ನೀರುಣಿಸುತ್ತಿದ್ದ ಕಾಲುವೆ ಕಾಡುತ್ತಿದೆ


Team Udayavani, May 10, 2017, 11:38 AM IST

rajakaluve.jpg

ಒಂದು ಕಾಲಕ್ಕೆ ಬೆಂಗಳೂರಿನಲ್ಲಿ ಸ್ವತ್ಛ ಶುಭ್ರವಾಗಿ ಹರಿಯುತ್ತಿದ್ದ ವೃಷಭಾವತಿ ನದಿ ಈಗ ತನ್ನ ಸ್ವರೂಪವನ್ನೇ ಕಳೆದುಕೊಂಡು ಮಲಿನಗೊಂಡಿದೆ. ಸದ್ಯ, ವೃಷಭಾವತಿ ಕಣಿವೆ ಹಳೇ ಬೆಂಗಳೂರಿನ ಕರ್ಮವನ್ನೆಲ್ಲ ಹೊತ್ತು ಸಾಗುತ್ತಿದೆ. ಹಿಂದೆ ನಗರದ ಜನರಿಗೆ ಕುಡಿಯುವ ನೀರು ಒದಗಿಸುತ್ತಿದ್ದ ವೃಷಭಾವತಿ ಕಣಿವೆ ಈಗ ಮಳೆಗಾಲದಲ್ಲಿ ತನ್ನ ಪಕ್ಕದಲ್ಲಿ ನೆಲೆಸಿರುವ ನಾಗರಿಕರ ನೆಮ್ಮದಿ ಕೆಡಿಸುತ್ತಾ ಸಾಗಿದೆ. ಅಷ್ಟಕ್ಕೂ ಸಮಸ್ಯೆ ಕಣಿವೆಯದ್ದಲ್ಲ, ಸೂಕ್ತ ಕ್ರಮ ಕೈಗೊಳ್ಳದ ಸಂಬಂಧಿಸಿದ ಆಡಳಿತದ್ದು. 

ಬೆಂಗಳೂರು: ನಗರದಲ್ಲಿ ಈ ಹಿಂದೆ ಹರಿಯುತ್ತಿದ್ದ ವೃಷಭಾವತಿ ನದಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಹಲವು ದಶಕಗಳೇ ಕಳೆದಿದ್ದು, ಸದ್ಯ ಕಣಿವೆ ಸ್ವರೂಪವನ್ನೂ ಉಳಿಸಿಕೊಳ್ಳಲಾಗದ ಸ್ಥಿತಿಯಲ್ಲಿದೆ. ರಾಜಧಾನಿಯ ಕೇಂದ್ರ ಭಾಗಗಳ ಮೂಲಕ ಹಾದು ಹೋಗಿರುವ ವೃಷಭಾವತಿ ಕಣಿವೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಣಿವೆಗೆ ವೈಜ್ಞಾನಿಕವಾಗಿ ರಾಜಕಾಲುವೆಯ ರೂಪ ನೀಡಲು ಬಿಬಿಎಂಪಿಗೆ ಸಾಧ್ಯವಾಗಿಲ್ಲ. ಇದರಿಂದಾಗಿ ಕಾಲುವೆ ಬಹುತೇಕ ಕಡೆ ಒತ್ತುವರಿಯಾಗಿದ್ದು ವಿಸ್ತೀರ್ಣ  ಏಕಪ್ರಕಾರವಾಗಿಲ್ಲ.  

ಹಿಂದೆ ನಗರದ ಜನತೆಗೆ ಕುಡಿಯುವ ನೀರು ಒದಗಿಸುತ್ತಿದ್ದ ವೃಷಭಾವತಿ ಇಂದು ಕಲುಷಿತ ನೀರಿನಿಂದ ಕೂಡಿದೆ. ಮಳೆಗಾಲದಲ್ಲಿ ಅದೇ ಕಣಿವೆಯಿಂದಾಗಿ ಹಲವು ಪ್ರದೇಶಗಳ ಜನರು ತೊಂದರೆ ಅನುಭವಿಸುತ್ತಿರುವುದು ಇವತ್ತಿನ ವಾಸ್ತವ. ವೃಷಭಾವತಿಯು ನಗರದ ಪ್ರಮುಖ ಹಾಗೂ ಹಳೆಯ ಬೆಂಗಳೂರು ಪ್ರದೇಶಗಳ ಮೂಲಕ ಹರಿಯುತ್ತಿರುವುದರಿಂದ ಕಾಲುವೆಯ ಮೇಲಿನ ಒತ್ತಡ ಹೆಚ್ಚಿದೆ. 

