ಮುಸ್ಲಿಮರನ್ನು ಸಂದೇಹದಿಂದ ನೋಡದಿರಿ


Team Udayavani, May 7, 2017, 12:56 PM IST

dvg2.jpg

ದಾವಣಗೆರೆ: ಎಲ್ಲ ಧರ್ಮೀಯರನ್ನು ಒಳಗೊಳ್ಳಿಸಿಕೊಳ್ಳದೆ ಸಮಗ್ರ, ಸುಭದ್ರ ಭಾರತ ಕಟ್ಟುವುದು ಅಸಾಧ್ಯ ಎಂದು ಚಿತ್ರದುರ್ಗ ಮುರುಘಾರಾಜೇಂದ್ರ ಬೃಹನ್ಮಠದ ಡಾ| ಶ್ರೀ ಶಿವಮೂರ್ತಿ ಮುರುಘಾ ಶರಣರು ಪ್ರತಿಪಾದಿಸಿದರು. ಶನಿವಾರ ಹೈಸ್ಕೂಲ್‌ ಮೈದಾನದಲ್ಲಿ ಆರೆಸ್ಸೆಸ್‌ನ ಕರ್ನಾಟಕ ದಕ್ಷಿಣ ಪ್ರಾಂತ ಶಿಕ್ಷಾ ವರ್ಗ ಸಮಾರೋಪದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸುಭದ್ರ, ವೈಭವದ ದೇಶ ಕಟ್ಟಲು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಬೇಕಿದೆ. ಮುಸ್ಲಿಮರನ್ನು ಸಂದೇಹದಿಂದ ನೋಡುವುದನ್ನು ನಿಲ್ಲಿಸಬೇಕಿದೆ ಎಂದರು.  ಮುಸ್ಲಿಮರ ಅನೇಕ ಕಾರ್ಯಕ್ರಮಗಳಲ್ಲಿ ತಾವು ಪಾಲ್ಗೊಂಡಿದ್ದು, ಅವರು ಎಂದೂ ದೇಶ ವಿರೋಧಿಯಾಗಿ ನಡೆದುಕೊಂಡಿಲ್ಲ. ಭಾರತ ನಮ್ಮ ದೇಶ. ನಾವು ಇಲ್ಲೇ ಹುಟ್ಟಿದ್ದೇವೆ. 

ನಮ್ಮ ದೇಶಕ್ಕಾಗಿ ಬಾಳುತ್ತೇವೆ. ಯಾರೋ ಕೆಲವರು ಮಾಡುವ ದ್ರೋಹದ ಕೆಲಸಕ್ಕೆ ಎಲ್ಲರನ್ನೂ ಅನುಮಾನದಿಂದ ನೋಡಬೇಡಿ ಎಂಬುದಾಗಿ ಹೇಳುತ್ತಾರೆ. ಮೌಲ್ವಿಗಳು ದೇಶ ಭಕ್ತಿ ಸಾರುತ್ತಾರೆ ಎಂದು ಅವರು ತಿಳಿಸಿದರು. ನಮ್ಮ ದೇಶ ರಾಷ್ಟ್ರಧರ್ಮ ಸಂವಿಧಾನ ಆಗಿದೆ. ಅಂಬೇಡ್ಕರ್‌ ರಚಿಸಿದ ಸಂವಿಧಾನ ಸಮಾನತೆ ಸಾರುತ್ತದೆ.

ಎಲ್ಲ ಧರ್ಮೀಯರನ್ನು ಒಗ್ಗೂಡಿಸುತ್ತದೆ. ಜಾತಿ, ಧರ್ಮದ ಆಧಾರದ ವಿಭಜನೆ, ಅಸ್ಪೃಶ್ಯತೆ ತೊಡೆದುಹಾಕುವ ಶಕ್ತಿ ಅದಕ್ಕಿದೆ. ನಾವು ಅದನ್ನು ಒಪ್ಪಿಕೊಂಡು ಆಚರಣೆಗೆ ತರಬೇಕು. ಸಂವಿಧಾನ ಎಲ್ಲರ ಹಕ್ಕು, ಆಶಯ ಕಾಪಾಡುತ್ತದೆ ಎಂದು ಆವರು ಹೇಳಿದರು. 

