ಈಡಿಯಟ್‌ ಅಂತ ಕರೆದ್ರೂ ನನಗೇನೂ ಬೇಜಾರಿಲ್ಲ


Team Udayavani, May 9, 2017, 3:45 AM IST

08-JOSH-9.jpg

ನೀನವತ್ತು “ಚರಿತ್ರಾ’ ಎಂದು ನಿನ್ನನ್ನು ಪರಿಚಯಿಸಿಕೊಳ್ಳುವಾಗ ನಿನ್ನ ಸ್ನಿಗ್ಧ ನಗು ನನ್ನನ್ನು ಸೆಳೆಯಿತು. ನಿಜ ಹೇಳಬೇಕೆಂದರೆ, ಮೊದಲ ನೋಟಕ್ಕಿಂತ ನಿನ್ನ ಮೊದಲ ನಗುವೇ ನನ್ನನ್ನು ಮೋಹಪರವಶನನ್ನಾಗಿಸಿತು. ಕಾರಣ, ನಾನು ಆಗ ನಿನ್ನ ಕಣ್ಣುಗಳನ್ನು ನೋಡಲೇ ಇಲ್ಲ. ಬಹುಷಃ ಕಣ್ಣುಗಳನ್ನು ನೋಡಿದ್ದರೆ ಅವತ್ತೇ ನನ್ನ ಮನವು ಉಯ್ನಾಲೆಯಾಗಿ ತೂಗುತ್ತಿತ್ತೇನೋ… ಗೊತ್ತಿಲ್ಲ. ನೆನಪಿದೆಯಾ, ಅಂದು ಆ ಮದುವೆ ಮನೆಯಲ್ಲಿ ನಮ್ಮ ಬಂಧುಗಳೆಲ್ಲ ಕೂಡಿ ಹರಟೆ ಹೊಡೆಯುವಾಗ ನಾನೂ ಒಂದು ಛಾನ್ಸ್‌ ತೊಗೊಂಡು ನಿನ್ನನ್ನೇ ನೋಡುತ್ತಾ ಹನಿಗವನವನ್ನು ಹೇಳಿದ್ದೆ, ನೀನು ಅದನ್ನೇ ಗಮನವಿಟ್ಟು ಕೇಳಿ ಚಪ್ಪಾಳೆ ತಟ್ಟಿ ಪ್ರಶಂಸಿಸಿದೆ. ಕವನ ಚೆನ್ನಾಗಿದೆ ಎಂಬ ಭಾವದಿಂದ ನನ್ನನ್ನೇ ದಿಟ್ಟಿಸಿ ನೋಡಿದೆ. ಅದೇ ಅಲ್ಲವೇ ನಮ್ಮ ಪ್ರಥಮ ನೋಟ? 

ನಮ್ಮ ಮೊದಲ ನೋಟದಲ್ಲಿ ಪ್ರೇಮ ಅಂಕುರಿಸಿತು. ನಂತರ ಮೊದಲ ಮಾತಿನಲ್ಲಿ ಚಿಗುರೊಡೆದಿದೆ. ಇನ್ನೂ ಸ್ವಲ್ಪ ಸಮಯ ಬೇಕು ಸಸಿಯಾಗಲು. ಅದಕ್ಕೇ ಇಂಥ ಪ್ರೇಮ ಪತ್ರಗಳನ್ನು ಬರೆದು ಕಳಿಸುವುದು. ತನ್ಮೂಲಕ ಮಧುರ ಕ್ಷಣಗಳ ನೆನಪಿಸುವಂಥಾ ಒರತೆಯ ನೀರುಣಿಸಿ ಸಸಿಯನ್ನು ಗಟ್ಟಿ ಮಾಡುತ್ತಿದ್ದೇನೆ. ಈ ಸಸಿಯು ಪ್ರೇಮವೃಕ್ಷವಾಗಿ ಬೆಳೆಯಲಿ, ಪ್ರೇಮಫ‌ಲಗಳನ್ನು ನೀಡಲಿ. ನಮ್ಮ ಪ್ರೇಮ ಫ‌ಲಿಸಿದ ಖುಷಿಗೆ ಯಾವುದೇ ಅಡೆತಡೆಗಳಿಲ್ಲದ ರಮ್ಯತಾಣಗಳಲ್ಲಿ ಚಂದ್ರನ ಬೆಳಕಿನಲ್ಲಿ ನಾವಿಬ್ಬರೇ ಬೆಳಗಾಗುವವರೆಗೂ ಮಾತಾಡಬೇಕೆನಿಸುತ್ತಿದೆ. ಇಬ್ಬರೂ ಕೈ ಕೈ ಜೋಡಿಸಿ ಬೆಳ್ಳಿತಟ್ಟೆಯಂತೆ ಕಾಣುವ ಚಂದ್ರನೊಳಗೆ ಹೃದಯದ ಚಿಹ್ನೆ ಬಿಡಿಸಿ ಅದರೊಳಗೆ ನಮ್ಮ ಹೆಸರನ್ನು ಬರೆಯೋಣ ಮತ್ತು ಅಕ್ಕಪಕ್ಕದಲ್ಲಿ ಎರಡು ಗಿಳಿಗಳನ್ನು ಬಿಡಿಸೋಣ. ಯಾಕೆ ಗೊತ್ತಾ? ಅವು ಬಹುಸುಂದರವಾಗಿ ಮಾತನಾಡುತ್ತವಂತೆ. ಅಂತೆಯೇ ನಮ್ಮ ಮಾತುಗಳು ಎಷ್ಟಿದ್ದರೂ ಮುಗಿಯದಿರಲಿ ಎಂಬಾಸೆ ನನ್ನದು. 

