ಜೈದೇವ್‌ ಉನಾದ್ಕತ್‌ ಹ್ಯಾಟ್ರಿಕ್‌; ಪುಣೆಗೆ ಪ್ಲೇ-ಆಫ್ ಖಾತ್ರಿ


Team Udayavani, May 7, 2017, 12:24 PM IST

Jaydev-Unadkat.jpg

ಹೈದರಾಬಾದ್‌: ಎಡಗೈ ಬೌಲರ್‌ ಜೈದೇವ್‌ ಉನಾದ್ಕತ್‌ ಅಂತಿಮ 2 ಓವರ್‌ಗಳಲ್ಲಿ ಹ್ಯಾಟ್ರಿಕ್‌ ಸಹಿತ 5 ವಿಕೆಟ್‌ ಉಡಾಯಿಸಿ, ಹೈದರಾಬಾದನ್ನು ಅವರದೇ ಅಂಗಳದಲ್ಲಿ ಮಗುಚಿ ಪುಣೆಯನ್ನು ಪ್ಲೇ-ಆಫ್ ಸುತ್ತಿನ ಸಮೀಪ ನಿಲ್ಲಿಸಿದ್ದಾರೆ.

ಶನಿವಾರದ ಮೊದಲ ಪಂದ್ಯದಲ್ಲಿ ಪುಣೆ ಹಾಲಿ ಚಾಂಪಿಯನ್‌ ಹೈದರಾಬಾದನ್ನು 12 ರನ್ನುಗಳಿಂದ ಸೋಲಿಸಿತು. ಮೊದಲು ಬ್ಯಾಟ್‌ ಮಾಡಿದ ಪುಣೆ 8 ವಿಕೆಟಿಗೆ 148 ರನ್‌ ಗಳಿಸಿದರೆ, ಹೈದರಾಬಾದ್‌ 9 ವಿಕೆಟಿಗೆ 136 ರನ್‌ ಮಾಡಿ ಸೋತಿತು. ಪುಣೆ ಮೊದಲ ಸುತ್ತಿನ ಪಂದ್ಯದಲ್ಲೂ ವಾರ್ನರ್‌ ಪಡೆಗೆ ಸೋಲುಣಿಸಿತ್ತು. ಈ ಜಯದೊಂದಿಗೆ ಪುಣೆ 12 ಪಂದ್ಯಗಳಿಂದ 16 ಅಂಕ ಸಂಪಾದಿಸಿತು. 

ಉನಾದ್ಕತ್‌ ಮೇಡನ್‌-ಹ್ಯಾಟ್ರಿಕ್‌
ಯುವರಾಜ್‌ ಸಿಂಗ್‌ ಕ್ರೀಸಿನಲ್ಲಿರುವಷ್ಟು ಹೊತ್ತೂ ಹೈದರಾಬಾದ್‌ ಗೆಲುವು ನಿಶ್ಚಿತ ಎಂಬ ಸ್ಥಿತಿಯಲ್ಲಿತ್ತು. ಆದರೆ ಕೊನೆಯ 2 ಓವರ್‌ಗಳಲ್ಲಿ ಮ್ಯಾಜಿಕ್‌ ಮಾಡಿದ ಜೈದೇವ್‌ ಉನಾದ್ಕತ್‌ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟರು. ಉನಾದ್ಕತ್‌ ತಮ್ಮ ಐದೂ ವಿಕೆಟ್‌ಗಳನ್ನು ಈ 2 ಓವರ್‌ಗಳಲ್ಲಿ ಬುಟ್ಟಿಗೆ ಹಾಕಿಕೊಂಡರು. ಅಂತಿಮ ಓವರಿನಲ್ಲಿ ಹ್ಯಾಟ್ರಿಕ್‌ ಸಾಧಿಸುವ ಮೂಲಕ ಅವರು ಪುಣೆಯ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು.

ಅಂತಿಮ ಓವರಿನಲ್ಲಿ ಹೈದರಾಬಾದ್‌ ಜಯಕ್ಕೆ 13 ಓವರ್‌ ಅಗತ್ಯವಿತ್ತು; ಕೈಯಲ್ಲಿ 4 ವಿಕೆಟ್‌ ಇತ್ತು. ಆದರೆ ಉನಾದ್ಕತ್‌ ಈ ಓವರಿನಲ್ಲಿ ಒಂದೂ ರನ್‌ ನೀಡದೆ ಹ್ಯಾಟ್ರಿಕ್‌ ವಿಕೆಟ್‌ ಹಾರಿಸಿ ಹೈದರಾಬಾದಿಗೆ ತವರಿನಂಗಳದಲ್ಲೇ ಸೋಲುಣಿಸಿದರು. 2, 3 ಹಾಗೂ 4ನೇ ಎಸೆತಗಳಲ್ಲಿ ಅವರು ಬಿಪುಲ್‌ ಶರ್ಮ, ರಶೀದ್‌ ಖಾನ್‌ ಮತ್ತು ಭುವನೇಶ್ವರ್‌ ಕುಮಾರ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಇದಕ್ಕೂ ಹಿಂದಿನ ಓವರಿನಲ್ಲಿ ಯುವರಾಜ್‌ ಸಿಂಗ್‌ ಮತ್ತು ನಮನ್‌ ಓಜಾ ಆಟಕ್ಕೆ ತೆರೆ ಎಳೆಯುವಲ್ಲಿ ಯಶಸ್ವಿಯಾಗಿದ್ದರು.

