ಉಡುಪಿ ಶ್ರೀಕೃಷ್ಣ ಬ್ರಹ್ಮಕಲಶಾಭಿಷೇಕಕ್ಕೆ ಸಚಿವರ ದಂಡು
Team Udayavani, May 10, 2017, 11:23 AM IST
ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಸುತ್ತು ಪೌಳಿಯ ನವೀಕರಣ ಕಾರ್ಯ ಸಮರ್ಪಣ ಪೂರ್ವಕ ಅಷ್ಟೋತ್ತರ ಸಹಸ್ರ ರಜತ ಕಲಶ ಸಹಿತ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯದ ಸಚಿವರ ದಂಡೇ ಭಾಗವಹಿಸುತ್ತಿದೆ ಎಂದು ಪರ್ಯಾಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮಾಹಿತಿ ನೀಡಿದರು.
ಮಂಗಳವಾರ ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಜರಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಐದು ದಿನಗಳ ಕಾಲ ಜರಗುವ ಕಾರ್ಯಕ್ರಮಗಳಲ್ಲಿ ಕೇಂದ್ರ ಸಚಿವರಾದ ಉಮಾಭಾರತಿ, ಅನಂತ ಕುಮಾರ್, ಸದಾನಂದ ಗೌಡ, ಕಾಂಗ್ರೆಸ್ ಧುರೀಣರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ, ಸಂತೋಷ್ ಲಾಡ್, ಬಿಜೆಪಿಯ ಶಂಕರಮೂರ್ತಿ, ನಾಗಾಧಿಲ್ಯಾಂಡ್ ರಾಜ್ಯಪಾಲ ಪದ್ಮನಾಭ ಆಚಾರ್ಯ ಮತ್ತಿತರರು ಭಾಗವಹಿಸಲಿದ್ದಾರೆ.
ಮೇ 16: ಹೊರೆಕಾಣಿಕೆ
ಪೇಜಾವರ ಪಂಚಮ ಪರ್ಯಾಯದಂತೆ ಉತ್ತಮ ರೀತಿಯಲ್ಲಿ ಹೊರೆಕಾಣಿಕೆಯನ್ನು ಅರ್ಪಿಸಲು ನಿರ್ಧರಿಸಲಾಗಿದ್ದು, ಮೇ 16ರಂದು ಹೊರೆಕಾಣಿಕೆ ಮೆರವಣಿಗೆ ಜರಗಲಿದೆ. ಬ್ರಹ್ಮಕಲಶಗಳನ್ನು ಹೊತ್ತು ತರುವ ವಿಶೇಷ ಟ್ಯಾಬ್ಲೋ ರಚಿಸಲಾಗಿದೆ. ಅಂದು ಬೆಳಗ್ಗೆ ವಿಪ್ರ ಬಾಂಧವರಿಂದ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ವಿವಿಧ ಭಜನ ಮಂಡಳಿಗಳಿಂದ ಕುಳಿತು ಭಜನೆ ಜರಗಲಿದೆ.
ಸಂಜೆ ಜರಗುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಭಾಗವಹಿಸಲಿದ್ದಾರೆ ಎಂದು ಪರ್ಯಾಯ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದರು.
ಪಂಚ ದಿನಗಳ ಕಾಲ ಜರಗುವ ಕಾರ್ಯ
ಕ್ರಮದಲ್ಲಿ ಉತ್ಕೃಷ್ಟ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೇ 14ರಂದು ಯಕ್ಷಗಾನ, ಮೇ 15ರಂದು ಶೀಲಾ ಉಣ್ಣಿಕೃಷ್ಣನ್ ಅವರಿಂದ ಭರತನಾಟ್ಯ, ಮೇ 16ರಂದು ರಾಮಕೃಷ್ಣಮೂರ್ತಿ ಅವರಿಂದ ಕರ್ನಾಟಕ ಸಂಗೀತ, ಮೇ 17ರಂದು ಕೃಷ್ಣೇಂದ ವಾಡೆಕರ್ ಅವರಿಂದ ಹಿಂದೂಸ್ತಾನಿ ಹಾಗೂ ಮೇ 18ರಂದು ಮುಂಬಯಿಯ ಜಾಗೋ ಭಾರತ್ ತಂಡದವರಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ವಿವಿಧ ಧಾರ್ಮಿಕ ಮುಖಂಡರು, ಉದ್ಯಮಿಗಳು ವಿಶೇಷ ಸಲಹೆ ಸೂಚನೆಗಳನ್ನು ನೀಡಿದರು. ಶ್ರೀಮಠದ ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.