ಜೂ. 27ರಂದು ಕೆಂಪೇಗೌಡ ಜಯಂತಿ
Team Udayavani, May 10, 2017, 12:07 PM IST
ಬೆಂಗಳೂರು: ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜಯಂತಿ ಆಚರಣೆ ಕುರಿತ ಗೊಂದಲ ನಿವಾರಣೆಯಾಗಿದ್ದು, ಜೂನ್ 27ರಂದು ರಾಜ್ಯ ಸರ್ಕಾರದ ವತಿಯಿಂದ ಕೆಂಪೇಗೌಡರ ಜಯಂತಿ ಆಚರಿಸಲು ತೀರ್ಮಾನಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ, ಸದ್ಯಕ್ಕೆ ಬೆಂಗಳೂರಿನ ಮೇಯೋಹಾಲ್‌ನಲ್ಲಿ ಪ್ರಾಧಿಕಾರದ ಕಚೇರಿ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, “ಕೆಂಪೇಗೌಡರ ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರತಿ ವರ್ಷ ಆಚರಿಸಲು ಈಗಾಗಲೇ ತೀರ್ಮಾನಿಸಲಾಗಿತ್ತು. ಆದರೆ, ದಿನಾಂಕದ ಗೊಂದಲವುಂಟಾಗಿತ್ತು. ಇದೀಗ ಇತಿಹಾಸ ತಜ್ಞರ ಜತೆ ಸಮಾಲೋಚನೆ ನಡೆಸಿದ ಬಳಿಕ ಜೂ. 27ರಂದು ಕೆಂಪೇಗೌಡರ ಜಯಂತಿ ಆಚರಿಸಲು ತೀರ್ಮಾನಿಸಲಾಯಿತು,’ ಎಂದರು.
“ಪ್ರಾಧಿಕಾರದ ಕೇಂದ್ರ ಕಚೇರಿಯನ್ನು ಬೆಂಗಳೂರಿನಲ್ಲೇ ಆರಂಭಿಸಲು ಸಭೆ ತೀರ್ಮಾನಿಸಿದೆ. ನಗರದ ಮೇಯೋಹಾಲ್‌ನಲ್ಲಿ ಕೆಂಪೇಗೌಡರ ಹೆಸರಿನ ವಸ್ತುಪ್ರದರ್ಶನ ಕೇಂದ್ರವಿದ್ದು, ಸದ್ಯಕ್ಕೆ ಅಲ್ಲೇ ಪ್ರಾಧಿಕಾರದ ಕಚೇರಿ ತೆರೆಯಲಾಗುವುದು. ಇದಲ್ಲದೆ, ಪ್ರಾಧಿಕಾರಕ್ಕೆ ಇನ್ನೂ ನಾಲ್ವರು ಸದಸ್ಯರನ್ನು ನೇಮಕ ಮಾಡಲಾಗುವುದು,’ ಎಂದರು.
“ಪ್ರಾಧಿಕಾರಕ್ಕೆ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಮಾಗಡಿ ರಸ್ತೆಯ ಸುಮ್ಮನಹಳ್ಳಿ ನಿರಾಶ್ರಿತರ ಕೇಂದ್ರದ ಬಳಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಐದು ಎಕರೆ ಜಾಗ ಪಡೆದುಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಅದಕ್ಕಾಗಿ ಐದು ಎಕರೆ ಜಾಗ ಬಿಟ್ಟುಕೊಡುವಂತೆ ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಕೆಂಪೇಗೌಡ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಇದುವರೆಗೆ 7.50 ಕೋಟಿ ಮಂಜೂರು ಮಾಡಿದ್ದರೆ, ಪ್ರಾಧಿಕಾರ ಮತ್ತಿತರೆ ಚಟುವಟಿಕೆಗಳಿಗಾಗಿ ಬಿಬಿಎಂಪಿ 50 ಕೋಟಿ ರೂ. ಒದಗಿಸಿದೆ. ಈ ಅನುದಾನದಲ್ಲಿ ಪ್ರಾಧಿಕಾರದ ವತಿಯಿಂದ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು,’ ಎಂದು ಹೇಳಿದರು. ಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಮೇಯರ್ ಜಿ.ಪದ್ಮಾವತಿ, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಪ್ರಾಧಿಕಾರದ ಸದಸ್ಯರು, ಶಾಸಕರು, ಅಧಿಕಾರಿಗಳು ಹಾಜರಿದ್ದರು.