ಇದು ಐಪಿಎಲ್‌ನ 17ನೇ ಹಾಗೂ ಪುಣೆಯ ಮೊದಲ ಹ್ಯಾಟ್ರಿಕ್‌ ಸಾಧನೆಯಾಗಿದೆ. ಇದರೊಂದಿಗೆ ಉನಾದ್ಕತ್‌ ಐಪಿಎಲ್‌ನಲ್ಲಿ 100 ವಿಕೆಟ್‌ ಉರುಳಿಸಿದ ಸಾಧನೆಯನ್ನೂ ಮಾಡಿದರು. ಉನಾದ್ಕತ್‌ ಐಪಿಎಲ್‌ನಲ್ಲಿ ಮೇಡನ್‌ ಓವರ್‌ ಸಹಿತ ಹ್ಯಾಟ್ರಿಕ್‌ ಸಾಹಸಗೈದ 3ನೇ ಬೌಲರ್‌. ಉಳಿದಿಬ್ಬರೆಂದರೆ ಮಾಲಿಂಗ ಮತ್ತು ಬದ್ರಿ.

ಹೈದರಾಬಾದ್‌ ಪರ ಯುವರಾಜ್‌ ಸರ್ವಾಧಿಕ 47 ರನ್‌ (43 ಎಸೆತ, 4 ಬೌಂಡರಿ, 2 ಸಿಕ್ಸರ್‌) ಮತ್ತು ವಾರ್ನರ್‌ 40 ರನ್‌ (34 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದರು.

ಪುಣೆ ಸಾಧಾರಣ ಮೊತ್ತ
ಪುಣೆಯನ್ನು ಮೊದಲು ಬ್ಯಾಟಿಂಗಿಗೆ ಇಳಿಸಿದ ಹೈದರಾಬಾದ್‌, ಈ ನಿರ್ಧಾರದಲ್ಲಿ ಉತ್ತಮ ಯಶಸ್ಸನ್ನೇ ಕಂಡಿತು. ತಂಡದ ಹೀರೋ, ಭರವಸೆಯ ಆರಂಭಕಾರ ರಾಹುಲ್‌ ತ್ರಿಪಾಠಿ 2ನೇ ಓವರಿನಲ್ಲೇ ಒಂದು ರನ್ನಿಗೆ ರನೌಟಾದುದರಿಂದ ಪುಣೆಯ ರನ್‌ಗತಿ ಕುಂಟಿತಗೊಂಡಿತು. ಕೆಕೆಆರ್‌ ವಿರುದ್ಧದ ಹಿಂದಿನ ಪಂದ್ಯದಲ್ಲಿ ತ್ರಿಪಾಠಿ ಏಕಾಂಗಿಯಾಗಿ ಹೋರಾಡಿ (93) ಪುಣೆ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದರು. 

ಅನುಭವಿ ಬೌಲರ್‌ ಆಶಿಷ್‌ ನೆಹ್ರಾ ತನ್ನ ದ್ವಿತೀಯ ಓವರ್‌ ವೇಳೆ ಸ್ನಾಯು ಸೆಳೆತಕ್ಕೆ ಸಿಲುಕಿ ದಾಳಿಯಿಂದ ಹಿಂದೆ ಸರಿದರೂ ಸನ್‌ರೈಸರ್ ದಾಳಿಗೆ ಯಾವುದೇ ಹಿನ್ನಡೆಯಾಗಲಿಲ್ಲ. ಪಠಾನ್‌ಕೋಟ್‌ನ ಮಧ್ಯಮ ವೇಗಿ ಸಿದ್ಧಾರ್ಥ್ ಕೌಲ್‌ ಜಬರ್ದಸ್ತ್ ದಾಳಿ ಸಂಘಟಿಸಿ ಪುಣೆಯನ್ನು ತಡೆದು ನಿಲ್ಲಿಸಿದರು. ಕೌಲ್‌ ಸಾಧನೆ 29ಕ್ಕೆ 4 ವಿಕೆಟ್‌. ಅವರು ಟಿ-ಟ್ವೆಂಟಿಯಲ್ಲಿ 4 ವಿಕೆಟ್‌ ಹಾರಿಸಿದ್ದು ಇದು ಎರಡನೇ ಸಲ. ಅಫ್ಘಾನಿಸ್ಥಾನದ ಸ್ಪಿನ್ನರ್‌ ರಶೀದ್‌ ಖಾನ್‌ ಎಂದಿನ ನಿಯಂತ್ರಣ ಸಾಧಿಸಲುವಲ್ಲಿ ಯಶಸ್ವಿಯಾದರು. ರಶೀದ್‌ ಒಂದೇ ವಿಕೆಟ್‌ ಕಿತ್ತರೂ 4 ಓವರ್‌ಗಳಲ್ಲಿ ನೀಡಿದ್ದು 18 ರನ್‌ ಮಾತ್ರ. ಮತ್ತೂಂದು ವಿಕೆಟ್‌ ಬಿಪುಲ್‌ ಶರ್ಮ ಪಾಲಾಯಿತು. ಇಬ್ಬರು ರನೌಟಾದರು.

