ಸೋಮೇಶ್ವರ: ಸಿಡಿಲಿಗೆ ಮನೆ, 8 ತೆಂಗಿನಮರಗಳಿಗೆ ಹಾನಿ
Team Udayavani, May 9, 2017, 10:29 AM IST
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರವಿವಾರ ತಡರಾತ್ರಿ ಗುಡುಗು, ಸಿಡಿಲು, ಗಾಳಿ ಸಹಿತ ಉತ್ತಮ ವರ್ಷಧಾರೆಯಾಗಿದೆ. ಸುಳ್ಯ, ಸುಬ್ರಹ್ಮಣ್ಯ, ನಡುಗಲ್ಲು, ಗುತ್ತಿಗಾರು ಮುಂತಾದೆಡೆ ಉತ್ತಮ ಮಳೆಯಾಗಿದೆ. ಕೋಟೆಕಾರು ಪರಿಸರದಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಗಾಳಿ ಮಳೆಯಾಗಿದೆ.
ಉಳ್ಳಾಲ ಸೋಮೇಶ್ವರದ ಬಾಸ್ರಿತ್ತಾಯಬೈಲಿನಲ್ಲಿ ತೆಂಗಿನಮರಕ್ಕೆ ಬಡಿದ ಸಿಡಿಲಿನಿಂದ ಲಕ್ಷ್ಮಣ್ ಸೋಮೇಶ್ವರ ಅವರ ಮನೆಗೆ ಹಾನಿಯಾಗಿದೆ. ಆ ಸಂದರ್ಭ ಮನೆಯಲ್ಲಿ ಏಳು ಮಂದಿ ಮಲಗಿದ್ದರು. ಅವರಲ್ಲಿ ಐವರಿಗೆ ಮೈಧಿಯಲ್ಲಿ ವಿದ್ಯುತ್ ಸಂಚಾರದ ಅನುಭವವಾಗಿದ್ದು, ಶರತ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿದ್ಯುತ್ ಸಂಬಂಧಿ ವಸ್ತುಗಳು ಸಂಪೂರ್ಣ ಹಾನಿಗೀಡಾಗಿವೆ. ಅಕ್ಕಪಕ್ಕದ ಎಂಟಕ್ಕೂ ಹೆಚ್ಚು ತೆಂಗಿನಮರಗಳಿಗೆ ಹಾನಿಯಾಗಿದೆ.
ಕುಸಿದ ತಡೆಗೋಡೆ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಸಂಕೋಳಿಗೆ ಬಳಿ ಹೆದ್ದಾರಿಯಿಂದ ಹರಿದ ನೀರು ಸ್ವಾತಂತ್ರÂ ಹೋರಾಟಗಾರ ದಿ| ಕರುಣಾಕರ ಉಚ್ಚಿಲ ಅವರ ಮನೆಗೆ ನುಗ್ಗಿದ್ದರಿಂದ ಮನೆಯ ಆವರಣ ಗೋಡೆ ಸಂಪೂರ್ಣ ಕುಸಿದಿದೆ. ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಬಳಿಯ ಅನೇಕ ಮನೆಗಳ ಕಾಂಪೌಂಡ್ ಒಳಗೆ ನೀರು ನುಗ್ಗಿದ್ದು, ಹೆದ್ದಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.
ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾ.ಪಂ. ಸದಸ್ಯ ರವಿಶಂಕರ್ ಸೋಮೇಧಿಶ್ವರ, ಗ್ರಾ.ಪಂ. ಅಧ್ಯಕ್ಷ ರಾಜೇಶ್ ಉಚ್ಚಿಲ ಘಟನ ಸ್ಥಳಕ್ಕೆ ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ
Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್ ಆಕರ್ಷಣೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.