ತೆರೆದ ಕೊಳವೆ ಬಾವಿ: ಎಚ್ಚೆತ್ತುಕೊಳ್ಳದ ಕೋಡ್ಲಿ ಗ್ರಾಪಂ
Team Udayavani, May 6, 2017, 4:35 PM IST
ಕಾಳಗಿ: ಸಮೀಪದ ಕೋಡ್ಲಿ ಗ್ರಾಪಂ ವ್ಯಾಪ್ತಿಯ ರಾಮನಗರ ತಾಂಡಾದ ರಸ್ತೆಯ ಪಕ್ಕದಲ್ಲಿ ಕಳೆದ ಆರೇಳು ತಿಂಗಳಿಂದ ತೆರೆದ ಕೊಳವೆ ಬಾವಿ ಬಲಿಗಾಗಿ ಕಾಯ್ದಿದ್ದರೂ ಗ್ರಾಪಂ ಎಚ್ಚೆತ್ತುಕೊಂಡಿಲ್ಲ. ಸುಪ್ರಿಂಕೋರ್ಟ್ ನಿಯಮದ ಪ್ರಕಾರ ಕೊಳವೆ ಬಾವಿಯಲ್ಲಿ ನೀರು ಸಿಗದಿದ್ದರೆ ಗುಂಡಿಬಿದ್ದ ಸ್ಥಳದಲ್ಲಿ 30 ಸೆಮೀ ಎತ್ತರದ ಕಾಂಕ್ರಿಟ್ ಹಾಕಿ ಗೋಡೆ ಕಟ್ಟಬೇಕು.
ನಿರುಪಯುಕ್ತ ಕೊಳವೆಬಾವಿಗಳ ಕೆಸಿಂಗ್ ಬಾಯಿಗೆ ಬಿಗಿಯಾಗಿ ಕಬ್ಬಿಣದ ಪ್ಲೇಟ್ ಅಳವಡಿಸಬೇಕು. ಆದರೆ ಇಲ್ಲಿನ ತೆರೆದ ಕೊಳವೆ ಬಾವಿ ನೋಡಿದರೆ ಜಿಲ್ಲಾಡಳಿತ, ತಾಲೂಕಾಡಳಿತ, ಗ್ರಾಮಾಡಳಿತ ಸರಕಾರದ ಆದೇಶವನ್ನು ಎಷ್ಟರ ಮಟ್ಟಿಗೆ ಪಾಲಿಸಿವೆ ಎನ್ನುವುದು ಅರ್ಥವಾಗುತ್ತದೆ.
ಜನ-ಜಾನುವಾರುಗಳಿಗೆ ಕುಡಿ ಯುವ ನೀರು ಪೂರೈಕೆ ಮಾಡಲು ಕೊಳವೆ ಬಾವಿ ತೋಡಿಸಲಾಗಿತ್ತು. ಕೊಳವೆ ಬಾವಿಯಲ್ಲಿ 3 ಇಂಚು ನೀರು ಬಂದಿತ್ತು, ಕೆಲವು ದಿನಗಳ ನಂತರ ಕೊಳವೆ ಬಾವಿ ವಿಫಲವಾಗಿದೆ ಎನ್ನುವ ಕಾರಣ ನೀಡಿ ಅಳವಡಿಸಿದ್ದ ಮೊಟಾರ್ ಪಂಪ್‌ನ್ನು ಕೆಲವು ತಿಂಗಳುಗಳ ಹಿಂದೆ ಹೊರತೆಗೆಯಲಾಗಿತ್ತು. ಕೊಳವೆಬಾವಿ ಮುಚ್ಚದೆ ಗ್ರಾಪಂನವರು ಹಾಗೆಯೇ ಬಿಟ್ಟಿದ್ದಾರೆ.
ಈ ಸ್ಥಳದಲ್ಲಿ ತಾಂಡಾದ ಮಕ್ಕಳು ಓಡಾಡುತ್ತಿರುತ್ತಾರೆ. ಜಾನುವಾರುಗಳು ಓಡಾಡುತ್ತಿರುತ್ತವೆ. ಆದರೂ ತೆರೆದ ಕೊಳವೆ ಬಾವಿ ಮುಚ್ಚಲು ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ ತೆರೆದ ಕೊಳವೆ ಬಾವಿಯಲ್ಲಿ ಸಿಲುಕಿ ಮಕ್ಕಳು ಮೃತರಾಗಿರುವ ಘಟನೆಗಳು ನಡೆಯುತ್ತಿದ್ದರೂ ಆಡಳಿತ ನಿರ್ಲಕ್ಷé ವಹಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಶ್ವತ ಕ್ರಮ ಕೈಗೊಳ್ಳಿ
ತೆರೆದ ಕೊಳೆವೆ ಬಾವಿ ಕುರಿತು ಜನಸ್ಪಂದನ ಕಾರ್ಯಕ್ರಮದಲ್ಲಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಗ್ರಾಪಂ ಹಾಗೂ ಜನಪ್ರತಿನಿಧಿಧಿಗಳು ಎಚ್ಚೆತ್ತುಕೊಂಡು ತಕ್ಷಣ ಶಾಶ್ವತ ಕ್ರಮ ಕೈಗೊಳ್ಳಬೇಕು.
-ರಾಹುಲ್ ಜಾಧವ, ಕೋಡ್ಲಿ ರಾಮ ನಗರ ತಾಂಡಾ ನಿವಾಸಿ
* ಭೀಮರಾಯ ಕುಡ್ಡಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.