ಪ್ಯಾಲೇಸ್‌ ಗುಟ್ಟಹಳ್ಳಿ, ಮಲ್ಲೇಶ್ವರ, ಕೆಂಪೇಗೌಡ ನಗರ, ರಾಜಾಜಿನಗರ, ಬಾಪೂಜಿ ನಗರ, ನಾಯಂಡಹಳ್ಳಿ ಸೇರಿದಂತೆ ಜನಸಾಂದ್ರತೆ ತೀವ್ರವಾಗಿರುವ ಹಳೆ ಬೆಂಗಳೂರು ಪ್ರದೇಶಗಳಲ್ಲಿ ಹಾದು ಹೋಗಿರುವ ಕಣಿವೆಯು ಕೆಲವೆಡೆ ಮೈಸೂರು ರಸ್ತೆ ಹೆದ್ದಾರಿಗೆ ಹೊಂದಿಕೊಂಡಂತೆ ಹರಿಯುತ್ತದೆ. ಹೆಚ್ಚಿನ ಜನಸಂದಣಿ ಪ್ರದೇಶಗಳಿಂದ ನಿತ್ಯ ನೂರಾರು ಎಂಎಲ್‌ಡಿ ತ್ಯಾಜ್ಯ ನೀರು ನೇರವಾಗಿ ಕಾಲುವೆಗೆ ಸೇರುತ್ತಿದೆ. ಕೈಗಾರಿಕೆಗಳ ರಾಸಾಯನಿಕಯುಕ್ತ ನೀರು ಕೂಡ ಕಾಲುವೆ ಸೇರುತ್ತಿರುವುದರಿಂದ ಮಾಲಿನ್ಯ ಪ್ರಮಾಣ ತೀವ್ರವಾಗಿದೆ. 

ನಗರದಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ನೀರಿನ ಪೈಕಿ ಶೇ.40ರಷ್ಟು ಪ್ರಮಾಣದ ನೀರು ವೃಷಭಾವತಿ ಕಣಿವೆಯಲ್ಲಿ ಹರಿಯುತ್ತಿದೆ. ಇಷ್ಟಾದರೂ ಪಾಲಿಕೆಯ ಅಧಿಕಾರಿಗಳು ಕಣಿವೆಯ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ. ನಗರದ ವಸತಿ ಪ್ರದೇಶ ಹೊರತುಪಡಿಸಿದರೆ ಬಹುತೇಕ ಕಡೆ ಕಣಿವೆ ಕಚ್ಚಾ ಸ್ವರೂಪದಲ್ಲೇ ಇದೆ. ಜತೆಗೆ ತಡೆಗೋಡೆ, ತಂತಿಬೇಲಿಯಂಥ ಸುರಕ್ಷತಾ ಕ್ರಮಗಳಿಗೆ ಬಿಬಿಎಂಪಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಿತ್ಯ ನೂರಾರು ಟನ್‌ ತ್ಯಾಜ್ಯ ಕಾಲುವೆ ಸೇರುತ್ತಿದೆ.

ಮುಖ್ಯಮಂತ್ರಿ  ಸೂಚನೆಗೂ ಜಗ್ಗದ ಪಾಲಿಕೆ
ಮೈಸೂರು ರಸ್ತೆ ಕವಿಕಾ ಕಾರ್ಖಾನೆ ಬಳಿ ಹಾದು ಹೋಗಿರುವ ನಾಲೆಯಲ್ಲಿ ಈ ಹಿಂದೆ 362 ಕ್ಯುಮೆಕ್ಸ್‌ (ಕ್ಯುಮೆಕ್ಸ್‌ ಎಂದರೆ ಪ್ರತಿ ಸೆಕೆಂಡ್‌ಗೆ ಹರಿಯುವ ಕ್ಯುಬಿಕ್‌ ಮೀಟರ್‌) ನೀರು ಹರಿಯುತ್ತಿತ್ತು. ಇಷ್ಟು ದೊಡ್ಡ ಪ್ರಮಾಣದ ನೀರು ಸರಾಗವಾಗಿ ಹರಿಯಲು 94 ಮೀಟರ್‌ನಷ್ಟು ವಿಶಾಲವಾದ ಕಾಲುವೆಯ ಅಗತ್ಯವಿದೆ. ಆದರೆ, ಕಾಲುವೆಯ ಅಗಲ 70 ಮೀಟರ್‌ ಪ್ರದೇಶವಿದ್ದ ಕಾರಣ ಆಗಾಗ್ಗೆ ಪ್ರವಾಹ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನೂತನ ಕಾಲುವೆ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿತ್ತು. ಸ್ವತಃ ಮುಖ್ಯಮಂತ್ರಿಗಳು ಎರಡು ಬಾರಿ ಸ್ಥಳ ಪರಿಶೀಲನೆ ನಡೆಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿ ಎರಡು ವರ್ಷ ಕಳೆದರೂ ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಪರಿಣಾಮವಾಗಿ ಸಮಸ್ಯೆ ಜೀವಂತವಾಗಿಯೇ ಉಳಿದಿದೆ.

