ಕಮ್ಯುನಿಸ್ಟ್ ಆವರಣ-ಫ್ಯಾಸಿಸಂ ಚಹರೆ ಅನಾವರಣ
Team Udayavani, May 8, 2017, 4:21 PM IST
ಧಾರವಾಡ: ಫ್ಯಾಸಿಸಂನ ಕರಾಳ ಮುಖಗಳನ್ನು ಬಹಿರಂಗಗೊಳಿಸುವ ದಿಸೆಯಲ್ಲಿ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಎರಡು ದಿನಗಳ ಕಾಲ ನಡೆದ 4ನೇ ಮೇ ಸಾಹಿತ್ಯ ಸಮ್ಮೇಳನ ಯಶಸ್ವಿಗೊಂಡಿತು. ಯಾವುದೇ ಕಾರ್ಪೋರೇಟ್ ಗಳ ನೆರವಿಲ್ಲದೇ, ಪ್ರವೇಶ ಶುಲ್ಕ ವಿಧಿಸದೇ, ಸಮಾನ ಮನಸ್ಕರ ಸಹಾಯ-ಸಹಕಾರದಿಂದ ಸಾಹಿತ್ಯ ಮೇಳ ಆಯೋಜಿಸಿದ್ದು ವಿಶೇಷ.
ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ಕಡಿಮೆ ಇಲ್ಲದಂತೆ ಮೇಳ ಆಯೋಜಿತವಾಗಿತ್ತು. ಲಡಾಯಿ ಪ್ರಕಾಶನ, ಕವಿ ಪ್ರಕಾಶನ, ಚಿತ್ತಾರ ಕಲಾ ಬಳಗ ಆಯೋಜಿಸಿದ್ದ ಎರಡು ದಿನಗಳ ಸಮ್ಮೇಳನದಲ್ಲಿ ಫ್ಯಾಸಿಸಂ ಚಹರೆಗಳು ಅಪಾಯ-ಪ್ರತಿರೋಧ ವಿಷಯ ಕುರಿತು ವಿವಿಧ ಸಂಪನ್ಮೂಲ ವ್ಯಕ್ತಿಗಳು ತಮ್ಮ ವಾದ ಮಂಡಿಸಿದರು.
ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿರುವ ನರೇಂದ್ರ ಮೋದಿಯ ಜನವಿರೋಧಿಧಿ ಯೋಜನೆಗಳು, ಕಾರ್ಯ ವಿಧಾನವನ್ನು ಗುರಿಯಾಗಿಸಿಕೊಂಡು ಟೀಕಿಸಿದ ಬುದ್ಧಿಜೀವಿಗಳು ಮುಂದಿನ ಹೋರಾಟದ ಚಿಂತನ-ಮಂಥನ ನಡೆಸಿದರು. ಮತೀಯ ಶಕ್ತಿಯನ್ನು ದಮನಗೊಳಿಸದಿದ್ದರೆ ದೇಶ ಎದುರಿಸಬೇಕಾದ ಸಂಕಷ್ಟಗಳ ಕುರಿತು ಎಡಪಂಥೀಯ ಸಾಹಿತಿಗಳು ತಮ್ಮ ವಿಚಾರ ಪ್ರಸ್ತುತಪಡಿಸಿದರು.
2019ರ ಚುನಾವಣೆಯಲ್ಲಿ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವ ದಿಸೆಯಲ್ಲಿ ಜನಾಂದೋಲನ ರೂಪಿಸುವ ಹಾಗೂ ಈ ದಿಸೆಯಲ್ಲಿ ಸಮಾನ ಮನಸ್ಕ ಸಂಘಟನೆಗಳು ಭಿನ್ನಾಭಿಪ್ರಾಯ ಬದಿಗೊತ್ತಿ ಮಹಾಮೈತ್ರಿ ರಚಿಸಿಕೊಳ್ಳುವ ಬಗ್ಗೆ ಒತ್ತು ನೀಡಿದರು. ಮೋದಿ ಸುನಾಮಿ ಪುನರಾವರ್ತನೆಯಾಗದಂತೆ ತಡೆಯಲು ಜನಾಭಿಪ್ರಾಯ ಮೂಡಿಸಲು ಒಮ್ಮತ ವ್ಯಕ್ತಗೊಂಡಿತು.
ಮೋದಿ ಮುಖವಾಡ ತೊಟ್ಟಿರುವ ಆರ್‌ಎಸ್‌ಎಸ್ ಅನ್ನು ಬಗ್ಗು ಬಡಿಯಲು, ಕೋಮು ಸಿದ್ಧಾಂತವನ್ನು ಹೇರಲು ಹೊರಟಿರುವ ಮೋದಿ ಆರ್ಭಟವನ್ನು ತಡೆಯುವ ದಿಸೆಯಲ್ಲಿ ಬಿಜೆಪಿಯೇತರ ಪಕ್ಷಗಳ ಒಗ್ಗೂಡುವಿಕೆ ಬಗ್ಗೆ ಅಭಿಪ್ರಾಯ ಮಂಡನೆ ನಡೆಯಿತಲ್ಲದೇ, ಕೋಮುವಾದಿಗಳ ಢೋಂಗಿ ದೇಶಭಕ್ತಿಯನ್ನು ಖಂಡಿಸಲಾಯಿತು.