ನಮ್ಮ ದೇಶ ಒಗ್ಗೂಡಿಕೊಂಡು ಹೋಗಬೇಕಾದರೆ ಬುದ್ಧನ ಮಾನವತಾವಾದ, ಬಸವಣ್ಣನವರ ಜಾತಿ ನಿರ್ಮೂಲನೆ ತತ್ವ, ಅಂಬೇಡ್ಕರರ ಸಮಬಾಳು, ಸಮಪಾಲು ತತ್ವ ಅನುಸರಿಸಬೇಕು. ಆಗ ಮಾತ್ರ ದೇಶದ ಐಕ್ಯತೆ ಸಾಧ್ಯ. ಸ್ವಾಮಿ ವಿವೇಕಾನಂದರು ಹೇಳಿದಂತೆ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು. 

ಮುಖ್ಯ ಭಾಷಣ ಮಾಡಿದ ಆರೆಸ್ಸೆಸ್‌ನ ಪ್ರಾಂತ ಕಾರ್ಯವಾಹ ತಿಪ್ಪೇಸ್ವಾಮಿ, 91 ವರ್ಷಗಳಿಂದ ಸಂಘ ಅನೇಕ ಕೆಲಸ ಮಾಡಿಕೊಂಡು ಬಂದಿದೆ. ಹಿಂದೂ ಸಮಾಜ ಎಂದಿಗೂ ಒಗ್ಗೂಡಲಾರದು ಎಂಬುದಾಗಿ ಹೇಳುತ್ತಿದ್ದವರಿಗೆ ಇಂದು ತಕ್ಕ ಉತ್ತರ ಕೊಟ್ಟಿದೆ. ಇಂದು ದೇಶದ 853 ಜಿಲ್ಲೆಗಳಲ್ಲಿ ಸಂಘ ತನ್ನ ಚಟುವಟಿಕೆ ಹೊಂದಿದೆ.

753 ಗ್ರಾಮಗಳಲ್ಲಿ ಅತ್ಯಂತ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಂಘವು 30,000 ಶಾಲೆಗಳನ್ನು ತೆರೆದಿದೆ. 1989ರಿಂದ ಈ ವರೆಗೆ 1.70 ಲಕ್ಷ ಸೇವಾ ಕಾರ್ಯ ಮಾಡಿದೆ. ಹಾಲಿ ಸಂಘ ಶಿಕ್ಷಣ, ಸೇವೆ ಮೂಲಕ ಸುಭದ್ರ ದೇಶ ಕಟ್ಟುವಲ್ಲಿ ತಲೀÉನವಾಗಿದೆ ಎಂದರು. ಸಂಘದ ರಾಷ್ಟ್ರೀಯತೆಯನ್ನು ಅನೇಕರು ಸಂಕುಚಿತ ಎಂದು ಕರೆಯುತ್ತಾರೆ.

ಆದರೆ, ಸಂಘ ಯಾವುದೇ ಧರ್ಮಾಧಾರಿತ ಕೆಲಸ ಮಾಡುವುದಿಲ್ಲ. ಹಿಂದೂ ಎಂಬುದು ಧರ್ಮ ಅಲ್ಲ. ಇದನ್ನು ಸ್ವತಃ ಸುಪೀÅಂ ಕೋರ್ಟ್‌ ಮೂರು ಬಾರಿ ಹೇಳಿದೆ. ಅದೊಂದು ಜೀವನ ಕ್ರಮವಾಗಿದೆ. ನಮ್ಮ ದೇಶದ ಜೀವನ ಪದ್ಧತಿಯಾಗಿದೆ. ಅದನ್ನು ನಾವು ಪಸರಿಸುತ್ತಿದ್ದೇವೆ ಎಂದು ಅವರು ಹೇಳಿದರು. 

