e-7 ಎಚ್ಚರಿಕೆ
Team Udayavani, May 8, 2017, 11:52 AM IST
ನೋಟುಗಳ ಅನಾಣ್ಯೀಕರಣದ ನಂತರ ನಗದು ರಹಿತ ವ್ಯವಹಾರದಲ್ಲಿ ಗಮನಾರ್ಹ ಸಂಚಲನ ಮೂಡಿದೆ. ಇ-ಬ್ಯಾಂಕಿಂಗ್ ಹೊಸ ಅರ್ಥ ವ್ಯವಸ್ಥೆಗೆ ನಾಂದಿ ಹಾಡಿದ್ದು ವಿತ್ತೀಯ ಕೊರತೆಯನ್ನು ತುಂಬಲು ಸಹಾಯಕವಾಗಿದೆ. ನಗದು ರಹಿತ ವಹಿವಾಟಿನಲ್ಲಿ Net/mobilebanking, Bheem-digital app, Paytm, UPI, Credit/Debitcards ಪ್ರಮುಖ ಪಾತ್ರ ವಹಿಸುತ್ತಿವೆ. ಕೇಂದ್ರ ಸರ್ಕಾರ ಹಾಗೂ ಬ್ಯಾಂಕುಗಳು ನಗದು ರಹಿತ ಆರ್ಥಿಕತೆಗೆ ಉತ್ತೇಜನ ನೀಡುತ್ತಿದ್ದು, ಮೊಬೈಲ… ಬ್ಯಾಂಕಿಂಗ್ ಅಥವಾ ಆನ್‌ಲೈನ್ ಬ್ಯಾಂಕಿಂಗ್ ಸೇವೆಗೆ ಪೋತ್ಸಾಹ ನೀಡುತ್ತಿದೆ. ಆದ್ದರಿಂದ ಆನ್‌ಲೈನ್ ಬ್ಯಾಂಕಿಂಗ್ ಬಳಸುವ ಸಂದರ್ಭದಲ್ಲಿ ಕೆಲವು ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಇಲ್ಲವಾದಲ್ಲಿ ಹಣ ಲೂಟಿಯಾಗುವ ಸಾಧ್ಯತೆಗಳು ಹೆಚ್ಚು, ಈ ನಿಟ್ಟಿನಲ್ಲಿ ಗಮನದಲ್ಲಿಡಬೇಕಾದ ಎಚ್ಚರಿಕಾ ಕ್ರಮಗಳು ಈ ಕೆಳಗಿನಂತಿವೆ.
1.ಸುರಕ್ಷಿತವಾಗಿ login ಆಗಿ:
ಯಾವಾಗಲೂ ವಿಶ್ವಾಸಾರ್ಹ ಕಂಪ್ಯೂಟರ… ನಿಂದ ಮಾತ್ರ login ಆಗಿ. ನಿಮ್ಮ ಬ್ಯಾಂಕ್ ವೆಬ್‌ಸೈಟ್ ಪ್ರವೆಶಿಸಲು ವೆಬ್ ವಿಳಾಸವನ್ನು (URL)ಸ್ವತಃ ಯಾವಾಗಲೂ ಟೈಪ… ಮಾಡಿ ಇದಕ್ಕಾಗಿ ಸರ್ಚ್… ಇಂಜಿನ್ ಬಳಸಬೇಡಿ. ಸಾರ್ವಜನಿಕ ಟರ್ಮಿನಲ್‌ಗಳು, ವೈರ್‌ಲೆಸ್ ನೆಟÌಕYìಳ ಮೂಲಕ (Wi&Fi))ಆನ್‌ಲೈನ್ ಸಂಪರ್ಕಗಳನ್ನು ನೀಡುವ ಸ್ಥಳಗಳನ್ನು ತಪ್ಪಿಸಿ, ಅಲ್ಲಿ ಗೌಪ್ಯತೆ ಮತ್ತು ಭದ್ರತೆ ಕಡಿಮೆ.
