ಭಗವಂತನನ್ನು ತಿಳಿಯುವ ಏಕೈಕ ಮಾರ್ಗವೇ ವೇದ ಮಾರ್ಗ: ಮಂತ್ರಾಲಯ ಶ್ರೀ
Team Udayavani, May 10, 2017, 11:37 AM IST
ಕಾಪು: ಭಗವಂತನನ್ನು ತಿಳಿಯುವ ಏಕೈಕ ಮಾರ್ಗವೇ ವೇದ ಮಾರ್ಗ. ವೇದಗಳಿಗೆ ಮಿಗಿಲಾದುದು ಬೇರೆ ಯಾವುದೂ ಇಲ್ಲ. ಭಗವತ್ ತಣ್ತೀದ ಪ್ರತೀಕವಾದ ಪರಶುರಾಮ ಬೆಟ್ಟ ಹಾಗೂ ವೇದಾಭಿಮಾನಿಯಾದ ದುರ್ಗೆಯ ಕ್ಷೇತ್ರದ ಮಧ್ಯ ಭಾಗದಲ್ಲಿ ವೇದಗಳ ಪ್ರತಿಪಾದಕರಾದ ಮಧ್ವರ ವಿಗ್ರಹ ಪ್ರತಿಷ್ಠಾಪನೆ ನಡೆದಿರುವುದು ಬಲು ಅರ್ಥಪೂರ್ಣ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರತೀರ್ಥ ಶ್ರೀಪಾದರು ಹೇಳಿದರು.
ಮೇ 8ರಂದು ಕುಂಜಾರುಗಿರಿಯಲ್ಲಿ ಆಚಾರ್ಯ ಮಧ್ವರ ಏಕಶಿಲಾ ಪ್ರತಿಮೆ ಪ್ರತಿಷ್ಠಾಪನ ವಿಧಿಯಲ್ಲಿ ಭಾಗವಹಿಸಿ, ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಆಚಾರ್ಯರ ಸ್ಥಾನ ವಿಶ್ವಮಟ್ಟದ್ದಾಗಿದ್ದು, ಅವರ ವಿಚಾರಧಾರೆಗಳು ಜಗತ್ತಿಗೆ ಮಾರ್ಗದರ್ಶಕವಾಗಿವೆ ಎಂದರು.
ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಕೇಶವನಿತೀರ್ಥ ಶ್ರೀಪಾದರು, ಹುಣಸೋಗೆ ಮಧ್ವ ಮಠದ ಶ್ರೀ ವಿಶ್ವಾನಂದತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಉಪಸ್ಥಿತರಿದ್ದರು. ಸಭೆಯಲ್ಲಿ ಹಲವು ಮಂದಿ ಗಣ್ಯರನ್ನು ಸಮ್ಮಾನಿಸಲಾಯಿತು. ವೆಂಕಟೇಶ ಆಚಾರ್ಯ ಕೊರಳಹಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಮಧ್ವರ ಹೆಸರಿನ ಅಂಚೆ ಚೀಟಿ ರೈಲು ಘೋಷಣೆಯಾಗಲಿ: ಕಲ್ಕೂರ
ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಮಧ್ವರು ಬದರಿಕಾಶ್ರಮದ ಪ್ರವೇಶ ಮಾಡಿ 700 ವರ್ಷಗಳ ನೆನಪಿಗಾಗಿ ಮಧ್ವರ ಹೆಸರು ವಿಶ್ವಮಾನ್ಯ ಮಾಡುವಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯಲಿ. ರಾಜಧಾನಿ ಎಕ್ಸ್‌ಪ್ರೆಸ್‌ಗೆ ಅಥವಾ ದಿಲ್ಲಿಯಿಂದ ಕರಾವಳಿಗೆ ಬರುವ ಯಾವುದೇ ರೈಲಿಗೆ ಮಧ್ವರ ಹೆಸರು ಇಡಬೇಕು. ಅವರ ಅಂಚೆ ಚೀಟಿ ಬಿಡುಗಡೆಗೂ ಪ್ರಯತ್ನ ನಡೆಯುವಂತಾಗಲಿ ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.