ಪಾಕ್‌ ಮುಖಕ್ಕೆ ಕಠಿನ ಪ್ರಶ್ನೆ ಎಸೆಯಬೇಕು


Team Udayavani, May 7, 2017, 6:31 AM IST

Rajiv-Dogra,.jpg

ಕುಲಭೂಷಣ್‌ ಜಾಧವ್‌ ಭಾರತೀಯ ಗೂಢಚಾರ ಎಂದೇ ಹಠತೊಟ್ಟು ವಾದಿಸುತ್ತಿರುವ ಪಾಕಿಸ್ಥಾನ ದೊಡ್ಡ ಗುರಿಯಿರಿಸಿಕೊಂಡು ಆಟವಾಡುತ್ತಿದೆ ಅನ್ನುತ್ತಾರೆ ಕರಾಚಿಯಲ್ಲಿ ಭಾರತದ ಕಾನ್ಸುಲ್‌ ಜನರಲ್‌ ಆಗಿ ಕಾರ್ಯನಿರ್ವಹಿಸಿದ್ದ ರಾಜೀವ್‌ ಡೋಗ್ರಾ.  ಡೋಗ್ರಾ ರೀಡಿಫ್ ಡಾಟ್‌ ಕಾಮ್‌ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಕುಲಭೂಷಣ್‌ ವಿರುದ್ಧ ಪಾಕಿಸ್ಥಾನ ನಡೆಸಿರುವ ವಿಚಾರಣೆ ಒಂದು ನಾಟಕ ಎಂದಿದೆ ಭಾರತ. ನಿಮ್ಮ ಅಭಿಪ್ರಾಯವೇನು?
         ಅಲ್ಲಿ ವಿಚಾರಣೆ ನಡೆದೇ ಇಲ್ಲ. ಉಗ್ರವಾದಿಗಳ ವಿಚಾರಣೆ ನಡೆಸಲು ಪಾಕಿಸ್ಥಾನಿ ಸೇನೆಗೆ ಅಧಿಕಾರ ನೀಡಲಾಗಿದೆ, ಆ ಅಧಿಕಾರವನ್ನು ಉಪಯೋಗಿಸಿಕೊಂಡು ಕುಲಭೂಷಣ್‌ ಜಾಧವ್‌ರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬುದಾಗಿ ಪಾಕ್‌ ನೀಡಿರುವ ಸ್ಪಷ್ಟನೆಯ ಆಧಾರದಲ್ಲಿ ಜನರು ಭಾವಿಸಿದ್ದಾರೆ. ಆದರೆ ಪಾಕಿಸ್ಥಾನ ಉಲ್ಲೇಖೀಸಿರುವ ಕಾನೂನಿನ ಕಲಮು 1923ರದ್ದು, ಬ್ರಿಟಿಶರ ಕಾಲದ್ದು. ಹೀಗಾಗಿ ಪಾಕ್‌ ನೀಡಿರುವ ಸ್ಪಷ್ಟನೆ ನಿಜವಲ್ಲ. ಉಗ್ರರನ್ನು ಮಿಲಿಟರಿ ನ್ಯಾಯಾಲಯಗಳಲ್ಲಿ ಕ್ಷಿಪ್ರ ವಿಚಾರಣೆಗೆ ಒಳಪಡಿಸಲು ಪಾಕ್‌ ಮಿಲಿಟರಿಗೆ ಹೆಚ್ಚುವರಿ ಅಧಿಕಾರ ನೀಡಲಾಗಿರುವ ಈ ವ್ಯವಸ್ಥೆಯಲ್ಲಿ ಕೂಡ ನಿರ್ದಿಷ್ಟ ಆಪಾದಿತನೊಬ್ಬನ ವಿರುದ್ಧ ವಿಚಾರಣೆ ಆರಂಭಿಸಲಾಗಿದೆ ಎಂಬ ನೊಟೀಸ್‌ ಹೊರಡಿಸಲಾಗುತ್ತದೆ. ಜಾಧವ್‌ ಪ್ರಕರಣದಲ್ಲಿ ಇಂಥ ನೊಟೀಸ್‌ ನೀಡಲಾಗಿಲ್ಲ. ವಿಚಾರಣೆ ಆರಂಭವಾದುದೇ ಯಾರಿಗೂ ತಿಳಿದಿಲ್ಲ. ಇದು ಅವಸರದಲ್ಲಿ ತೆಗೆದುಕೊಂಡ ನಿರ್ಣಯ ಎಂದೇ ತಿಳಿಯ ಬೇಕಾಗುತ್ತದೆ. 