ಹೂಳೆತ್ತಲು ಮುಂದಾಗಿಲ್ಲ
ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಜಂಕ್ಷನ್‌ ಬಳಿಯಿಂದ ಕವಿಕಾ ಕಾರ್ಖಾನೆ ಹಿಂಭಾಗ ಹಾಗೂ ನಾಯಂಡಹಳ್ಳಿ ಜಂಕ್ಷನ್‌ವರೆಗೆ ವೃಷಭಾವತಿ ನಾಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ತುಂಬಿದೆ. ಸೇತುವೆಗೆಂದು ಕಾಲುವೆಯಲ್ಲಿ ಹಾಕಲಾದ ಪಿಲ್ಲರ್‌ ಸುತ್ತಲೂ ಸಾಕಷ್ಟು ಕಸ, ಪ್ಲಾಸ್ಟಿಕ್‌ ವಸ್ತುಗಳು ಶೇಖರಣೆಯಾಗಿ ನೀರಿನ ಹರಿಯುವಿಕೆಗೆ ಅಡ್ಡಿಯಾಗುತ್ತಿದೆ. ಆದರೆ ಈವರೆಗೆ ಕಾಲುವೆಯಲ್ಲಿನ ಹೂಳೆತ್ತಲು ಪಾಲಿಕೆಯ ಅಧಿಕಾರಿಗಳು ಮುಂದಾಗಿಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ ಹೂಳು ತೆಗೆಯಲು ಟೆಂಡರ್‌ ಆಹ್ವಾನಿಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. 

ವೃಷಭಾವತಿ ಕಣಿವೆ ಹರಿಯುವ ಮಾರ್ಗ
ಸ್ಯಾಂಕಿ ಕೆರೆ ಭಾಗದಿಂದ ಆರಂಭವಾಗುವ ವೃಷಭಾವತಿ ಕಣಿವೆ ಮಲ್ಲೇಶ್ವರದ ಹಲವು ಭಾಗಗಳ ಮೂಲಕ ಎರಡು ಕವಲಾಗಿ ವಿಭಜನೆಯಾಗುತ್ತದೆ. ಒಂದು ಕಣಿವೆ ಪೀಣ್ಯ ಭಾಗದ ಪ್ರದೇಶದಲ್ಲಿ ಹಾದು ಮೈಸೂರು ರಸ್ತೆ ಸೇರಿದಂತೆ ಮತ್ತೂಂದು ಕಾಲುವೆ ರಾಜಾಜಿನಗರ, ಕೆಂಪೇಗೌಡನಗರ, ಬಾಪೂಜಿನಗರದ ಬಳಿ ಮೈಸೂರು ರಸ್ತೆ ಸೇರುತ್ತದೆ. ಬಳಿಕ ಮೈಸೂರು ರಸ್ತೆಯಲ್ಲಿ ರಾಜರಾಜೇಶ್ವರಿ ನಗರದ ಬಳಿಕ ಜಲಮಂಡಳಿ ನಿರ್ಮಿಸಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಸಂಸ್ಕರಣೆಗೊಂಡು ಕೆಂಗೇರಿ-ಕನಕಪುರದ ಮೂಲಕ ಹರಿದು ಕಾವೇರಿ ನದಿಯನ್ನು ಸೇರಿ ತಮಿಳುನಾಡಿಗೆ ಹರಿಯುತ್ತದೆ. 

* ವೆಂ.ಸುನೀಲ್‌ಕುಮಾರ್‌

ಟಾಪ್ ನ್ಯೂಸ್

KH-Muniyappa

Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

mob

Bengaluru; ಮೊಬೈಲ್‌ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !

Dinesh-Gundurao

Covid Scam: ನ್ಯಾ.ಕುನ್ಹಾ ವರದಿಯಲ್ಲಿ ಕೋವಿಡ್‌ ಅವ್ಯವಹಾರ ಉಲ್ಲೇಖ: ದಿನೇಶ್‌ ಗುಂಡೂರಾವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

KH-Muniyappa

Ration Card: ರಾಜ್ಯದಲ್ಲಿ ಪಡಿತರ ನೀಡಲು ಹಣದ ಕೊರತೆ ಇಲ್ಲ: ಸಚಿವ ಮುನಿಯಪ್ಪ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.