ಪಡುಬಿದ್ರಿ:ವಿವಾಹಿತೆಗೆ ಲೈಂಗಿಕ ಕಿರುಕುಳ, ಫೊಟೋ ಅಪ್ಲೋಡ್ ಬೆದರಿಕೆ
Team Udayavani, May 11, 2017, 1:59 PM IST
ಉಡುಪಿ: ಪಡುಬಿದ್ರಿಯ ನಡಾಲು ಗ್ರಾಮದ ಅಪಾರ್ಟ್ಮೆಂಟ್ ಒಂದರ ನಿವಾಸಿ ವಿವಾಹಿತ ಮುಸ್ಲಿಂ ಮಹಿಳೆಗೆ ಆಕೆಯ ದೂರದ ಸಂಬಂಧಿ ಲೈಂಗಿಕ ಕಿರುಕುಳ ನೀಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೊಟೋ ಗಳನ್ನು ಅಪ್ಲೋಡ್ ಮಾಡು ವುದಾಗಿ ಬೆದರಿಕೆ ನೀಡುತ್ತಿರುವ ಬಗ್ಗೆ ಮಹಿಳೆಯ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸದಿಲ್ಲಿಯ ಹೊಟೇಲೊಂ ದರ ಉದ್ಯೋಗಿ, ಮೂಡು ಪಲಿಮಾರು ನಿವಾಸಿ ಅಬ್ಟಾಸ್ ಆರೋಪಿ ಎಂದು ಮಹಿಳೆ ದೂರಿ ನಲ್ಲಿ ತಿಳಿಸಿದ್ದಾರೆ.
ಆರೋಪಿ ಅಬ್ಟಾಸ್ ಊರಿಗೆ ಬಂದಾಗ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಪ್ರೀತಿಸುತ್ತೇನೆಂದು ಹೇಳಿ ಲೈಂಗಿಕ ಕಿರುಕುಳವನ್ನೂ ನೀಡುತ್ತಿದ್ದ. ಅಶ್ಲೀಲ ಫೊಟೋ ಹಾಗೂ ವೀಡಿಯೋಗಳನ್ನು ತೆಗೆದು ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಕು. ಇಲ್ಲವಾದರೆ ಹಣ ಕೊಡುವಂತೆ ಒತ್ತಾಯಿಸಿದ್ದ. ಮಾನಕ್ಕೆ ಹೆದರಿ 5 ಲ.ರೂ. ಕೊಟ್ಟಿದ್ದೆ. ಆನಂತರವೂ ನೀನು ಗಂಡನನ್ನು ಬಿಟ್ಟು ನನ್ನೊಂದಿಗೆ ಬಾ ಎಂದು ಕರೆಯುತ್ತಿದ್ದ. ತಪ್ಪಿದಲ್ಲಿ ಫೊಟೋ ವೀಡಿಯೋಗಳನ್ನು ಫೇಸ್ಬುಕ್, ವಾಟ್ಸಪ್ನಲ್ಲಿ ಹಾಕುತ್ತೇನೆ. ನಿನಗೆ ಆ್ಯಸಿಡ್ ಹಾಕುತ್ತೇನೆ ಎಂದು ಹೆದರಿಸಿದ್ದ. ಸುಮಾರು 20 ದಿನಗಳಿಂದ ಆರೋಪಿಯು ಯಾವುದೋ ಕೃತ್ಯ ನಡೆಸಲು ಹಿಂಬಾಲಿಸಿಕೊಂಡು ಬರುತ್ತಿದ್ದ. ಮೇ 7ರ ಬೆಳಗ್ಗೆ 11 ಗಂಟೆಗೆ ಪಡುಬಿದ್ರಿ ಪೇಟೆಗೆ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದು ಅಡ್ಡಗಟ್ಟಿದ ಆತ ಲೈಂಗಿಕ ಕ್ರಿಯೆ ನಡೆಸಲು ಬಾರದಿದ್ದರೆ ಆ್ಯಸಿಡ್ ಹಾಕಿ ಕೊಲ್ಲುತ್ತೇನೆಂದು ಬೆದರಿಸಿದ್ದ ಎಂದು ಮಹಿಳೆಯು ದೂರಿನಲ್ಲಿ ವಿವರಿಸಿದ್ದಾರೆ.
ಪಡುಬಿದ್ರಿ ಠಾಣೆಗೆ ದೂರು ಕೊಡಲು ಹೋಗಿದ್ದಾಗ ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಎಂದು ದೂರುದಾರ ಮಹಿಳೆಯ ಸಂಬಂಧಿಕರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.