      ಇದೇನಿದು? ಯಾವುದೋ ಹಳೆಯ ಕಾಲದಲ್ಲಿ ಯಾರೋ ಬೆರೆಯುತ್ತಿದ್ದ ರೀತಿಯಲ್ಲೇ ನೀನೂ ಪ್ರೇಮಪತ್ರ ಬರೆಯುತ್ತಿದ್ದೀಯಲ್ಲಾ ಅಂದೆಯಾ? ಏನು ಮಾಡಲಿ ಚೆರ್ರಿ? ಪ್ರೇಮಪತ್ರದಲ್ಲೂ ಹೊಸತನ ಬೇಕೆ? ಪ್ರೀತಿ ಪ್ರೇಮದಲ್ಲೂ ಹೊಸತನ ಹಳೆತನವಿದೆಯೇ? ಅದೇನಿದ್ದರೂ ಹೃದಯದ ಭಾಷೆ. ಅದಕ್ಕೆ ಹಳತು- ಹೊಸತರ ಹಂಗಿಲ್ಲ. ಅಲಂಕಾರ ಛಂದಸ್ಸುಗಳ ಗೊಡೆವೆಯೇ ಇಲ್ಲ. ಆ ಹೃದಯದ ಭಾಷೆಯ ಮುಂದೆ ನಾವು ಬರೆಯುವ ಭಾಷೆಯು ಯಾವತ್ತೂ ಸ್ವಲ್ಪ ಕಡಿಮೆಯೇ… ನನ್ನನ್ನು ಈಡಿಯಟ್‌, ಮೂರ್ಖ ಅಂಥನಾದ್ರೂ ಕರಿ. ಬೇಸರವಿಲ್ಲ. 

ಎಸ್‌.ಆರ್‌.ಎನ್‌. ಮೂರ್ತಿ, ಕೈಗಾ

ಟಾಪ್ ನ್ಯೂಸ್

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

1-trr

CAG Report; ಕೇಂದ್ರ ಸರಕಾರ‌ದ ವಿತ್ತೀಯ ಕೊರತೆ ಶೇ.45ಕ್ಕೆ ಏರಿಕೆ!

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

ದ.ಕ.ದ ವೈಭವಿ, ಉಡುಪಿಯ ಧೀರಜ್‌ ಐತಾಳ್‌ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ

D.K. Shivakumar: ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ಬಗ್ಗೆ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-ewewew

Maharashtra; ವಿಧಾನಸಭೆಗೆ 78 ಶಾಸಕರು ಮೊಟ್ಟ ಮೊದಲ ಬಾರಿಗೆ ಪ್ರವೇಶ

GDP

GDP; ದೇಶದ ಆರ್ಥಿಕಾಭಿವೃದ್ಧಿ 2 ವರ್ಷದಲ್ಲೇ ಕನಿಷ್ಠ: ಶೇ.5.4 ಜಿಡಿಪಿ ದಾಖಲು

supreem

ದೇವಾಲಯಗಳ ಪ್ರಸಾದ ಗುಣಮಟ್ಟ ಪರಿಶೀಲನೆ ಅರ್ಜಿಗೆ ಸುಪ್ರೀಂ ನಕಾರ

Modi Interview

Opposition ;ಜನರ ದಾರಿ ತಪ್ಪಿಸುತ್ತಿರುವ ವಿಪಕ್ಷಗಳು: ಪ್ರಧಾನಿ ಮೋದಿ

1-samsat

Adani, Manipur ಚರ್ಚೆಗೆ ಪಟ್ಟು: ವಾರ ಪೂರ ಸಂಸತ್‌ ಕಲಾಪ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.