ಇನ್ನೊಂದು ವಿಚಾರವಿದೆ. ಪಾಕಿಸ್ಥಾನವು ಭಾರತೀಯರ ಬಗೆಗೆ ಒಂದು ಕಾನೂನು, ಇತರ ಎಲ್ಲರ ಬಗೆಗೆ ಇನ್ನೊಂದು ರೀತಿಯ ಕಾನೂನು ಎಂಬ ನಿಲುವನ್ನು ಅನುಸರಿಸಿಕೊಂಡು ಬಂದಿದೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ಶಕೀಲ್‌ ಅಹ್ಮದ್‌ ಎಂಬ ಪಾಕಿಸ್ಥಾನಿ ವೈದ್ಯನ ಬಗೆಗೆ ಸುದ್ದಿಯೊಂದು ಪ್ರಸಾರವಾಗಿತ್ತು. ಲಾದನ್‌ ಜತೆಗೆ ಸಂಪರ್ಕ ಹೊಂದಿದ್ದನೆನ್ನುವ ಆರೋಪ ಹೊತ್ತಿದ್ದ ಈ ವೈದ್ಯನನ್ನು ಸಬ್‌-ಡಿವಿಶನಲ್‌ ಮ್ಯಾಜಿಸ್ಟ್ರೇಟ್‌ ಮಟ್ಟದ ನಾಗರಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಅಲ್ಲದೆ ಆರೋಪ ಸಾಬೀತಾದ ಆತನನ್ನು ನಾಗರಿಕ ಸೆರೆಮನೆಯಲ್ಲೇ ಇರಿಸಲಾಗಿತ್ತು. ಜಾಧವ್‌ ಮೇಲಿನ ಆಪಾದನೆಗಿಂತಲೂ ವೈದ್ಯ ಶಕೀಲ್‌ ಅಹ್ಮದ್‌ ಎಸಗಿರುವ ತಪ್ಪು ಬಹಳ ಹೆಚ್ಚಿನದು ಎಂಬುದನ್ನು ಪಾಕಿಸ್ಥಾನ ಭಾವಿಸಬೇಕಿತ್ತು. ರೇಮಂಡ್‌ ಡೇವಿಸ್‌ ಎಂಬ ಗೂಢಚರನನ್ನೂ ನಾಗರಿಕ ನ್ಯಾಯಾಲಯದಲ್ಲಿಯೇ ವಿಚಾರಿಸಿ ಕೋಟ್‌ ಲಾಖ್‌ಪತ್‌ನ ನಾಗರಿಕ ಜೈಲಿನಲ್ಲಿಯೇ ಇರಿಸಲಾಗಿತ್ತು. ಆತ ಗೂಢಚರ ಮಾತ್ರವಲ್ಲ, ಇಬ್ಬರು ಪಾಕಿಸ್ಥಾನೀಯರನ್ನು ಹತ್ಯೆ ಮಾಡಿದ್ದ. ಆದರೂ ಕೊನೆಯಲ್ಲಿ ಆತನನ್ನು 20 ಲಕ್ಷ ಡಾಲರ್‌ ದಂಡ ಕಟ್ಟಿಸಿಕೊಂಡು ಬಿಡಲಾಗಿದೆ. ಅಂದರೆ ಅನ್ಯ ದೇಶಗಳ ಗೂಢಚರರನ್ನೂ ನಾಗರಿಕ ನ್ಯಾಯಾಲಯಗಳಲ್ಲಿಯೇ ವಿಚಾರಣೆಗೆ ಒಳಪಡಿಸಲಾಗುತ್ತದೆ. ಆದರೆ ಭಾರತೀಯರ ಬಗೆಗೆ ಮಾತ್ರ ಪಾಕಿಸ್ಥಾನದ್ದು ಇನ್ನೊಂದು ಧೋರಣೆ. ಕಾನೂನು ಅವಕಾಶ, ನಾಗರಿಕ ರೀತಿಯ ವಿಚಾರಣೆ ಇತ್ಯಾದಿ ಏನನ್ನೂ ಭಾರತೀಯರ ವಿಚಾರದಲ್ಲಿ ಅನುಸರಿಸಲಾಗುತ್ತಿಲ್ಲ. ಬದಲಾಗಿ, ಪಾಕಿಸ್ಥಾನದ ಮಿಲಿಟರಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಅನುಗುಣವಾಗಿ ಕಾನೂನನ್ನು ಸ್ಥಳದಲ್ಲಿಯೇ ತಿರುಚಿ ಭಾರತೀಯನನ್ನು ಶಿಕ್ಷಿಸಲಾಗುತ್ತದೆ.