ನಿಮ್ಮ ಬ್ಯಾಂಕಿನ ಇಂಟರ್ನೆಟ್ ವಿಳಾಸವು ಹಸಿರು ಬಣ್ಣದ ‘https://’ನಿಂದ ಪ್ರಾರಂಭವಾಗಿದ್ದರೆ ಮಾತ್ರ UserID password ನಮೂದಿಸಿ. ಒಂದು ವೇಳೆ ‘http://’ಯಿಂದ ಪ್ರಾರಂಭವಾಗಿದ್ದರೆ login ಆಗಲೇ ಬೇಡಿ, ನಿಮ್ಮ ಪಾಸ್ವರ್ಡ್ ಅನ್ನು ಸೇವ್ ಮಾಡಲು ಬ್ರೌಸರ್‌ಗೆ ಅನುಮತಿ ನೀಡಬೇಡಿ. ಪಾಸ್ವರ್ಡ್ ಸೇವ್ ಮಾಡುವ ಬಗ್ಗೆ ಬರುವ pop&up ನಲ್ಲಿ ನೆವರ್ ಅಥವಾ ಕ್ಯಾನ್ಸಲ… ಎಂದು ಕ್ಲಿಕ್ ಮಾಡಿ. ತದನಂತರ ಲಾಗಿನ್ ಆದ ಬಳಿಕ ಸಂದೇಹಾಸ್ಪದ pop&up ಬಗ್ಗೆ ಎಚ್ಚರದಿಂದಿರಿ. ಆ ರೀತಿ ಕಂಡು ಬಂದಲ್ಲಿ ತಕ್ಷಣವೇ ಲಾಗ್ ಔಟ್ ಮಾಡಿ.
2. ನಿಮ್ಮ ಅಕೌಂಟ್‌ಗೆ OTP Enbale ಮಾಡಿಸಿಕೊಳ್ಳಿ :
ಕೆಲವು ಬ್ಯಾಂಕ್‌ಗಳಲ್ಲಿ login ಪಾಸ್ವರ್ಡ್‌ನ ಹೆಚ್ಚಿನ ಸುರಕ್ಷತೆಗೆ ಮೊಬೈಲ… ನಂಬರ್‌ಗೆ OTP ಕಳುಹಿಸುವ ಸೌಲಭ್ಯ ಇದೆ. ಇದನ್ನು ಕೇಳಿ ಪಡೆದುಕೊಳ್ಳಿ. ಇದಕ್ಕಾಗಿ ಮೊಬೈಲ… ನಂಬರ್ ಅನ್ನು ಬ್ಯಾಂಕ್‌ನಲ್ಲಿ ನಿಮ್ಮ ಖಾತೆಗೆ ರಿಜಿಸ್ಟರ್ ಮಾಡಬೇಕು ಅಷ್ಟೇ. ಇನ್ನೂ ಕ್ರೆಡಿಟ್ ಕಾರ್ಡ್ ಮತ್ತು ಆನ್‌ಲೈನ್ ವಹಿವಾಟನ್ನು OTP ಮೂಲಕವೇ ನಡೆಸಿ. OTPನಿರ್ಧಿಷ್ಟ ಅವಧಿಗೆ ಮಾತ್ರ ಮಾನ್ಯತೆ ಹೊಂದಿರುತ್ತವೆ.
3.ಬಲವಾದ ಪಾಸ್ ವರ್ಡ್ ರಚಿಸಿ
ಮೊಬೈಲ… ಬ್ಯಾಂಕಿಂಗ… ಪಾಸ್ವವರ್ಡ್ ರಚಿಸುವಾಗ ಸ್ಟ್ರಾಂಗ್ ಪಾಸ್‌ವರ್ಡ್ ರಚಿಸಿ. ಅಂದರೆ ನಿಮ್ಮ ಹೆಸರು ,ಹುಟ್ಟಿದ ದಿನಾಂಕ ಕುಟುಂಬಿಕರ ಹೆಸರುಗಳಲ್ಲಿ ಸಾಮಾನ್ಯ ಪದಗಳಲ್ಲಿ ಪಾಸ್ವರ್ಡ್ ರಚಿಸದಿರಿ. ಯಾರೊಂದಿಗೂ ಪಾಸ್ವರ್ಡ್ ಹಂಚಿಕೊಳ್ಳಬಾರದು ಎಂಬುದನ್ನು ನೆನಪಿನಲ್ಲಿಡಿ. ಆನ್‌ಲೈನ್ ಬ್ಯಾಂಕಿಂಗ್ ಅನ್ನು ಸ್ಥಾಪಿಸುವಾಗ, ನಿಮ್ಮ ಬ್ಯಾಂಕ್ ನಿಮ್ಮನ್ನು ಕೆಲವು ಸಾಮಾನ್ಯ ಸುರಕ್ಷತಾ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲು ಕೇಳಿದರೆ ನೀವು ನೀಡುವ ಉತ್ತರ ನಿಜವಾದ¨ªಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಪಾಸ್ವರ್ಡ್ ಅನ್ನು ಆಗಾಗ ಬದಲಾಯಿಸುವ ಮೂಲಕ ಗೌಪ್ಯತೆ ಕಾಪಾಡಿಕೊಳ್ಳಿ. ನಿಮ್ಮ ಪಾಸ್‌ವರ್ಡ್ , ಸಂಖ್ಯೆಗಳು ಮತ್ತು ವಿಶೇಷ ಅಕ್ಷರಗಳ ಮಿಶ್ರಣ ವಾಗಿರಲಿ. ನಿಮ್ಮ ಮೊಬೈಲ… ದುರ್ಬಳಕೆ ಆಗದಂತೆ screenlock ಮಾಡಿ, ಮೊಬೈಲ… ಬ್ಯಾಂಕಿಂಗ… ಬಳಸಿದ ನಂತರ logoutಮಾಡಿ.