ಇಂದು ದೇಶದ ಯುವಕರು ಸಾಕಷ್ಟು ಬದಲಾವಣೆಯಾಗಿದ್ದಾರೆ. ಸಮಾಜ, ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಇದೇ ಕಾರಣಕ್ಕೆ ಭ್ರಷ್ಟರಹಿತ ವ್ಯವಸ್ಥೆ ಪರ ನಿಂತಿದ್ದಾರೆ. ಇದಕ್ಕೆಲ್ಲಾ ಸಂಘವೇ ಕಾರಣವಾಗಿದೆ. ಸಂಘ ಜಾತಿ ಮೀರಿ ಕೆಲಸ ಮಾಡುತ್ತಿದೆ. ಅಸ್ಪೃಶ್ಯತೆ ನಿವಾರಣೆಗೂ ತನ್ನದೇ ಕೊಡುಗೆ ನೀಡುತ್ತಿದೆ.

ಇತೀ¤ಚೆಗೆ ಕರ್ನಾಟಕದ 700, ಆಂಧ್ರಪ್ರದೇಶದ 1500  ಹಳ್ಳಿಗಳಲ್ಲಿ ಸರ್ವೆಕ್ಷಣೆ ಮಾಡಿದೆ. ಅಲ್ಲಿ ಅಸ್ಪೃಶ್ಯತೆ ಇರುವುದು ಕಂಡುಬಂದಿದ್ದು, ಅದನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಅವರು ತಿಳಿಸಿದರು. ಮುಂದಿನ ವರ್ಷಗಳಲ್ಲಿ ಪ್ರಕೃತಿಯ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ನೀರು, ಪ್ರಕೃತಿ ಸಮಸ್ಯೆಗೆ ಸರ್ಕಾರಗಳು ಪರಿಹಾರ ಕಂಡುಕೊಳ್ಳುವುದು ಸಾಧ್ಯವಿಲ್ಲ. ನಾವೇ ಮಾಡಬೇಕು.

ಇದೇ ಕಾರಣಕ್ಕೆ ಮುಂದಿನ ವರ್ಷ ರಾಜ್ಯದಲ್ಲಿ 1 ಕೋಟಿ ಸಸಿ ನೆಟ್ಟು, ಮೂರು ವರ್ಷ ಪೋಷಣೆ ಮಾಡುವ ಗುರಿ ಹೊಂದಿದೆ ಎಂದು ಅವರು ಹೇಳಿದರು. ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ, ಸಂಘದ ಪ್ರಾಂತ ಸಹ ಸಂಚಾಲಕ ಡಾ| ವಾಮನ್‌ ಶೆಣೈ ಹನಿಯಡಕ, ಡಾ| ಸತೀಶ್‌ ರಾವ್‌ ವೇದಿಕೆಯಲ್ಲಿದ್ದರು. ಶಿಬಿರಾರ್ಥಿಗಳು ವಿವಿಧ ಕೀÅಡೆ, ಸಾಹಸ ಕಲೆ ಪ್ರದರ್ಶಿಸಿದರು.   

ಟಾಪ್ ನ್ಯೂಸ್

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ

Waqf Protest: People will overthrow the state government: Protest in Davangere

Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

Govt Hospital: ಡಿ ಗ್ರೂಪ್‌ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್‌ ಗುಂಡೂರಾವ್‌

dinesh-gundurao

ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್

MPR

Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

renukaacharya

BJP; ಹರಕುಬಾಯಿ ನಾಯಕರಿಂದಲೇ ಸೋಲು: ರೇಣುಕಾಚಾರ್ಯ ಆಕ್ರೋಶ

Arrest

Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.