ಪಾಕ್‌ ಜತೆಗೆ ಕಠಿಣವಾಗಿ ನಡೆದುಕೊಳ್ಳುವ ಅಗತ್ಯವಿದೆಯೇ?
         ದುರಂತವೆಂದರೆ, ಅವರು ಪದೇ ಪದೆ ಸುಳ್ಳು ಹೇಳುತ್ತಾರೆ ಮತ್ತು ನಾವದನ್ನು ನಂಬಿಬಿಡುತ್ತೇವೆ. ಜಾಧವ್‌ ಅವರನ್ನು ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿದ್ದು ಯಾಕೆ, ಅವರ ವಿರುದ್ಧ ಇರುವ ಆರೋಪಗಳೇನು ಎಂಬುದು ಭಾರತ ಸರಕಾರಕ್ಕೆ ತಿಳಿದಿದೆ ಎಂದೇ ಪಾಕ್‌ ಹೈಕಮಿಶನರ್‌ ಅಬ್ದುಲ್‌ ಬಸಿತ್‌ ಮಾಧ್ಯಮ ಸಂದರ್ಶನಗಳಲ್ಲಿ ಹೇಳಿದ್ದರು. ಆದರೆ, ಜಾಧವ್‌ ಎಲ್ಲಿದ್ದಾರೆ, ಯಾಕೆ ಅವರನ್ನು ಸೆರೆಯಲ್ಲಿರಿಸಿದ್ದಾರೆ ಎಂಬುದು ಭಾರತೀಯ ಸರಕಾರಕ್ಕೆ ತಿಳಿದಿಲ್ಲ ಎಂದು ಭಾರತೀಯ ಮಾಧ್ಯಮಗಳು ಹೇಳುತ್ತಿವೆ. ನಿಜಾಂಶವೆಂದರೆ, ಜಾಧವ್‌ ಇರಾನ್‌ನಲ್ಲಿ ಯಾವ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂಬ ಮಾಹಿತಿಯನ್ನು ಪಡೆಯಲು ಪಾಕ್‌, ಇರಾನ್‌ ಸರಕಾರವನ್ನು ಸಂಪರ್ಕಿಸಿತ್ತು. ಆದರೆ ಈಗ ಜಾಧವ್‌ ತ‌ಮ್ಮ ದೇಶದಲ್ಲಿಯೇ ಗೂಢಚರ್ಯೆಯಲ್ಲಿ ನಿರತನಾಗಿದ್ದ ಎಂದು ಪಾಕ್‌ ಸರಕಾರ ಹೇಳಿಕೊಳ್ಳುತ್ತಿದೆ. ಇದು ಹೌದಾದರೆ, ಪಾಕ್‌ ಸರಕಾರ ಇರಾನನ್ನು ಸಂಪರ್ಕಿಸಿದ್ದೇಕೆ? ನಾವು ಇಂತಹ ಪ್ರಶ್ನೆಗಳನ್ನು ಪಾಕ್‌ ಮುಖಕ್ಕೆ ಎಸೆಯಬೇಕು. ಇನ್ನೊಂದು ಸಮಸ್ಯೆಯೆಂದರೆ, ನಾವು ಪಾಕಿಸ್ಥಾನದ ಮಟ್ಟಿಗೆ ತುಂಬಾ ಉದಾರಿಗಳಾಗಿ ವರ್ತಿಸುತ್ತಿದ್ದೇವೆ. ಇತ್ತೀಚೆಗೆ ಭಾರತೀಯ ಸಾಗರ ವ್ಯಾಪ್ತಿಯಲ್ಲಿ ಕಂಡುಬಂದ ಇಬ್ಬರು ಪಾಕಿಸ್ಥಾನಿ ನೌಕಾಯೋಧರನ್ನು ಭಾರತೀಯ ಕೋಸ್ಟ್‌ಗಾರ್ಡ್‌ ರಕ್ಷಿಸಿ ಕಳುಹಿಸಿಕೊಟ್ಟಿತ್ತು. ಭಾರತೀಯ ಜಲವ್ಯಾಪ್ತಿಯಲ್ಲಿ ಅವರು ಬೇಹುಗಾರಿಕೆ ನಡೆಸುತ್ತಿರಲಿಲ್ಲವೆ? ಹೌದು. ಆದರೂ ನಾವು ಸುರಕ್ಷಿತವಾಗಿ ಹೋಗಗೊಟ್ಟೆವು. ಇದನ್ನು ಪಾಕಿಸ್ಥಾನದ ವರ್ತನೆಯ ಜತೆಗೆ ಹೋಲಿಸಿ ನೋಡಿ. ಕೆಲವು ತಿಂಗಳುಗಳ ಹಿಂದೆ ಅಕಸ್ಮಾತ್‌ ಗಡಿದಾಟಿದ್ದ ಭಾರತೀಯ ಯೋಧನೊಬ್ಬನನ್ನು ಅವರು ತಿಂಗಳುಗಟ್ಟಲೆ ಸೆರೆಯಲ್ಲಿರಿಸಿ ಚಿತ್ರಹಿಂಸೆ ನೀಡಿ ಬಳಿಕ ಮಹಾಔದಾರ್ಯವೆಂಬಂತೆ ಹಿಂದಕ್ಕೆ ಕಳುಹಿಸಿರಲಿಲ್ಲವೆ? ನನ್ನ ಊಹೆಯ ಪ್ರಕಾರ, ಜಾಧವ್‌ಗೆ ಇನ್ನೆಂದೂ ಚೇತರಿ ಸಿಕೊಳ್ಳಲಾರದಂಥ ಚಿತ್ರಹಿಂಸೆ ನೀಡಿರಬಹುದು. ಹೀಗಾಗಿ ಅವರನ್ನು ಬಿಡುಗಡೆಗೊಳಿಸಲು ಪಾಕ್‌ ಹಿಂದೇಟು ಹಾಕುತ್ತಿದೆ. 

