ಫ್ಯಾಸಿಸಂ ರಾಕ್ಷಸನಿಂದಿಲ್ಲ ಉಳಿಗಾಲ
Team Udayavani, May 7, 2017, 3:14 PM IST
ಧಾರವಾಡ: ಫ್ಯಾಸಿಸಂ ಎಂಬ ರಾಕ್ಷಸನನ್ನು ಬಗ್ಗು ಬಡಿಯದೇ ಹೋದರೆ ನಾವ್ಯಾರೂ ಉಳಿಯೋದಿಲ್ಲ ಎಂದು ಸಾಹಿತಿ ರಂಜಾನ್ ದರ್ಗಾ ಹೇಳಿದರು. ನಗರದ ಆಲೂರು ವೆಂಕಟರಾವ್ ಭವನದಲ್ಲಿ ಹಮ್ಮಿಕೊಂಡ ಮೇ ಸಾಹಿತ್ಯ ಮೇಳದಲ್ಲಿ 21ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ವರ್ಗ ಪ್ರಜ್ಞೆ ಬರದೇ ಹೋದರೆ ಫ್ಯಾಸಿಸಂ ವಿರುದ್ಧ ಹೋರಾಟ ಅಸಾಧ್ಯ ಎಂದರು. ಫ್ಯಾಸಿಸಂ ಹುಟ್ಟಿದ್ದು ಜರ್ಮನ್‌ನಿಂದ ಅಲ್ಲ. ಬದಲಾಗಿ ಇದು ಭಾರತ ದೇಶದಲ್ಲೇ ಹುಟ್ಟಿದೆ. ಭಾರತದ ಸಂಸ್ಕೃತಿ ಹುಟ್ಟಿದ್ದೇ ವರ್ಣಭೇದಗಳ ನೀತಿಗಳಿಂದ. ಇದು ಇತಿಹಾಸ ಪುಟಗಳಲ್ಲೂ ಸಾಕಷ್ಟು ಉಲ್ಲೇಖಗಳಿದ್ದು, ಇದನ್ನು ಅರಿಯುವ ಕೆಲಸ ಆಗಬೇಕಿದೆ ಎಂದರು
ಅಬ್ ಕೀ ಬಾರ್ ಮೋದಿ ಸರಕಾರ ಎಂಬ ವಾಕ್ಯ ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ. ಬಿಜೆಪಿ ಸರಕಾರ ಅಂದರೆ ಅದು ಪ್ರಜಾಪ್ರಭುತ್ವ ಅನ್ನಬಹುದು. ಆದರೆ ಈ ರೀತಿ ವ್ಯಕ್ತಿಗತವಾದ ಬಿಂಬಿಸುವಿಕೆ ನಿಜಕ್ಕೂ ಅಪಾಯಕಾರಿ. ಇನ್ನೂ ಆರ್‌ಎಸ್‌ಎಸ್ ಹಿಂದುತ್ವದಲ್ಲಿ ಹಿಂದೂ ಧರ್ಮಕ್ಕೆ ಸ್ಥಾನವಿಲ್ಲ. ಆದರೆ ಗಾಂಧಿ ಹಿಂದುತ್ವದಲ್ಲಿ ಎಲ್ಲ ಧರ್ಮಗಳಿಗೂ ಸ್ಥಾನವಿದೆ ಎಂಬುದನ್ನು ಮರೆಯಬಾರದು ಎಂದರು.
ಜನಿವಾರ ಇದ್ದವರಷ್ಟೇ ಜನರು. ಆ ವರ್ಗಸುಖವಾಗಿ ಇರಬೇಕೆಂಬ ಆಲೋಚನೆಗಳು ಇಡೀ ಸಮಾಜದ ಜಾತಿ ವರ್ಗಗಳಿಗೆ ಕಾರಣ. ಸದ್ಯ ಸ್ಥಿತಿಯಲ್ಲಿ ಫ್ಯಾಸಿಸಂನ ಹೊಡೆತಕ್ಕೆ ಯೋಜನೆ ಮಾಡುವ ಜನರೇ ಮೊದಲ ನೇರ ಗುರಿ ಆಗುತ್ತಿದ್ದು, ಯೋಜನೆ ಮಾಡುವ ತಲೆಗೆ ಗುಂಡು ಹೊಡೆಯಲಾಗುತ್ತಿದೆ. ಇವರ ಬಳಿಕ ಅಲ್ಪಸಂಖ್ಯಾತರು ಹಾಗೂ ದಲಿತರು ಗುರಿ ಆಗುತ್ತಿದ್ದಾರೆ.