ಮಧ್ಯಮ ಮಾರ್ಗವನ್ನು ಕೆಲ ಎಡಪಂಥಿಯರು ಸಂಶಯದಿಂದ ನೋಡಿದರೆ, ಇನ್ನು ಕೆಲವರು ಮಧ್ಯಮ ಮಾರ್ಗವನ್ನು ನೇರವಾಗಿ ಜರಿದರು. ಎಡವೂ ಅಲ್ಲದ್ದು, ಬಲವೂ ಅಲ್ಲದ್ದು ಯಾವುದೂ ಅಲ್ಲ ಎಂದು ಹೇಳಿದರೆ, ಕೆಲವರು ಇದರ ಪ್ರಾಮಾಣಿಕತೆ ತಿಳಿಯುವುದು ಅವಶ್ಯಕ ಎಂದರು.
ಮಧ್ಯಮ ಮಾರ್ಗಿಗಳ ಜಾತ್ಯತೀತ ಮನೋಭಾವ, ವಿಚಾರಧಾರೆ ತಿಳಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಬೇಕೆಂದು ಕೆಲ ಸಾಹಿತಿಗಳು ಅಭಿಪ್ರಾಯಪಟ್ಟರು. ಎಡಪಂಥಿಯ ವಿಚಾರಧಾರೆಯಲ್ಲಿ ಮಾತ್ರ ಬುದ್ಧಿಜೀವಿಗಳಿದ್ದಾರೆ,
ಬಲಪಂಥ ವಿಚಾರಧಾರೆಯಲ್ಲಿ ಬುದ್ಧಿಜೀವಿಗಳೇ ಇಲ್ಲ ಎಂಬ ಹೇಳಿಕೆ, ಗೋ ಸಂರಕ್ಷಣೆ ನೆಪದಲ್ಲಿ ದಾಳಿ, ಹಲ್ಲೆ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ದನದ ಮಾಂಸಕ್ಕಿಂತ ಮನುಷ್ಯನ ಮಾಂಸ ಸಸ್ತಾ ಆಗಿದೆ ಎಂಬ ಹೇಳಿಕೆ ಚರ್ಚೆಗೆ ಇಂಬು ನೀಡಿದವು.
ಪ್ರೊ| ಅರವಿಂದ ಮಾಲಗತ್ತಿ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಮಾತನಾಡಿ, ಎಡಪಂಥೀಯರ ಚಿತ್ತ ಸೆಳೆದರು. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಕನ್ನಡ ಭಾಷೆಯನ್ನೇ ಅಸ್ತ್ರವಾಗಿಸಿಕೊಳ್ಳಬೇಕು. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ರಚನೆ ಮೂಲಕ ಕೇಂದ್ರ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕೆಂದು ಭಾಷಾ ತಜ್ಞ ಪ್ರೊ| ಜಿ.ಎನ್. ದೇವಿ ಉತ್ತಮ ಸಲಹೆ ನೀಡಿದರು.
ಫ್ಯಾಸಿಸ್ಟ್ ಶಕ್ತಿಗಳು ಬಸವೇಶ್ವರ ಜಯಂತಿಯನ್ನು ಕೇಸರೀಕರಣ ಮಾಡುವ ಹುನ್ನಾರ ನಡೆಸಿದ್ದನ್ನು, ಜನರ ದಿಕ್ಕು ತಪ್ಪಿಸುತ್ತಿರುವುದನ್ನು ಹೇಳುವ ಮೂಲಕ ಗಂಭೀರ ಚರ್ಚೆಗೆ ಕಾರಣರಾದರು. ಯುವಕರಿಗೆ ಆದ್ಯತೆ ನೀಡುವ ಉದ್ದೇಶದಿಂದ ಕ್ಯಾಂಪಸ್ ಬ್ಲೂಸ್ ಗೋಷ್ಠಿ ಆಯೋಜಿತವಾಗಿತ್ತು.
ಮೇಳದಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಹಲವು ವಿಷಯಗಳ ಚರ್ಚೆ ಸಂಘಟಿಸಲಾಗಿತ್ತು. ಮೇಳದ ದ್ವಿತೀಯ ದಿನ ರಕ್ತದಾನ ಶಿಬಿರ ಆಯೋಜಿಸಿದ್ದು ವಿಶೇಷವೆನಿಸಿತು. ಮೇಳದಲ್ಲಿ ಸಮಯ ಪರಿಪಾಲನೆ ಇರಲಿಲ್ಲ. ಸಮಯಕ್ಕೆ ಸರಿಯಾಗಿ ಗೋಷ್ಠಿಗಳನ್ನು ಆರಂಭಿಸಲಿಲ್ಲ. ಎಲ್ಲ ಗೋಷ್ಠಿಗಳಲ್ಲಿಯೂ ಸಂವಾದಕ್ಕೆ ಇನ್ನಷ್ಟು ಸಮಯ ನೀಡಬೇಕಿತ್ತೆಂಬುದು ಹಲವರ ಅಭಿಪ್ರಾಯವಾಗಿತ್ತು.
* ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.