ಉಗ್ರರ ಮಟ್ಟ ಹಾಕದಿದ್ದರೆ ದಾಳಿ: ಪಾಕ್ಗೆ ಇರಾನ್
Team Udayavani, May 9, 2017, 3:45 AM IST
ಟೆಹರಾನ್: “ನಿಮ್ಮಲ್ಲಿರುವ ಉಗ್ರರನ್ನು ಮಟ್ಟ ಹಾಕಿ. ಇಲ್ಲದಿದ್ದರೆ ನಾವೇ ನಿಮ್ಮಲ್ಲಿಗೆ ಬಂದು ದಾಳಿ ಮಾಡುತ್ತೇವೆ’ ಹೀಗೆಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು ಇರಾನ್. ಕಳೆದ ತಿಂಗಳು ಇರಾನ್ನ 10 ಯೋಧರನ್ನು ಸುನ್ನಿ ಉಗ್ರ ಸಂಘಟನೆ ಜೈಶ್ ಅಲ್ ಅದಲ್ನ ಸದಸ್ಯರು ಹತ್ಯೆ ಮಾಡಿದ್ದರು. ಇದರಿಂದ ಕ್ರುದ್ಧಗೊಂಡಿರುವ ಇರಾನ್ ಸೇನಾಪಡೆಯ ಹಿರಿಯ ಸೇನಾಧಿಕಾರಿಯೊಬ್ಬರು ಈ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಮತ್ತು ಪಾಕಿಸ್ತಾನದ ಗಡಿಯಲ್ಲಿ ಮಾದಕ ದ್ರವ್ಯಗಳ ಸಾಗಣೆ ಸೇರಿ ಹಲವು ಕಿತಾಪತಿಗಳನ್ನು ಪಾಕ್ಮಾಡುತ್ತಿದೆ. ಪಾಕಿಸ್ತಾನದ ಅಧಿಕಾರಿಗಳು ತಮ್ಮ ಗಡಿಯಲ್ಲಿ ನಿಯಂ ತ್ರಣ ಸಾಧಿಸಲೇಬೇಕು. ಉಗ್ರ ದಾಳಿ ಮುಂದುವರಿದರೆ ಪಾಕಿಸ್ತಾನದಲ್ಲಿರುವ ಅವರ ತಾಣಗಳಿಗೆ ನುಗ್ಗಿ ದಾಳಿ ಮಾಡು ವ ಎಚ್ಚರಿಕೆಯನ್ನು ಸೇನಾಧಿಕಾರಿ ನೀಡಿದ್ದಾರೆ. ಕಳೆದ ವಾರ ಇಸ್ಲಾಮಾಬಾದ್ಗೆ ಭೇಟಿ ನೀಡಿದ್ದ ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವೇದ್ ಝರೀಫ್ ಗಡಿಯಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸುಧಿವಂತೆ ಮನವಿ ಮಾಡಿಕೊಂಡಿದ್ದರು. 2014ರಲ್ಲಿ ಸುನ್ನಿ ಉಗ್ರ ಸಂಘಟನೆ ಐವರನ್ನು ಅಪಹರಿಸಿ ದ್ದಾಗಲೂ ಕಾರ್ಯಾಚರಣೆಯ ಬೆದರಿಕೆ ಹಾಕಿತ್ತು ಇರಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.