ಈ ನಿಟ್ಟಿನಲ್ಲಿ ಸಮಾಜದ ಮಹಿಳೆಯರ, ದಲಿತರ, ದುಡಿಯುವ ವರ್ಗಗಳ, ನಿಜವಾದ ಗಾಂಧಿವಾದಿಗಳ ಸಂವೇದನೆಗಳನ್ನು ಅರಿತು ಮುನ್ನಡೆಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮುಜಾಫ³ರ್ ಅಸ್ಸಾದಿ ಮಾತನಾಡಿ, ಫ್ಯಾಸಿಸಂ ಅರಿಯಲು ನೆಲೆಗಟ್ಟು ಬೇಕೆ ಬೇಕು. ಅದು ಜಾತಿ, ಧಾರ್ಮಿಕ, ಸಮುದಾಯ, ಇತಿಹಾಸ ನೆಲೆಗಟ್ಟುಗಳೇ ಇರಬಹುದು. ಒಟ್ಟಿನಲ್ಲಿ ಈ ನೆಲೆಗಟ್ಟಿನಲ್ಲಿ ಫ್ಯಾಸಿಸಂ ಅರಿಯಬಹುದು.
ಈಗಂತೂ ದೇಶದ ಗಾಂಧಿ ಜಾಗತೀಕರಣ ಆಗಿದ್ದು, ಅವರ ವಿಚಾರ ವಿಶ್ವದೆಲ್ಲೆಡೆ ಪ್ರಚಾರಗೊಂಡಿದೆ. ಅದೇ ರೀತಿ ದೇಶದಲ್ಲಿಯೇ ಹಿಡಿದಿಟ್ಟುಕೊಂಡಿರುವ ಅಂಬೇಡ್ಕರನ್ನೂ ಜಾಗತೀಕರಣ ಮಾಡುವ ಅಗತ್ಯವಿದೆ ಎಂದರು. ಡಾ|ಡಿ.ಡೊಮೆನಿಕ್, ಬಸವರಾಜ ಹೂಗಾರ, ಡಾ|ಬಿ. ಎಲ್.ರಾಜು ಕೃತಿ ಪರಿಚಯಿಸಿದರು.ರಾಜೇಂದ್ರ ಚೆನ್ನಿ, ಎಂ.ಡಿ.ವಕ್ಕುಂದ, ಸುಜ್ಞಾನಮೂರ್ತಿ, ಎಚ್.ಎಸ್. ಅನುಪಮಾ, ಬಿ.ಗಂಗಾಧರ ಮೂರ್ತಿ ಇದ್ದರು.
