ದೇಶಕ್ಕಾಗಿ ಶ್ರಮಿಸಿದ ಮಹಾತ್ಮರ ಸ್ಮರಿಸಿ
Team Udayavani, May 10, 2017, 4:24 PM IST
ಧಾರವಾಡ: ದೇಶ ಮತ್ತು ಸಮಾಜಕ್ಕಾಗಿ ಶ್ರಮಿಸಿದ ಹಾಗೂ ಮಾನವೀಯ ಮೌಲ್ಯಗಳನ್ನು ನೀಡಿದ ಮಹಾತ್ಮರನ್ನು ನಿತ್ಯ ಸ್ಮರಿಸುವುದು ಅಷ್ಟೇ ಅಲ್ಲದೆ ಅವರು ಕೊಟ್ಟ ಕೊಡುಗೆಗಳನ್ನು ನಾವು ಅಳವಡಿಕೆ ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಸುವರ್ಣ ಲೇಡೀಜ್ ಕ್ಲಬ್ ಅಧ್ಯಕ್ಷೆ ಶಶಿಕಲಾ ಹೆಬ್ಳಿಕರ ಅಭಿಪ್ರಾಯಪಟ್ಟರು.
ನಗರದ ಲೈಯನ್ಸ್ ಶಾಲೆಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮರ ಸ್ಮರಣೋತ್ಸವ ಹಾಗೂ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇವಲ ಜಯಂತಿ ಸಮಯದಲ್ಲಿ ಮಾತ್ರ ಮಹಾತ್ಮರನ್ನು ಸ್ಮರಿಸುವುದು ಸರಿಯಲ್ಲ. ಅವರನ್ನು ನಾವು ನಿತ್ಯ ಸ್ಮರಿಸಬೇಕು ಜೊತೆಗೆ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗಬೇಕು.
ಅಂದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು. ಸಾಮಾಜಿಕ ಚಿಂತಕಿ ಹೇಮಾಕ್ಷಿ ಕಿರೇಸೂರ ಮಾತನಾಡಿ, ಮಹಾತ್ಮರು, ಹಿರಿಯರು, ಶರಣರು, ದಾಸರು ಹಾಗೂ ಸಂತರನ್ನು ಸ್ಮರಿಸುವುದಷ್ಟೇ ಅಲ್ಲದೇ ಅವರು ಹಾಕಿಕೊಟ್ಟ ಮಾರ್ಗವನ್ನು ಅನುಸರಿಸಬೇಕಿದೆ.
ಸುವರ್ಣ ಕ್ಲಬ್ ವೇದಿಕೆ ವತಿಯಿಂದ ಪ್ರತಿ ತಿಂಗಳು ಇಂತಹ ಕಾರ್ಯಕ್ರಮ ಆಯೋಜಿಸಿ ಎಲ್ಲ ಜಾತಿ ಜನಾಂಗದ ಮಹಾನ್ ಚೇತನಗಳಿಗೆ ಗೌರವಾರ್ಪಣೆ ಸಲ್ಲಿಸೋಣ ಎಂದರು. ದತ್ತಿದಾನಿಗಳಾದ ಲತಾ ಮಂಟಾ, ಜಯಲಕ್ಷ್ಮೀ ಆಕಳವಾಡಿ, ನೀಲಾ ಶಿಗ್ಲಿ, ಕಾಜಲ ಪವಾರ, ಉಷಾ ಗದಗಿನಮಠ, ಚಿನ್ಮಯಿ ಪಾಟೀಲ, ಸಂಗೀತಾ ಪವಾರ, ಅನಿತಾ ಪತೇಪುರ ಇದ್ದರು.
ದತ್ತಿ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ ಪ್ರಶ್ನಾವಳಿ ಹಾಗೂ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಮಾರಂಭದಲ್ಲಿ ನಗದು ಬಹುಮಾನ ವಿತರಣೆ ಮಾಡಲಾಯಿತು. ನಂದಾ ಗುಳೇದಗುಡ್ಡ ಸ್ವಾಗತಿಸಿದರು. ಬಸಂತಿ ಹಪ್ಪಳದ ನಿರೂಪಿಸಿದರು. ತಾರಾ ರಾಶಿನಕರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್ ನಿಂದ ಹಲ್ಲೆ
Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ
By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್ ವೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.