ಎಸಿಬಿ ಬಲೆಗೆ ಬಿದ್ದ ನಾಲ್ವರು ಭ್ರಷ್ಟ ಅಧಿಕಾರಿಗಳು
Team Udayavani, May 11, 2017, 10:13 AM IST
ಬೆಂಗಳೂರು:ಆದಾಯ ಮೀರಿ ಆಸ್ತಿ ಗಳಿಕೆ ಸಂಪಾದಿಸಿದ್ದ ನಾಲ್ವರು ಭ್ರಷ್ಟ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಬುಧವಾರ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಆಸ್ತಿಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಮನಗರ ತಹಶೀಲ್ದಾರ್ ಎನ್.ರಘುಮೂರ್ತಿ, ಕೆಪಿಟಿಸಿಎಲ್ ನಿರ್ದೇಶಕ ಎಚ್.ನಾಗೇಶ್, ಬಿಬಿಎಂಪಿ ಪೂರ್ವ ವಲಯ ಅಪರ ಆಯುಕ್ತ ಡಾ ಕೆ.ಸಿ.ಯತೀಶ್ ಕುಮಾರ್ ಮತ್ತು ಡೈರೆಕ್ಟರೆಟ್ ಆಫ್ ಟೆಕ್ನಿಕಲ್ ಸೂಪರಿಂಟೆಂಡೆಂಟ್ ರಾಮಕೃಷ್ಣರೆಡ್ಡಿ ಅವರ ಮನೆ ಮತ್ತು ಕಚೇರಿಗಳ ಮೇಲೆ ಎಸಿಬಿ ನಗರ ಎಸ್ಪಿ ಗಿರೀಶ್ ನೇತೃತ್ವದಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆವರೆಗೆ ಕಾರ್ಯಾಚರಣೆ ನಡೆಸಿ ಮಹತ್ವದ ದಾಖಲೆಗಳೊಂದಿಗೆ ಕೋಟ್ಯಂತರ ರೂ. ಅಕ್ರಮ ಆಸ್ತಿಯ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಮನಗರ ತಹಶೀಲ್ದಾರ್ ಎನ್.ರಘುಮೂರ್ತಿ ಹೆಸರಿನಲ್ಲಿರುವ ನಾಗರಬಾವಿಯ ನಾಯಕ ಲೇಔಟ್‌ನಲ್ಲಿರುವ ಮನೆ ಹಾಗೂ ರಾಮನಗರದ ತಹಶೀಲ್ದಾರ್ ಕಚೇರಿ ಹಾಗೂ ಚಿಕ್ಕಮಗಳೂರಿನಲ್ಲಿರುವ ಇವರ ತಂದೆಯ ವಾಸದ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ರಘುಮೂರ್ತಿ ಅವರ ಪತ್ನಿ ಮತ್ತು ಮಾವನ ಹೆಸರಿನಲ್ಲಿರುವ ನಾಗರಬಾವಿಯ ನಾಯಕ ಲೇಔಟ್‌ನಲ್ಲಿರುವ ಅಂದಾಜು 2.5 ಕೋಟಿ ಮೊತ್ತದ 40*60 ವೀಸ್ತೀರ್ಣದ 3 ಅಂತಸ್ತಿನ ಮನೆ, ಈ ಮನೆಯಲ್ಲಿ 185 ಗ್ರಾಂ ಚಿನ್ನ, 4 ಕೆ.ಜಿ ಬೆಳ್ಳಿ ಹಾಗೂ 81 ಸಾವಿರ ನಗದು, 36 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಪತ್ತೆಯಾಗಿವೆ.
ಅಲ್ಲದೇ ಒಂದು ಹೊಂಡಾ ಕ್ರೇಟಾ ಕಾರು ಮತ್ತು 2 ದ್ವಿಚಕ್ರ ವಾಹನಗಳು ಜತೆಗೆ ತಂದೆ, ತಾಯಿ ಮತ್ತು ಹೆಂಡತಿ ಹೆಸರಿನಲ್ಲಿ ಬೆಂಗಳೂರು, ಚಿಕ್ಕಮಗಳೂರು ಮತ್ತು ಮೈಸೂರಿನ ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 11 ಖಾತೆಗಳನ್ನು ತೆರೆದಿದ್ದಾರೆ. ಈವೇಳೆ 2.17 ಕೋಟಿಗಳ ಠೇವಣಿ ಮತ್ತು ಉಳಿತಾಯ ಖಾತೆ ಹೊಂದಿರುವುದು ಪತ್ತೆಯಾಗಿದೆ. ತಂದೆಯ ಹೆಸರಿನಲ್ಲಿ ಮೈಸೂರಿನ ಬೋಗಾದಿ ಲೇಔಟ್‌ನಲ್ಲಿ 35*60 ಚ.ಅಡಿ ಅಳತೆಯ ನಿವೇಶನ ಹೊಂದಿದ್ದಾರೆ.
