ಆತ್ಮಗಳ ಅಟ್ಯಾಕ್: ಒಂದು ಅರಿಶಿಣ ಕೊಂಬಿನ ಕಥೆ..!
Team Udayavani, May 7, 2017, 6:10 AM IST
ಕೇಜ್ರಿವಾಲು ದಿನಕ್ಕ ಎಷ್ಟು ಸರ್ತಿ ಕೆಮ್ತಾರಾ? ಕರ್ನಾಟಕದ ಮುಖ್ಯಮಂತ್ರಿ ಕಾರಿನ ಮ್ಯಾಲ ಯಾಕ ಕಾಗಿ ಕುಂತಿತು? ಶಶಿಕಲಾ, ಜೈಲಾಗ ಮಧ್ಯಾಹ್ನ ಚಪಾತಿ ಜೊತೀಗೆ ಯಾವ ಪಲ್ಯಾ ತಿಂತಾರಾ? ಅಮೆರಿಕ ಅಧ್ಯಕ್ಷನ ಹೇಣಿ¤à ಹಾಕ್ಕೊಳ್ಳ ಬಟ್ಟಿà ರೇಟೆಸ್ಟು? ಮೂರನೇ ಮಾಯುದ್ದ ಶುರುವಾಗಿ ನಾವೆಲ್ಲ ಹೆಂಗ ಸಾಯ್ತಿàವಿ…?
ತನ್ನೂರಿನ ಕುಖ್ಯಾತ ಮನಶಾಸ್ತ್ರಜ್ಞ ನೀರಡಿಕಿ ನಾರಾಯಣನ ದವಾಖಾನಿ ಮುಂದ ಕುಕ್ಕುರುಗಾಲು ಹಾಕ್ಯಂಡು ಕುಂತ ಪಮ್ಯಾ. ಕರೆಕ್ಟಾಗಿ 9 ಗಂಟೀಗೆ ತಗೀಬೇಕಿದ್ದ ಕ್ಲೀನಕ್ಕು 12 ಆದ್ರೂ ಓಪನ್ ಆಗ್ಲಿಲ್ಲ. “ನನ್ ಸಮಸ್ಯೆ ಬಗೆಹರಿಯೋದು ದೇವ್ರಿಗೆ ಬ್ಯಾಡಾಗ್ಯಾದ’ ಅನ್ಕೊಂಡ ಪಮ್ಯಾ ಸೊಂಡಿ ಸಣ್ಣ ಮಾಡ್ಕéಂಡು ಎದ್ದು ನಿಂತ . ಇನ್ನೇನು ಅವ ಮುಂದ ಹೆಜ್ಜಿ ಇಡಬೇಕು ಅಷ್ಟ್ರಾಗ, ಡಾ. ನೀರಡಿಕಿ ನಾರಾಯಣ ತನ್ನ ಟಿವಿಎಸ್ ಎಕ್ಸೆಲ್ ಗಾಡಿ ಮ್ಯಾಲ ದೇವ್ರು ಬಂಧಂಗ ಬಂದ. “ಅಲಾಲಲ ಏನಲೇ…ಇಲ್ಲಿ?’ ಅಂದು ಗಾಡಿಯಿಂದ ಇಳಿದು ಅದನ್ನ ಚೈನಿಂದ ಗಿಡಕ್ಕ ಕಟ್ಟಿದ.
“ಸರ…ಸಮಸ್ಯೆàರೀ ಸಮಸ್ಯೆ. ತಲ್ಯಾಗ ಯಾರೋ ಒನಕಿ ತೊಗೊಂಡು ಜಜ್ಜಾಕತ್ತಾರ ಅನ್ಸಕ್ಕತ್ರದ್ರೀ’ ಅನ್ಕೋತ್ತ ಕೈ ಮುಂದ ಚಾಚಿದ ಪಮ್ಯಾ. ಡಾ. ನೀರಡಿಕಿ ಇವನ ಕೈ ಹಿಡಿದು ಗಟಾರಿನ ಮ್ಯಾಲಿಂದ ಠಣಕ್ಕನ ಹಾರಿ ಕ್ಲೀನಿಕ್ಕಿನ ಎದುರು ಬಂದು, ಕೆಳಗ ಕೂತು, ಶಟರ್ ಕೀಲಿ ತಗದು, “”ಸ್ವಲ್ಪ್ ಕೈ ಹಚ್ಚಾ ಪಾರಾ..” ಅಂದ. ಇಬ್ರೂ ಸೇರಿ ಕ್ಲೀನಿಕ್ಕಿನ ಶಟರ್ ಮ್ಯಾಲೆತ್ತಿ, ಒಳಗ ಹೋದ್ರು.