ಪುಣೆ ಬ್ಯಾಟಿಂಗ್‌ ಸರದಿಯಲ್ಲಿ ಯಾರಿಂದಲೂ ದೊಡ್ಡ ಮೊತ್ತ ದಾಖಲಾಗಲಿಲ್ಲ. 39 ರನ್‌ ಹೊಡೆದ ಬೆನ್‌ ಸ್ಟೋಕ್ಸ್‌ ಅವರದೇ ಗರಿಷ್ಠ ಗಳಿಕೆ. 4ನೇ ಕ್ರಮಾಂಕದಲ್ಲಿ ಆಡಲಿಳಿದು ಮುನ್ನುಗ್ಗಿ ಬಾರಿಸತೊಡಗಿದ ಸ್ಟೋಕ್ಸ್‌ 25 ಎಸೆತ ಎದುರಿಸಿದರು; 3 ಸಿಕ್ಸರ್‌ ಹಾಗೂ ಒಂದು ಬೌಂಡರಿ ಚಚ್ಚಿದರು. ನಾಯಕ ಸ್ಟೀವನ್‌ ಸ್ಮಿತ್‌ 34 ರನ್‌ ಮಾಡಿದರೂ ಅವರ ಆಟ ಅತ್ಯಂತ ನೀರಸವಾಗಿತ್ತು. 39 ಎಸೆತಗಳ ಈ ಆಟದಲ್ಲಿ ಒಂದೂ ಬೌಂಡರಿ ಹೊಡೆತವಿರಲಿಲ್ಲ. ಸ್ಮಿತ್‌-ಸ್ಟೋಕ್ಸ್‌ 3ನೇ ವಿಕೆಟಿಗೆ 60 ರನ್‌ ಒಟ್ಟುಗೂಡಿಸಿದರು. ಇದು ಪುಣೆ ಸರದಿಯ ದೊಡ್ಡ ಜತೆಯಾಟ.

ಮಾಜಿ ನಾಯಕ ಧೋನಿ ಆಟ ರಂಜನೀಯವಾಗಿತ್ತು. 21 ಎಸೆತ ಎದುರಿಸಿದ ಅವರು 2 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 31 ರನ್‌ ಹೊಡೆದರು. ಅಜಿಂಕ್ಯ ರಹಾನೆ ಆಟ 22 ರನ್ನಿಗೆ ಕೊನೆಗೊಂಡಿತು.

