ಪ್ರತಿಭಾ ವಿಕಸನದಲ್ಲಿ ಸಂಭ್ರಮಿಸಿದ ಎಳೆಯರು

Team Udayavani, May 12, 2017, 3:45 AM IST

11-KALA-4.jpg

ಮಕ್ಕಳು ಇಡೀ ವಿಶ್ವದ ಆಸ್ತಿ ಎಂದರೆ ತಪ್ಪಾಗಲಾರದು. ಹಾಗಾಗಿ ಎಳೆಯರಿಗೆ ಉತ್ತಮವಾದ ಶಿಕ್ಷಣದೊಂದಿಗೆ ಸರಿಯಾದ ಮಾರ್ಗದರ್ಶನ ದೊರಕಿದಾಗ ವಿಶ್ವವೇ ಶಾಂತಿ, ಸಮೃದ್ಧಿಯಿಂದ ಇರಬಲ್ಲುದು. ಎಳೆಯರಲ್ಲಿ ಸಹಜವಾಗಿ ಅನುಕರಣಶೀಲತೆ ಮತ್ತು ಸೃಜನಶೀಲ ಮನೋಭಾವವಿರುವುದರಿಂದ ಹಿರಿಯರಾದ ನಾವು ಅದಕ್ಕೆ ಪ್ರೋತ್ಸಾಹ ನೀಡಿದ್ದೇ ಆದಲ್ಲಿ ಅದಕ್ಕಿಂತ ದೊಡ್ಡ ಕೊಡುಗೆ ಇನ್ನೊಂದಿಲ್ಲ. ಬೇಸಗೆ ಶಿಬಿರಗಳಲ್ಲಿ ಇಂತಹ ಅವಕಾಶವಿರುತ್ತದೆ. 

ತೀರಾ ಗ್ರಾಮೀಣ ಭಾಗದ ಎಳೆಯರಿಗೂ ಇಂತಹ ಅವಕಾಶ ಸಿಗಬೇಕೆನ್ನುವ ದೃಷ್ಟಿಯಿಂದ ಬ್ರಹ್ಮಾವರ ಸಮೀಪದ ಪೇತ್ರಿಯ ವಿದ್ಯಾ ಟ್ಯುಟೋರಿಯಲ್‌ ಕಾಲೇಜಿನಲ್ಲಿ ಮೂರು ವರುಷದಿಂದ ಹದಿನಾರು ವರುಷ ವಯೋಮಾನದ  ಮಕ್ಕಳಿಗೆ ಹತ್ತು ದಿನಗಳ ಪ್ರತಿಭಾ ವಿಕಸನ ಶಿಬಿರವನ್ನು ಆಯೋಜಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಪನ್ಮೂಲ ವ್ಯಕ್ತಿಗಳಿಂದ ಭರತನಾಟ್ಯ, ಸಂಗೀತ, ಚಿತ್ರಕಲೆ, ಪೇಪರ್‌ ಕ್ರಾಪ್ಟ್, ಕ್ಲೇ ಮಾಡೆಲ್‌, ಪಾಟ್‌ ಪೈಂಟಿಂಗ್‌, ಯೋಗ, ಶ್ಲೋಕ, ಕರಾಟೆ, ಒರಿಗಾಮಿ, ಭಾಷಣ ಕಲೆ ಮುಂತಾದವುಗಳ ಬಗ್ಗೆ ಎಳೆಯರ ಮನಸ್ಸಿಗೆ ಮುದ ನೀಡುವಂತೆ ತರಬೇತಿ ನೀಡಲಾಯಿತು. ಜತೆಗೆ ಪ್ರತಿದಿನ ಸಾಮಾನ್ಯ ಜ್ಞಾನ ವೃದ್ಧಿಗಾಗಿ ಪರಿಸರದ ನರ್ಸರಿ, ಕಾರ್ಖಾನೆ, ಐತಿಹಾಸಿಕ ಸ್ಥಳಗಳ ಸಂದರ್ಶನ ಮತ್ತು ಉರಗ ತಜ್ಞ ಗುರುರಾಜ ಸನಿಲ್‌ ಅವರಿಂದ ಹಾವು-ನಾವು  ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. 

