ಕುರುಕ್ಷೇತ್ರಕ್ಕೆ ದರ್ಶನ್ ಟೆಸ್ಟ್ ಶೂಟ್
Team Udayavani, May 8, 2017, 11:55 AM IST
ಕನ್ನಡದಲ್ಲಿ ಈಗ “ಕುರುಕ್ಷೇತ್ರ’ದ್ದೇ ಮಾತು! ಹೌದು, ಈಗಾಗಲೇ ದರ್ಶನ್ ಅಭಿನಯಿಸುತ್ತಿದ್ದಾರೆ ಎನ್ನಲಾಗಿರುವ “ಕುರುಕ್ಷೇತ್ರ’ ಚಿತ್ರದ ಸುದ್ದಿ ಎಲ್ಲೆಡೆ ಜೋರಾಗಿ ಹರಡಿದೆ. ಅದಕ್ಕೆ ಪೂರಕವಾಗಿ ದರ್ಶನ್ ಅವರ ಟ್ರಯಲ್ ಶೂಟ್ ಕೂಡ ನಡೆದಿರುವುದು ಮತ್ತೂಂದು ವಿಶೇಷ. ಇತ್ತೀಚೆಗೆ ನಿರ್ದೇಶಕ ನಾಗಣ್ಣ ಅವರು ಸದ್ದಿಲ್ಲದೆಯೇ ಹೈದರಾಬಾದ್‌ನ ರಾಮೋಜಿ ಫಿಲ್ಮ್ಸಿಟಿಯಲ್ಲಿ ದರ್ಶನ್ ಅವರಿಗೆ ಟೆಸ್ಟ್ ಶೂಟ್ ಮಾಡಿಸಿದ್ದಾರೆ.
ಆ ಟ್ರಯಲ್ ಶೂಟ್‌ನಲ್ಲಿ ದರ್ಶನ್ ಹೇಗೆಲ್ಲಾ ಕಾಣಬಹುದು ಎಂಬುದನ್ನು ನಿರ್ದೇಶಕರು ಕಂಡಿದ್ದಾರೆ. ಆದರೆ, ದರ್ಶನ್ ಅವರ ಗೆಟಪ್ ಹೇಗಿರುತ್ತೆ ಎಂಬುದಕ್ಕಿನ್ನೂ ಕಾಯಬೇಕು. ಅಂದಹಾಗೆ, ರಾಮೋಜಿ ಫಿಲ್ಮ್ ಸಿಟಿಯಲ್ಲಿ ಎರಡು ದಿನಗಳ ಕಾಲ ದರ್ಶನ್ ಅವರಿಗೆ ಟೆಸ್ಟ್ ಶೂಟ್ ನಡೆಸಲಾಗಿದೆ. ಅದೇ ರಾಮೋಜಿ ಫಿಲ್ಮ್ಸಿಟಿಯಲ್ಲೇ “ಬಾಹುಬಲಿ 2′ ಚಿತ್ರದ ಚಿತ್ರೀಕರಣ ಕೂಡ ನಡೆಸಲಾಗಿತ್ತು.
ಈಗ ಅಲ್ಲೇ ಕನ್ನಡದ ಬಹು ದೊಡ್ಡ ಬಜೆಟ್‌ನ ಮತ್ತು ದೊಡ್ಡ ತಾರಾಬಳಗ ಹೊಂದಲಿರುವ “ಕುರುಕ್ಷೇತ್ರ’ ಚಿತ್ರದ ಟೆಸ್ಟ್ ಶೂಟ್ ಕೂಡ ನಡೆದಿರುವುದು ವಿಶೇಷತೆಗಳಲ್ಲೊಂದು. ನಿರ್ಮಾಪಕ ಮುನಿರತ್ನ ಯಾವಾಗ, “ಕುರುಕ್ಷೇತ್ರ’ ಸಿನಿಮಾವನ್ನು ಅನೌನ್ಸ್ ಮಾಡಿದರೋ, ಅಂದಿನಿಂದಲೇ ಈ ಚಿತ್ರ ದೊಡ್ಡ ನಿರೀಕ್ಷೆ ಹುಟ್ಟಿಸಿದ್ದಂತೂ ಸುಳ್ಳಲ್ಲ. ಅದರಲ್ಲೂ ನಾಗಣ್ಣ ನಿರ್ದೇಶಕರು ಅನ್ನುವ ಸುದ್ದಿ ಹೊರಬೀಳುತ್ತಿದ್ದಂತೆಯೇ ಆ ನಿರೀಕ್ಷೆ ಇನ್ನಷ್ಟು ಹೆಚ್ಚಾಯ್ತು.