4.ಅಸಂಬದ್ದ ಕರೆಗಳಿಂದ ದೂರವಿರಿ
ನಿಮಗೆ ಬರುವ ಇಮೇಲ… ಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮೂಲಕ ಹಾಗೂ
ಯಾರದೋ wi&Fi,Hot Spot ಮೂಲಕವು ಮೊಬೈಲ… ಬ್ಯಾಂಕಿಂಗ್ ಬಳಸಬೇಡಿ. ನಿಮ್ಮ ಮೊಬೈಲ… ಡಾಟಾ ಬಳಸುವುದು ಸೂಕ್ತ, ಅನಗತ್ಯ ಫೋನ್ ಕರೆಗಳಿಂದ ಕೇಳಿಬರುವ ನಿಮ್ಮ ಸ್ವವಿವರ, ವಿಳಾಸಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಬೇಡಿ.
ಫೇಕ್ ಸಂದೇಶಗಳಿಗೆ ಅಂದರೆ ನೀವು ಬಹುಮಾನ ಗೆದ್ದಿದ್ದೀರಿ ನಿಮ್ಮ ವಿಳಾಸ ಕಳುಹಿಸಿ ನಂತರ ನಿಮ್ಮ ಹಣ ಪಡೆಯಿರಿ ಎಂಬ ಈ ರೀತಿಯ ಸಂದೇಶಗಳಿಗೆ ಉತ್ತರಿಸಲೇಬೇಡಿ.
5.ನಿಮ್ಮ ಮೊಬೈಲ… ಹಾಗೂ ಸಿಸ್ಟಮ… ಅನ್ನು ಸುರಕ್ಷಿತ ಗೊಳಿಸಿ
ನಿಮ್ಮ ಸಿಸ್ಟಮ… ಮತ್ತು ಬ್ರೌಸರ್ ಅನ್ನು ಇತ್ತೀಚಿನ ಭದ್ರತೆ ಪ್ಯಾಚYಳೊಂದಿಗೆ ನವೀಕರಿಸಿ. ನೀವು ಭದ್ರತಾ ಸಾಫ್ಟ್ ವೇರ್‌ಗಳನ್ನು ಬಳಸುವುದು ಅತ್ಯಗತ್ಯ. ನೀವು ಪ್ರೊಫೈಲ… ಆನ್ ಮಾಡಿದ್ದರೆ ನಿಮ್ಮ ಸಿಸ್ಟಮ…ನಲ್ಲಿ ಆಂಟಿವೈರಸ್ ಸಾಫ್ಟ್ವೇರ್‌ಗಳು ಮೊಬೈಲಿನಲ್ಲಿ ಆಂಟಿವೈರಸ… ಅಪ್ಲಿಕೇಷನ್‌ಗಳು ಚಾಲನೆಯಲ್ಲಿವೆಯೇ ಎಂದು ಖಚಿತಪಡಿಸಿಕೊಳ್ಳಿ, ಈ ಆಂಟಿವೈರಸ್ ಅಪ್ಲಿಕೇಷನ್ ಇದ್ದರೆ ನಿಮ್ಮ ಖಾತೆಯ ವಿವರಗಳು ಸೋರಿಕೆಯಾಗುವುದನ್ನು ತಡೆಗಟ್ಟುತ್ತವೆ. ಆದ್ದರಿಂದ ನಿಮ್ಮ ಆಪೇರಟಿಂಗ್ ಸಿಸ್ಟಮ… ಮತ್ತು ಇತರ ಸಾಫ್ಟ್ವೇರ್‌ಗಳನ್ನು ನವೀಕೃತವಾಗಿ ಹಾಗೂ ವೈರಸ್‌ಗಳಿಂದ ಸುರಕ್ಷಿತವಾಗಿ ಇಟ್ಟುಕೊಳ್ಳಿ.