ಶಿಬಿರದ ಕೊನೆಯ ದಿನ ಎಳೆಯರು ತಾವು ಕಲಿತ ಸಂಗೀತ, ಭರತನಾಟ್ಯ, ಕರಾಟೆ, ಕಿರು ಪ್ರಹಸನ, ಯೋಗ, ಭಾಷಣ ಕಲೆ ಮುಂತಾದವು ಗಳನ್ನು ಅತಿಥಿ ಗಣ್ಯರ, ಪೋಷಕರ, ಪಾಲಕರ ಮತ್ತು ಪ್ರೇಕ್ಷಕರ ಮುಂದೆ ಪ್ರದರ್ಶಿಸುವುದರೊಂದಿಗೆ ಸಭಾಂಗಣದ ಅಂಚಿನಲ್ಲಿ ತಾವು ರಚಿಸಿದ ಚಿತ್ರಕಲೆ, ಮುಖವಾಡ, ಪಾಟ್‌ ಪೈಂಟಿಂಗ್‌, ಕರಕುಶಲ ವಸ್ತುಗಳನ್ನು ಕಲಾತ್ಮಕವಾಗಿ ಜೋಡಿಸಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದು ಕಂಡಾಗ, ಗ್ರಾಮೀಣ ಭಾಗದ ಎಳೆಯರಿಗೋಸ್ಕರ ನಡೆದ ಈ ಶಿಬಿರ ನಿಜವಾಗಿಯೂ ಅರ್ಥಪೂರ್ಣ ವೆನಿಸಿತು. ಕಳೆದ ಮೂರು ವರುಷಗಳಿಂದ ಈ ಶಿಬಿರವನ್ನು ಆಯೋಜಿಸುತ್ತಿರುವ ಈ ಕಾಲೇಜಿನ ಸಂಚಾಲಕರಾದ ಕಮಲಾಕ್ಷ ಹೆಬ್ಟಾರ್‌, ಸಹನಾ ಕೆ. ಹೆಬ್ಟಾರ್‌, ಪ್ರಸನ್ನ ಪಿ. ಭಟ್‌ ಮತ್ತು ಬಳಗವು, ಗ್ರಾಮೀಣ ಭಾಗದಲ್ಲಿನ ಎಳೆಯರನ್ನು ಯಾವುದೇ ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ.

ಕೆ. ದಿನಮಣಿ ಶಾಸ್ತ್ರೀ

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Ashwin Vaishnav

Railway; 2 ವರ್ಷದಲ್ಲಿ 50 ಅಮೃತ್‌ ಭಾರತ ರೈಲು ಉತ್ಪಾದನೆ: ಅಶ್ವಿ‌ನಿ ವೈಷ್ಣವ್‌

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Fraud Case: ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ನಂಬಿಸಿ ವಂಚನೆ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

Mangaluru: ಶ್ರೀ ಸುಧೀಂದ್ರ ಸ್ಮರಣ ಗುರು ವಂದನ ಕಾರ್ಯಕ್ರಮ, ಭಾವಚಿತ್ರ ಪಲ್ಲಕಿ ಉತ್ಸವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

ಕರಾವಳಿಯ ವಿವಿಧೆಡೆ ಸಂಭ್ರಮದ ವೈಕುಂಠ ಏಕಾದಶಿ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Mangaluru: ಡೊಂಗರಕೇರಿ ಶ್ರೀ ವೆಂಕಟರಮಣ ದೇಗುಲ: ಪುಷ್ಪಯಾಗ, ಅಷ್ಟಾವಧಾನ ಸೇವೆ ಸಂಪನ್ನ

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Kasaragod: ರೈಲು ಪ್ರಯಾಣಿಕನ ನಗದು, ಲ್ಯಾಪ್‌ಟಾಪ್‌ ಕಳವು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Fraud Case ಹಣ ದ್ವಿಗುಣ ಮೆಸೇಜ್‌: 7.76 ಲಕ್ಷ ರೂ.ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.