ತನ್ನ ಸೀಟಿನ ಮ್ಯಾಲ ಕೂತ ಡಾ. ನೀರಡಿಕಿ “”ಚಾ ಕುಡೀತೇನು?” ಅಂದು ಎದುರಿದ್ದ ಫೈಲು ಜಾಡಿ ಧೂಳೆಬ್ಸಿದ.
“ಹೂಂ ನ್ರೀ. ತಟಗ ತೊಗೋತೀನಿ. ಬಿಸಲಾಗ ಕುಂತು ಕುಂತು ತಲೀಸೂಲಿ’ ಅಂದು ಪಮ್ಯಾ ಪ್ಲಾಸ್ಟಿಕ್ ಚೇರ್ ಎಳಕೊಂಡುಎದುರು ಕುಂತ. “”ಗುಡ್ ಗುಡ್. ಹಂಗಿದ್ರ ಪಟಕ್ಕನ ಹೋಗಿ, ಬಗಲಾಗಿನ ಹೊಟೆಲ್ಲಿಂದ ಎರಡು ಟೀ ತಂದುಬಿಡು. ನಾ ಅಲ್ಲಿ ಅಕೌಂಟ್ ಇಟ್ಟಿàನಿ. ನನ್ನೆಸರೇಳು ಕೊಡ್ತಾರವ್ರು”. ಪಮ್ಯಾನ್ನ ಓಡಿದ ಡಾ. ನೀರಡಿಕಿ. ಹೊಟೆಲ್ಲಿಂದ ಚಾ ತಂದ ಪಮ್ಯಾ, ಡಾಕ್ಟರ್ ಮುಂದ ಒಂದು ಗ್ಲಾಸು ಇಟ್ಟು, “”ಅಲಿಸರ, ನಿಮ್ಮ ಅಕೌಂಟಿಗೆ ಬರಕೊಳಿ ಅಂತೇಳಿದ್ರೆ, ಅವ್ರು ನಿಮ್ಮನ್ನ ಬಾಯಿಗೆ ಬಂದಂಗ ಬೈಯ್ತಾರೀ. “ಆ ಮಗ ಮೆಂಟಲ್ ಡಾಕ್ಟರ್ 5 ತಿಂಗಳಿಂದ ರೊಕ್ಕ ಕೊಟ್ಟಿಲ್ಲ…ಹೊಗಲೇ ಹೋಗು ಹೋಗು’ ಅಂದ್ರು. ನಾನಾ ರೊಕ್ಕ ಕೊಟ್ಟು ತಂದೆ…” ಅಂದು ತನ್ನ ಚಹಾ ಸರಕ್ಕನಿಸಿ ಚೇರಿನ ಮ್ಯಾಲ ಕುಂತ ಪಮ್ಯಾ.
ಡಾ.ನೀರಡಿಕಿ ಕಣ್ಣು ಮುಚ್ಚಿ, ಎರಡೂ ಕೈ ತಲಿ ಹಿಂದ ಹಚ್ಚಿ ಅಂದ: “”ಹೋಗ್ಲಿಬಿಡಾ…ಆ ಮಕ್ಕಳದೇನು ಕೇಳ್ತೀ. ಮಾಡದು ನೀರ್ ನಿಪ್ಪಾಣಿ ಚಾ, ಅದಕ್ಕ ನೂರು ಮಾತಾಡ್ತಾನ ಅವ…ಅದು ಬಿಡು. ನೀ ಬಂದಿದ್ಯಾಕ ಹೇಳು”. ಪಮ್ಯಾ ಒಂದೇ ಸರೇ ಹೋ ಅಂತ ಅಳಕ್ಕ ಶುರುವಚಿಗೆಂಡ.
