ಮುಂಬೈ ಇಂಡಿಯನ್ಸ್ ಐತಿಹಾಸಿಕ ಜಯಭೇರಿ
Team Udayavani, May 7, 2017, 12:30 PM IST
ಹೊಸದಿಲ್ಲಿ: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ತಂಡವು ಶನಿವಾರದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡವನ್ನು 146 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ.
ವೆಸ್ಟ್‌ಇಂಡೀಸ್‌ನ ಲೆಂಡ್ಲ್ ಸಿಮನ್ಸ್ ಮತ್ತು ಕೈರನ್ ಪೋಲಾರ್ಡ್ ಅವರ ಆಕರ್ಷಕ ಅರ್ಧಶತಕದಿಂದಾಗಿ ಮುಂಬೈ ತಂಡವು 3 ವಿಕೆಟಿಗೆ 212 ರನ್ನುಗಳ ಬೃಹತ್ ಮೊತ್ತ ಪೇರಿಸಿದರೆ ಮತ್ತೆ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಡೆಲ್ಲಿ ತಂಡವು 13.4 ಓವರ್‌ಗಳಲ್ಲಿ ಕೇವಲ 66 ರನ್ನಿಗೆ ಆಲೌಟಾಗಿ ಶರಣಾಯಿತು. ಈ ಗೆಲುವಿನಿಂದ ಮುಂಬೈ ತಾನಾಡಿದ 11 ಪಂದ್ಯಗಳಿಂದ 9ನೇ ಗೆಲುವು ಸಾಧಿಸಿತಲ್ಲದೇ 18 ಅಂಕ ಪಡೆದು ಪ್ಲೇ ಆಫ್ಗೆ ತೇರ್ಗಡೆಯಾಯಿತು.
ಗೆಲ್ಲಲು ಕಠಿನ ಗುರಿ ಪಡೆದ ಡೆಲ್ಲಿ ತಂಡವು ಮೊದಲ ಎಸೆತದಲ್ಲಿಯೇ ಸಂಜು ಸ್ಯಾಮ್ಸನ್ ಅವರನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಇದರಿಂದ ಒತ್ತಡಕ್ಕೆ ಒಳಗಾದ ಡೆಲ್ಲಿ ಆಬಳಿಕ ಕುಸಿಯುತ್ತಲೇ ಹೋಯಿತು. ಅಂತಿಮವಾಗಿ 13.4 ಓವರ್‌ಗಳಲ್ಲಿ 66 ರನ್ನಿಗೆ ಆಲೌಟಾಯಿತು. ಡೆಲ್ಲಿ ಈ ಮೊದಲು ಪಂಜಾಬ್ ವಿರುದ್ಧದ ಪಂದ್ಯದಲ್ಲಿ 67 ರನ್ನಿಗೆ ಆಲೌಟಾಗಿತ್ತು. ಒಂದೇ ಐಪಿಎಲ್‌ನಲ್ಲಿ ಎರಡು ಬಾರಿ ಅಲ್ಪ ಮೊತ್ತಕ್ಕೆ ಆಲೌಟಾದ ಡೆಲ್ಲಿ ತಂಡ ಪ್ಲೇ ಆಫ್ನಿಂದ ಬಹುತೇಕ ಹೊರಬಿದ್ದಿತು.
ಡೆಲ್ಲಿಯ ಮೂವರು ಮಾತ್ರ ಎರಡಂಕೆಯ ಮೊತ್ತ ತಲುಪಲು ಯಶಸ್ವಿಯಾಗಿದ್ದರು. ಕರುಣ್ ನಾಯರ್, ಆ್ಯಂಡರ್ಸನ್ ಮತ್ತು ಕಮಿನ್ಸ್ ಎರಡಂಕೆ ತಲುಪಿದ ಆಟಗಾರರಾಗಿದ್ದಾರೆ. ಮೂವರು ಶೂನ್ಯಕ್ಕೆ ಔಟಾಗಿದ್ದಾರೆ.