ಸ್ಕೋರ್‌ ಪಟ್ಟಿ
ರೈಸಿಂಗ್‌ ಪುಣೆ ಸೂಪರ್‌ಜೈಂಟ್‌

ಅಜಿಂಕ್ಯ ರಹಾನೆ    ಸಿ ಯುವರಾಜ್‌ ಬಿ ಬಿಪುಲ್‌    22
ರಾಹುಲ್‌ ತ್ರಿಪಾಠಿ    ರನೌಟ್‌    1
ಸ್ಟೀವನ್‌ ಸ್ಮಿತ್‌    ಸಿ ಬಿಪುಲ್‌ ಬಿ ಕೌಲ್‌    34
ಬೆನ್‌ ಸ್ಟೋಕ್ಸ್‌    ಬಿ ರಶೀದ್‌    39
ಎಂ.ಎಸ್‌. ಧೋನಿ    ಸಿ ಓಜಾ ಬಿ ಕೌಲ್‌    31
ಡೇನಿಯಲ್‌ ಕ್ರಿಸ್ಟಿಯನ್‌    ಸಿ ರಶೀದ್‌ ಬಿ ಕೌಲ್‌    4
ಮನೋಜ್‌ ತಿವಾರಿ    ರನೌಟ್‌    9
ವಾಷಿಂಗ್ಟನ್‌ ಸುಂದರ್‌    ಔಟಾಗದೆ    1
ಶಾದೂìಲ್‌ ಠಾಕೂರ್‌    ಸಿ ವಾರ್ನರ್‌ ಬಿ ಕೌಲ್‌ 0
ಜೈದೇವ್‌ ಉನಾದ್ಕತ್‌    ಔಟಾಗದೆ    0
ಇತರ        7
ಒಟ್ಟು  (20 ಓವರ್‌ಗಳಲ್ಲಿ 8 ವಿಕೆಟಿಗೆ)    148
ವಿಕೆಟ್‌ ಪತನ: 1-6, 2-39, 3-99, 4-101, 5-105, 6-142, 7-147, 8-147.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        4-0-39-0
ಆಶಿಷ್‌ ನೆಹ್ರಾ        1.1-0-5-0
ಸಿದ್ಧಾರ್ಥ್ ಕೌಲ್‌        4-0-29-4
ರಶೀದ್‌ ಖಾನ್‌        4-0-18-1
ಮೊಸಸ್‌ ಹೆನ್ರಿಕ್ಸ್‌        2.5-0-15-0
ಬಿಪುಲ್‌ ಶರ್ಮ        4-0-39-1

ಸನ್‌ರೈಸರ್ ಹೈದರಾಬಾದ್‌
ಡೇವಿಡ್‌ ವಾರ್ನರ್‌    ಸಿ ಠಾಕೂರ್‌ ಬಿ ಸ್ಟೋಕ್ಸ್‌    40
ಶಿಖರ್‌ ಧವನ್‌    ಬಿ ಸೊÕàಕ್ಸ್‌    19
ಕೇನ್‌ ವಿಲಿಯಮ್ಸನ್‌    ಸಿ ಧೋನಿ ಬಿ ಸ್ಟೋಕ್ಸ್‌    4
ಯುವರಾಜ್‌ ಸಿಂಗ್‌    ಸಿ ತ್ರಿಪಾಠಿ ಬಿ ಉನಾದ್ಕತ್‌    47
ಮೊಸಸ್‌ ಹೆನ್ರಿಕ್ಸ್‌    ಬಿ ತಾಹಿರ್‌    4
ನಮನ್‌ ಓಜಾ    ಸಿ ಸ್ಟೋಕ್ಸ್‌ ಬಿ ಉನಾದ್ಕತ್‌    9
ಬಿಪುಲ್‌ ಶರ್ಮ    ಸಿ ಸ್ಟೋಕ್ಸ್‌ ಬಿ ಉನಾದ್ಕತ್‌    8
ರಶೀದ್‌ ಖಾನ್‌    ಸಿ ಮತ್ತು ಬಿ ಉನಾದ್ಕತ್‌    3
ಭುವನೇಶ್ವರ್‌ ಕುಮಾರ್‌    ಸಿ ತಿವಾರಿ ಬಿ ಉನಾದ್ಕತ್‌    0
ಸಿದ್ಧಾರ್ಥ್ ಕೌಲ್‌    ಔಟಾಗದೆ    0
ಆಶಿಷ್‌ ನೆಹ್ರಾ    ಔಟಾಗದೆ    0
ಇತರ        2
ಒಟ್ಟು  (20 ಓವರ್‌ಗಳಲ್ಲಿ 9 ವಿಕೆಟಿಗೆ)    136
ವಿಕೆಟ್‌ ಪತನ: 1-25, 2-29, 3-83, 4-96, 5-117, 6-127, 7-136, 8-136, 9-136.
ಬೌಲಿಂಗ್‌:
ಜೈದೇವ್‌ ಉನಾದ್ಕತ್‌        4-1-30-5
ವಾಷಿಂಗ್ಟನ್‌ ಸುಂದರ್‌        3-0-19-0
ಬೆನ್‌ ಸ್ಟೋಕ್ಸ್‌        4-0-30-3
ಇಮ್ರಾನ್‌ ತಾಹಿರ್‌        4-0-24-1
ಶಾದೂìಲ್‌ ಠಾಕೂರ್‌        2-0-12-0
ಡೇನಿಯಲ್‌ ಕ್ರಿಸ್ಟಿಯನ್‌        3-0-21-0

ಪಂದ್ಯಶ್ರೇಷ್ಠ: ಜೈದೇವ್‌ ಉನಾದ್ಕತ್‌

ಟಾಪ್ ನ್ಯೂಸ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

Denmark; ವಿಕ್ಟೋರಿಯಾಗೆ 2024ರ ಭುವನ ಸುಂದರಿ ಪಟ್ಟ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.