ಕೆಂಪೇಗೌಡರ ಅಧ್ಯಯನಕ್ಕೆ ಆದ್ಯತೆ
ಮಾಗಡಿ ತಾಲೂಕಿನ ಕೆಂಪಾಪುರ ಗ್ರಾಮದಲ್ಲಿ ಇರುವುದು ಕೆಂಪೇಗೌಡರ ಸಮಾಧಿ ಎಂಬುದನ್ನು ಇತಿಹಾಸ ತಜ್ಞರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಂಪೇ ಗೌಡರ ಸಮಾಧಿ ಜತೆಗೆ ಕೆಂಪಾಪುರ ಗ್ರಾಮ ಮತ್ತು ಸುತ್ತಲಿನ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುವುದು. ಜತೆಗೆ ಈಗ ಬೆಂಗಳೂರು ವಿಶ್ವವಿದ್ಯಾಲಯಧಿದಲ್ಲಿರುವ ಕೆಂಪೇಗೌಡರ ಅಧ್ಯಯನ ಪೀಠದ ಜತೆಗೆ ಪ್ರಾಧಿಕಾರದಿಂದಲೂ ಒಂದು ಅಧ್ಯಯನ ಪೀಠ ಸ್ಥಾಪಿಸಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ಕೆಂಪಾಪುರದಲ್ಲಿರುವ ಸಮಾಧಿ ಕೆಂಪೇ ಗೌಡರದ್ದು ಎಂಬ ವಿಚಾರದಲ್ಲಿ ಉಂಟಾ ಗಿರುವ ಭಿನ್ನಾಭಿಪ್ರಾಯಗಳ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಇದು ಪ್ರಾಧಿ ಕಾರದ ಆರಂಭಿಕ ಸಭೆಯಷ್ಟೆ. ಮುಂದಿನ ದಿನಗಳಲ್ಲಿ ಈ ಕುರಿತು ಇನ್ನಷ್ಟು ಸಂಶೋಧ ನೆಗಳನ್ನು ನಡೆಸುವುದರ ಜತೆಗೆ ತಜ್ಞರಿಂ ದಲೂ ಮಾಹಿತಿ ಪಡೆಯಲಾಗುವುದು. ಆ ವೇಳೆ ಯಾವುದೇ ಬದಲಾವಣೆ ಮಾಡಬೇ ಕಾದಲ್ಲಿ ಅದಕ್ಕೆ ಸರ್ಕಾರ ಸಿದ್ಧವಿದೆ ಎಂದರು.
ಇಂದಿನಿಂದ 14ರವರೆಗೆ ಬೆಳೆಸಿರಿ ಕಾರ್ಯಕ್ರಮ
ಬೆಂಗಳೂರು: ರವೀಂದ್ರ ಕಲಾಕ್ಷೇತ್ರ-50 ನೆನಪಿನೋಕುಳಿ ಉತ್ಸವದ ಅಂಗವಾಗಿ “ಕನ್ನಡದ ಕಂಪಿನಲಿ ಸಂಸ್ಕೃತಿ ಚಿತ್ತಾರ’ ಶೀರ್ಷಿಕೆಯಡಿ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 10ರಿಂದ 14ರವರೆಗೆ ಕಲಾಕ್ಷೇತ್ರದ ಒಡನಾಟ-ಸಂಸ್ಕೃತಿ ಇಲಾಖೆ, ಅಕಾಡೆಮಿಗಳ ಬೆಳೆಸಿರಿ ಕಾರ್ಯಕ್ರಮ ನಡೆಯಲಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರವೀಂದ್ರ ಕಲಾಕ್ಷೇತ್ರ-50 ಸಾಂಸ್ಕೃತಿಕ ಸಮಿತಿ ಪ್ರಧಾನ ಸಂಚಾಲಕ ಕೆ.ವಿ.ನಾಗರಾಜಮೂರ್ತಿ, ರವೀಂದ್ರ ಕಲಾಕ್ಷೇತ್ರದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಅಕಾಡೆಮಿಗಳ ಒಡನಾಟ ಮುಖ್ಯವಾಗಿದೆ. ಇಲಾಖೆಯ ಹಿಂದಿನ ನಿರ್ದೇಶಕರೊಂದಿಗೆ ಮತ್ತು ಅಕಾಡೆಮಿಯ ಹಿಂದಿನ ಅಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ ಸಮಾರಂಭದಲ್ಲಿ ಅವರನ್ನು ಗೌರವಿಸಲಾಗುವುದು ಎಂದರು.
ಆಯಾ ಆಕಾಡೆಮಿಗಳು ಮತ್ತು ಸಂಸ್ಕೃತಿ ಇಲಾಖೆ ಸಹಕಾರದಿಂದ ವಿಚಾರ ಸಂಕಿರಣ, ಕಲಾ ಪ್ರಾತ್ಯಕ್ಷಿಕೆ, ಕಲಾ ಪ್ರದರ್ಶನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದೆ. ಈ ಕಾರ್ಯಕ್ರಮಗಳು ಅತ್ಯಂತ ವರ್ಣರಂಜಿತವಾಗಿದ್ದು, ಅಕಾಡೆಮಿಗಳ ಹಿಂದಿನ ಅಧ್ಯಕ್ಷರು ಮತ್ತು ಕನ್ನಡ ಮತ್ತು ಸಂಸ್ಕೃತಿಯ ಹಿಂದಿನ ನಿರ್ದೇಶಕರುಗಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದರ ಮೂಲಕ ನೆನಪಿನೋಕುಳಿ ಉತ್ಸವ ನಡೆಲಾಗುವುದು ಎಂದು ಹೇಳಿದರು.
ನೆನಪಿನೋಕುಳಿಯಲ್ಲಿ ಸಂಜೆ 5.30ಕ್ಕೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ನೃತ್ಯಗಾರ್ತಿ ಕೋಮಲಾ ವರದನ್ ಉದ್ಘಾಟನೆ ನೆರವೇರಿಸುವರು. ರವೀಂದ್ರ ಕಲಾಕ್ಷೇತ್ರ-50 ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಅಧ್ಯಕ್ಷತೆ ವಹಿಸುವರು. ಸಂಗೀತ ನೃತ್ಯ ಅಕಾಡೆಮಿಯ ಹಿಂದಿನ ಅಧ್ಯಕ್ಷರುಗಳ ಸಂವಾದ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಆರ್.ಲೀಲಾವತಿ ವಹಿಸುವರು. ಸಮಾರಂಭದಲ್ಲಿ ವಿವಿಧ ಅಕಾಡೆಮಿಗಳ ಹಿನ್ನೋಟ-ಮುನ್ನೋಟ ವಿಷಯಗಳ ಕುರಿತು ಸಂವಾದ ನಡೆಯಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Kaup: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಮೃತ್ಯು
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.