ದರ್ಶನ್ ಅವರು ದುರ್ಯೋಧನ ಪಾತ್ರ ಮಾಡುತ್ತಾರೆ ಎಂಬ ವಿಷಯ ಹೊರಬಂದಾಗ, ಎಲ್ಲರಲ್ಲೂ ಹೊಸ ಕ್ರೇಜ್ ಹುಟ್ಟಿಸಿದ್ದಂತೂ ಸುಳ್ಳಲ್ಲ. ಯಾಕೆಂದರೆ, ನಾಗಣ್ಣ ಹಾಗೂ ದರ್ಶನ್ ಕಾಂಬಿನೇಷನ್‌ನಲ್ಲಿ “ಸಂಗೊಳ್ಳಿ ರಾಯಣ್ಣ’ ದೊಡ್ಡ ಹಿಟ್ ಕೊಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ದಾಖಲೆ ಬರೆದಿತ್ತು. ಇಲ್ಲಿ ಯಾರೆಲ್ಲಾ ಇರುತ್ತಾರೆ ಎಂಬುದಕ್ಕೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ.
ನಿರ್ಮಾಪಕ ಮುನಿರತ್ನ ಅವರು ಈ ಹಿಂದೆ, ಸುದೀಪ್, ಉಪೇಂದ್ರ, ಪುನೀತ್, ಶಿವರಾಜ್‌ಕುಮಾರ್ ಹೀಗೆ ಕನ್ನಡದ ಬಿಗ್‌ಸ್ಟಾರ್ಗಳನ್ನೆಲ್ಲಾ ಸೇರಿಸಿ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ದರ್ಶನ್ ಅವರೊಬ್ಬರೇ ಈಗ ದುರ್ಯೋಧನ ಪಾತ್ರಕ್ಕೆ ಆಯ್ಕೆಯಾಗಿದ್ದಾರೆಂಬುದು ಬಿಟ್ಟರೆ, ಉಳಿದ ಸ್ಟಾರ್ ಯಾರ್ಯಾರು ಇರುತ್ತಾರೆ ಎಂಬ ಉತ್ತರಕ್ಕಿನ್ನೂ ಸಮಯವಿದೆ.
ಅದೇನೆ ಇರಲಿ, ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಎರಡು ದಿನಗಳ ಕಾಲ ದರ್ಶನ್ ಅವರ ಟೆಸ್ಟ್ ಶೂಟ್ ನಡೆಸುವ ಮೂಲಕ “ಕುರುಕ್ಷೇತ್ರ’ ಚಿತ್ರಕ್ಕೆ ಅಧಿಕೃತ ತಯಾರಿ ನಡೆಸುತ್ತಿದೆ ಚಿತ್ರತಂಡ. ಈಗ ಇನ್ನೊಂದು ಲೇಟೆಸ್ಟ್ ನ್ಯೂಸ್ ಅಂದರೆ, ಸೌಥ್ ಸ್ಟಾರ್ಗಳೂ “ಕುರುಕ್ಷೇತ್ರ’ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಹರಡುತ್ತಿದೆ. ಸದ್ಯಕ್ಕೆ ಯಾವುದೇ ವಿಷಯ ಬಿಟ್ಟುಕೊಡದ ನಿರ್ದೇಶಕರು, ಜೂನ್‌ನಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂದಷ್ಟೇ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.