ಆಚಾರ, ವಿಚಾರ, ಮಾತೃ ಸಂಸ್ಕೃತಿ ಪಲ್ಲಟ
Team Udayavani, May 7, 2017, 2:37 PM IST
ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮಣಿಪಾಲ ವಿ.ವಿ. ವತಿಯಿಂದ “ಪೊಳಲಿ ಶೀನಪ್ಪ ಹೆಗ್ಡೆ’ ಪ್ರಶಸ್ತಿಯನ್ನು ಸಾಹಿತಿ ಡಾ| ಇಂದಿರಾ ಹೆಗ್ಡೆ ಅವರಿಗೆ ಶನಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ| ಇಂದಿರಾ ಹೆಗ್ಡೆ, ತಳವರ್ಗದ ಜನರ ಬೆಂಬಲದಿಂದ ಸಂಶೋಧನಾತ್ಮಕ ಬರೆಹಗಳನ್ನು ಬರೆಯುವಂತಾಯಿತು. ಕರಾವಳಿ ಭಾಗದ ಆಚಾರ, ವಿಚಾರ, ಭೂತಾರಾಧನೆ ಪರಿಕಲ್ಪನೆ ಬದಲಾಗುತ್ತಿದೆ ಹಾಗೂ ಮಾತೃ ಸಂಸ್ಕೃತಿ ಪಲ್ಲಟವಾಗುತ್ತಿದೆ. ಸಾಲು ಸಾಲು ಉದ್ಯಮಗಳು ತಲೆಎತ್ತಿರುವ ಇಲ್ಲಿನ ಈಗಿನ ಪರಿಸರ ಬರವಣಿಗೆಗೆ ಹಿತ ಕೊಡುತ್ತಿಲ್ಲ ಎಂದರು.
ತುಳು ಸಂಶೋಧನೆಗೆ
ಒಲವು ಕಡಿಮೆ ಇದೆ
“ತುಳು ಸಂಶೋಧನೆ-ಇತ್ತೀಚಿನ ಒಲವುಗಳು’ ಇದರ ಕುರಿತು ಎನ್ನೆಸ್ಸೆಸ್ ರಾಜ್ಯ ಸಂಚಾಲಕ ಡಾ| ಗಣನಾಥ ಶೆಟ್ಟಿ ಎಕ್ಕಾರು ವಿಶೇಷ ಉಪನ್ಯಾಸಗೈದು, ತುಳು ಸಂಶೋಧನೆಯತ್ತ ವಿದ್ಯಾರ್ಥಿಗಳ ಒಲವು ಕಡಿಮೆ ಇದೆ. ಪಿಎಚ್‌ಡಿ ಮಾಡುವವರಲ್ಲಿ ಶೇ. 90ರಷ್ಟು ಮಂದಿ ಅದನ್ನು ಪ್ರಕಟಿಸಲು ಹಿಂಜರಿಯು ತ್ತಾರೆ. ಅವರು ಮಾಡಿದ ಸಂಶೋಧನೆ ಗಳ ಮೇಲೆ ಅವರಿಗೇ ನಂಬಿಕೆ ಇರುವು ದಿಲ್ಲ. ಸಂಶೋಧನೆ ಪದವಿ ಪಡೆಯಲು ಮಾತ್ರ ಮಾಡುವಂಥದ್ದಲ್ಲ. ವಿದೇಶಿಗರ ಸ್ಫೂರ್ತಿಯಿಂದ ದೇಶೀಯ ಸಂಶೋಧಕರು ಹುಟ್ಟಿಕೊಂಡಿದ್ದಾರೆ. ಭಾಷಾ ಕೀಳರಿಮೆ ಇನ್ನೂ ಹೋಗಿಲ್ಲ. ತುಳು ಜನಪದ ಸಂಗ್ರಹ, ಸಂಶೋಧನೆ ಹೆಚ್ಚಬೇಕಿದೆ. ಪ್ರಾದೇಶಿಕ ಭಾಷೆಗಳ ಸಂಶೋಧನೆಗೆ ಮಂಗಳೂರು ವಿ.ವಿ. ಹೆಚ್ಚಿನ ಒತ್ತು ಕೊಡಬೇಕಿದೆ ಎಂದರು.
ಉಡುಪಿ ಡಾ| ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಮಹಾಬಲೇಶ್ವರ ರಾವ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ| ವರದೇಶ ಹಿರೇಗಂಗೆ ಸ್ವಾಗತಿಸಿದರು. ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಅಭಿನಂದನ ಮಾತುಗಳನ್ನಾಡಿದರು. ಡಾ| ಜ್ಯೋತಿ ಚೇಳಾÂರು ಕಾರ್ಯಕ್ರಮ ನಿರೂಪಿಸಿದರು. ಡಾ| ಅಶೋಕ್ ಆಳ್ವ ಅವರು ವಂದಿಸಿದರು.
“ಮುಂದಿನ ವರ್ಷದಿಂದ ಜಂಟಿ ಪ್ರಶಸ್ತಿ’
ಪೊಳಲಿ ಶೀನಪ್ಪ ಹೆಗ್ಡೆ ಅವರ ಈ ಪ್ರಶಸ್ತಿ 10,000 ರೂ. ನಗದು ಪುರಸ್ಕಾರವನ್ನು ಸಮಾಜ ಸೇವೆಗೈಯುತ್ತಿರುವ ಚಾರಿಟೆಬಲ್ ಟ್ರಸ್ಟ್‌ಗೆ ನೀಡುವುದಾಗಿ ಘೋಷಿಸಿದ ಡಾ| ಇಂದಿರಾ ಹೆಗ್ಡೆ, ಮಣಿಪಾಲ ವಿ.ವಿ.ಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಜತೆಗೆ ಕೈ ಜೋಡಿಸಿ “ಪೊಳಲಿ ಶೀನಪ್ಪ ಹೆಗ್ಡೆ-ಎಸ್.ಆರ್. ಹೆಗ್ಡೆ’ ಜಂಟಿ ಹೆಸರಿನಲ್ಲಿ ಪ್ರಶಸ್ತಿಯನ್ನು ಮುಂದಿನ ವರ್ಷದಿಂದ ನೀಡಲಾಗುವುದು. ಈ ಪ್ರಶಸ್ತಿ ಅತ್ಯಂತ ಸೂಕ್ತ ವ್ಯಕ್ತಿಗಳಿಗೆ ಲಭಿಸುವಂತಾಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.