6 . ಅಧಿಸೂಚನೆ ಬರುವಂತೆ ಹೊಂದಿಸಿ
ನಿಮ್ಮ ಖಾತೆಯಲ್ಲಿ ಆಗುವ ಎÇÉಾ ಚಟುವಟಿಕೆಗಳ ಕುರಿತು ಪೋಸ್ಟ್ ಅಥವಾ ಇ.ಮೇಲ… ಅಧಿಸೂಚನೆಗಳು ಬರುವಂತೆ ಆಯ್ಕೆಗಳನ್ನು ಹೊಂದಿಸಿಕೊಳ್ಳಿ. ಇದರಿಂದ ನಿಮ್ಮ ಖಾತೆಯಲ್ಲಿ ಆಗುವ ಅನುಮಾನಾಸ್ಪದ ಚಟುವಟಿಕೆಯ ಕುರಿತು ತ್ವರಿತ ಸೂಚನೆ ಪಡೆಯಬಹುದು. ಹಾಗೇ ನಿಮ್ಮ ಖಾತೆಯನ್ನು ಆಗಾಗ ಞಟnಜಿಠಿಛಿr ಮಾಡಿ ವಾರಾಂತ್ಯ ಅಥವಾ ತಿಂಗಳ ಅಂತ್ಯದಲ್ಲಿ ಆಗಿರುವ ಎÇÉಾ ವ್ಯವಹಾರಗಳ ಕುರಿತು ಮೇಲ್ವಿಚಾರಣೆ ಮಾಡುವುದು ಉತ್ತಮ.
7. logout ಮಾಡಿ
ಇದು ಅತ್ಯಂತ ಮುಖ್ಯವಾದದ್ದು, ಎಷ್ಟೋ ಜನ ಮೇಲಿನ ಎಲ್ಲವನ್ನೂ ಪಾಲಿಸಿ ಕೆಲವೊಮ್ಮೆ logout ಮಾಡುವುದನ್ನೇ ಮರೆಯುತ್ತಾರೆ. ಇದರಿಂದ ಸುಲಭವಾಗಿ ಬೇರೆ ಇನ್ಯಾರೋ ನಿಮ್ಮ ಖಾತೆಯ ಹಣವನ್ನು ಲೂಟಿಮಾಡಬಹುದು. ನಿಮ್ಮ ವ್ಯವಹಾರ ಪೂರ್ಣಗೊಂಡ ನಂತರ ಬ್ರೌಸರ್ ಹಿಸ್ಟರಿ ಮತ್ತು cache ಅಳಿಸಿ ನಂತರ logout ಮಾಡುವುದು ಉತ್ತಮ. ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ವೀಕ್ಷಿಸಿದ ಪುಟಗಳನ್ನು ಬ್ರೌಸರ್‌ಗಳು ಉಳಿಸುತ್ತವೆ. ಆದ್ದರಿಂದನೀವು ಮತ್ತೆ ವೀಕ್ಷಿಸಲು ಬಯಸಿದರೆ ಅದನ್ನು ವೇಗವಾಗಿ ಪ್ರವೇಶಿಸಬಹುದು. ಬ್ಯಾಂಕಿಂಗ್ ಖಾತೆಗೆ ಭೇಟಿ ನಿಡಿದ ನಂತರ ನಿಮ್ಮ cache ಹಿಸ್ಟರಿಯನ್ನು ತೆರವುಗೊಳಿಸುವುದರ ಮೂಲಕ, ನಿವು ವಿಕ್ಷಿಸಿದ ಗೌಪ್ಯ ಮಾಹಿತಿಯನ್ನು ಬೆರೆ ಯಾರೂ ವಿಕ್ಷಿಸಲು ಸಾಧ್ಯವಿಲ್ಲ. ನಮ್ಮ ಹಣ ನಮ್ಮ ಹಕ್ಕು, ಇಷ್ಟೆÇÉಾ ಮಾಡಿಯೂ ನಿಮಗೆ ಮೋಸವಾದರೆ ಚಿಂತಸಬೇಡಿ. ಕೂಡಲೇ ಸೈಬರ್ ಕ್ರೈಂ ಪೋಲಿಸ್ ಮತ್ತು ಬ್ಯಾಂಕ್‌ಗೆ ದೂರು ನೀಡಿ.
– ಪ್ರವೀಣ ದಾನಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.