ನಿಖರ ದಾಳಿ ಸಂಘಟಿಸಿದ ಹರ್ಭಜನ್ ಮತ್ತು ಕಣ್ì ಶರ್ಮ ತಲಾ ಮೂರು ವಿಕೆಟ್ ಪಡೆದರು. ಕಣ್ì ಶರ್ಮ ತನ್ನ 3.4 ಓವರ್‌ಗಳ ದಾಳಿಯಲ್ಲಿ ಕೇವಲ 11 ರನ್ ನೀಡಿ 3 ವಿಕೆಟ್ ಹಾರಿಸಿದ್ದರು.
ಈ ಐಪಿಎಲ್‌ನ ಮೊದಲ ಪಂದ್ಯದಲ್ಲಿಯೇ ಅರ್ಧಶತಕ ದಾಖಲಿಸಿದ್ದ ಲೆಂಡ್ಲ್ ಸಿಮನ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈ ಮೊದಲು ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬೈ ತಂಡವು ಆರಂಭದಿಂದಲೇ ಭರ್ಜರಿ ಆಟ ಪ್ರದರ್ಶಿಸಿತು. ಜೋಸ್ ಬಟ್ಲರ್ ಬದಲಿಗೆ ತಂಡಕ್ಕೆ ಸೇರ್ಪಡೆಯಾದ ಲೆಡ್ಲ್ ಸಿಮನ್ಸ್ ಈ ಐಪಿಎಲ್‌ನ ಮೊದಲ ಪಂದ್ಯದಲ್ಲಿಯೇ ಅಮೋಘವಾಗಿ ಆಡಿದರು. ಡೆಲ್ಲಿ ದಾಳಿಯನ್ನು ದಂಡಿಸಿದ ಸಿಮನ್ಸ್ ಮತ್ತು ಪಾರ್ಥಿವ್ ಪಟೇಲ್ ಮೊದಲ ವಿಕೆಟಿಗೆ 8.4 ಓವರ್‌ಗಳಲ್ಲಿ 79 ರನ್ ಪೇರಿಸಿದರು. ಉತ್ತಮವಾಗಿ ಆಡುತ್ತಿದ್ದ ಪಾರ್ಥಿವ್ 25 ರನ್ ಗಳಿಸಿ ಸ್ಟಂಪ್ ಔಟ್ ಆದರು. ಆಬಳಿಕ ವಿಂಡೀಸ್‌ದ್ವಯರ ಮೆರೆದಾಟ. ಬಿರುಸಿನ ಆಟವಾಡಿದ ಸಿಮನ್ಸ್ ಮತ್ತು ಕೈರನ್ ಪೋಲಾರ್ಡ್ ತಂಡದ ರನ್‌ವೇಗವನ್ನು ಹೆಚ್ಚಿಸಲು ಪ್ರಯತ್ನಿಸಿದರು. ಸಿಮನ್ಸ್ 43 ಎಸೆತ ಎದುರಿಸಿ 5 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 66 ರನ್ ಗಳಿಸಿ ಔಟಾದರು. ರೋಹಿತ್ ಶರ್ಮ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಸ್ಕೋರ್ ಪಟ್ಟಿ
ಮುಂಬೈ ಇಂಡಿಯನ್ಸ್
ಲೆಂಡ್ಲ್ ಸಿಮನ್ಸ್ ಸಿ ಸಾಮ್ಯುಯೆಲ್ಸ್ ಬಿ ಆ್ಯಂಡರ್ಸನ್ 55
ಪಾರ್ಥಿವ್ ಪಟೇಲ್ ಸ್ಟಂಪ್ಡ್ ಪಂತ್ ಬಿ ಮಿಶ್ರಾ 25
ಕೈರನ್ ಪೋಲಾರ್ಡ್ ಔಟಾಗದೆ 63
