯಾರಿಗೆ ಅನುಕೂಲ?
– ವಯಸ್ಸಾಗಿ ಹೆಜ್ಜೆ ಊರಲಾಗದೆ ಇರುವವರಿಗೆ.
– ಅಂಗವಿಕಲರಿಗೆ.
– ಮಂಡಿನೋವು, ಸೊಂಟ ನೋವು ಬಳಲುತ್ತಿರುವವರಿಗೆ.
– ಮೇಜರ್‌ ಸರ್ಜರಿ ಮಾಡಿಸಿಕೊಂಡವರಿಗೆ.
– ಹಾಸಿಗೆ ಹಿಡಿದು, ಡಯಾಲಿಸಿಸ್‌ಗೆ ತೆರಳುವವರಿಗೆ.
– ದೈಹಿಕ ದುರ್ಬಲರಿಗೆ.

ಬುಕ್‌ ಮಾಡೋದು ಹೇಗೆ?
ವೆಬ್‌ಸೈಟ್‌: kickstartcabs.com ಸಂಪರ್ಕ: 080-32327777 

ಪ್ರಯಾಣದ ದರ ಹೇಗೆ?
ಈ ಕ್ಯಾಬ್‌ ಬೇರೆ ಕಾರುಗಳಂತೆ ಅಲ್ಲ. ದೈಹಿಕ ನ್ಯೂನತೆ ಉಳ್ಳವರಿಗಾಗಿಯೇ ನಿರ್ಮಿಸಿರುವುದರಿಂದ ಸಾಕಷ್ಟು ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ. ಈ ಕಾರಣಕ್ಕಾಗಿ ಪ್ರಯಾಣ ದರ ತುಸು ಜಾಸ್ತಿ. 4 ತಾಸಿನ ಪ್ಯಾಕೇಜ್‌ಗೆ 1500 ರೂಪಾಯಿ ಆಗುತ್ತದೆ. 1 ತಾಸು ಹೆಚ್ಚು ಬೇಕೆಂದರೆ, ಪ್ರತ್ಯೇಕ 200 ರೂ. ನೀಡಬೇಕಾಗುತ್ತದೆ. 1 ಕಿ.ಮೀ.ಗೆ 20 ರೂ. ದರ ಪಡೆಯುತ್ತಾರೆ. 

ಸ್ಪೆಷೆಲ್‌ ಕ್ಯಾಬ್‌ ಇದು!
ಮೂರು ಮಾದರಿಯಲ್ಲಿ ಈ ಕ್ಯಾಬ್‌ ಅನ್ನು ನಿರ್ಮಿಸಲಾಗಿದೆ. ಮೊದಲ ವಿನ್ಯಾಸದಲ್ಲಿ ಕಾರಿನ ಆಸನವನ್ನು ಬಾಗಿಲಿನಿಂದ ಅರ್ಧದಷ್ಟು ಹೊರಗೆ ತೆಗೆಯಬಹುದು. ಮತ್ತೆ ಕೆಲವು ಕಾರುಗಳಲ್ಲಿ ರ್‍ಯಾಂಪ್‌ ಅನ್ನು ಫಿಕ್ಸ್‌ ಮಾಡಿದ್ದಾರೆ. ವ್ಹೀಲ್‌ಚೇರ್‌ನಲ್ಲಿ ಕುಳಿತವರು, ನೇರವಾಗಿ ಕ್ಯಾಬ್‌ ಪ್ರವೇಶಿಸಲು ಇದರಿಂದ ಅನುಕೂಲವಾಗುತ್ತದೆ. ಇನ್ನು ಮೂರನೇ ಮಾದರಿಯಲ್ಲಿ ಮುಂಭಾಗದಲ್ಲಿ ವ್ಹೀಲ್‌ಚೇರ್‌ ಅನ್ನು ಫಿಕ್ಸ್‌ ಮಾಡಲಾಗಿದೆ. ಬಟನ್‌ ಒತ್ತಿದರೆ ಚೇರ್‌ ಬಿಚ್ಚಿಕೊಳ್ಳುತ್ತೆ!

ಭಯ ಪಡ್ಬೇಡಿ…
ಡ್ರೈವರ್‌ ಹೇಗೆ ನೋಡ್ಕೊàತಾರೋ, ರಫ್ ಆಗಿ ಗಾಡಿ ಓಡಿÕದ್ರೆ ಕತೆಯೇನು ಎಂಬ ಚಿಂತೆ ನಿಮ್ಮಲ್ಲಿದ್ದರೆ ಅದನ್ನು ಅಲ್ಲಿಗೆ ಬಿಡಿ. ಪರಿಣತ ಚಾಲಕರು ಬಹಳ ಜಾಗರೂಕತೆಯಿಂದ ಗ್ರಾಹಕರನ್ನು ಕರೆದೊಯ್ಯುತ್ತಾರೆ. ಮನೆಯ ಒಳಗಿನಿಂದ ಕಾರು ಹತ್ತಿಸುವ ತನಕ, ಕಾರು ಇಳಿದು ತಲುಪಬೇಕಾದ ಸ್ಥಳವನ್ನು ಮುಟ್ಟಿಸುವ ತನಕ ಇವರು ನಿಮ್ಮ ಕುಟುಂಬದ ಸದಸ್ಯರಂತೆಯೇ ಸ್ನೇಹಿ ಆಗಿರುತ್ತಾರೆ.

ಅಂಗವಿಕಲರ, ದೈಹಿಕ ನ್ಯೂನತೆ ಉಳ್ಳವರ ಬಗ್ಗೆ ನನಗೆ ಮೊದಲಿನಿಂದಲೂ ಕಾಳಜಿ ಇತ್ತು. ಆ ವಲಯದಲ್ಲಿ ಕೆಲ ಕಾಲ ನನ್ನನ್ನು ತೊಡಗಿಸಿಕೊಂಡಿದ್ದೆ. ಅವರ ನೋವಿಗೆ ದನಿ ಆಗುವ ಉದ್ದೇಶದಿಂದ ನಾವು ಇಂಥದ್ದೊಂದು ಕ್ಯಾಬ್‌ ಅನ್ನು ಆರಂಭಿಸಿದೆವು.
– ವಿದ್ಯಾ, ಕಿಕ್‌ಸ್ಟಾರ್ಟ್‌ ನಿರ್ದೇಶಕಿ

 ವಸಂತಕುಮಾರ ಪಾಟೀಲ

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.