ನಲ್ಲಿಗೆ ಜೋಡಿಸಿದ ಪರಿಕರ ಹೊತ್ತೂಯ್ದ ಕಳ್ಳರು!


Team Udayavani, May 10, 2017, 4:27 PM IST

hub5.jpg

ಧಾರವಾಡ: ದಿನವಿಡಿ ಕುಡಿಯುವ ನೀರು ಯೋಜನೆ ಅಡಿಯಲ್ಲಿ ಅಳವಡಿಸಲಾದ ಹಿತ್ತಾಳೆ ನಳ, ವಾಲ್‌Ìಗಳನ್ನು ಹೊತ್ತೂಯ್ದು, ಪೈಪ್‌ ಸಡಿಲಗೊಳಿಸಿದ ಹಾಗೂ ಮೀಟರ್‌ ಧ್ವಂಸಗೊಳಿಸುವ ಭರದಲ್ಲಿ ಮೇಲಿನ ಮುಚ್ಚಳ ರಾತ್ರೋರಾತ್ರಿ ಮುರಿಯುತ್ತಿರುವ ಘಟನೆಗಳು 2-3 ದಿನಗಳಿಂದ ಮಂಜುನಾಥಪುರದಲ್ಲಿ ನಡೆಯುತ್ತಿವೆ. 

ಈ ಘಟನೆಗಳು ಮಂಜುನಾಥಪುರ ನಿವಾಸಿಗಳ ನಿದ್ದೆ ಗೆಡಿಸಿದೆ. ಇಲ್ಲಿನ ಪ್ರಥಮ ಹಾಗೂ ದ್ವಿತೀಯ ಅಡ್ಡ ರಸ್ತೆಗಳಲ್ಲಿರುವ ಮನೆಗಳಿಗೆ ಇತ್ತೀಚೆಗೆ ಹೊಸದಾಗಿ ಅಳವಡಿಸಲಾಗಿದ್ದ ಪರಿಕರಗಳನ್ನು ರವಿವಾರ ಹಾಗೂ ಸೋಮವಾರ ಬೆಳಗಿನ ಜಾವ 2:30ರಿಂದ 4:30 ಗಂಟೆಯ ಅವಧಿಧಿಯಲ್ಲಿ ಕಳುವು ಮಾಡಿದ್ದಾರೆ.

ಒಂದೇ ರಾತ್ರಿ ಹತ್ತಕ್ಕೂ ಹೆಚ್ಚು ಮನೆಗಳ ಹಿತ್ತಾಳೆ ನಳ, 10 ರಿಂದ 20 ಅಡಿ ಉದ್ದದ ಪ್ಲಾಸ್ಟಿಕ್‌ ಪೈಪ್‌ ಸಹ ಹೊತ್ತೂಯ್ದಿರುವುದು ಸ್ಥಳೀಯ ನಿವಾಸಿಗಳಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಹಿರಿಯ ನ್ಯಾಯವಾದಿ ಕೆ.ಕೆ. ತೆರಗುಂಟಿ, ಮೃತ್ಯುಂಜಯ ಅಕ್ಕಿ, ಸೆಹೆರಾ ಹೀಗೆ, ನಾಯಿ ಸಾಕಿರದವರ ಮನೆ ಆಯ್ದುಕೊಂಡು ಕಳ್ಳರು ಕೈ ಚಳಕ ತೋರಿದ್ದಾರೆ.

ಕೆಲವನ್ನು ಸಡಿಲಗೊಳಿಸಿದ್ದು, ವಿಫಲ ಯತ್ನದ ಕುರುಹಾಗಿ ಹಾಗೇ ಉಳಿದಿವೆ. ಇಂತಹ ವಿಶೇಷ ತುರ್ತು ಸಂದರ್ಭಗಳಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ, ಸತತ ನೀರು ಸರಬರಾಜು ಕಂಪೆನಿ ಗ್ರಾಹಕರಿಗೆ ನೀಡಿಲ್ಲ. ಕಾಮಗಾರಿ ನಿರತ ಪ್ಲಂಬರ್‌ ಓರ್ವರಿಗೆ ಸಂಬಂಧಪಟ್ಟವರ ಸಂಪರ್ಕ ಸಂಖ್ಯೆ ನೀಡುವಂತೆ ದುಂಬಾಲು ಬಿದ್ದರೆ, “ಸರ್‌, ನಂಬರ್‌ ಯಾರು ಕೊಟ್ಟರು ಎಂದು ಕೇಳಿದರೆ.. ನಮ್ಮ ಹೆಸರು ದಯವಿಟ್ಟು ಹೇಳಬೇಡಿ’ ಎಂದು ಹೇಳುತ್ತಿದ್ದಾರೆ. 

ಒಂದು ಲಿಖೀತ ದೂರು, ಆರ್‌ಆರ್‌ ಸಂಖ್ಯೆಯುಳ್ಳ ಬಿಲ್‌ ತುಂಬಿದ ರಸೀದಿ, ನಳ ಕಳುವಾದ ಚಿತ್ರ ಸಮೇತ ಜಲ ಮಂಡಳಿ ಕಚೇರಿ ತಂದು ಕೊಟ್ಟು, ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ, ಎಫ್‌ಐಆರ್‌ ಪ್ರತಿ ಹರಿಸಿ, ಬಂದಲ್ಲಿ, ಸಂಬಂಧಿಧಿಸಿದವರ ಗಮನಕ್ಕೆ ತಂದು ಹೊಸ ನಳ ಅಳವಡಿಸುವುದಾಗಿ ಹೇಳುತ್ತಾರೆ ಮಂಜುನಾಥಪುರ ಭಾಗದ ಸೂಪರ್‌ ವೈಸರ್‌ ಸುಭಾಷ್‌. 

ಅನೇಕ ಬಾರಿ ಕರೆ ಮಾಡಿ, ದೂರು ದಾಖಲಿಸಿದರೂ ಗುತ್ತಿಗೆ ಸಿಬ್ಬಂದಿ ದೂರು ಸರಿಯಾಗಿ ದಾಖಲಿಸಿಕೊಳ್ಳುವುದಿಲ್ಲ ಎಂದು ಸ್ಥಳೀಯರಾದ ಡಾ| ಎನ್‌.ಬಿ. ಶೂರಪಾಲಿ, ಅರವಿಂದ ಜೋಶಿ, ಕೆ.ಕೆ. ತೆರಗುಂಟಿ, ಮುಕುಂದ ಒಡವಿ, ಸಿ.ಪಿ. ಕುಲಕರ್ಣಿ, ಮೃತ್ಯುಂಜಯ ಅಕ್ಕಿ, ವಿಜಯ ಮಳೀಮಠ ಹಾಗೂ ಹರ್ಷವರ್ಧನ್‌ ಶೀಲವಂತ ಆರೋಪಿಸಿದ್ದಾರೆ.  

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ

4-

ಸಿಎಂ ಆಗಿದ್ದವರು ಈ‌ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ

ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

dharwad: ಪೊಲೀಸ್ ಪೇದೆ ಮೇಲೆ ಕೈ ಮುಖಂಡ ತಮಟಗಾರ ಸಹೋದರ ಬ್ಲೇಡ್‌ ನಿಂದ ಹಲ್ಲೆ

CM-siddu

Covid Scam: ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ಕ್ರಮ: ಸಿಎಂ ಸಿದ್ದರಾಮಯ್ಯ

b s yediyurappa

By Election: ಹಣ ಕೊಟ್ಟರೂ ಸಿಎಂ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ: ಬಿಎಸ್‌ ವೈ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.