ನಿಧಾನಕ್ಕ ಕಣ್ಣು ತಗದ ಡಾಕುó: “ಎಷ್ಟಾಗ್ತದೋ ಅಷ್ಟು ಅತ್ತುಬುಡು. ಸತ್ತಮ್ಯಾಲೆ, ಅಲ್ಲ, ಅತ್ತಮ್ಯಾಲೆ ಏನಾತಂತ ಹೇಳು’ ಅಂದು ಮತ್ತ ಕಣ್ಣು ಮುಚ್ಚಿದ.
ಪಮ್ಯಾ ಒಂದೆರ್ಡು ನಿಮಿಷ ಅತ್ತು, ತನ್ನ ತೋಳಿಂದ ಕಣ್ಣು ಮೂಗು ಒರಿಸYéಂಡು, ಚಾ ಕಪ್ಪು ನೆಲದ ಮ್ಯಾಲ ಇಟ್ಟು ತನ್ನ ದುರಂತ ಕಥಿ ಶುರುವಚ್ಚಿದ: “”ಸರ, ಇದೆಲ್ಲ ಶುರುವಾಗಿದ್ದು 8 ತಿಂಗಳ ಹಿಂದ…ಅವತ್ತ ಸಂಜೀಮುಂದ ನಾನು, ನಮೌ¾ವ, ನಮ್ ಅತ್ತಿಗಿ ಮತ್ತ ಬಗಲಾಗಿನ ಮನಿ ರಾಧಾ…ನಾವೆಲ್ಲಾ ಜೊತೀಗೆ ಮನ್ಯಾಗ ಕುಂತು “ನನ್ನ ಪತಿಯೇ ನನ್ನ ಗಂಡ’ ಸೀರಿಯಲ್ ನೋಡಕತ್ತಿದ್ವಿ. ನಡುವ ಅಡ್ವಟೈಸ್ಮಂಟ್ ಬಂತಂತಂದು ಚಾನೆಲ್ ಚೇಂಜ್ ಮಾಡಿದೆ. ಆಗ ಟಿವಿ ನೋಡಿ ತಲಿ ದಿಮ್ ಅಂತು. ನನ್ನ ಖಾಸಾ ದೋಸ್ತ, ಕ್ಲಾಸ್‌ಮೇಟ್ ಲಕ್ಷ್ಮಣ ಟೀವ್ಯಾಗ ಕುಂತಿದ್ದ! ಗವರ್ಮೆಂಟ್ ಚಾನಲ್ಲಾಗ “ರಪ್ ಅಂತ ಹೇಳಿ’ ಅಂತ ಒಂದು ಪ್ರೊಗ್ರಾಮ್ ಬರ್ತಾದಲಿÅà? ಅದೇ…ತಪ್ಪು ಉತ್ತರ ಕೊಟ್ರ ಪುಸ್ತಕ ಕಸಕೊಳ್ತಾರಲ್ಲ ಆ ಕಾಕಾ? ಅದೇ ಪ್ರೋಗ್ರಾಮಿಗೆ ಅವ ಹೋಗಿದ್ದ. ರಪ್ ರಪ್ ರಪ್ ಅಂತ ಹೇಳಿ ಎಲ್ಲಾ ಪುಸ್ತಕಾನೂ ಗೆದ್ದ. ಇದನ್ನ ನೋಡಿದ್ದೇ ನಮೌ¾ವ ನನ್ನ ತಲೀಗೆ ಜೋರಾಗಿ ತಿವದು, “ನೋಡಿ ಕಲಿ ಅವನ್ನ…ನೀನೂ ಇದ್ದೀ. ಒಂದು ರೂಪಾಯಿ ಉಪಯೋಗ ಇಲ್ಲ ನಿನ್ನಿಂದ. ಎಂಥಾ ಧಡ್ಡ ಮಗ ಹುಟ್ಟಿ ಕೂತ್ನೆವ್ವ ನನಗ. ಇದರಿಂದ ಒಂದು ದಿನ ನಾ ಸುಖ ಕಾಣಿಲ್ಲ. ನಿನ್ನ ಬದಲು ಲಕ್ಷ್ಮಣನ್ನನ ಹಡದಿದ್ರ ಛೋಲೋ ಇರ್ತಿತ್ತು’ ಅಂದು ಸೆರಗಿಂದ ಕಣ್ಣು ಒರಿಸೆYಂಡ್ಲು. ಅಕಿ ಹಂಗಂದಿದ್ದು ನನಗ ಬ್ಯಾಸ್ರ ಆಗ್ಲಿಲ್ಲರೀ…ಆದರ ಅಕಿ ಹಂಗಂದಾಗ ಬಗಲಾಗಿನ ಮನಿ ರಾಧಾ ಕಿಸಕ್ ಅಂದು ನಕ್ಲು ನೋಡ್ರೀ…ನನ್ ಎದೀನೇ ಧಸಕ್ಕಂತು..”
