ವಿಟ್ಲ: ಅಡಿಕೆ, ಗೇರುಬೀಜ ಕಳ್ಳರಿಬ್ಬರ ಬಂಧನ
Team Udayavani, May 9, 2017, 11:53 AM IST
ವಿಟ್ಲ: ವಿಟ್ಲ ಆಸುಪಾಸಿನಲ್ಲಿ ಮೂರು ವರ್ಷಗಳಿಂದ ಅಡಿಕೆ, ಗೇರುಬೀಜ ಕಳ್ಳರನ್ನು ವಿಟ್ಲ ಸಮೀಪದ ಕಂಬಳಬೆಟ್ಟಿನಲ್ಲಿ ಸೋಮವಾರ ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ 6 ಕ್ವಿಂಟಾಲ್ ಅಡಿಕೆ, 3 ಕ್ವಿಂಟಾಲ್ ಗೇರುಬೀಜ, ಕಾರು, ಆಮ್ನಿ, ಎರಡು ಆಟೋ ರಿûಾಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಚಿಕ್ಕಮುಟ್ನೂರು ಗ್ರಾಮದ ತಾರಿಗುಡ್ಡೆ ನಿವಾಸಿ ಅನ್ವರ್ ಆಲಿ (36), ಸಾಲ್ಮರ ಮೌಂಟನ್ ವ್ಯೂ ಶಾಲಾ ಬಳಿ ಸಮೀಪದ ನಿವಾಸಿ ಮಹಮ್ಮದ್ ಇರ್ಫಾನ್ (19) ಬಂಧಿಸಲ್ಪಟ್ಟ ಕಳ್ಳರು.
ವಿಟ್ಲ ಠಾಣಾಧಿಕಾರಿ ನಾಗರಾಜ್ ನೇತೃತ್ವದ ತಂಡ ಕಂಬಳಬೆಟ್ಟು ಸಮೀಪ ವಾಹನ ತಪಾಸಣೆ ನಡೆಸುತ್ತಿದ್ದಾಗ ಅಡಿಕೆ ಹೇರಿಕೊಂಡಿದ್ದ ವಾಹನವು ದಾಖಲೆಗಳನ್ನು ಹೊಂದಿರಲಿಲ್ಲ. ವಾಹನದಲ್ಲಿ ಅಡಿಕೆಯನ್ನು ರೈತರಿಂದ ಪಡೆದುಕೊಂಡ ಬಗ್ಗೆ ದಾಖಲೆಯೂ ಇರಲಿಲ್ಲ. ಅನುಮಾನಾಸ್ಪ ದವಾಗಿದ್ದ ಆರೋಪಿಗಳನ್ನು ಮಾಲು ಸಹಿತ, ವಿಟ್ಲ ಠಾಣೆಗೆ ಕರೆತಂದು ವಿಚಾರಿಸಿ ದಾಗ ಈ ಕಳ್ಳರ ಅಸಲಿಯತ್ ಪ್ರಕಟವಾಯಿತು.
ಸಾಕುಪ್ರಾಣಿಗಳಿಗೆ ವಿಷ ಹಾಕಿದ್ದರು
ಎರಡು ತಿಂಗಳ ಅವಧಿಯಲ್ಲಿ ಕೇಪು, ಕೋಡಪದವು, ನೇರಳಕಟ್ಟೆ, ಸೂರ್ಯ ಮೊದಲಾದ ಕಡೆಗಳಲ್ಲಿ ಅಡಿಕೆ ಹಾಗೂ ಗೇರುಬೀಜ ಕಳ್ಳತನ ಪ್ರಕರಣ ದಾಖಲಾಗಿತ್ತು. 2015ರಲ್ಲಿ ಸೂರಿಕುಮೇರು, ಮಾಣಿ, ಬುಡೋಳಿಯಲ್ಲಿ ಸುಮಾರು 20 ಲಕ್ಷ ರೂ.ಮೌಲ್ಯದ ಅಡಿಕೆ ಕಳವುಗೈದಿದ್ದರು. 2016ರಲ್ಲಿ ಕುಡ್ತಮುಗೇರು, ವಿಟ್ಲಪಟ್ನೂರಿನ ಕೆಲವು ಭಾಗದಲ್ಲಿ ದಾಸ್ತಾನಿರಿಸಿದ್ದ ಸುಮಾರು 16 ಲಕ್ಷ ರೂ. ಮೌಲ್ಯದ ಅಡಿಕೆ ಕಳ್ಳತನ ಮಾಡಿದ ಆರೋಪ ಇವರ ಮೇಲಿದೆ. ಕಳ್ಳತನ ಮಾಡುವುದಕ್ಕೆ ಮುನ್ನ ಕೆಲವು ಮನೆಗಳ ಸಾಕು ಪ್ರಾಣಿಗಳಿಗೆ ವಿಷ ಹಾಕಿ, ಕೊಂದು ಕೃತ್ಯವೆಸಗುತ್ತಿದ್ದರು.
ಒಟ್ಟು ಮೊತ್ತ 12.50 ಲಕ್ಷ ರೂ.
ಕಳ್ಳರಿಂದ 6 ಕ್ವಿಂಟಾಲ್ ಅಡಿಕೆ, 3 ಕ್ವಿಂಟಾಲ್ ಗೇರುಬೀಜ ಹಾಗೂ ಕಳವು ಮಾಡಲು ಉಪಯೋಗಿಸಿದ 1 ಮಾರುತಿ ರಿಡ್ಜ್, 1 ಮಾರುತಿ ಆಮ್ನಿ, 2 ಆಟೋರಿûಾಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಒಟ್ಟು ಮೊತ್ತ ಸುಮಾರು 12.50 ಲಕ್ಷ ಎಂದು ಅಂದಾಜಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.