ವಿಜಯಪುರದಲ್ಲಿ ಸರ್ಕಾರಿ ಹಾಡು!
Team Udayavani, May 11, 2017, 2:35 PM IST
“ಜೋಗಿ’ ಖ್ಯಾತಿಯ ಅಶ್ವಿನಿ ರಾಮ್‌ಪ್ರಸಾದ್ ಮತ್ತೆ ಬಂದಿರುವುದು ಎಲ್ಲರಿಗೂ ಗೊತ್ತಿದೆ. ಸದ್ದಿಲ್ಲದೆಯೇ ಅವರು “ಸರ್ಕಾರಿ ಕೆಲಸ ದೇವರ ಕೆಲಸ ‘ ಎಂಬ ಸಿನಿಮಾ ಮಾಡಿರುವುದೂ ಗೊತ್ತು. ಈಗ ಹೊಸ ವಿಷಯ ಏನೆಂದರೆ, ಅಶ್ವಿನಿ ರಾಮ್‌ಪ್ರಸಾದ್ ಚಿತ್ರದ ಆಡಿಯೋ ಬಿಡುಗಡೆಯನ್ನು ಉತ್ತರ ಕರ್ನಾಟಕದ ತವರೂರು ಎನಿಸಿರುವ ವಿಜಯಪುರದಲ್ಲಿ ಮಾಡಲು ಸಜ್ಜಾಗಿದ್ದಾರೆ.
ಅಶ್ವಿನಿ ರಾಮ್‌ಪ್ರಸಾದ್ ವಿಜಯಪುರದಲ್ಲೇ ತಮ್ಮ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡೋಕೂ ಕಾರಣವಿದೆ. ಕಳೆದ ಎರಡು ದಶಕಗಳ ಹಿಂದೆ ಅವರು ತಮ್ಮ ಅಶ್ವಿನಿ ರೆಕಾರ್ಡಿಂಗ್ ಕಂಪೆನಿ ಮೂಲಕ “ಬೊಳ್ಳುಳ್ಳವ್ವ ಬೊಳ್ಳುಳ್ಳಿ’ ಎಂಬ ಜಾನಪದ ಗೀತೆ ಹೊರತಂದಿದ್ದರು. ಅದು ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಅವರು ತಮ್ಮ ನಿರ್ಮಾಣದ “ಸರ್ಕಾರಿ ಕೆಲಸ ದೇವರ ಕೆಲಸ’ ಚಿತ್ರದಲ್ಲಿ ಅದೇ ಹಾಡನ್ನು ರಿಮೀಕ್ಸ್ ಮಾಡಿ ಬಳಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಷೆಯಲ್ಲಿರುವ ಆ ಹಾಡನ್ನು ಅಲ್ಲಿನ ಜನರ ಎದುರೇ ಬಿಡುಗಡೆ ಮಾಡಬೇಕು ಎಂಬುದು ಅವರ ಉದ್ದೇಶ. ಹಾಗಾಗಿ ಮೇ 13 ರ ಸಂಜೆ 6 ಗಂಟೆಗೆ ಬಿ.ಎಲ್.ಡಿ.ಇ.ಎ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಲಿದ್ದಾರೆ.
ಅಷ್ಟೇ ಅಲ್ಲ, ಗಾಯಕ ಚಂದನ್ ಶೆಟ್ಟಿ ಅಂದು “ಸಂಭ್ರಮ’ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ನಟ ನೀನಾಸಂ ಸತೀಶ್ ಕೂಡ ಹೈಲೆಟ್ ಆಗಲಿದ್ದಾರೆ. ಆ ಕಾರ್ಯಕ್ರಮದಲ್ಲಿ “ಬೊಳ್ಳುಳ್ಳವ್ವ ಬೊಳ್ಳುಳ್ಳಿ’ ಹಾಡಿಗೆ ನೃತ್ಯ ತಂಡವೊಂದು ಹೆಜ್ಜೆಹಾಕುವ ಮೂಲಕ ವಿಜಾಪುರ ಮಂದಿಗೆ ಮನರಂಜನೆ ಕೊಡಲಿದೆ. ಅದರೊಂದಿಗೆ “ಸರ್ಕಾರಿ ಕೆಲಸ ದೇವರ ಕೆಲಸ’ ಚಿತ್ರದಲ್ಲಿ ಚಂದನ್ ಶೆಟ್ಟಿ ಕೂಡ ವಿಶೇಷವಾದ ಹಾಡೊಂದನ್ನು ಹಾಡಿದ್ದಾರೆ. ಅಂದು ಆ ಹಾಡಿಗೂ ಚಂದನ್ ಶೆಟ್ಟಿ ದನಿಯಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.