ಪಟ್ಟಂತ ಕಣ್ಣು ತಗದ ಡಾ. ನೀರಡಿಕಿ, ಒಂದು ತಂಬಿಗಿ ನೀರು ಹಾಕ್ಯಂಡು ಗಂಟ್ಲ ಗಳಗಳ ಮಾಡಿ ಹೊರಾಗ ಹೋಗಿ ಬಾಯಿ ಮುಕ್ಕಳಿಸಿ ಕೇಳಿದ: “ಆಮ್ಯಾಲೇನಾತು?’
“”ಆಮ್ಯಾಲೇನ್ರೀ…ರಾಧಾ ನಕ್ಕಿದ್ದು ನೋಡಿ ನನಗ ಅವತ್ತ ರಾತ್ರಿ ಕಣ್ಣಿಗೆ ಕಣ್ಣು ಹತ್ಲಿಲ್ಲ. ನಾನೂ ಜೀವನದಾಗ ಲಕ್ಷ್ಮಣನ್ಹಂಗ ಶಾಣ್ಯಾ ಆಗಿ, ಅದೇ ಪ್ರೋಗ್ರಾಮಿಗೆ ಹೋಗಿ, ರಾಧಾ ಮನಸ್ಸು ಗೆಲ್ಲಬೇಕು ಅನಕೊಂಡೆ. ಮುಂಜಾನೆ ನಸೀಗ್ಲೆ ಎದ್ದೇಟ್ಲೆ ಲಕ್ಷ್ಮಣನ ಮನೀಗೆ ಓಡಿದೆ. ಅವ ತಂಬಿಗಿ ಹಿಡಕೊಂಡು ಹೊರಾಗ ಹೊಂಟಿದ್ದ. ಅವನಿಗೆ ಅಡ್ಡ ನಿಂತು, “ಹೇ ಲಕ್ಷ್ಮಣ…ನಾನೂ ನಿನ್ಹಂಗ ಬುದ್ಧಿವಂತ ಆಗಬೇಕಂದ್ರ ಏನು ಮಾಡ್ಬೇಕೋ ತಂದೆ? ‘ ಅಂದೆ.