27 ಪುಸ್ತಕಗಳ ಬಿಡುಗಡೆ: ಡಾ| ರಾಜೇಂದ್ರ ಚೆನ್ನಿ ಅವರ “ಅರಿವಿನ ನೆಲೆಗಳು’, ಪ್ರೊ| ಬಿ.ಗಂಗಾಧರ ಮೂರ್ತಿ ಅವರ “ಭಾರತೀಯ ಸಂಸ್ಕೃತಿಯ ಜಾತಿ ಲಕ್ಷಣ’, “ಹಿಂದೂತ್ವ ಮತ್ತು ದಲಿತರ’, “ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನೆ’, “ನಾಗಸಂದ್ರ ಭೂ ಅಕ್ರಮಣ ಚಳವಳಿ’, “ಭಾರತೀಯ ಭಾಷಾ ಸಾಹಿತ್ಯಗಳ ವರ್ಗಸೆಲೆ’,ಡಾ| ಎಚ್.ಎಸ್.ಅನುಪಮಾ ಅವರ “ದಲಿತ ಪ್ರಜ್ಞೆಯ ದನಿ ಜ್ಯೋತಿಬಾ ಪುಲೆ’,
ಡಾ| ಎಸ್.ಬಿ.ಜೋಗುರರ “ಅಸ್ಪೃಶ್ಯತೆಯೆಂಬ ವಿಷ ಕೂಸಿನ ಸುತ್ತ’, ಡಾ| ರಂಜಾನ್ ದರ್ಗಾರ “ಬಸವಣ್ಣ ಏಕೆ ಬೇಕು’, ಸದಾಶಿವ ಮರ್ಜಿ ಅವರ “ನಾನು ಹಿಂದೂ ಆಗಿ ಸಾಯಲಾರೆ’, ಸುರೇಶ ಭಟ್ ಬಾಕ್ರಬೈಲ್ ಅವರ “ಹಿಂದೂ ಧರ್ಮದ ತತ್ತÌ ಅಸ್ಮಿತೆ ಮತ್ತು ರಾಜಕಾರಣ’, ಮುಜಾಪರ್ ಅಸ್ಸಾದಿ ಅವರ “ಮೂಲಭೂವಾದದ ಕೆಲವು ಚಿಂತನೆಗಳು’, ಡಾ| ಎಚ್.ಎಸ್.ಅನುಪಮಾರ “ಬುದ್ಧ ಚರಿತೆ’ ಹಾಗೂ
“ಕರಿ ಕಣಗಿಲ’ (ಅನುವಾದಿತ ತೆಲುಗು ದಲಿತ ಕವಿತೆ), ಮಂಗಳೂರು ವಿಜಯ ಅವರ “ನಾನೇಕೆ ಹಿಂದೂ ಅಲ್ಲ’, ಡಾ|ಎಂ.ಡಿ.ಒಕ್ಕುಂದ ಅವರ “ಭಾರತ:ಧಾರ್ಮಿಕ ಹಿಂಸೆ ಹಾಗೂ ಸೌಹಾರ್ದತೆ’, ಸಬಿತಾ ಬನ್ನಾಡಿ ಅವರ “ಅವಳ ಕವಿತೆ’-ಮಹಿಳಾ ಕಾವ್ಯ ಸಂಗ್ರಹ 2015-16, ಬಿ.ಸುಜ್ಞಾನಮೂರ್ತಿ ಅವರ ಕತ್ತಲ ನಕ್ಷತ್ರ: ರೋಹಿತ್ ವೇಮುಲ ಕುರಿತ ಬರಹಗಳು’,”ಒಡೆದ ಕನ್ನಡಿ ಜಗತ್ಪಸಿದ್ಧ ವ್ಯಕ್ತಿಗಳ ನುಡಿಚಿತ್ರಗಳು’,
“ನಮಗೆ ಗೋಡೆಗಳಿಲ್ಲ-ಸೀವಾದ ಪರಿಚಯ’, “ಅಮೆರಿಕನಿಜಂ-ರಾಜಕೀಯ ತತ್ವಶಾಸ್ತ್ರ’, “ಆದಿವಾಸಿ ಹೋರಾಟಗಾರ ಕೊಮುರಂ ಭೀಮು’, “ಅಂಬೇಡ್ಕರ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ’, “ಅಂಬೇಡ್ಕರ ದೃಷ್ಟಿಯಲ್ಲಿ ಸಾಮಾಜಿಕ ಸಬಲೀಕರಣ’, ನಂಜುಂಡಾಚಾರಿ ಅವರ “ರೈತನ ಬಾರುಕೋಲು’, ಡಾ| ಎನ್.ಜಿ.ಮಹದೇವಪ್ಪ ಅವರ “ಲಿಂಗಾಯತರು ಹಿಂದೂಗಳಲ್ಲ’ ಸೇರಿದಂತೆ 27 ಪುಸ್ತಕಗಳು ಬಿಡುಗಡೆಗೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.