ರೋಹಿತ್ ಶರ್ಮ ಸಿ ಮಿಶ್ರಾ ಬಿ ರಬಾಡ 10
ಹಾರ್ದಿಕ್ ಪಾಂಡ್ಯ ಔಟಾಗದೆ 29
ಇತರ: 19
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ) 212
ವಿಕೆಟ್ ಪತನ: 1-79, 2-116, 3-153
ಬೌಲಿಂಗ್: ಜಹೀರ್ ಖಾನ್ 4-0-29-0
ಕಾಗಿಸೊ ರಬಾಡ 4-0-33-1
ಪ್ಯಾಟ್ ಕಮಿನ್ಸ್ 4-0-59-0
ಅಮಿತ್ ಮಿಶ್ರಾ 4-0-37-1
ಮೊಹಮ್ಮದ್ ಶಮಿ 2-0-16-0
ಕೋರಿ ಆ್ಯಂಡರ್ಸನ್ 2-0-29-1
ಡೆಲ್ಲಿ ಡೇರ್‌ಡೆವಿಲ್ಸ್
ಸಂಜು ಸ್ಯಾಮ್ಸನ್ ಸಿ ಸಿಮನ್ಸ್ ಬಿ ಮೆಕ್ಲೆನಗನ್ 0
ಕರುಣ್ ನಾಯರ್ ಸಿ ರೋಹಿತ್ ಬಿ ಹರ್ಭಜನ್ 21
ಶ್ರೇಯಸ್ ಅಯ್ಯರ್ ಸಿ ಹರ್ಭಜನ್ ಬಿ ಮಾಲಿಂಗ 3
ರಿಷಬ್ ಪಂತ್ ಸಿ ಸಿಮನ್ಸ್ ಬಿ ಬುಮ್ರಾ 0
ಕೋರಿ ಆ್ಯಂಡರ್ಸನ್ ಸಿ ಕಣ್ì ಬಿ ಮಾಲಿಂಗ 10
ಎಂ. ಸಾಮ್ಯುಯೆಲ್ಸ್ ಸಿ ರೋಹಿತ್ ಬಿ ಕಣ್ì 1
ಪ್ಯಾಟ್ ಕಮಿನ್ಸ್ ಸಿ ಪಟೇಲ್ ಬಿ ಹರ್ಭಜನ್ 10
ಕಾಗಿಸೊ ರಬಾಡ ಸಿ ರೋಹಿತ್ ಬಿ ಕಣ್ì 0
ಅಮಿತ್ ಮಿಶ್ರಾ ಔಟಾಗದೆ 9
ಮೊಹಮ್ಮದ್ ಶಮಿ ಸಿ ಪೋಲಾರ್ಡ್ ಬಿ ಹರ್ಭಜನ್ 7
ಜಹೀರ್ ಖಾನ್ ಸಿ ರಾಣ ಬಿ ಕಣ್ì 2
ಇತರ: 3
ಒಟ್ಟು (13.4 ಓವರ್‌ಗಳಲ್ಲಿ ಆಲೌಟ್) 66
ವಿಕೆಟ್ ಪತನ: 1-0. 2-6, 3-20, 4-31, 5-35, 6-40, 7-46, 8-48, 957
ಬೌಲಿಂಗ್:ಮಿಚೆಲ್ ಮೆಕ್ಲೆನಗನ್ 2-0-18-1
ಲಸಿತ ಮಾಲಿಂಗ 2-0-5-2
ಜಸ್‌ಪ್ರೀತ್ ಬುಮ್ರಾ 1-0-6-1
ಹರ್ಭಜನ್ ಸಿಂಗ್ 4-0-22-3
ಕಣ್ì ಶರ್ಮ 3.4-0-11-3
ಹಾರ್ದಿಕ್ ಪಾಂಡ್ಯ 1-0-2-0
ಪಂದ್ಯಶ್ರೇಷ್ಠ: ಲೆಂಡ್ಲ್ ಸಿಮನ್ಸ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.