ಕೆಪಿಟಿಸಿಎಲ್‌ನ ನಿರ್ದೇಶಕ ಎಚ್.ನಾಗೇಶ್ ಅವರು ಕೋರಮಂಗಲದ ನ್ಯಾಷನಲ್ ಗೇಮ್ಸ್ ಲೇಜ್‌ನಲ್ಲಿರುವ ನಿವಾಸ ಮತ್ತು ಕಾವೇರಿ ಭವನದಲ್ಲಿರುವ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಮನೆಯಲ್ಲಿ 2.4 ಕೆ.ಜಿ ಚಿನ್ನ ಮತ್ತು 95 ಲಕ್ಷ ಮೌಲ್ಯದ ವಜ್ರಾಭರಣ, 6 ಲಕ್ಷ ಮೌಲ್ಯದ 17.8 ಕೆಜಿ ಬೆಳ್ಳಿ, 2.25 ಲಕ್ಷ ನಗದು ಹಾಗೂ ವಿದೇಶಿ ಕರೆನ್ಸಿ 1,559 ಯುಎಸ್ ಡಾಲರ್ ಹಾಗೂ 15 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು, 33.28 ಲೀಟರ್ ವಿವಿಧ ಬ್ರ್ಯಾಂಡ್‌ಗಳ 36 ಮದ್ಯದ ಬಾಟಲಿಗಳು, 20 ಲಕ್ಷ ಮೌಲ್ಯದ ವಿವಿಧ ಕಂಪನಿಯ 60 ಕೈಗಡಿಯಾರಗಳು, ಒಂದು ಮಾರುತಿ ಸ್ವೀಫ್ಟ್ ಕಾರು ಮತ್ತು ಒಂದು ಎಕೋ ನ್ಪೊರ್ಟ್ಸ್ ಕಾರು, 2 ದ್ವಿಚಕ್ರ ವಾಹನಗಳು ಪತ್ತೆಯಾಗಿವೆ.
ಆನೇಕಲ್ ತಾಲೂಕಿನಲ್ಲಿ 21 ಲಕ್ಷ ಮೌಲ್ಯದ 4 ಗುಂಟೆ ಕೃಷಿ ಭೂಮಿ, ಬೆಂಗಳೂರಿನ ತಾವರೆಕೆರೆ ಬಳಿ ಮಗನ ಹೆಸರಿನಲ್ಲಿ 4.2 ಲಕ್ಷ ಮೌಲ್ಯದ 30*40 ಚ.ಅಡಿ ನಿವೇಶನ, ಚೆನ್ನಸಂದ್ರ ಗ್ರಾಮದಲ್ಲಿ ಎರಡು 30*40 ಚ.ಅಡಿ ಅಳತೆ ವೀಸ್ತೀರ್ಣದ ಮನೆಗಳು, ಬೊಮ್ಮನಹಳ್ಳಿಯಲ್ಲಿ 30*40 ಚ.ಅಳತೆಯ ಮನೆ, ಎಚ್‌ಎಎಲ್ 3ನೇ ಹಂತದಲ್ಲಿ 30 ಲಕ್ಷ ರೂ.ಮೌಲ್ಯದ 20*30 ಚ.ಅಡಿ ಅಳತೆಯ 4 ಅಂತಸ್ತಿನ ಮನೆ, ಬಿಡದಿಯ ಕೆಐಎಡಿಬಿಯ ಕೈಗಾರಿಕಾ ಪ್ರದೇಶದಲ್ಲಿ ಪತ್ನಿ ಹೆಸರಿನಲ್ಲಿ 1 ಎಕರೆ ಜಾಗದಲ್ಲಿ 1.4 ಲಕ್ಷ ಮೌಲ್ಯದ ಇಂಡಸ್ಟ್ರೀಯಲ್ ಶೆಡ್, ಬೇಗೂರು ಹೋಬಳಿ ಶ್ರೀನಿವಾಗಿಲಿನಲ್ಲಿ 3.5 ಕೋಟಿ ಮೌಲ್ಯದ 5,046 ಚ.ಅಡಿ ಅಳತೆಯಲ್ಲಿ 4 ಮಹಡಿಗಳ ವಾಸದ ಮನೆ, ಬೆಂಗಳೂರಿನಲ್ಲಿ 11 ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಹೊಂದಿದ್ದಾರೆ.