ಜಾಧವ್‌ ಪ್ರಕರಣದ ಮೂಲಕ ಪಾಕ್‌ ಯಾವ ರೀತಿಯಲ್ಲಿ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿದೆ?
         ಜಾಧವ್‌ ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಪಾಕ್‌ ಪ್ರಧಾನಿ ಮತ್ತು ವಿದೇಶ ಸಚಿವರೇ ಒಪ್ಪಿಕೊಂಡಿದ್ದಾರೆ. ಆದೂ ಈ ಪ್ರಕರಣದ ಬಗ್ಗೆ ಯಾಕಿಷ್ಟು ರಂಪಾಟ? ಇದಕ್ಕೆ ಎರಡು ಕಾರಣಗಳಿವೆ. ಒಂದನೆಯದಾಗಿ, ಭಾರತವು ಪಾಕಿಸ್ಥಾನದಲ್ಲಿ ಭೀತಿವಾದಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದು, ಅದು ಕೂಡ ಉಗ್ರವಾದಿ ರಾಷ್ಟ್ರ ಎಂಬ ಚಿತ್ರಣವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿತ್ತುವುದು. ಇನ್ನೊಂದು, ಕಾಶ್ಮೀರ ವಿವಾದ ಕುದಿಯುತ್ತಿದ್ದು, ಅದರ ಪರಿಹಾರಕ್ಕೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯನ್ನು ಆಹ್ವಾನಿಸಲು ಇದು ತಕ್ಕ ಸಮಯ ಎಂದು ಪಾಕ್‌ ಭಾವಿಸಿದೆ. ಜಾಧವ್‌ ಆಗಲಿ ಇನ್ಯಾರೇ ಆಗಲಿ; ಈ ದೂರದ ಗುರಿಯ ದಾಳಗಳಷ್ಟೇ.