ಅದಕ್ಕವ “ನೋಡಪಾ…ನನಗ ಈಗ ಭಾಳಂದ್ರ ಭಾಳ ಅವಸ್ರ ಆಗ್ಯಾದ, ಅದಕ್ಕ ಜಲ್ದಿ ಜಲ್ದಿ ಹೇಳ್ತೀನಿ ಕೇಳು. ನಿನಗ ಲೋಕ ಜ್ಞಾನ ಭಾಳ ಕಡಿಮಿ. ಜಗತ್ತಿನ್ಯಾಗ ಏನಾಗಕತ್ತಾದ ಅಂತ ಗೊತ್ತೇ ಇಲ್ಲ. ನೀ ನನ್ಹಂಗ ಆಗಬೇಕಂದ್ರ, ದಿನಾ ನ್ಯೂಸ್ ಚಾನೆಲ್ಲು ನೋಡಬೇಕು…’
ಅಂದು ಲುಂಗಿ ಮ್ಯಾಲೆತಿಗೊಂಡು ದಡಬಡ ಹೊಂಟುಬಿಟ್ಟ. ಅವ ಹೇಳಿಧಂಗ ಮಾಡಿದೆ ಸರ…ಹಗಲು ರಾತ್ರಿ ನ್ಯೂಸ್ ನೋಡಕ್ಕ ಶುರುವಚಿಗೆಂಡೆ. ಕೇಜ್ರಿàವಾಲ್ ಅಂದ್ರೆ ಯಾರು? ಅವ್ರು ದಿನಕ್ಕ ಎಷ್ಟು ಸರೆ ಕೆಮ್ತಾರಾ? ಮೋದಿ ಅವರ ಎದಿ ಎಷ್ಟು ಅಗಲ ಅದ? ಮುಖ್ಯಮಂತ್ರಿ ಕಾರಿನ ಮ್ಯಾಲ ಯಾಕ ಕಾಗಿ ಕುಂತಿತು? ಶಶಿಕಲಾ, ಜೈಲಾಗ ಮಧ್ಯಾಹ್ನ ಚಪಾತಿ ಜೊತೀಗೆ ಯಾ ಪಲ್ಯಾ ತಿಂತಾರಾ? ಅಮೆರಿಕ ಅಧ್ಯಕ್ಷನ ಹೇಣಿ¤à ಹಾಕ್ಕೊಳ್ಳ ಬಟ್ಟಿà ರೇಟೆಸ್ಟು? ಮೂರನೇ ಮಾಯುದ್ದ ಶುರುವಾಗಿ ನಾವೆಲ್ಲ ಹೆಂಗ ನಾಯಿ ಸತ್ತಂಗ ಸಾಯ್ತಿàವಿ… ಅನ್ನದ್ರಿಂದ ಹಿಡು, ಬಲಪಂಥೀಯ-ಎಡಪಂಥೀಯ ಅಂದ್ರ ಯಾರು? ಹಂಗಂದ್ರೆ ಏನು? ಯಾರು ಯಾರಿಗೆ ಏನು ಹೇಳಿದರು, ಯಾಕ ಹೇಳಿದರು? ಅನ್ನೋದೆಲ್ಲ ಸಂದರ್ಭ ಸಮೇತ ತಿಳಕಂತ ಹೊಂಟೆ. ಯಾಕೋ ಏನೋ ಸರ, ಇದೆಲ್ಲ ತಿಳಕಂಡ ಮ್ಯಾಲ ಮನಸ್ಯಾಕೋ ಬರೇ ಸಿಟ್ಟು ಸಿಟ್ಟು, ಗಾಬ್ರಿ ಗಾಬ್ರಿ, ಕಿರಿ ಕಿರಿ ಮಾಡಕ್ಕ ಶುರು ಮಾಡಿತ್ರೀ.
ಅದು ಹೋಗ್ಲಿ ಅತ್ತಾಗ…ಅದರ ಜೊತೀಗೆ ಈಗ ಜೀವ ಭಯಾನೂ ಶುರುವಾಗ್ಯಾದೋ ನನ್ನ ಹಡದಪ್ಪ! ಒಂದು ವಾರದ ಹಿಂದ ಒಬ್ಟಾತ ಪಂಡಿತ “ಪೂರ್ವ ದಿಕ್ಕಿನಾಗ ಕುಂತು ಸಂಡಾಸ್ ಮಾಡಿದ್ರ, ನಿಮ್ಮ ಹೊಟ್ಟಿ ಜಾಡಸ್ತಾದ’ ಅಂದ. ಈ ಮಗ ಸುಳ್ಳು ಹೇಳ್ತಾನ ಅಂದು ನಾನವತ್ತ ಪೂರ್ವ ದಿಕ್ಕಿಗೇ ಕುಂತು ನೋಡಿದೆ. ಅವತ್ತ ಹೊಟ್ಟಿ ಬಲು ತ್ರಾಸ ಕೊಟ¤ರೀ! ಅಲಾ ಇವಾ°.. ಈತ ಎಲ್ಲಾ ಕರೆಕ್ಟ್ ಹೇಳ್ತಾನಲ್ಲಲೇ ಅನ್ಕಂಡು ಅವತ್ತಿಂದ ದಿನಾ ಬೆಳಿಗ್ಗೆ ಅತ ಹೆಂಗ ಹೇಳ್ತಾನೋ ಹಂಗೆ ಮಾಡಕತ್ತೀನಿ. ಆದ್ರ 3 ದಿನದ ಹಿಂದ, ಆತ ಏನಂದ ಗೊತ್ತೇನ್ರೀ? “ತುಲಾ ರಾಶಿಯವರು ರಾತ್ರಿ ಉತ್ತರ ದಿಕ್ಕಿಗೆ ಮಲಗಿದ್ರ ಹಾಸಿಗ್ಯಾಗೇ ಗೊಟಕ್ ಅಂತೀರಿ ‘! ಈಗ ನಿಮಗೂ ಗೊತ್ತಿರ್ಲಿ ಅಂತ ಹೇಳಕತ್ತೀನಿ. ನಾನೋಡಿದ್ರ ರಾತ್ರಿ ಹೆಂಗಬೇಕಾಧಂಗ ಉಳಾÂಡ್ಕéಂತ ಮಕ್ಕೋಣವ. ಎಲ್ಲಿ ನಿದ್ಯಾಗ ಉತ್ತರ ದಿಕ್ಕಿಗೆ ತಿರುಗಿ ಸತ್ತುಹೋಗ್ತಿನೋ ಅಂತ ಭುಗುಲು ಶುರುವಾಗ್ಯಾದ. ಮೂರು ದಿನ ಆತ್ರಿ, ರಾತ್ರೆಲ್ಲ ನಿದ್ದೀನೇ ಬರವಲುª…ಸ್ವಲುಪು ಉತ್ತರ ದಿಕ್ಕಿನ ಕಡೀ ಹೊಂಟೆ ಅಂದ್ರ ಎದ್ದು ಟರ್ನ್ ಹೊಡುದು ಮಕ್ಕೋತ್ತೀನಿ. ನಮೌ¾ವ್ವ ನನ್ನ ನೋಡಿ “ನನ್ನ ಮಗಗ ಹುಚ್ಚು ಹಿಡದದ್ರಲೇ ‘ ಅಂತ ಅಳಕತ್ತಾಳಿ..ನನಗೂ ಅಕಿ ಮಾತು ಖರೇವು ಅನ್ಸಕತ್ತದ…ಸರ, ಹೆಂಗನ ಮಾಡಿ ನನ್ನ ಮೆಂಟಲ್ ಬಿಡಿಸಿ, ಛೋಲೋ ನಿದ್ದಿ ಮಾಡೋಹಂಗ ಮಾಡ್ರಿ’ ಅಂದು ಇನ್ನೊಂದು ರೌಂಡ್ ಅತ್ತ.
ಡಾ. ನೀರಡಿಕಿ ನಾರಾಯಣ ನಿಧಾನಕ್ಕ ಕಣ್ಣು ತಗದು, ಒಂದು ಹಾಳಿ ತೊಗೊಂಡು ಅದರ ಮ್ಯಾಲ ಏನೇನೋ ಬರದು, ಪಮ್ಯಾನ್ ನೋಡಿ ಹೇಳಿದ: “”ಲೇ ಪಾರಾ…ನಿನ್ನ ಸಮಸ್ಯೆ ಒಳಾಗೇ ಪರಿಹಾರ ಅದ. ನೀ ಎಲ್ಲಾ ತಿಳಕೊಂತ ಹೊಂಟಿದ್ದೇ ಸಮಸ್ಯೆಗೆ ಕಾರಣ. ಮೊದಲು ನಿನ್ನ ತಲೀ ಖಾಲಿ ಇತ್ತು. ಅದಕ್ಕ ಆರಾಮಾಗಿ, ಛೋಲೋ ನಿದ್ದಿ ಹೊಡಕೋತ್ತ ಇದ್ದಿ. ನ್ಯೂಸ್ ನೋಡಕ್ಕ ಶುರು ಮಾಡಿದಾಗಿಂದ ನಿನ್ನ ತಲಿ ಗೊಬ್ಬರದ ಗುಂಡಿ ಆಗ್ಯಾದ. ನೀ ಮೊದಲಿನ್ಹಂಗ ಆಗಬೇಕು ಅಂದ್ರ ನಿನ್ನ ತಲಿ ಖಾಲಿ ಆಗಬೇಕು. ಅಂದ್ರ ನೀನು ನ್ಯೂಸ್ ನೋಡೋದನ್ನ ಬಿಡಬೇಕು. ಈ ಚಟ ಬಿಡೋದು ಅಷ್ಟು ಆಸಾನ್ ಅಲ್ಲ. ಆದ್ರೂ ನೀ ಒಂದು ತಿಂಗಳ ನ್ಯೂಸ್ ಬಿಟ್ಟಿ ಅಂದ್ರೆ, ನಿನ್ನ ತಲೀ ಒಳಾಗಿನ ಟೆನ್ಶನ್ನು ನಿಧಾನಕ್ಕ ಕಡಿಮಿ ಆಕ್ಕೋತ್ತ ಹೋಗ್ತಾದ. ಹಂಗಂತಂದು ನೀನು ಒಮ್ಯಾಲೆ ಧಡ್ಡಶಿಖಾಮಣಿ ಆಗಿ ಆರಾಮಾಗೋದಿಲ್ಲ. ಹಂಗಾಗಬೇಕಂದ್ರ ಮತ್ತ ನೀನು ದಿನಾ ಟಿವಿ ಸೀರಿಯಲ್ ನೋಡೋದಕ್ಕ ಶುರು ಮಾಡಬೇಕು! ತೊಗೋ ಈ ಚೀಟಿ. ಇದರಾಗ ಯಾವ ಸೀರಿಯಲ್ ನೋಡಿದ್ರೆ ನಿನ್ನ ದಡ್ಡತನ ಜಾಸ್ತಿ ಆಗ್ತದ ಅಂತ ಬರದೀನಿ…” ಅಂದು ಚೀಟೀನ ಪಮ್ಯಾನ ಕೈಗಿಟ್ಟ ಡಾ. ನೀರಡಿಕಿ. ಪಮ್ಯಾ ಕಣ್ಣು ಒರೆಸಿಗೆಂಡು ಖುಷಿಯಿಂದ ಓದಿದ…
1)ಬೆಳಗ್ಗೆ 9 ಗಂಟೆಗೆ ನಾಷ್ಟಾಕ್ಕಿಂತ ಮೊದಲು: “ಆತ್ಮಗಳ ಅಟ್ಯಾಕ್: ಒಂದು ಅರಿಶಿಣ ಕೊಂಬಿನ ಕಥೆ’
2)ಮಧ್ಯಾಹ್ನ ಊಟವಾದ ನಂತರ: “ಅತ್ತೆಯ ಗೇಟ್ ಮುಂದೆ ಸತ್ತ ನಾಯಿ’.
3)ರಾತ್ರಿ ಮಲಗುವ ಮುನ್ನ: “ಸೊಸೆ ಮಾಡಿದ ಸಂಡಿಗೆ”
ಡಾ. ನೀರಡಿಕಿ ನಾರಾಯಣ ಸೀದಾ ಪಮ್ಯಾನ ಜೋಬಾಗ ಕೈಹಾಕಿ ಐವತ್ತು ರೂಪಾಯಿ ತೊಗೊಂಡು, ಶಟರ್ ಎಳದು, ಗಟಾರ ಎಗರಿ, ಚೈನು ಬಿಚ್ಚಿ, ಎಕ್ಸೆಲ್ ಹತ್ತಿ ಹಾರ್ನ್ ಹೊಡಕೊಂತ ದೇವ್ರು ಹೋದಂಗ ಅದೃಶ್ಯನಾದ…
– ರಾಘವೇಂದ್ರ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್ ಪೊಲೀಸ್ ಠಾಣೆ ಬಂಟ್ವಾಳಕ್ಕೆ
ಜಂಟಿ ಸಂಸದೀಯ ಸಮಿತಿ ತನಿಖಾಸ್ತ್ರ!; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಅಧಿಕಾರವೇನು?
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.