ಮೇಯೋ ಹಾಲ್‌ನಲ್ಲಿರುವ ಬಿಬಿಎಂಪಿ ಪೂರ್ವ ವಲಯ ಅಪರ ಆಯುಕ್ತ ಡಾ:ಕೆ.ಸಿ ಯತೀಶ ಕುಮಾರ್ ಕಚೇರಿ ಮತ್ತು ನಾಗರಬಾವಿಯಲ್ಲಿರುವ ಮನೆ ಹಾಗೂ ಮೈಸೂರಿನ ಗಂಗೋತ್ರಿ ಲೇಔಟ್‌ನಲ್ಲಿರುವ ಇವರ ಪತ್ನಿಯ ಅಕ್ಕನ ಮನೆ ಮೇಲೆ ದಾಳಿ ನಡೆಸಲಾಗಿದೆ. ಪತ್ನಿ ಮತ್ತು ಅತ್ತೆ ಹೆಸರಿನಲ್ಲಿರುವ 1.25 ಕೋಟಿ ಮೌಲ್ಯದ 40*60 ಚ.ಅಡಿ ವೀಸ್ತೀರ್ಣದ 4 ಅಂತಸ್ತಿನ ಮನೆ, 1.07 ಕೆಜಿ ಚಿನ್ನ ಮತ್ತು 1.6 ಕೆ.ಜಿ ಬೆಳ್ಳಿ ಹಾಗೂ 4.16 ಲಕ್ಷ ನಗದು ಪತ್ತೆಯಾಗಿದೆ. ಅಲ್ಲದೇ 1 ಹೋಂಡಾ ಕ್ರೇಟಾ, 1 ಫಿಯೇಟ್ ಲೀನಾ ಕಾರುಗಳು ಮತ್ತು 2 ದ್ವಿಚಕ್ರ ವಾಹನಗಳು, ವಿವಿಧ 9 ಬ್ಯಾಂಕ್‌ಗಳಲ್ಲಿ ಖಾತೆಯನ್ನು ಹೊಂದಿದ್ದಾರೆ.
ಬೆಂಗಳೂರಿನ ಐಕೋಬ್ ನಗರ, ಬಿಟಿಎಂ 2ನೇ ಹಂತದಲ್ಲಿ ಬ್ಯಾಂಕ್ ಆಫೀಸರ್ ಅಪಾರ್ಟ್‌ಮೆಂಟ್‌ನಲ್ಲಿರುವ 1.5 ಕೋಟಿ ಮೊತ್ತದ ಅತ್ತೆ ಹೆಸರಿನಲ್ಲಿರುವ ಒಂದು ಫ್ಲಾಟ್, ಪತ್ನಿಯ ಅಕ್ಕನ ಹೆಸರಿನಲ್ಲಿರುವ ಬೆಟ್ಟಹಲಸೂರು, ಟೆಲಿಕಾಂ ಲೇಔಟ್, ಗ್ರೀನ್ ಫೀಲ್ಡ್ ಗಾರ್ಡ್‌ನ್‌ನಲ್ಲಿ 30*40 ಚ.ಅಡಿಯ ಎರಡು ನಿವೇಶನಗಳು, ಯತೀಸ್ ಕುಮಾರ್ ಮತ್ತು ಇವರ ಅತ್ತೆಯ ಹೆಸರಿನಲ್ಲಿರುವ ಮೈಸೂರಿನ ಜಯನಗರ ಬಡಾವಣೆ ಮತ್ತು ಘಟದಹಳ್ಳಿಯಲ್ಲಿ 60*40 ಚ.ಅಡಿ ಅಳತೆಯ ಎರಡು ನಿವೇಶನಗಳು ಮತ್ತು ಭಾಮೈದುನನ ಮಗನ ಮನೆಯಲ್ಲಿ 10 ಲಕ್ಷ ರೂ. ನಗದು ಮತ್ತು 650 ಗ್ರಾಂ ಚಿನ್ನ ಪತ್ತೆಯಾಗಿದೆ.