ಭಾರತ ಹೇಗೆ ಪ್ರತಿಕ್ರಿಯಿಸಬೇಕು?
         ಜಾಧವ್‌ ಬಳಿ ಮುಸ್ಲಿಮ್‌ ಹೆಸರಿನದ್ದರ ಸಹಿತ ಎರಡು ಪಾಸ್‌ಪೋರ್ಟ್‌ಗಳೇಕಿವೆ ಎನ್ನುತ್ತಿದೆ ಪಾಕ್‌. ಇದನ್ನೇ ಮುಂದಿಟ್ಟು ಜಾಧವ್‌ ಒಬ್ಬ ಗೂಢಚರ ಎಂದು ವಾದಿಸುತ್ತಿದೆ. ದಾವೂದ್‌ ಬಳಿ ಹತ್ತು ಭಾರತೀಯ ಪಾಸ್‌ಪೋರ್ಟ್‌ಗಳಿವೆ, ಆತ ಭಾರತೀಯ ಬೇಹುಗಾರನಲ್ಲವಲ್ಲ! ಭಾರತ ಜಾಧವ್‌ರನ್ನು ಗೂಢಚಾರಿಕೆಗೆ ಕಳಿಸುವುದಿದ್ದರೆ ಭಾರತೀಯ ಪಾಸ್‌ಪೋರ್ಟ್‌ ನೀಡಿ ಯಾಕೆ ಕಳುಹಿಸುತ್ತಿತ್ತು? ಬಾಂಗ್ಲಾದೇಶಧ್ದೋ ನೇಪಾಳಧ್ದೋ ಸ್ವತಃ ಪಾಕಿಸ್ಥಾನಧ್ದೋ ಪಾಸ್‌ಪೋಟ್‌ ನೀಡುತ್ತಿತ್ತಲ್ಲ! ಾಧವ್‌ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲವೆಂದು ಪಾಕ್‌ ವಿದೇಶ ನೀತಿ ಸಲಹೆಗಾರ ಸರ್ತಾಜ್‌ ಅಜೀಜ್‌ ಡಿಸೆಂಬರಿನಲ್ಲಿ ಹೇಳಿದ್ದರು. ಈಗ ಮೂರ್ನಾಲ್ಕು ತಿಂಗಳುಗಳ ಒಳಗೆ ಮರಣದಂಡನೆ ವಿಧಿಸುವಂಥ ಪುರಾವೆ ಲಭಿಸಿದ್ದು ಹೇಗೆ?  ಹೀಗಾಗಿ ಅಬ್ದುಲ್‌ ಬಸಿತ್‌ನಂಥವರು ತಮ್ಮ ಸುಳ್ಳಿನ ಪ್ರತಿಪಾದನೆಯನ್ನು ನಡೆಸಲು ನಮ್ಮ ಟಿವಿ ಮಾಧ್ಯಮಗಳಲ್ಲಿ ಅವಕಾಶ ಕೊಡಬಾರದು. ಮೂರನೆಯದಾಗಿ, ಪಾಕಿಸ್ಥಾನಕ್ಕೆ ಭೇಟಿ ನೀಡದಂತೆ ಭಾರತೀಯರಿಗೆ ಕನಿಷ್ಠ ಪ್ರವಾಸೀ ಎಚ್ಚರಿಕೆಯನ್ನಾದರೂ ಹೊರಡಿಸಬೇಕು. ಹಜರತ್‌ ನಿಜಾಮುದ್ದೀನ್‌ ದರ್ಗಾದ ಹಿರಿಯ ಧರ್ಮಗುರುಗಳಿಬ್ಬರು ಅಲ್ಲಿ ಗೂಢಚಾರಿಕೆಯ ಶಂಕೆಯ ಮೇಲೆ ಬಂಧನಕ್ಕೆ ಒಳಗಾಗಿ ಪ್ರಶ್ನಿಸಲ್ಪಡುತ್ತಾರೆಂದರೆ, ಸಾಮಾನ್ಯ ಭಾರತೀಯರ ಪಾಡೇನಾಗಬಹುದು!

– ರಾಜೀವ್‌ ಡೋಗ್ರಾ ಭಾರತೀಯ ರಾಜತಂತ್ರಜ್ಞ

ಟಾಪ್ ನ್ಯೂಸ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.