ಜುಲೈ 1 ರಿಂದ GST ಯುಗಾರಂಭ; ಕೆಲವು ಸೇವೆ ತುಟ್ಟಿ: ಅರುಣ್ ಜೇಟ್ಲಿ
Team Udayavani, May 8, 2017, 12:16 PM IST
ಟೋಕಿಯೋ : ಸರಕು ಮತ್ತು ಸೇವಾ ತೆರಿಗೆ – ಜಿಎಸ್‌ಟಿ – ಇದೇ ವರ್ಷ ಜುಲೈ 1ರಿಂದ ಜಾರಿಗೆ ಬರಲಿದೆ. ಇದರಿಂದ ಸರಕುಗಳ ದರದಲ್ಲಿ ಯಾವುದೇ ಗಮನಾರ್ಹ ಹೆಚ್ಚಳ ಉಂಟಾಗುವುದಿಲ್ಲ; ಕೆಲವೊಂದು ಸೇವೆಗಳು ಸ್ವಲ್ಪಮಟ್ಟಿಗೆ ತುಟ್ಟಿಯಾಗಲಿವೆ ಎಂದು ಹಣಕಾಸು ಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಜಿಎಸ್‌ಟಿ ಭಾರತದ ಸ್ವಾತಂತ್ರ್ಯಾನಂತರದ ಅತೀ ದೊಡ್ಡ ತೆರಿಗೆ ಸುಧಾರಣಾ ಕ್ರಮವಾಗಿದೆ. ಜಿಎಸ್‌ಟಿ ಜಾರಿಗೆ ಬರುವ ಮೂಲಕ ಹತ್ತು ಹಲವು ಕೇಂದ್ರ ಮತ್ತು ರಾಜ್ಯ ಸುಂಕಗಳು ಕೊನೆಗೊಳ್ಳಲಿವೆ. ಅವುಗಳ ಬದಲಾಗಿ ಏಕ ರೂಪದ ರಾಷ್ಟ್ರೀಯ ಮಾರಾಟ ತೆರಿಗೆ ಜಾರಿಗೆ ಬರಲಿದೆ. ಅದರಿಂದ ದೇಶದಲ್ಲಿ ಏಕ ಮಾರುಕಟ್ಟೆ ಏರ್ಪಡಲಿದೆ ಮತ್ತು ದೇಶಾದ್ಯಂತ ಉದ್ಯಮ, ವ್ಯವಹಾರ, ವಹಿವಾಟು ಕೈಗೊಳ್ಳುವುದು ಸುಲಭವಾಗಲಿದೆ ಎಂದು ಜೇಟ್ಲಿ ಹೇಳಿದರು.
ಇಲ್ಲಿ ಸಿಐಐ – ಕೋಟಕ್ ಹೂಡಿಕೆದಾರರ ದುಂಡು ಮೇಜಿನ ಸಮಾವೇಶದಲ್ಲಿ ಮಾತನಾಡುತ್ತಿದ್ದ ಜೇತ್ಲಿ ಅವರು “ನನ್ನ ನೇತೃತ್ವ ಹಾಗೂ ಎಲ್ಲ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡ ಜಿಎಸ್‌ಟಿ ಮಂಡಳಿಯು ಇನ್ನು ಕೇಲವೇ ದಿನಗಳಲ್ಲಿ ವಿವಿಧ ಸರಕು ಹಾಗೂ ಸೇವೆಗಳ ತೆರಿಗೆ ದರಗಳನ್ನು ಅಂತಿಮಗೊಳಿಸಲಿದೆ; ಅಂತೆಯೇ ಇದೇ ವರ್ಷ ಜುಲೈ 1ರಿಂದ ದೇಶಾದ್ಯಂತ ಅತ್ಯಂತ ಸರಳೀಕೃತ ನೇರ ತೆರಿಗೆ ಯುಗವು ಆರಂಭಗೊಳ್ಳಲಿದೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.