ಡೈರೆಕ್ಟರೆಟ್ ಆಫ್ ಟೆಕ್ನಿಕಲ್ ಎಜುಕೇಷನ್ ಸೂಪರಿಂಟೆಂಡೆಂಟ್ ರಾಮಕೃಷ್ಣ ರೆಡ್ಡಿ ಅವರ ಬ್ಯಾಟರಾಯಪುರ, ಕೆಂಪಾಪುರ ಮತ್ತು ನಾಯಕ ಲೇಔಟ್‌ನಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ. ರಾಮಕೃಷ್ಣ ರೆಡ್ಡಿ ಹೆಸರಿನಲ್ಲಿರುವ 25 ಲಕ್ಷ ಮೌಲ್ಯದ ಒಂದು ಅಂತಸ್ತಿನ 30*40 ಚ.ಅಡಿ ಅಳತೆಯ ವಾಸದ ಮನೆ, ಈ ಮನೆಯಲ್ಲಿದ್ದ 349 ಗ್ರಾಂ ಚಿನ್ನ, 2.71 ಕೆ.ಜಿ ಬೆಳ್ಳಿ, ರೂ.1.27 ಲಕ್ಷ ನಗದು ಮತ್ತು ಇವರ ಕಾರಿನಲ್ಲಿದ್ದ 20 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಇವರ ಬಳಿ ಒಂದು ಬಿಎಂಡಬ್ಲೂ$Â, ಒಂದು ಫಾರ್ಚುನರ್ ಮತ್ತು ಒಂದು ಇನ್ನೋವಾ ಕಾರುಗಳು ಪತ್ತೆಯಾಗಿವೆ. ಅಲ್ಲದೇ ಮನೆ ಪಕ್ಕದಲ್ಲಿರುವ 40 ಲಕ್ಷ ಮೌಲ್ಯದ 30*40 ಚ.ಅಡಿ ಅಳತೆಯ 3 ಅಂತಸ್ತಿನ ಬಾಡಿಗೆ ಮನೆಗಳು, 40 ಲಕ್ಷ ಮೌಲ್ಯದ ಬೆಂಗಳೂರಿನ ಆರ್.ಎಂ. 2ನೇ ಹಂತದಲ್ಲಿ ಒಂದು ಫ್ಲಾಟ್, ಗೌರಿಬಿದನೂರಿನ ಗುತ್ತೇನಾಹಳ್ಳಿಯಲ್ಲಿ 2.5 ಲಕ್ಷ ಮೌಲ್ಯದ ಕೃಷಿ ಜಮೀನು, ಗೌರಿಬಿದನೂರು ನರಸಾಪುರ ಬಳಿ ಪತ್ನಿ ಹೆಸರಿನಲ್ಲಿರುವ 4.2 ಎಕರೆ ಕೃಷಿ ಭೂಮಿಯಿದ್ದು, ಇದರಲ್ಲಿ 30*50 ಚ.ಅಡಿ ವೀಸ್ತೀರ್ಣದ 2 ಅಂತಸ್ತಿನ ಮನೆ, ಇದೇ ಸ್ಥಳದಲ್ಲಿ ರಾಮಕೃಷ್ಣ ಅವರ ಅಕ್ಕನ ಹೆಸರಿನಲ್ಲಿರುವ 28.4 ಎಕರೆ ಜಮೀನು ಇದೆ. ಜತೆಗೆ ವಿವಿಧ 5 ಬ್ಯಾಂಕ್‌ಗಳಲ್ಲಿ ಖಾತೆ ಇರುವುದು ತಿಳಿದು ಬಂದಿದೆ. ಜತೆಗೆ 45 ಕೀಗಳು ಪತ್ತೆಯಾಗಿವೆ ಎಂದು ಭ್ರಷ್ಟಾಚಾರ ನಿಗ್ರಹದ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಅಮಾನ್ಯಗೊಂಡ ನೋಟುಗಳು ಪತ್ತೆ
ಕೆಪಿಟಿಸಿಎಲ್‌ನ ನಿರ್ದೇಶಕ ಎಚ್.ನಾಗೇಶ್ ಅವರ ಬೇಗೂರಿನಲ್ಲಿರುವ ಮನೆಯಲ್ಲಿ ಒಂದು ಸಾವಿರ ಮುಖ ಬೆಲೆಯ ರೂ.45 ಸಾವಿರ ಹಳೆ ನೋಟುಗಳು ಪತ್ತೆಯಾಗಿವೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.